ನಾಡಿನ ಪ್ರಾಚೀನ ಪ್ರಮುಖ ವಾಣಿಜ್ಯ, ಶೈಕ್ಷಣಿಕ ಕೇಂದ್ರ ನಿಂಬರ್ಗಾ: ಮುಡುಬಿ ಗುಂಡೆರಾವ

ಕಲಬುರಗಿ: ಆಳಂದ ಸಾಸಿರ ನಾಡಿನ ವ್ಯಾಪ್ತಿಗೆ ಒಳಪಟ್ಟ ನಿಂಬರ್ಗಾ ಗ್ರಾಮವು ನಾಡಿನ ಪ್ರಾಚೀನ ಪ್ರಮುಖ ವಾಣಿಜ್ಯ, ಶೈಕ್ಷಣಿಕ ಕೇಂದ್ರವಾಗಿತ್ತು. ಇಲ್ಲಿ ಉತ್ಪಾದಿಸಿದ ಎಲೆ, ಅಡಕೆ, ದಾಲ್ಚಿನ್ನಿ, ಸಾಂಬಾರು ಪದಾರ್ಥ, ತೋಟಗಾರಿಕೆ ಬೆಳೆಗಳು, ಖರ್ಜೂರ, ಹೂವುಗಳು ನಾಡಿನ ವಿವಿಧ ಭಾಗಗಳಿಗೆ ರಫ್ತಾಗುತ್ತಿದ್ದವು ಎಂದು ಸಂಶೋಧಕ-ಸಾಹಿತಿ ಮುಡುಬಿ ಗುಂಡೆರಾವ ಅಭಿಮತ ವ್ಯಕ್ತಪಡಿಸಿದರು. ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ಮಹಾದೇವ ದೇವಾಲಯದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-18ರಲ್ಲಿ ಶುಕ್ರವಾರ […]

Continue Reading

ತಾಳಿ ಕಟ್ಟುವಾಗ ಮದುವೆ ಬೇಡ ಎಂದ ವಧು, ಮದುಮಗ ಕಣ್ಣೀರು

ಹಾಸನ: ತಾಳಿ ಕಟ್ಟುವಾಗ ವಧು ನನಗೆ ಈ ಮದುವೆ ಬೇಡ ಎಂದ ಘಟನೆ ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ. ತಾಳಿ ಕಟ್ಟುವ ಮುಹೂರ್ತಕ್ಕೂ ಮುನ್ನ ಯುವತಿಗೆ ಒಂದು ಫೋನ್ ಕರೆ ಬಂದಿದೆ. ಆಗ ವಧು ತಕ್ಷಣವೆ ನನಗೆ ಈ ಮದುವೆ ಬೇಡ ಎಂದು ವಧು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೆತ್ತವರು, ಸಂಬಂಧಿಕರು ಯಾರು ಏನೇ ಹೇಳಿದರು ಕೇಳದ ವಧು ರೂಂಗೆ ಹೋಗಿ ಮದುವೆ ಬೇಡವೇ ಬೇಡ ಎಂದು ಹಠ ಹಿಡಿದಿದ್ದಾರೆ. ತಾಳಿ ಕೈಯಲ್ಲಿ ಹಿಡಿದು ಮಧುಮಗ […]

Continue Reading

ನಮ್ಮ ನೆಲವೆ ನಮಗೆ ಪ್ರೇರಣೆ: ಮುಡುಬಿ ಗುಂಡೆರಾವ

ಚಿತ್ತಾಪುರ: ಕನ್ನಡ ಸಾರಸ್ವತ ಲೋಕಕ್ಕೆ ಪ್ರಥಮ ಕೃತಿ ‘ಕವಿರಾಜ ಮಾರ್ಗ’ ನೀಡಿದ ಹೆಗ್ಗಳಿಕೆ, ಕಾವೇರಿಯಿಂದ ಗೋದಾವರಿವರೆಗೆ ಕನ್ನಡ ಸಾಮ್ರಾಜ್ಯ ಕಟ್ಟಿದ ರಾಷ್ಟ್ರಕೂಟರ ರಾಜಧಾನಿ ಮಾನ್ಯಖೇಟ, ಹೀಗೆ ಹತ್ತು ಹಲವಾರು ಸಾಧನೆಗೆಳಿಗೆ ಮುನ್ನುಡಿ ಬರೆದವರು ಕಲಬುರಗಿ ನೆಲದವರು ಎಂಬ ಅಭಿಮಾನ ನಮಗಿದೆ. ನಮ್ಮ ನೆಲವೆ ನಮಗೆ ಪ್ರೇರಣೆ ಎಂದು ಸಂಶೋಧಕ-ಸಾಹಿತಿ ಮುಡುಬಿ ಗುಂಡೆರಾವ ಅಭಿಮತ ವ್ಯಕ್ತಪಡಿಸಿದರು. ತಾಲೂಕಿನ ಪೇಠಶಿರೂರ ಗ್ರಾಮದ ಮಲ್ಲಿಕಾರ್ಜುನ ದೇವಾಲಯದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯಾತ್ಮಕ […]

Continue Reading

ಸರ್ವೆ ಮಾಡುವಾಗ ಮೊಬೈಲ್ ಸ್ಪೋಟ, ಜಾತಿಗಣತಿ ಕಾರ್ಯಕ್ಕೆ ಅಡೆತಡೆ

ಚಿತ್ತಾಪುರ: ಜಾತಿಗಣತಿ ಮಾಡುವಾಗ ಏಕಾಏಕಿ ಮೊಬೈಲ್ ಸ್ಪೋಟಗೊಂಡಿರುವ ಘಟನೆ ದಂಡೋತಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ದಂಡೋತಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ 9.36ಕ್ಕೆ 42 ps ನಲ್ಲಿ ಶಿಕ್ಷಕ ಜಗನ್ನಾಥ ರಾಠೋಡ ಜಾತಿಗಣತಿ ಕಾರ್ಯ ಮಾಡುವಾಗ ಅವರು ಬಳಸುತ್ತಿದ್ದ ಮೊಬೈಲ್ ಫೋನ್ ಸ್ಫೋಟಗೊಂಡ ಪರಿಣಾಮ ಮೊಬೈಲ್’ಗೆ ಬೆಂಕಿ ತಗುಲಿದೆ. ಬೆಂಕಿ ನಂದಿಸಲು ನಾನಾ ಪ್ರಯತ್ನ ಮಾಡಿದರು ಮೊಬೈಲ್ ಫೋನ್ ಸುಟ್ಟು ಕರಕಲಾಗಿದೆ ಎಂದು ಶಿಕ್ಷಕ ಜಗನ್ನಾಥ ರಾಠೋಡ ಹೇಳಿದ್ದಾರೆ. ಶಿಕ್ಷಕ, ಜಾತಿಣತಿದಾರ ಜಗನ್ನಾಥ ರಾಠೋಡ ಅವರು, ಜಾತಿಗಣತಿ ಕಾರ್ಯ […]

Continue Reading

ಪಶು ಆಸ್ಪತ್ರೆಗೆ ಬಂದು ವೈದ್ಯನ ಬಳಿ ತನ್ನ ಬಾಧೆ ತೋಡಿಕೊಂಡ ಮಂಗ

ಬಾಗಲಕೋಟೆ: ಮನುಷ್ಯರಿಗೆ ಆರೋಗ್ಯ ಸಮಸ್ಯೆಯಾದರೆ ಕೂಡಲೆ ಆಸ್ಪತ್ರೆಗೆ ಹೋಗುತ್ತಾರೆ. ವೈದ್ಯರಿಗೆ ಸಮಸ್ಯೆ ಬಗ್ಗೆ ಹೇಳಿ ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಅದೆ ರೀತಿ ಇಲ್ಲೊಂದು ಮಂಗ ನೇರವಾಗಿ ಪಶು ಆಸ್ಪತ್ರೆಗೆ ಹೋಗಿದೆ. ತನಗಾದ ಸಮಸ್ಯೆಯ ಬಗ್ಗೆ ವೈದ್ಯರಿಗೆ ತಾನೆ ಸನ್ನೆ ಮೂಲಕ ತೋರಿಸಿದೆ. ಬಳಿಕ ಚಿಕಿತ್ಸೆ ಪಡೆದುಕೊಂಡು ಹೋಗಿದೆ. ಸದ್ಯ ಈ ಘಟನೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಮಂಗಗಳು ಮನುಷ್ಯರಷ್ಟೆ ಬುದ್ದಿ ಜೀವಿಗಳು ಅನ್ನೊದಕ್ಕೆ ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನ ಗಡೂರು ಗ್ರಾಮದ ಪಶು ಆಸ್ಪತ್ರೆಯಲ್ಲಿ ನಡೆದ ಈ […]

Continue Reading

ಸತ್ತಂತೆ ನಟಿಸಿ ಚಿರತೆಯನ್ನೆ ಯಾಮಾರಿಸಿದ ಸಾಕು ನಾಯಿ

ತೀರ್ಥಹಳ್ಳಿ: ಚಿರತೆ ದಾಳಿಯಿಂದ ಪವಾಡ ಸದೃಶದಂತೆ ನಾಯಿಯೊಂದು ಬದುಕಿದ ಘಟನೆ ಹೊದಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಳಾಪುರ ಗ್ರಾಮದ ಮನೆಯ ಮುಂದೆ ನಡೆದಿದೆ. ತಾಲೂಕಿನ ಹೊದಲ ಅರಳಾಪುರ ಗ್ರಾಮದ ಅಂತೋಣಿ ಎಂಬುವರ ಮನೆ ಮುಂದೆ ಕಟ್ಟಿ ಹಾಕಿದ್ದ ನಾಯಿಯನ್ನು ಚಿರತೆ ತಿನ್ನಲು ಬಂದಿತ್ತು. ಮನೆ ಮುಂದೆ ಕಟ್ಟಿ ಹಾಕಿದ್ದ ನಾಯಿಯ ಕುತ್ತಿಗೆಗೆ ಚಿರತೆ ಬಾಯಿ ಹಾಕಿದೆ. ಆಗ ಜೀವ ಹೋಗುವ ಭಯವಾದರೂ ನಾಯಿ ಸತ್ತಂತೆ ಮಲಗಿದೆ, ಅದನ್ನು ನೋಡಿದ ಚಿರತೆ ನಾಯಿ ಸತ್ತು ಹೋಗಿದೆ ಎಂದು ಭಾವಿಸಿ […]

Continue Reading

ಪರಿಸರ ಸಮತೋಲನೆಗೆ ಜೀವ ವೈವಿಧ್ಯತೆಯ ರಕ್ಷಣೆ ಅಗತ್ಯ: ಎಚ್.ಬಿ ಪಾಟೀಲ

ಕಲಬುರಗಿ: ಪರಿಸರದ ಮೇಲಿನ ಮಾನವನ ದಬ್ಬಾಳಿಕೆಯಿಂದ ಅನೇಕ ಗಿಡ-ಮರಗಳು, ಸಸ್ಯ ಸಂಪತ್ತು, ಪ್ರಾಣಿ-ಪಕ್ಷಿಗಳ ನಾಶವಾಗುವ ಮೂಲಕ ಪರಿಸರದ ಅಸಮತೋಲನವಾಗುತ್ತಿದೆ. ಜೀವ ವೈವಿಧ್ಯತೆ ಮತ್ತು ಆಹಾರ ಸರಪಳಿ ಪರಸ್ಪರ ಪೂರಕ ಸಂಬಂಧಿ, ಜೀವ ವೈವಿಧ್ಯತೆ ರಕ್ಷಣೆ ಮಾಡುವುದು ಅಗತ್ಯವಾಗಿದೆ, ಇದರಿಂದ ಪರಿಸರ ಸಮಲೋಲನೆ ಸಾಧ್ಯವಿದೆ ಎಂದು ಉಪನ್ಯಾಸಕ, ಪರಿಸರ ಪ್ರೇಮಿ ಎಚ್.ಬಿ ಪಾಟೀಲ ಹೇಳಿದರು. ನಗರದ ಶಹಾಬಜಾರ ಮಹಾದೇವ ನಗರದ ಶಿವಾ ವಿದ್ಯಾ ಮಂದಿರ ಮತ್ತು ಸ್ವಾತಿ ಪ್ರೌಢಶಾಲೆಯಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಜರುಗಿದ […]

Continue Reading

ವಿಶ್ವ ಮಟ್ಟದಲ್ಲಿ ಕನ್ನಡದ ಕಂಪು ಪಸರಿಸಿದ ಬಾನು ಮುಷ್ತಾಕ್, ದೀಪಾ ಭಾಸ್ತಿ

ಕಲಬುರಗಿ: ಕನ್ನಡದ ಮೇರು ಲೇಖಕಿ, ಸಾಹಿತಿ ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ ಕಥಾ ಸಂಕಲನ ಮತ್ತು ಇದರ ಅನುವಾದಕಿಯರಾದ ದೀಪಾ ಭಾಸ್ತಿ ಅವರಿಗೆ ವಿಶ್ವದ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ದೊರೆತಿರುವುದು ಸಮಸ್ತ ಕನ್ನಡಿಗರಿಗೆ ದೊರೆತ ಗೌರವವಾಗಿದೆ, ತನ್ಮೂಲಕ ಕನ್ನಡದ ಕಂಪು ವಿಶ್ವ ಮಟ್ಟದಲ್ಲಿ ಪಸರಿಸಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ ಪಾಟೀಲ ಮುಕ್ತ ಕಂಠದಿಂದ ಶ್ಲಾಘಿಸಿದರು. ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನ ಸಕ್ಸಸ್ ಕಂಪ್ಯೂಟರ ತರಬೇತಿ ಸಂಸ್ಥೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ […]

Continue Reading

ಪೊಲೀಸಪ್ಪನನ್ನು ಮದುವೆಯಾಗಿ ಫಜೀತಿಗೆ ಸಿಲುಕಿದ ಮಹಿಳೆ: ನಾಪತ್ತೆಯಾದ ಗಂಡನನ್ನು ಹುಡುಕಿಕೊಡುವಂತೆ ಅಧಿಕಾರಿಗಳ ಮೊರೆ ಹೋದ ಪತ್ನಿ

ಚಿಕ್ಕಬಳ್ಳಾಪುರ: ಆಕೆ ಪದವೀಧರೆ. ಆತ ಪೊಲೀಸ್ ಕಾನ್‌ಸ್ಟೆಬಲ್‌. ಅವರಿಬ್ಬರು ಕಾಲೇಜಿನಲ್ಲಿ ಪರಿಚಯವಾಗಿ ಪ್ರೀತಿ, ಪ್ರೇಮವೆಂದು ಸುತ್ತಾಡಿ ಬಳಿಕ ಮದುವೆ ಮಾಡಿಕೊಂಡಿದ್ದರು. ಅವರಿಬ್ಬರು ಮದುವೆಯಾಗಿ ಇನ್ನೂ ಒಂದು ವರ್ಷ ಕೂಡ ಆಗಿಲ್ಲ. ಆಗಲೆ ನೀನು ಬೇಡ, ನಿನ್ನ ಜೊತೆ ಸಂಸಾರವೂ ಬೇಡ ಎಂದು ಪೊಲೀಸ್ ಗಂಡ ಕಾಣೆಯಾಗಿದ್ದಾರೆ. ಇದರಿಂದ ವಿಚಲಿತಳಾಗಿರುವ ಪತ್ನಿ, ಪೊಲೀಸ್ ಗಂಡನನ್ನು ಹುಡುಕಿಕೊಡುವಂತೆ ಅವಲತ್ತುಕೊಂಡಿದ್ದಾರೆ. 27 ಆಗಸ್ಟ್ 2024 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪೊಲೀಸ್‍ ಠಾಣೆಯ ಕಾನ್ಸ್‍ಟೇಬಲ್ ತಿಮ್ಮಣ್ಣ ಬೂಸರೆಡ್ಡಿ ಹಾಗೂ ಅದೆ ಜಿಲ್ಲೆಯ […]

Continue Reading

ಶಿರಸ್ತೆದಾರ್‌ ಮೇಲೆ ಹಲ್ಲೆ: ತಹಸೀಲ್ದಾರ್ ವಿರುದ್ಧ ಎಫ್‌ಐಆರ್‌

ಬೀದರ್: ಚಿಟಗುಪ್ಪ ತಹಸೀಲ್ದಾರ್ ಕಚೇರಿಯ ಶಿರಸ್ತೆದಾರ್ ಸುಭಾಷಚಂದ್ರ ಅವರನ್ನು ಅಪಹರಿಸಿ ತೀವ್ರವಾಗಿ ಹಲ್ಲೆ ನಡೆಸಿದ ಆರೋಪದಲ್ಲಿ ಗ್ರೇಡ್-2 ತಹಸೀಲ್ದಾರ್ ಜಯಶ್ರೀ ಮತ್ತು ಅವರ ಪತಿ ಶಾರಧಕ ಸೇರಿ ಐವರ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಚಿಟಗುಪ್ಪ ತಹಸೀಲ್ದಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಭಾಷಚಂದ್ರ ಹಾಗೂ ಜಯಶ್ರೀ ನಡುವೆ ಕಚೇರಿ ಕೆಲಸದಲ್ಲಿ ತಕರಾರು ನಡೆದಿದ್ದ ವಿಚಾರಕ್ಕೆ ಹಲ್ಲೆ ನಡೆದಿದೆ ಎನ್ನಲಾಗುತ್ತಿದೆ. ನಡೆದಿದ್ದು ಏನು ? ಮೇ.16 ರಂದು ಕೆಲಸ ಮುಗಿಸಿಕೊಂಡು ಚಿಟಗುಪ್ಪದಿಂದ ಸ್ವಗ್ರಾಮ ಕಲಬುರಗಿ ಜಿಲ್ಲೆಯ […]

Continue Reading