ನೇಪಾಳಕ್ಕೆ ಮೊದಲ ಮಹಿಳಾ ಪ್ರಧಾನಿ: ಪ್ರಮಾಣ ವಚನ ಸ್ವೀಕರಿಸಿದ ಸುಶೀಲಾ ಕರ್ಕಿ

ಕಠ್ಮಂಡು: ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ಮಧ್ಯಂತರ ಪ್ರಧಾನಿಯಾಗಿ ಶುಕ್ರವಾರ ರಾತ್ರಿ ಪ್ರಮಾಣ ವಚನ ಸ್ವೀಕರಿಸಿದರು. ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರು ಕರ್ಕಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಸುಶೀಲಾ ಕರ್ಕಿ ಅವರ ಮಧ್ಯಂತರ ಸಂಪುಟದಲ್ಲಿ ಯಾವುದೆ ಸಚಿವರನ್ನು ಸೇರಿಸಿಕೊಳ್ಳಲಾಗಿಲ್ಲ. ಅಧ್ಯಕ್ಷ ರಾಮ್ ಚಂದ್ರ ಪೌಡೆಲ್, ನೇಪಾಳ ಸೇನಾ ಮುಖ್ಯಸ್ಥ ಜನರಲ್ ಅಶೋಕರಾಜ್ ಸಿಗ್ಡೆಲ್ ಮತ್ತು ವಾರದ ಆರಂಭದಲ್ಲಿ ಮಾಜಿ ಪ್ರಧಾನಿ ಕೆ.ಪಿ ಶರ್ಮಾ ಒಲಿ ಅವರ ರಾಜೀನಾಮೆಗೆ ಕಾರಣವಾದ ಜನರೇಷನ್ ಝಡ್ […]

Continue Reading

ಪ್ರೆಸ್‌ ಮೀಟ್‌ ನಡೆಯುತ್ತಿದ್ದಾಗ ಕುಸಿದು ಬಿದ್ದ ಸ್ವೀಡನ್‌ನ ನೂತನ ಆರೋಗ್ಯ ಸಚಿವೆ ಎಲಿಸಬೆಟ್ ಲ್ಯಾನ್

ಸ್ಟಾಕ್‌ಹೋಮ್: ಪ್ರೆಸ್‌ ಮೀಟ್‌ ನಡೆಯುತ್ತಿದ್ದ ವೇಳೆ ಸ್ವೀಡನ್‌ನ ನೂತನ ಆರೋಗ್ಯ ಸಚಿವೆ ಎಲಿಸಬೆಟ್ ಲ್ಯಾನ್ ವೇದಿಕೆಯಲ್ಲೆ ಕುಸಿದು ಬಿದ್ದ ಘಟನೆ ನಡೆದಿದೆ. ಲ್ಯಾನ್‌ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಈ ಘಟನೆ ಸಂಭವಿಸಿದಿದೆ. ಸುದ್ದಿಗೋಷ್ಠಿಯಲ್ಲಿ 48 ವರ್ಷದ ಎಲಿಸಬೆಟ್ ಲ್ಯಾನ್, ಸ್ವೀಡಿಷ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಹಾಗೂ ಕ್ರಿಶ್ಚಿಯನ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಎಬ್ಬಾ ಬುಷ್ ಪಕ್ಕದಲ್ಲಿ ನಿಂತಿದ್ದರು. ಪತ್ರಕರ್ತರು ಪ್ರಶ್ನೆ ಕೇಳುತ್ತಿರುವಾಗ ವೇದಿಕೆಯಿಂದ ಗಾಜಿನ ಪೋಡಿಯಂ ಸಮೇತ ಕುಸಿದುಬಿದ್ದಿದ್ದಾರೆ. 16 ಸೆಕೆಂಡುಗಳ ವಿಡಿಯೋ ವೈರಲ್‌ಎಲಿಸಬೆಟ್ ಲ್ಯಾನ್ […]

Continue Reading

300 ಜನರಿದ್ದ ದೋಣಿಗೆ ಬೆಂಕಿ: ಜೀವ ಉಳಿಸಿಕೊಳ್ಳಲು ಸಮುದ್ರಕ್ಕೆ ಹಾರಿದ ಪ್ರಯಾಣಿಕರು

ಇಂಡೋನೇಷ್ಯಾದ ಉತ್ತರ ಸುಲವೇಸಿಯಲ್ಲಿರುವ ತಾಲಿಸ್ ದ್ವೀಪದ ಬಳಿ ಇಂದು (ಜು.20) ಮನಾಡೊ ಬಂದರಿಗೆ ಹೋಗಲು, ಸುಮಾರು 300 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ ಐದು ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಬೆಂಕಿಯಿಂದ ಪಾರಾಗಲು ಕೆಲವು ಪ್ರಯಾಣಿಕರು ಸಮುದ್ರಕ್ಕೆ ಹಾರಿದ್ದಾರೆ, ಅನೇಕರು ಕೆಎಂ ಬಾರ್ಸಿಲೋನಾ ವಿಎ ಹೆಸರಿನ ದೋಣಿಯಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ 150 ಜನರನ್ನು ರಕ್ಷಿಸಲಾಗಿದೆ, ಅವರನ್ನು ರಕ್ಷಣಾ ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರಿಕಾ ದೋಣಿಗಳ ಜಂಟಿ ತಂಡವು ರಕ್ಷಣೆ ಮಾಡಿದೆ. ರಕ್ಷಣಾ […]

Continue Reading

ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡ ಮತ್ತೊಂದು ವಿಮಾನ

ಅಹ್ಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ದುರಂತ ನಡೆದು ಜಾಸ್ತಿ ದಿನ ಕಳೆದಿಲ್ಲ, ಅದೆ ರೀತಿ ಈಗ ಮತ್ತೊಂದು ವಿಮಾನ ದುರಂತ ಲಂಡನ್‌ನಲ್ಲಿ ನಡೆದಿದೆ, ವಿಮಾನದಲ್ಲಿದ್ದವರೆಲ್ಲರೂ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಬಂದಿದೆ. ಲಂಡನ್ ಸೌಥೆಂಡ್‌ವಿಮಾನ ನಿಲ್ದಾಣದಿಂದ ಟೇಕಾಫ್ ಆದ ವಿಮಾನವೂ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದ್ದು, ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಆವರಿಸಿದೆ. ಈ ದೃಶ್ಯಗಳು ಕ್ಯಾಮರಾಗಳಲ್ಲಿ ಸೆರೆಯಾಗಿದ್ದು ವೈರಲ್ ಆಗುತ್ತಿದೆ. ಬೀಚ್‌ಕ್ರಾಫ್ಟ್ ಬಿ200 ಎಂಬ ಪ್ರಯಾಣಿಕ ವಿಮಾನವ ಪತನಗೊಂಡಿದೆ, ಈಸಿ ಜೆಟ್ ಕಂಪನಿಗೆ ಸೇರಿದ ಈ ಸಣ್ಣ ವಿಮಾನ […]

Continue Reading

ಜ.5 ರಂದು ಸುನಾಮಿ ಭವಿಷ್ಯ ನುಡಿದ ಬಾಬ ವಂಗಾ, ನಿನ್ನೆ ಪ್ರಿಡಿಕ್ಷನ್ ನಿಜವಾದ ಬೆನ್ನಲ್ಲೆ ಆತಂಕ

ಟೊಕಿಯೋ: ಭೂಕಂಪ, ಸುನಾಮಿ, ಪ್ರವಾಹ ಸೇರಿದಂತೆ ಹಲವು ಪ್ರಾಕೃತಿಕ ವಿಕೋಪಗಳ ಕುರಿತು ಖ್ಯಾತ ಜ್ಯೋತಿಷಿ ಬಾಬಾ ವಂಗಾ ನುಡಿದ ಭವಿಷ್ಯಗಳು ನಿಜವಾಗಿದೆ. ಜುಲೈ 3 ರಂದು ಬಾಬಾ ವಂಗಾ ಭೂಕಂಪದ ಭವಿಷ್ಯ ನುಡಿದಿದ್ದರು. ದ್ವೀಪದಲ್ಲಿ ಭೂಕಂಪ ಸಂಭವಿಸಲಿದೆ ಎಂಬ ಅವರ ಭವಿಷ್ಯ ನಿಜವಾಗಿದೆ. ಜಪಾನ್‌ನ ಟೊಕಾರ ದ್ವೀಪದಲ್ಲಿ ಜುಲೈ 3 ರಂದು 5.5 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದೀಗ ಬಾಬ ವಂಗಾ ಜುಲೈ 5 ರಂದು ಸುನಾಮಿ ಅಪ್ಪಳಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಭೂಕಂಪ ಭವಿಷ್ಯ ನಿಜವಾಗಿರುವ […]

Continue Reading

ಒಬ್ಬ ಎಂಜಿನಿಯರ್ ಹಲವು ಕಂಪನಿಗಳಲ್ಲಿ ಕೆಲಸ: ಅಮೆರಿಕದ ಸ್ಟಾರ್ಟಪ್‌ಗಳಿಗೆ ತಲೆನೋವಾದ ಭಾರತೀಯ

ಅಮೆರಿಕದ ಸ್ಟಾರ್ಟ್‌ಅಪ್ ಜಗತ್ತಿನಲ್ಲಿ ಒಬ್ಬ ಭಾರತೀಯ ಸಾಫ್ಟ್‌ವೇರ್ ಎಂಜಿನಿಯರ್ ಬಿರುಗಾಳಿ ಎಬ್ಬಿಸಿದ್ದಾನೆ. ಆತನ ಹೆಸರು ಸೋಹಮ್ ಪರೇಖ್, ಈತ ಕೆಲಸ ಮಾಡುತ್ತಿರುವ ಕಂಪನಿಗೆ ತಿಳಿಸದೆ ಇನ್ನೂ 3- 4 ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಆರೋಪ ಈಗ ಡಿಜಿಟಲ್ ಜಗತ್ತಿನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಪ್ಲೇಗ್ರೌಂಡ್ ಎಐ ಸಂಸ್ಥಾಪಕ ಸುಹೇಲ್ ದೋಷಿ ಈ ಬಾಂಬ್ ಸಿಡಿಸುತ್ತಿದ್ದಂತೆ, ಟೆಕ್ ಲೋಕದ ಹಲವು ಜನರು ತಮಗೂ ಇದೆ ರೀತಿಯ ಅನುಭವ ಆಗಿರುವುದನ್ನು ಹಂಚಿಕೊಳ್ಳಲು ಮುಂದೆ ಬಂದಿದ್ದಾರೆ. ಇದು ನೇಮಕಾತಿ […]

Continue Reading

30 ವರ್ಷಗಳಲ್ಲಿ ಮೊದಲ ಬಾರಿಗೆ ಘಾನಾ ದೇಶಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ

ಅಕ್ರಾ: ಪ‍್ರಧಾನಿ ನರೇಂದ್ರ ಮೋದಿ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ, 30 ವರ್ಷಗಳಲ್ಲಿ ಇದೆ ಮೊದಲ ಬಾರಿಗೆ ಘಾನಾ ದೇಶಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಐದು ದೇಶಗಳ ಪ್ರವಾಸ ಕೈಗೊಂಡಿರುವ ಪ‍್ರಧಾನಿ ನರೇಂದ್ರ ಮೋದಿ ಮೊದಲಿಗೆ ಘಾನಾಕ್ಕೆ ಭೇಟಿ ನೀಡಿದರು.ಇದಾದ ಕೆಲವು ಗಂಟೆಗಳಲ್ಲಿ ಉಭಯ ರಾಷ್ಟ್ರಗಳ ನಿಯೋಗವು ಮಾತುಕತೆ ನಡೆಸಿತು. ಘಾನಾ ಅಧ್ಯಕ್ಷ ಜಾನ್‌ ಡ್ರಾಮಾನಿ ಅವರೆ ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಬರಮಾಡಿಕೊಂಡು, ಸ್ವಾಗತಿಸಿದರು. ಆ ಮೂಲಕ ಕಳೆದ ಮೂರು […]

Continue Reading

ಬಲೂನಿನಂತೆ ಊದಿಕೊಂಡ ಈಕೆಯ ಹೊಟ್ಟೆಯಲ್ಲಿ ಮಕ್ಕಳೆಷ್ಟು ಗೊತ್ತಾ ?

ಗರ್ಭಧಾರಣೆ ಮಹಿಳೆಯ ಜೀವನದ ಪ್ರಮುಖ ಘಟ್ಟವಾಗಿದೆ. ಇಲ್ಲೊಬ್ಬ ತಾಯಿಯ ಹೊಟ್ಟೆಯಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 4 ಮಕ್ಕಳು ಬೆಳೆಯುತ್ತಿವೆ. ಇದರಿಂದ ಆಕೆಯ ಹೊಟ್ಟೆ ಬಲೂನಿನಂತೆ ಊದಿಕೊಂಡಿದ್ದು, ಇದರಿಂದ ಆಕೆಗೆ ನಡೆಯಲು, ಕುಳಿತುಕೊಳ್ಳಲು ತುಂಬಾ ಕಷ್ಟಪಡುವಂತಾಗಿದೆ. ಆಕೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೋಡುಗರು ಬೆಚ್ಚಿಬೀಳುವಂತೆ ಮಾಡಿದೆ. ಈ ವಿಡಿಯೊ ಈಗಾಗಲೇ ಲಕ್ಷಾಂತರ ವ್ಯೂವ್ಸ್ ಗಳಿಸಿದೆ. ವೈರಲ್ ಆದ ವಿಡಿಯೊದಲ್ಲಿ, 4 ಶಿಶುಗಳನ್ನು ಹೊತ್ತು ಆಕೆ ನಡೆಯಲು ಕಷ್ಟಪಡುವ ದೃಶ್ಯ ಸೆರೆಯಾಗಿದೆ. ತನ್ನ ಹೊಟ್ಟೆಯಲ್ಲಿ 4 ಮಕ್ಕಳು […]

Continue Reading

ಅಂತರಿಕ್ಷಯಾನ ಕ್ಷೇತ್ರದಲ್ಲಿ ಭಾರತ ಮೂರನೇ ಅತಿದೊಡ್ಡ ಮಾರುಕಟ್ಟೆ: ಪ್ಯಾರಿಸ್ ಏರ್ ಫೋರಂ ಚರ್ಚಾಕೂಟದಲ್ಲಿ ಪ್ರಿಯಾಂಕ್ ಖರ್ಗೆ

ಬೆಂಗಳೂರು (ಪ್ಯಾರಿಸ್): ಜಾಗತಿಕ ಅಂತರಿಕ್ಷಯಾನ ಕ್ಷೇತ್ರದಲ್ಲಿ ಭಾರತ ಮೂರನೇ ಅತಿದೊಡ್ಡ ನಾಗರಿಕ ವಿಮಾನಯಾನ ಮಾರುಕಟ್ಟೆಯಾಗಿ ಬೆಳೆದಿದೆ ಮತ್ತು ವೇಗವಾಗಿ ಬೆಳೆಯುತ್ತಿರುವ ದೇಶೀಯ ವಾಯುಯಾನ ಮಾರುಕಟ್ಟೆಯಾಗಿ ಮುನ್ನಡೆ ಸಾಧಿಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಪ್ಯಾರಿಸ್ ಏರ್ ಫೋರಂ ಚರ್ಚಾಕೂಟದಲ್ಲಿ ನಡೆದ ಪ್ಯಾನಲ್ ಚರ್ಚೆಯಲ್ಲಿ ಮಾತನಾಡಿದ ಅವರು, ಸರ್ಕಾರಗಳ ನಡುವೆ ಮಾತ್ರವಲ್ಲದೆ, ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರ ವ್ಯವಸ್ಥೆಗಳಲ್ಲಿಯೂ ಸಹ ಸಹಯೋಗದ ಮಹತ್ವವನ್ನು ಎತ್ತಿ ತೋರಿಸಿದರು. ಪ್ರತಿಯೊಬ್ಬ […]

Continue Reading

ಜಮೀನಿನಲ್ಲಿ ರೈತನಿಗೆ ಸಿಕ್ಕಿತು 36 ಸಾವಿರ ಕೋಟಿ ಮೌಲ್ಯದ ಚಿನ್ನ: ಕ್ಷಣಾರ್ಧದಲ್ಲಿ ಬದಲಾಯಿತು ಅನ್ನದಾತನ ಬದುಕು

ಅದೃಷ್ಟ ಹೇಗೆ ಒಲಿದು ಬರುತ್ತದೆ ಎಂಬುದು ಯಾರಿಂದಲೂ ಹೇಳಲು ಅಸಾಧ್ಯ. ಇತ್ತೀಚೆಗೆ ರೈತನೋರ್ವ ಜಮೀನಿನಲ್ಲಿ ಕೃಷಿ ಕೆಲಸ ಮಾಡುವಾಗ 36 ಸಾವಿರ ಕೋಟಿ ಮೌಲ್ಯದ ಚಿನ್ನದ ನಿಧಿ ಸಿಕ್ಕಿದೆ. ಕ್ಷಣಾರ್ಧದಲ್ಲಿ ರೈತನ ಜೀವನವೆ ಬದಲಾಗಿದೆ. ಇಂತಹ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚಿನ್ನದ ನಿಧಿ ಸಿಕ್ಕಿರುವದು ಫ್ರಾನ್ಸ್‌ನಲ್ಲಿ, ಈ ಸುದ್ದಿಯಿಂದ ಕೋಲಾಹಲ ಸೃಷ್ಟಿಯಾಗಿದೆ. ಫ್ರಾನ್ಸ್ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಯುನಿಯನ್ ರಿಯೋ ವರದಿ ಪ್ರಕಾರ, ಫ್ರಾನ್ಸ್‌ನ ಪುಟ್ಟ ಗ್ರಾಮವಾದ ಆವೆರ್ಗ್ನೆಯಲ್ಲಿ 36 ಸಾವಿರ […]

Continue Reading