ಶಹಾಪುರ: ಲೋಕಾಯುಕ್ತ ಡಿವೈಎಸ್ಪಿಯಿಂದ ಅಹವಾಲು ಸ್ವೀಕಾರ

ಶಹಾಪುರ: ಯಾರಾದರೂ ನಾವು ಲೋಕಾಯುಕ್ತರು ಎಂದು ನಿಮ್ಮ ಮೊಬೈಲ್’ಗೆ ಕರೆ ಮಾಡಿದಲ್ಲಿ ಪ್ರತ್ಯುತ್ತರ ನೀಡಬೇಡಿ. ತಕ್ಷಣವೇ ನಮ್ಮ ಕಾರ್ಯಾಲಯಕ್ಕೆ ತಿಳಿಸಿದಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೆವೆ ಎಂದು ಲೋಕಾಯುಕ್ತ ಡಿವೈಎಸ್ಪಿ ಜೆ.ಎಚ್ ಇನಾಮದಾರ ಹೇಳಿದರು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾಹಿತಿ ನೀಡಿದ ಅವರು, ಸಂಬಂಧಪಟ್ಟ ಇಲಾಖೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಲ್ಲದೆ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕಾನೂನು ವ್ಯಾಪ್ತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಉಮಾಕಾಂತ ಹಳ್ಳೆ, […]

Continue Reading

ಚಿತ್ತಾಪುರ: ವೆಂಕಟೇಶ್ವರ ಕಾಲೋನಿಯಲ್ಲಿಎರಡು ಮನೆ ಕಳ್ಳತನ

ಚಿತ್ತಾಪುರ: ಪಟ್ಟಣದ ವೆಂಕಟೇಶ್ವರ ಕಾಲೋನಿಯಲ್ಲಿ ನಿನ್ನೆ (ರವಿವಾರ) ರಾತ್ರಿ 2 ಗಂಟೆ ಸುಮಾರಿಗೆ ಎರಡು ಮನೆಗಳು ಕಳ್ಳತನ ಮಾಡಿರುವ ಘಟನೆ ನಡೆದಿದೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಗುರುನಾಥ ಹಿಟ್ಟಿನ ಗೀರಿಣಿಯವರ ಮೆನೆಯಲ್ಲಿದ್ದ 2 ತೊಲೆ ಬಂಗಾರ, 15 ತೊಲೆ ಬೆಳ್ಳಿ, 10 ಸಾವಿರ ರೂ. ಕಳ್ಳತನವಾಗಿದೆ. ಧೂಳಯ್ಯಸ್ವಾಮಿ ಎನ್ನುವವರ ಮನೆಯಲ್ಲಿದ್ದ 3 ತೊಲೆ ಬಂಗಾರ, 9 ತೊಲೆ ಬೆಳ್ಳಿ, 30 ಸಾವಿರ ರೂ. ಕಳ್ಳತನವಾಗಿದೆ, ಶಂಕರ ಕೊಳಕೂ‌ ಎನ್ನುವವರ ಮನೆಯ ಕೀಲಿ ಕೈ ಮುರಿದು ಕಳ್ಳತನಕ್ಕೆ ಯತ್ನಿಸಿರುವದಾಗಿ […]

Continue Reading

ಮಾಡ್ಯಾಳ ಗ್ರಾಮವು ಕುಂತಲ ನಾಡಿನ ಮುಕುಟವಾಗಿದೆ: ಮುಡುಬಿ ಗುಂಡೆರಾವ

ಕಲಬುರಗಿ: ಮಾಡ್ಯಾಳ ಗ್ರಾಮವು ಕುಂತಲ ನಾಡಿನ ಮುಕುಟವಾಗಿವೆ ಮತ್ತು ಗ್ರಾಮದ ದೇಗುಲುಗಳು ಆಲಂದ ಸಾಸಿ ನಾಡಿನ ಚೆರಿತ್ರೆ ತಿಳಿಸಿಕೊಡುತ್ತವೆ ಎಂದು ಸಂಶೋಧಕ ಸಾಹಿತಿ ಮುಡುಬಿ ಗುಂಡೆರಾವ ಅಭಿಮತ ವ್ಯಕ್ತಪಡಿಸಿದರು. ಆಳಂದ ತಾಲೂಕಿನ ಮಾಡ್ಯಾಳ ಗ್ರಾಮದ ಶಂಕರಲಿಂಗ ದೇವಾಲಯದಲ್ಲಿ ಬಸವೇಶ್ವರ ಸೇವಾ ಬಳಗ ಆಯೋಜಿಸಿದ ಜಿಲ್ಲೆಯ ಐತಿಹಾಸಿಕ ಪರಿಚಯಾತ್ಮಕ (19) ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಗ್ರಾಮದಲ್ಲಿನ ಹಲವಾರು ಐತಿಹಾಸಿಕ ದೇಗುಲುಗಳು, ಸ್ಮಾರಕ, ಶಾಸನಗಳು ನಾಡಿನ ಇತಿಹಾಸ ಸಾರುತ್ತಿವೆ, ಇಲ್ಲಿಯ ಒಂದೊಂದು ಕಲ್ಲು ಸಹ ಕನ್ನಡ ಭೂಮಿಯ […]

Continue Reading

ಮೇ.27 ರಿಂದ ಅಲ್ದಿಹಾಳ ಮರಿಯಮ್ಮ ದೇವಿಯ ವೈಭವದ ಜಾತ್ರೆ

ಸುದ್ದಿ ಸಂಗ್ರಹ ಶಹಾಬಾದ್ ಮೇ.27 ರಿಂದ 3 ದಿನಗಳ ಕಾಲ ಅಲ್ದಿಹಾಳ ಗ್ರಾಮದ ಶಕ್ತಿ ದೇವತೆ ಮರಿಯಮ್ಮ ದೇವಿ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಪೀಠಾಧಿಪತಿ ರಾಜು ಪೂಜಾರಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ.27 ರಂದು ಬೆಳಗ್ಗೆ 6 ಗಂಟೆಗೆ ಮರಿಯಮ್ಮ ದೇವಿಯ ಮೂರ್ತಿಗೆ ಮಹಾರುದ್ರಾಭಿಷೇಕ ಹಾಗೂ ವಿವಿಧ ಪೂಜೆಗಳು ನೆರವೇರಲಿವೆ. ನಂತರ ಮಧ್ಯಾಹ್ನ 11 ರಿಂದ ಮಹಾಪ್ರಸಾದ ವಿತರಣೆ. ಸಂಜೆ 6 ಗಂಟೆಗೆ ನಡೆಯುವ ಧರ್ಮಸಭೆಯು ಕಟ್ಟಿಮನಿ ಹಿರೇಮಠ ಸಂಸ್ಥಾನ ಮಠದ ಪೂಜ್ಯ […]

Continue Reading

ಕಾಖಂಡಕಿ: 27 ರಂದು ಮಲ್ಲಾರಾಧ್ಯರ ಕೋರಿಸಿದ್ಧೇಶ್ವರರ ಜಾತ್ರೋತ್ಸವ

ಚಿತ್ತಾಪುರ: ಯಡ್ರಾಮಿ ತಾಲೂಕಿನ ಶ್ರೀಕ್ಷೇತ್ರ ಕಾಖಂಡಕಿ ಗ್ರಾಮದಲ್ಲಿ ಮೇ.27 ಮತ್ತು 28 ರಂದು ಅತ್ಯಂತ ವಿಜೃಂಭಣೆಯಿಂದ ಸದ್ಗುರು ಮಲ್ಲಾರಾಧ್ಯರ ಹಾಗೂ ಸದ್ಗುರು ಕೋರಿಸಿದ್ದೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ. ನಾಲವಾರ ಹಾಗೂ ಕಾಖಂಡಕಿ ಶ್ರೀಮಠಗಳ ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರುಗುವ ಜಾತ್ರಾ ಮಹೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮೇ.27ರ ಬಾದಾಮಿ ಅಮಾವಾಸ್ಯೆಯ ದಿನದಂದು ಸಂಜೆ ನಾಡಿನ ಅನೇಕ ಪೂಜ್ಯ ಮಠಾಧೀಶರ ಸಮ್ಮುಖದಲ್ಲಿ ಶಿವಾನುಭವ ಸಾಂಸ್ಕೃತಿಕ ಸಂಭ್ರಮ ಹಾಗೂ ಪೂಜ್ಯರ ತುಲಾಭಾರ […]

Continue Reading

ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ರಾಸ್ ಬಿಹಾರಿ ಬೋಸ್

ಕಲಬುರಗಿ: ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ಶ್ರಮಿಸಿದ್ದಾರೆ. ತಮ್ಮ ಮಗ ನಿಧನರಾದರು ಕೂಡಾ ವಿಚಲಿತರಾಗದೆ, ಇಡಿ ತಮ್ಮ ಜೀವನದುದ್ದಕ್ಕೂ ದೇಶದ ಸ್ವಾತಂತ್ರಯಕ್ಕಾಗಿ ಶ್ರಮಿಸಿದ ರಾಸ್ ಬಿಹಾರಿ ಬೋಸ್ ಕೊಡುಗೆ ಮರೆಯವಂತಿಲ್ಲ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು. ನಗರದ ನ್ಯೂ ರಾಘವೇಂದ್ರ ಕಾಲೋನಿಯ ವಿವೇಕಾನಂದ ಕೋಚಿಂಗ್ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ರಾಸ್ ಬಿಹಾರಿ ಬೋಸ್‌ರ 139ನೇ ಜನ್ಮದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಬೋಸ್‌ರ ಜೀವನ-ಸಾಧನೆ-ಕೊಡುಗೆಯನ್ನು ಇಂದಿನ ಯುವಶಕ್ತಿ ತಿಳಿದುಕೊಳ್ಳಬೇಕಾಗಿದೆ. ಅವರಲ್ಲಿರುವ ಅಪ್ಪಟವಾದ […]

Continue Reading

ಎರಡು ಬೈಕ್​​ಗಳ ಮಧ್ಯೆ ಭೀಕರ ಅಪಘಾತ: ಓರ್ವ ಸಾವು

ಕಾಳಗಿ: ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಒರ್ವ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿರುವ ಘಟನೆ ಶನಿವಾರ ಸಂಜೆ ಕಾಳಗಿ–ಕೊಡದೂರ ಮುಖ್ಯರಸ್ತೆಯಲ್ಲಿ ನಡೆದಿದೆ. ತಾಲೂಕಿನ ಮಂಗಲಗಿ ಗ್ರಾಮದ ದಶರಥ ಪೀರಪ್ಪ ಮಡಿವಾಳ (28) ಮೃತಪಟ್ಟ ಸವಾರನಾಗಿದ್ದು, ಅವರ ದೇಹ ಬೆಂಕಿಗೆ ಸುಟ್ಟು ಕರಕಲಾಗಿದೆ. ಸಾಸರಗಾಂವ ಗ್ರಾಮದ ಮಲ್ಲಪ್ಪ ಅಣ್ಣಪ್ಪ ಪೂಜಾರಿ (35), ಅವಿನಾಶ ಮಲ್ಲಪ್ಪ (2) ಗಾಯಗೊಂಡಿದ್ದಾರೆ. ಮೃತ ದಶರಥ ಅವರ ಬೈಕ್ ಕಾಳಗಿಯಿಂದ ಮಂಗಲಗಿ ಕಡೆಗೆ ಹಾಗೂ ಮಲ್ಲಪ್ಪ ಅವರ ಬೈಕ್ ಕೊಡದೂರ ಕಡೆಯಿಂದ ಕಾಳಗಿ […]

Continue Reading

ಬೆಂಗಳೂರಿನಲ್ಲಿ ಕೊರೋನಾಗೆ ಮೊದಲ ಬಲಿ

ಬೆಂಗಳೂರು: ಜಗತ್ತನ್ನೇ ತಲೆಕೆಳಗೆ ಮಾಡಿಬಿಟ್ಟಿದ್ದ ಕೊರೋನಾ ಮತ್ತೆ ಎಂಟ್ರಿ ಕೊಟ್ಟಿದೆ, ಮತ್ತೆ ಆತಂಕ ಮನೆ ಮಾಡಿದೆ. ಇದೀಗ ಕೋವಿಡ್ ಸೋಂಕಿಗೆ ತುತ್ತಾಗಿ ವೃದ್ಧ ಬಲಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ವೈಟ್‌ಫೀಲ್ಡ್‌ ಮೂಲದ 84 ವರ್ಷದ ವೃದ್ಧ ಉಸಿರಾಟದ ಸಮಸ್ಯೆ ಹಾಗೂ ಅಂಗಾಂಗ ವೈಫಲ್ಯ ಖಾಯಿಲೆಗಳಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಸಹ ಕೋವಿಡ್‌ಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೇ.17 ರಂದು ಕೋವಿಡ್‌ಗೆ ವೃದ್ಧ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇಂದು 108 ಜನರಿಗೆ ಕೋವಿಡ್ ಟೆಸ್ಟ್ […]

Continue Reading

ಕರ್ನಾಟಕದಲ್ಲಿ ಕೊರೊನಾ ಹೆಚ್ಚಳ: ಇನ್ನುಮುಂದೆ ಕೋವಿಡ್ ಟೆಸ್ಟ್ ಕಡ್ಡಾಯ

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಉಸಿರಾಟ ಸಮಸ್ಯೆ ಮತ್ತು ಹೃದಯಸಂಬಂಧಿ ಕಾಯಿಲೆ ಇರುವವರಿಗೆ ಕಡ್ಡಾಯವಾಗಿ ಕೋವಿಡ್​ ಟೆಸ್ಟ್​ ಮಾಡುವಂತೆ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಚಿವ ದಿನೇಶ್​ ಗುಂಡೂರಾವ್​, ಒಂದು ತಿಂಗಳಿಗಾಗುವಷ್ಟು ಟೆಸ್ಟ್ ಕಿಟ್ ತೆಗೆದಿಡುವಂತೆ ಸೂಚನೆ ಎಲ್ಲಾ ಆಸ್ಪತ್ರೆಗಳಿಗೆ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಒಟ್ಟು 35 ಸಕ್ರಿಯ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ, ಅವುಗಳಲ್ಲಿ 32 ಬೆಂಗಳೂರಿನಲ್ಲಿ ದೃಢಪಟ್ಟಿವೆ. […]

Continue Reading

ಎಲ್ಲರಲ್ಲಿ ಸಹೋದರತ್ವ, ಏಕತಾ ಮನೋಭಾವನೆ ಬೆಳೆಯಲಿ

ಕಲಬುರಗಿ: ಪರಸ್ಪರ ಸಹೋದರತ್ವ, ಎಲ್ಲರು ಒಂದೆ ಎಂಬ ಐಕ್ಯತೆ ಮನೋಭಾವ ಮೂಡಿದಾಗ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಿ, ದೇಶದ ಪ್ರಗತಿ ಸಾಧ್ಯ ಎಂದು ಉಪನ್ಯಾಸಕ, ಸಾಮಾಜಿಕ ಚಿಂತಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು. ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಜರುಗಿದ ‘ರಾಷ್ಟ್ರೀಯ ಸಹೋದರರ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಜಾತಿ, ಧರ್ಮ, ಭಾಷೆ, ಪ್ರದೇಶ ಸೇರಿದಂತೆ […]

Continue Reading