ಯೂಟ್ಯೂಬ್ ಚಾನೆಲ್ ರಚಿಸಿದರೆ, ಎಷ್ಟು ದಿನಗಳ ನಂತರ ಹಣ ಸಿಗಲು ಪ್ರಾರಂಭವಾಗುತ್ತದೆ ?

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ, ಎಲ್ಲರೂ ಆನ್‌ಲೈನ್‌ನಲ್ಲಿ ಹಣ ಗಳಿಸುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಈ ಉದ್ದೇಶಕ್ಕಾಗಿ ಯೂಟ್ಯೂಬ್ ಅತ್ಯಂತ ಜನಪ್ರಿಯ ವೇದಿಕೆಯಾಗಿದ್ದು ಸದಾ ಟ್ರೆಂಡಿಂಗ್​ನಲ್ಲಿರುತ್ತದೆ. ಲಕ್ಷಾಂತರ ಜನರು ಹವ್ಯಾಸ, ಪ್ರತಿಭೆ ಅಥವಾ ಜ್ಞಾನ ವೀಡಿಯೊಗಳ ಮೂಲಕ ಹಂಚಿಕೊಳ್ಳುತ್ತಾರೆ ಮತ್ತು ಉತ್ತಮ ಆದಾಯ ಗಳಿಸುತ್ತಾರೆ. ಆದರೆ ದೊಡ್ಡ ಪ್ರಶ್ನೆಯೆಂದರೆ ನೀವು ಇಂದು ಹೊಸ ಯೂಟ್ಯೂಬ್ ಚಾನಲ್ ರಚಿಸಿದರೆ, ಹಣ ಗಳಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ?. ಈ ಕುರಿತು ವಿವರವಾಗಿ ನೋಡೋಣ. ಯೂಟ್ಯೂಬ್ ನಿಂದ ಹಣ ಗಳಿಸುವ ಮೊದಲ ಹೆಜ್ಜೆ […]

Continue Reading

ಮುಳ್ಳು ಮುಳ್ಳಾಗಿರುವ ಈ ಒಂದು ಹಣ್ಣಿಗೆ ಕ್ಯಾನ್ಸರ್, ಹೃದಯಾಘಾತ ಬರದಂತೆ ತಡೆಯುವ ಶಕ್ತಿಯಿದೆ

ಪ್ರಕೃತಿಯು ನಮಗೆ ಹಲವು ರೀತಿಯ ರುಚಿಕರವಾದ ಆಹಾರಗಳನ್ನು ನೀಡುತ್ತದೆ. ಅದರಲ್ಲಿಯೂ ತರಕಾರಿ ಮತ್ತು ಹಣ್ಣುಗಳು ಯಥೇಚ್ಛವಾಗಿ ಲಭ್ಯವಿರುತ್ತದೆ. ಇವೆಲ್ಲವೂ ರುಚಿಯಲ್ಲಿ ಮಾತ್ರವಲ್ಲ ಆರೋಗ್ಯ ಪ್ರಯೋಜನಗಳು ಕೂಡ ನೀಡುತ್ತದೆ ಎಂಬುದು ತಿಳಿದ ವಿಚಾರ. ಇಂತಹ ಒಂದು ಹಣ್ಣುಗಳಲ್ಲಿ ರಂಬುಟಾನ್ ಕೂಡ ಒಂದು. ಇದು ಲಿಚಿಯನ್ನು ಹೋಲುವ ಹಣ್ಣಾಗಿದ್ದು ಹೆಚ್ಚಾಗಿ ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಂತಹ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಂಡುಬರುತ್ತದೆ. ಲಿಚಿಯನ್ನು ಹೋಲುವ ಈ ಕೆಂಪು ಬಣ್ಣದ ಹಣ್ಣು ನೀವು ನಂಬಲು ಸಾಧ್ಯವಾಗದಷ್ಟು ಆರೋಗ್ಯ ಪ್ರಯೋಜನಗಳಿಂದ ಸಮೃದ್ಧವಾಗಿದೆ. ಈ […]

Continue Reading

ಕೇರಳದಲ್ಲಿ ಭೀತಿ ಹುಟ್ಟಿಸಿದ ಮೆದುಳು ತಿನ್ನುವ ಅಮೀಬಾ

ವಿಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಹೊಸ ಸಂಶೋಧನೆಗಳು ಅಚ್ಚರಿ ಮೂಡಿಸುತ್ತಿದ್ದರೆ, ಹೊಸ ಮಾದರಿಯ ವೈರಸ್‌ಗಳು ವಿಶ್ವದಾದ್ಯಂತ ಜನರ ನಿದ್ದೆಗೆಡಿಸಿವೆ. ಕೆಲ ದಿನಗಳ ಹಿಂದೆ ಚೀನಾದಲ್ಲಿ ಪತ್ತೆಯಾಗಿದ್ದ ನ್ಯುಮೋನಿಯಾ ಮಾದರಿಯ ವೈರಸ್ ವಿಶ್ವವನ್ನೆ ಆತಂಕಕ್ಕೆ ದೂಡಿತ್ತು. ನಿರ್ಲಕ್ಷ್ಯ ವಹಿಸಿದರೆ ಇದರಿಂದ ಭಾರತಕ್ಕೂ ಸಂಕಷ್ಟ ಕಟ್ಟಿಟ್ಟಬುತ್ತಿ ಎಂದು ಸಾಂಕ್ರಾಮಿಕ ರೋಗ ತಜ್ಞರು ಎಚ್ಚರಿಸಿದ್ದರು. ಅದಕ್ಕಿಂತಲೂ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಕಾಣಿಸಿಕೊಂಡಿರುವ ಮೆದುಳು ತಿನ್ನುವ ಅಮೀಬಾ ಸೋಂಕು ಜನರ ನಿದ್ದೆಗೆಡಿಸಿದೆ. 1962ರಲ್ಲಿ ಕಾಣಿಸಿಕೊಂಡಿದ್ದ ಈ ಸೋಂಕು ಭಾರತದಲ್ಲಿ ಮೊದಲು ಕಾಣಿಸಿಕೊಂಡಿದ್ದು, ಹರಿಯಾಣದ […]

Continue Reading

ಚಿಕ್ಕಮಗಳೂರಿನ 10 ಸಾವಿರ ಎಕರೆಯಲ್ಲಿ ಚಿನ್ನದ ನಿಕ್ಷೇಪ ಪತ್ತೆ: ಡ್ರಿಲ್ಲಿಂಗ್ ಗಾಗಿ ಕೇಂದ್ರ ಸರ್ಕಾರದ ಮೊರೆ ಹೋದ ಬೆಂಗಳೂರು ಕಂಪನಿ

ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ವ್ಯಾಪ್ತಿಗೆ ಬರುವ ಅರಣ್ಯ ಪ್ರದೇಶದ ಸುಮಾರು 10,100 ಎಕರೆ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇರುವುದು ಪತ್ತೆಯಾಗಿದೆ. ಈ ಕುರಿತಂತೆ ಬೆಂಗಳೂರಿನ ಖಾಸಗಿ ಕಂಪನಿಯೊಂದು ಕೇಂದ್ರ ಅರಣ್ಯ ಇಲಾಖೆಗೆ ಪತ್ರ ಬರೆದಿದೆ. ತಾನು ಗುರುತಿಸಿರುವ ಪ್ರದೇಶದಲ್ಲಿ ಚಿನ್ನವಿರುವುದು ದೃಢಪಟ್ಟಿದೆ. ಆದರೆ ಆ ಪ್ರದೇಶದ ಒಂದು ಟನ್ ಮಣ್ಣಿನಲ್ಲಿ ಎಷ್ಟು ಗ್ರಾಂ ಚಿನ್ನ ಬರಬಹುದು ಎಂಬುದನ್ನು ಮನವರಿಕೆ ಮಾಡಿಕೊಳ್ಳಲು ಅಲ್ಲಿ ಕೆಲವು ಪರೀಕ್ಷೆಗಳನ್ನು ನಡೆಸುವ ಅವಶ್ಯಕತೆಯಿದೆ. ಅದಕ್ಕಾಗಿ ಆ 10,100 […]

Continue Reading

ಬಾನಂಗಳದಲ್ಲಿ ರಕ್ತ ಚಂದ್ರಗ್ರಹಣ ಗೋಚರ: ವಿಸ್ಮಯ ಕಣ್ತುಂಬಿಕೊಂಡ ಜನ

ಬೆಂಗಳೂರು/ನವದೆಹಲಿ: ಸೂರ್ಯ, ಭೂಮಿ ಮತ್ತು ಚಂದ್ರರು ಒಂದೆ ಸಾಲಿನಲ್ಲಿ ನಿಂತಾಗ ಚಂದ್ರನ ಮೇಲೆ ಭೂಮಿಯ ಬೆಳಕು ಬೀಳುವುದೆ ಚಂದ್ರಗ್ರಹಣ. ಇಂದು (ರವಿವಾರ) ಸಂಭವಿಸಿದ ಅಪರೂಪದ ರಕ್ತಚಂದ್ರ ಗ್ರಹಣ ಆಗಸದಲ್ಲಿ ವಿಸ್ಮಯ ಮೂಡಿಸಿದೆ. ನಭೋಮಂಡಲದಲ್ಲಿ ಸಂಭವಿಸಿದ ಈ ವಿಸ್ಮಯವನ್ನು ದೇಶದ ಜನ ಮಾತ್ರವಲ್ಲದೆ ವಿಶ್ವದ ವಿವಿಧ ಭಾಗದ ಜನ ಕಣ್ತುಂಬಿಕೊಂಡು ಖುಷಿಪಟ್ಟರು. ಎಲ್ಲೆಲ್ಲಿ ರಕ್ತಚಂದ್ರನ ದರ್ಶನ ? ನೆರೆಯ ಕೇರಳದ ತಿರುನಂತಪುರದಲ್ಲಿ ಭಾಗಶಃ ಹಂತದಿಂದ ಪೂರ್ಣ ಗ್ರಹಣ ಪ್ರಕ್ರಿಯೆ ನಡೆಯುತ್ತಿದೆ. ಚಂದ್ರನು ಸಂಪೂರ್ಣ ಕೆಂಪು ಬಣ್ಣಕ್ಕೆ ತಿರುಗುತ್ತಿದ್ದಾನೆ. ಪಶ್ಚಿಮ […]

Continue Reading

ಬೆಂಗಳೂರಿನಲ್ಲಿ ಮೋಡಗಳ ಮರೆಯಲ್ಲಿ ಮರೆಯಾಗಿರುವ ಚಂದ್ರ, ನೆಲಮಂಗಲದಲ್ಲಿ ಹುಣ್ಣಿಮೆ ಚಂದ್ರನ ದರ್ಶನ

ಬೆಂಗಳೂರು: ನಭೋಮಂಡಲದ ವಿಸ್ಮಯದ ಅದ್ಭುತ ಕಣ್ತುಂಬಿಕೊಳ್ಳಲು ಜನ ತುದಿಗಾಲಲ್ಲಿ ನಿಂತಿದ್ದಾರೆ. ಈಗಷ್ಟೇ ಚಂದ್ರಗ್ರಹಣದ ಪ್ರಕ್ರಿಯೆ ಆರಂಭವಾಗಿಬಿಟ್ಟಿದೆ. ರಾತ್ರಿ 9:57ರಿಂದ ಮಧ್ಯರಾತ್ರಿ 1:26ರ ವರೆಗೆ ಒಟ್ಟು ಮೂರುವರೆ ಗಂಟೆಗಳ ಕಾಲ ನಿಧಾನವಾಗಿ ಗ್ರಹಣ ಸಂಭವಿಸಲಿದೆ. ಸದ್ಯ ದೇಶದಲ್ಲಿ ಲಡಾಖ್‌ನಲ್ಲಷ್ಟೇ ಗ್ರಹಣ ಗೋಚರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರು, ತಮಿಳುನಾಡು ಸೇರಿ ನಾಲ್ಕು ಕಡೆಗಳಲ್ಲಿ ಮೋಡ ಕವಿದ ಹಿನ್ನೆಲೆಯಲ್ಲಿ ಚಂದ್ರ ಕಣ್ಮರೆಯಾಗಿದ್ದಾನೆ. ಆಗಾಗ್ಗೆ ಭುವಿಯತ್ತ ಇಣುಕಿ ಮತ್ತೆ ಮೋಡದಲ್ಲಿ ಮರೆಯಾಗುತ್ತಿದ್ದಾನೆ. ನೆಲಮಂಗಲದಿಂದ ಆಕಾಶದಲ್ಲಿ ಹುಣ್ಣಿಮೆ ಚಂದ್ರನ ದರ್ಶನವಾಗಿದೆ. ನೆಲಮಂಗಲ ತಾಲೂಕಿನ […]

Continue Reading

YouTube ನಿಂದ ಹಣ ಗಳಿಸುವುದು ಹೇಗೆ ? 2 ದಿನಗಳ ಸರ್ಕಾರಿ ತರಬೇತಿ

ಯೂಟ್ಯೂಬ್ ಕೇವಲ ವಿಡಿಯೋ ವೇದಿಕಯಲ್ಲ. ಅದು ಗಳಿಕೆಗೆ ಅತ್ಯುತ್ತಮ ಮೂಲವಾಗಿ ಬದಲಾಗಿದೆ. ಆದ್ದರಿಂದಲೇ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತಮ್ಮದೆಯಾದ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಲು ಬಯಸುತ್ತಾರೆ. ಆದರೆ ಸಮಸ್ಯೆಯೆಂದರೆ ಹೆಚ್ಚಿನ ಜನರಿಗೆ ಎಲ್ಲಿಂದ ಪ್ರಾರಂಭಿಸಬೇಕು ಮತ್ತು ಯಾವ ವಿಷಯಗಳಿಂದ ಜನರನ್ನು ಹೆಚ್ಚು ಆಕರ್ಷಿಸಬೇಕು ಎಂಬುದು ತಿಳಿದಿಲ್ಲ. ನೀವೂ ಕೂಡ ಇದೆ ರೀತಿ ಸಮಸ್ಯೆಯಲ್ಲಿದ್ದರೆ ಈ ಸುದ್ದಿ ನಿಮಗಾಗಿ. ಈಗ ನೀವು ಮನೆಯಲ್ಲಿ ಕುಳಿತು ಎರಡು ದಿನಗಳಲ್ಲಿ YouTube ಚಾನೆಲ್ ರಚಿಸುವ ಮತ್ತು ಅದರಿಂದ ಹಣ ಗಳಿಸುವ ತಂತ್ರವನ್ನು […]

Continue Reading

‌ಡಾ.ವಿಷ್ಣುವರ್ಧನ್ ಸಮಾಧಿ ಕೆಡವಿದವರ ಪ್ಲ್ಯಾನ್‌ ಉಲ್ಟಾ ಮಾಡಿ ಶಾಕ್‌ ಕೊಟ್ಟ ಸರ್ಕಾರ, ಆದೇಶ ಪತ್ರದಲ್ಲಿ ಏನಿದೆ ?

ಬೆಂಗಳೂರು: ಅಭಿಮಾನ್‌ ಸ್ಟುಡಿಯೋ ಹಾಗೂ ವಿಷ್ಣುವರ್ಧನ್‌ ಸಮಾಧಿ ಇದ್ದ ಜಾಗವನ್ನು ಸರ್ಕಾರ ಈಗ ಅರಣ್ಯ ಪ್ರದೇಶ ಎಂದು ಆದೇಶ ಹೊರಡಿಸಿದೆ. ಸರ್ಕಾರ ಹೊರಡಿಸಿದ ಆದೇಶ ಪತ್ರದಲ್ಲಿ ಏನಿದೆ ? ಬೆಂಗಳೂರು ದಕ್ಷಿಣ ತಾಲುಕು, ಕೆಂಗೇರಿ ಹೋಬಳಿ, ಮೈಲಸಂದ ಗ್ರಾಮದ ಸರ್ವೆ ನಂ.26ರಲ್ಲಿ ಅಭಿಮಾನ್ ಸ್ಟುಡಿಯೋಗೆ ನೀಡಿರುವ ಅರಣ್ಯ ಪ್ರದೇಶ ಆದೇಶವನ್ನು ರದ್ದು ಪಡಿಸಿ, ಹಿಂಪಡೆಯುವ ಬಗ್ಗೆ ಬೆಂಗಳೂರು ದಕ್ಷಿಣ ತಾಲೂಕು, ಕೆಂಗೇರಿ ಹೋಬಳಿ, ಮೈಲಸಂದ್ರ ಗ್ರಾಮದ ಸರ್ವೆ ನಂ.22 (78.3-18ಗು), ಸರ್ವೆ ನಂ.2 (b2ಎ-20ಗು)ರ ಪ್ರದೇಶವನ್ನು ಶುರಹಳ್ಳಿ […]

Continue Reading

ಗಣೇಶ ಹಬ್ಬದಂದು ಚಂದ್ರನನ್ನು ನೋಡಬಾರದು ಯಾಕೆ ?

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ತನ್ನದೆಯಾದ ಮಹತ್ವವಿದೆ. ಒಂದೊಂದು ಹಬ್ಬಗಳ ಹಿಂದೆಯೂ ಅದರದೆಯಾದ ಕಥೆಗಳಿದ್ದು, ಗಣೇಶ ಹಬ್ಬಕ್ಕೂ ಕಥೆಯಿದೆ. ಈ ದಿನದಂದು ಚಂದ್ರನನ್ನು ನೋಡಬಾರದೆಂಬ ನಂಬಿಕೆ ಇದೆ. ಸಾಮಾನ್ಯವಾಗಿ ಚಂದ್ರನನ್ನು ಪ್ರತಿ ದಿನ ನಾವು ಗಮನಿಸುವುದಿಲ್ಲ. ಆದರೆ ಭಾದ್ರಪದ ಶುಕ್ಲದ ಚೌತಿಯ ದಿನದಂದು ಮಾತ್ರ ನೋಡಬಾರದು ಎಂದು ಅನಿಸಿದರೂ, ಆಕಸ್ಮಿಕವಾಗಿ ಚಂದ್ರನನ್ನು ನೋಡಿಯೇ ಬಿಡುತ್ತೆವೆ. ಅಂದು ಚಂದ್ರನನ್ನು ನೋಡಿದವರಿಗೆ ಅಪವಾದ ಬರುತ್ತದೆ. ಆದರೆ ಕೃಷ್ಣ ಪಕ್ಷದ ಚೌತಿಯ ಚಂದ್ರನನ್ನು ನೋಡಿದರೆ ಆ ಅಪವಾದ ದೂರವಾಗುತ್ತದೆ ಎಂಬ ನಂಬಿಕೆ ಇಂದಿಗೂ […]

Continue Reading

ಜಗತ್ತಿನ ಅತಿದೊಡ್ಡ ಉಚಿತ ಆಸ್ಪತ್ರೆ ಚಿಕ್ಕಬಳ್ಳಾಪುರದಲ್ಲಿ ಶೀಘ್ರ ಲೋಕಾರ್ಪಣೆ: ಇಲ್ಲಿ ಬಿಲ್ಲಿಂಗ್‌ ಕೌಂಟರೇ ಇರಲ್ವಂತೆ

ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೆನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಜಗತ್ತಿನಲ್ಲೇ ಅತಿ ದೊಡ್ಡ ಉಚಿತ ಆಸ್ಪತ್ರೆ ತಲೆ ಎತ್ತುತ್ತಿದೆ. ಮೊದಲ ಬಾರಿಗೆ ಜಗತ್ತಿನ ಎಲ್ಲಾ ಭಾಗದ ಎಲ್ಲಾ ಜನರಿಗೂ ಉಚಿತವಾಗಿ ವೈದ್ಯಕೀಯ ಸೇವೆ ಒದಗಿಸುವ ಬೃಹತ್‌ ಕಟ್ಟಡ ತಲೆ ಎತ್ತುತ್ತಿದೆ. ಸುಮಾರು 6,50,000 ಚದರಡಿ ವಿಸ್ತೀರ್ಣದಲ್ಲಿ ತಲೆ ಎತ್ತುತ್ತಿರುವ ಈ ಭವ್ಯ ಆಸ್ಪತ್ರೆಯಲ್ಲಿ 28 ವೈದ್ಯಕೀಯ ವಿಭಾಗಗಳು ಕಾರ್ಯನಿರ್ವಹಿಸಲಿವೆ. ಭಾರತದ ಮೊದಲ ಉಚಿತ ಗ್ರಾಮೀಣ ವೈದ್ಯಕೀಯ ಕಾಲೇಜಾಗಿ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ 2023ರಲ್ಲಿ […]

Continue Reading