ಮಧುಮೇಹಿಗಳು, ಸ್ಥೂಲಕಾಯರಿಗೆ ಗುಡ್ ನ್ಯೂಸ್: ಭಾರತಕ್ಕೆ ಬಂತು ಓಝೆಂಪಿಕ್ – ಏನಿದು ಔಷಧಿ ?

ಆಧುನಿಕ ಜೀವನಶೈಲಿಯು ಮನುಷ್ಯನ ಆರೋಗ್ಯದ ಮೇಲೆ ನಾನಾ ಪರಿಣಾಮ ಬೀರುತ್ತಿದೆ. ಉತ್ತಮ ಆರೋಗ್ಯಕ್ಕೆ ನಿಗದಿತ ದೈಹಿಕ ಚಟುವಟಿಕೆ ಮತ್ತು ವ್ಯಾಯಾಮ ಅತ್ಯಗತ್ಯ. ಆದರೆ, ಒತ್ತಡದ ಬದುಕು, ಆಲಸ್ಯ ಮನೋಭಾವದಿಂದ ಮನುಷ್ಯ ಆರೋಗ್ಯ ಸುಲಭ ಮಾರ್ಗ ಅನುಸರಿಸುತ್ತಿದ್ದಾನೆ. ವೈದ್ಯಕೀಯ ವಲಯದಲ್ಲಿ ಅದಕ್ಕೆ ಪೂರಕವಾದ ಚಿಕಿತ್ಸೆ, ಔಷಧಿಗಳು ಹೊರಬರುತ್ತಿವೆ. ಇವುಗಳ ಮೇಲಿನ ಅವಲಂಬನೆ ಕೂಡ ಹೆಚ್ಚಾಗುತ್ತಿದೆ. ಈಗಿನ ದಿನಮಾನಗಳಲ್ಲಿ ಜನರನ್ನು ಹೆಚ್ಚಾಗಿ ಬಾಧಿಸುತ್ತಿರುವುದು ಶುಗರ್ ಮತ್ತು ಬೊಜ್ಜುತನ. ದಿಲ್ಲಿಯಿಂದ ಹಳ್ಳಿವರೆಗೆ, ಶ್ರೀಮಂತನಿಂದ ಬಡವನವರೆಗೆ ಸಕ್ಕರೆ ಕಾಯಿಲೆ ತಲುಪಾಗಿದೆ. ಅಂತೆಯೆ, ದೊಡ್ಡವರಿಂದ […]

Continue Reading

ಶಬರಿಮಲೆ ಅಯ್ಯಪ್ಪನ ಹುಂಡಿಗೆ 15 ದಿನದಲ್ಲಿ 92 ಕೋಟಿ ರೂ.

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪನ ವಾರ್ಷಿಕ ಯಾತ್ರೆಯ ಮೊದಲ 15 ದಿನದಲ್ಲೆ ಹುಂಡಿಗೆ 92 ಕೋಟಿ ರೂ. ಹರಿದುಬಂದಿದೆ. ಈ ಕುರಿತು ಶಬರಿಮಲೆ ದೇಗುಲದ ಆಡಳಿತ ಮಂಡಳಿ ಮಾಹಿತಿ ನೀಡಿದ್ದು, ಕಳೆದ ವರ್ಷ ಇದೆ ಅವಧಿಯಲ್ಲಿ ದೇಗುಲಕ್ಕೆ 69 ಕೋಟಿ ರೂ. ಆದಾಯ ಬಂದಿತ್ತು. ಈ ಸಲ ಶೇ.33ರಷ್ಟು ಹೆಚ್ಚಳದೊಂದಿಗೆ 92 ಕೋಟಿ ರೂ. ಸಂಗ್ರಹವಾಗಿದೆ ಎಂದು ತಿಳಿಸಿದೆ. ಇದೆ ಅವಧಿಯಲ್ಲಿ ಕಳೆದ ವರ್ಷ ಸಂಗ್ರಹವಾಗಿದ್ದ ಮೊತ್ತಕ್ಕಿಂತ ಇದು 23 ಕೋಟಿ ರೂ. ಅಧಿಕ. ಅದರಲ್ಲಿ 47 ಕೋಟಿ […]

Continue Reading

ಜಾಲಿವುಡ್‌ ಸ್ಟುಡಿಯೋಸ್‌ಗೆ ಬಿತ್ತು ಬೀಗ: ಬಿಗ್‌ ಬಾಸ್‌ ಸ್ಥಗಿತಕ್ಕೆ ಸೂಚನೆ

ರಾಮನಗರ: ಪರಿಸರ ನಿಯಮ ಉಲ್ಲಂಘನೆ ಆರೋಪದಲ್ಲಿ ಜಾಲಿವುಡ್‌ ಸ್ಟುಡಿಯೋಸ್‌ಗೆ ಬೀಗ ಬಿದ್ದಿದೆ. ಬಿಗ್‌ ಬಾಸ್‌ ನಡೆಯುತ್ತಿರುವ ಜಾಗಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ನಿಯಮ ಮೀರಿ ಜಾಲಿವುಡ್‌ ಸ್ಟುಡಿಯೋಸ್‌ ನಡೆಸುತ್ತಿರುವ ಬಗ್ಗೆ ನೋಟಿಸ್‌ ನೀಡಲಾಗಿತ್ತು. ಆದರೆ ಯಾವುದೆ ಪಾಲನೆಯಾಗದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಇಂದು ಸಂಜೆ ಸ್ಟುಡಿಯೋಸ್‌ಗೆ ಭೇಟಿ ನೀಡಿದರು. ರಾಮನಗರ ತಹಸೀಲ್ದಾರ್‌ ತೇಜಸ್ವಿನಿ, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಜಾಲಿವುಡ್‌ ಒಳಗೆ ಪರಿಶೀಲನೆ ನಡೆಸಿದರು. ನೋಟಿಸ್ ತೆಗೆದುಕೊಳ್ಳಲು […]

Continue Reading

ಇನ್ನುಮುಂದೆ ಆಧಾರ್, ಪ್ಯಾನ್, ಪಡಿತರ ಚೀಟಿ ಭಾರತೀಯ ಪೌರತ್ವಕ್ಕೆ ಪುರಾವೆಯಲ್ಲ, ಈ 2 ಡಾಕ್ಯುಮೆಂಟ್‌ ಇದ್ದರೆ ಮಾತ್ರ ಭಾರತದ ಪ್ರಜೆ: ಸರ್ಕಾರದ ಹೊಸ ಆದೇಶ

ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನಿ ನಾಗರಿಕರನ್ನು ತನಿಖೆ ಮಾಡಿ ದೇಶದಿಂದ ಹೊರಹೋಗುವ ಮಾರ್ಗ ತೋರಿಸಲಾಗಿದೆ. ಇದಾದ ನಂತರ ಸರ್ಕಾರ ಆಧಾರ್, ಪ್ಯಾನ್, ಪಡಿತರ ಚೀಟಿ ಭಾರತೀಯ ಪೌರತ್ವಕ್ಕೆ ಪುರಾವೆಯಲ್ಲ ಎಂದು ಹೇಳಿದೆ. ಇವು ಆಡಳಿತಾತ್ಮಕ ಅಗತ್ಯಗಳನ್ನು ಮಾತ್ರ ಪೂರೈಸುತ್ತವೆ. ಇದಲ್ಲದೆ ಸರ್ಕಾರದಿಂದ ಗುರುತಿಸಲ್ಪಟ್ಟ ಏಕೈಕ ದಾಖಲೆಗಳು ಜನನ ಪ್ರಮಾಣಪತ್ರ ಮತ್ತು ನಿವಾಸ ಪ್ರಮಾಣಪತ್ರ ಎಂದು ಸರ್ಕಾರ ಹೇಳಿದೆ. ಇದರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಅಕ್ರಮ ವಿದೇಶಿ ನಾಗರಿಕರು ಪರಿಶೀಲನೆಯ ಸಮಯದಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಪ್ಯಾನ್ […]

Continue Reading

ದೇಶದ ಮೊದಲ ವರ್ಟಿಕಲ್ ಪಂಬನ್ ರೈಲ್ವೆ ಬ್ರಿಡ್ಜ್: ಇದರ ವಿಶೇಷತೆ ಏನು ?

ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಲೋಕಾರ್ಪಣೆಗೆ ಸಜ್ಜಾಗಿದೆ. ರಾಮೇಶ್ವರಂಗೆ ತೆರಳುವ ಭಕ್ತರಿಗೆ, ಧನುಷ್ಕೋಡಿ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಪಂಬನ್ ಬ್ರಿಡ್ಜ್‌ ನಿರ್ಮಿಸಲಾಗಿದೆ. ಸಮುದ್ರದಲ್ಲಿ ನಿರ್ಮಿಸಲಾದ ಮೊದಲ ವರ್ಟಿಕಲ್ ಲಿಫ್ಟ್ ಸೇತುವೆ ಇದಾಗಿದೆ, ಈ ಸೇತುವೆಯನ್ನು ರಾಮನವಮಿಯಂದು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲಿದ್ದಾರೆ. ಪಂಬನ್ ರೈಲು ಸೇತುವೆಯ ನಿರ್ಮಾಣದ ಕಾರ್ಯವನ್ನು 1870ರಲ್ಲಿ ಬ್ರಿಟಿಷ್ ಸರ್ಕಾರವು ಶ್ರೀಲಂಕಾಕ್ಕೆ ವ್ಯಾಪಾರ ಸಂಪರ್ಕ ವಿಸ್ತರಿಸಲು ನಿರ್ಧರಿಸಿದಾಗ ಪ್ರಾರಂಭಿಸಲಾಯಿತು. ಸುಮಾರು 2.2 ಕಿ.ಮೀ.ಗಳಷ್ಟು ವಿಸ್ತಾರವಿದ್ದ, 143 ಪಿಯರ್‌ಗಳನ್ನು ಹೊಂದಿರುವ ಇದನ್ನು […]

Continue Reading

ಗಗನಯಾತ್ರಿಗಳ ಆರೋಗ್ಯದ ಮೇಲೆ ಬಾಹ್ಯಾಕಾಶ ಪ್ರಯಾಣದ ಪರಿಣಾಮಗಳೆನು ? ಪರಿಹಾರವೆನು ?

ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ʻನಾಸಾʼದ ಗಗನಯಾತ್ರಿಗಳಾದ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್‌ ಮತ್ತು ಬುಚ್‌ ವಿಲ್ಮೋರ್‌ ಭೂಮಿಗೆ ಸುರಕ್ಷಿತವಾಗಿ ಮರಳಿದ್ದು ಇಡೀ ದೇಶವೇ ಸಂಭ್ರಮಿಸಬೇಕಾದ ಸಂಗತಿ. 8 ದಿನಗಳ ಕಾರ್ಯಾಚರಣೆಗೆಂದು ತೆರಳಿದ್ದ ಇವರು ತಾಂತ್ರಿಕ ದೋಷದಿಂದಾಗಿ ಸುಮಾರು 286 ದಿನಗಳ ಕಾಲ ಬಾಹ್ಯಾಕಾಶದಲ್ಲೇ ಉಳಿಯಬೇಕಾಗಿತ್ತು. ಅದ್ರೆ ಇವರನ್ನು ಹೊತ್ತಿದ್ದ ಸ್ಪೇಸ್‌ಎಕ್ಸ್‌ ಸಂಸ್ಥೆಯ ಕ್ಯಾಪ್ಸೂಲ್‌ ಫ್ಲೋರಿಡಾದ ಸಮುದ್ರದಲ್ಲಿ ಜಲಸ್ಪರ್ಧ ಮಾಡಿರುವುದು ಸುದೀರ್ಘ ಅವಧಿಯಿಂದ ಮನೆ ಮಾಡಿದ್ದ ಅನಿಶ್ಚಿತತೆಯೊಂದನ್ನು ಕೊನೆಗೊಳಿಸಿದೆ. ಹಾಗಾದ್ರೆ ಭೂಮಿಗೆ ಬಂದ ನಂತ್ರ ಮುಂದೇನು? ತಕ್ಷಣಕ್ಕೆ […]

Continue Reading

ರಮ್ಯಾ ಕಮ್ ಬ್ಯಾಕ್: ರಮ್ಯಾಗೆ ಯೋಗರಾಜ್ ಭಟ್ ನಿರ್ದೆಶನ

ಸುದ್ದಿ ಸಂಗ್ರಹ ಬೆಂಗಳೂರು ಮೋಹಕ ತಾರೆ ರಮ್ಯಾ ಕೊನೆಗೂ ಸಿನಿಮಾಗೆ ಕಮ್ ಬ್ಯಾಕ್ ಆಗುವ ಕಾಲ ಬಂತು. ರಂಗ ಎಸ್‌ಎಸ್‌ಎಲ್‌ಸಿ ಆದ್ಮೇಲೆ 20 ವರ್ಷಗಳ ನಂತರ ಮತ್ತೆ ಯೋಗರಾಜ್ ಭಟ್ ಜೊತೆಗೆ ಸಿನಿಮಾ ಮಾಡಲು ರಮ್ಯಾ ಸಾಥ್ ನೀಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ರಮ್ಯಾ ಮತ್ತೆ ಬೆಳ್ಳಿಪರದೆಯಲ್ಲಿ ಮಿಂಚಲು ವೇದಿಕೆ ಸಜ್ಜಾಗಿದೆ. ವಿಕಟಕವಿ ನಿರ್ದೇಶಕ ಯೋಗರಾಜ್ ಭಟ್ ಬರೆದ ಸ್ಕ್ರಿಪ್ಟ್ ಇಷ್ಟವಾಗಿ ನಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮನದ ಕಡಲು ಸಿನಿಮಾಗೆ ಬಂಡವಾಳ […]

Continue Reading

ಪ್ರತಿದಿನ ಚಿನ್ನದ ಬೆಲೆ ಏರಿಕೆ, ಇಳಿಕೆ ನಿರ್ಧರಿಸುವುದು ಯಾರು ?

ನಮ್ಮಲ್ಲಿ ಚಿನ್ನಕ್ಕಿರುವ ಬೇಡಿಕೆ, ಮೌಲ್ಯ ಮತ್ತೊಂದಕ್ಕಿಲ್ಲ ಎಂದರೆ ಖಂಡಿತ ತಪ್ಪಾಗಲಾರದು. ಇಂದಿನ ಕಾಲಘಟ್ಟದಲ್ಲಿ ಯಾರನ್ನು ನೋಡಿದರೂ ಚಿನ್ನದ ಖರೀದಿ ಅಥವಾ ಅದರ ದರಗಳತ್ತ ಹೆಚ್ಚಾಗಿ ಗಮನಹರಿಸುತ್ತಾರೆ. ಇದು ತೀರ ಸಾಮಾನ್ಯವಾಗಿಬಿಟ್ಟಿದೆ. ಚಿನ್ನದತ್ತ ಒಲವು ತೋರುವ ಜನರು, ಪ್ರತಿದಿನ ಗೋಲ್ಡ್ ದರ ಎಷ್ಟಾಗಿರುತ್ತೆ ? ದರದಲ್ಲಿ ಕುಸಿತ ಕಂಡರೆ ಸಾಕಪ್ಪ ಇಳಿದಿರಬಹುದು ಎಂಬ ಯೋಚನೆಯಲ್ಲಿ ಮುಳುಗಿರುತ್ತೆವೆ. ಆದರೆ ನಾವು ಅಂದುಕೊಂಡಂತೆ ಮಾರುಕಟ್ಟೆಯಲ್ಲಿ ದರ ಏರಿಕೆ – ಇಳಿಕೆ ಆಗುವುದಿಲ್ಲ. ಯಾವಾಗ ದಿಢೀರ್​ ಏರುತ್ತದೆ ಮತ್ತು ಕುಸಿಯುತ್ತದೆ ಎಂಬುದನ್ನು ಅರಿಯುವುದು […]

Continue Reading

200 ರೂ ನೋಟು ಬ್ಯಾನ್‌ ಬಗ್ಗೆ RBI ಸ್ಪಷ್ಟನೆ, ನಕಲಿ ನೋಟನ್ನು ಹೇಗೆ ಗುರುತಿಸಬೇಕು

200 ರೂ ನೋಟು ರದ್ದುಗೊಳಿಸುವ ವದಂತಿಗಳ ಬಗ್ಗೆ RBI ಸ್ಪಷ್ಟನೆ ನೀಡಿದೆ. ಯಾವುದೇ ನೋಟು ಹಿಂಪಡೆಯುವುದಿಲ್ಲ ಎಂದು ಹೇಳಿದೆ. ಆದರೆ ನಕಲಿ ನೋಟುಗಳ ಹೆಚ್ಚಳದ ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕು ಎಂದು ಸೂಚಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 200 ರೂ ನೋಟು ರದ್ದುಗೊಳಿಸುತ್ತಿದೆ ಎಂಬ ವದಂತಿಗಳು ಹರಿದಾಡುತ್ತಿದೆ. 200 ನೋಟು ನಿಷೇಧಿಸಲಾಗುತ್ತದೆಯೇ‌ ? ಮಾರುಕಟ್ಟೆಯಿಂದ ಎಲ್ಲಾ 200 ರೂ ನೋಟುಗಳನ್ನು ಹಿಂಪಡೆಯಲಾಗುತ್ತದೆಯೇ ? ಈ ವದಂತಿಗಳ ಬಗ್ಗೆ RBI ಸ್ಪಷ್ಟನೆ ನೀಡಿದೆ. 200, 500 ನಕಲಿ ನೋಟುಗಳು […]

Continue Reading

ದೇಶದಲ್ಲೇ ಪ್ರಥಮ ಬಾರಿಗೆ ವಿಕಲಚೇತನರ ಆರೈಕೆದಾರರಿಗೆ ಮಾಸಿಕ ಸಾವಿರ ರೂ. ಭತ್ಯೆ: ಸಿಎಂ ಘೋಷಣೆ

ಬೆಂಗಳೂರು: ವಿಕಲಚೇತನರು ಸಮಾಜಕ್ಕೆ ಹೊರೆಯಲ್ಲ ಅವರು ಸಮಾಜದ ಆಸ್ತಿ, ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ಈ ಬಾರಿ ವಿಶ್ವ ವಿಕಲಚೇತನರ ದಿನಾಚರಣೆಯನ್ನು “ಸಮಗ್ರ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ವಿಕಲಚೇತನ ವ್ಯಕ್ತಿಗಳಲ್ಲಿ ನಾಯಕತ್ವದ ಉತ್ತೇಜನ” ಎಂಬ ಘೋಷ ವಾಕ್ಯದೊಂದಿಗೆ ಆಚರಿಸಿದ್ದೆವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ವರ್ಷ ನಾಲ್ಕು ಬಗೆಯ ವಿಕಲಚೇತನರ ಆರೈಕೆದಾರರಿಗೆ ಮಾಸಿಕ 1 ಸಾವಿರ ರೂ. ಆರೈಕೆದಾರರ ಭತ್ಯೆ ನೀಡುವ ಯೋಜನೆಯನ್ನು ದೇಶದಲ್ಲಿಯೇ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಘೋಷಿಸಿದೆ, ಇದನ್ನು ಪ್ರಸಕ್ತ ಸಾಲಿನಿಂದ […]

Continue Reading