KPSC ಪಶುವೈದ್ಯಕೀಯ ಅಧಿಕಾರಿಗಳ ನೇಮಕ ಅಕ್ರಮ: ಅಭ್ಯರ್ಥಿ ಮನೆ ಮೇಲೆ ಸಿಐಡಿ ದಾಳಿ

ಸುದ್ದಿ ಸಂಗ್ರಹ ಕಲಬುರಗಿಕೆ‌ಪಿ‌ಎಸ್ಸಿ ನಡೆಸುತ್ತಿರುವ ಪಶುವೈದ್ಯಕೀಯ ಅಧಿಕಾರಿಗಳ ನೇಮಕ ಪ್ರಕ್ರಿಯೆಯಲ್ಲಿನ ಅಕ್ರಮಕ್ಕೆ‌ ಸಂಬಂಧಿಸಿದಂತೆ ನಗರದಲ್ಲಿ ಬುಧವಾರ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ‌. ನಗರದ ರಿಂಗ್ ರಸ್ತೆಯ ಓಝಾ ಬಡಾವಣೆಯ ರವೀಂದ್ರನಾಥ ‌ಟ್ಯಾಗೋರ್‌ ಕಾಲೊನಿಯಲ್ಲಿರುವ ಅಭ್ಯರ್ಥಿ ಮಮಿತಾ ಅವರು ನೆಲೆಸಿರುವ ಮನೆಯ ಮೇಲೆ ಸಿಐಡಿ ಡಿವೈಎಸ್ಪಿ ಅಸ್ಲಂ ಪಾಶಾ, ಇನ್ ಸ್ಪೆಕ್ಟರಗಳಾದ ಮಹೇಶ ಮತ್ತು ಮಹೇಶ್ವರ ರೆಡ್ಡಿ ಅವರ ತಂಡವು ಬೆಳಿಗ್ಗೆ 9 ಗಂಟೆ ಸುಮಾರಿಗೆ ದಾಳಿ ನಡೆಸಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ. ನಾಲ್ವರು ಪೊಲೀಸರು ಭದ್ರತೆ […]

Continue Reading

ಶಹಾಬಾದ್: ನಗರಸಭೆ ಇಬ್ಬರು ಸಿಬ್ಬಂದಿ ಅಮಾನತು, ಪೌರಾಯುಕ್ತರ ಅಮಾನತಿಗೆ ಜಿಲ್ಲಾಧಿಕಾರಿ ಶಿಫಾರಸ್ಸು

ಸುದ್ದಿ ಸಂಗ್ರಹ ಶಹಾಬಾದ್ ನಗರಸಭೆಯ ಕಂದಾಯ ಅಧಿಕಾರಿ ಜಗದೇವಿ, ಕರ ವಸೂಲಿಗಾರ ಮಾಣಿಕಪ್ಪ ಮೌರ್ಯ ಇವರನ್ನು ಜಿಲ್ಲಾಧಿಕಾರಿ ಮೊಹಮ್ಮದ್ ಇಕ್ರಮುಲ್ಲಾ ಷರೀಫ್ ಅವರು ಅಮಾನತು ಮಾಡಿ ಆದೇಶಿಸಿದ್ದಾರೆ, ಮತ್ತು ನಗರಸಭೆ ಪ್ರಭಾವಿ ಪೌರಾಯುಕ್ತ ಫಕ್ರುದ್ದೀನ್ ಸಾಬ್ ಅವರನ್ನು ಅಮಾನತು ಮಾಡಲು ಪೌರಾಡಳಿತ ಮಂಡಳಿ ಬೆಂಗಳೂರಿಗೆ ಶಿಫಾರಸ್ಸು ಮಾಡಿದ್ದಾರೆ. ನಗರ ಸಭೆಯಲ್ಲಿ ವರ್ಷಾನುಗಟ್ಟಲೆಯಿಂದ ಇ- ಖಾತಾ ಮತ್ತು ಮೋಟಿಶನ್ ಮಾಡದ ಅಧಿಕಾರಿಗಳು ಕೇವಲ ಒಂದೆ ದಿನದಲ್ಲಿ 70 ಖಾತೆ ಮತ್ತು ಮೋಟೇಶನ್ ಆಗಿರುವುದು ಅನುಮಾನಗೊಂಡು ಶಾಸಕ ಬಸವರಾಜ ಮತ್ತಿಮೂಡ್ […]

Continue Reading

ಶಹಾಬಾದ್: ಪೌರಾಯುಕ್ತ ಫಕ್ರುದ್ದೀನ್ ಸೇರಿ ಮೂವರು ಅಮಾನತು

ಸುದ್ದಿ ಸಂಗ್ರಹ ಶಹಾಬಾದ್ವರ್ಷಾನುಗಟ್ಟಲೆ ಅಲೆದರೂ ಖಾತೆ ಮತ್ತು ಮ್ಯುಟೇಶನ್ ಮಾಡದ ಅಧಿಕಾರಿಗಳು ಕೇವಲ ಒಂದೆ ದಿನದಲ್ಲಿ 70 ಖಾತೆ ಹಾಗೂ ಮ್ಯುಟೇಶನ್ ಮಾಡಿರುವುದು ಮತ್ತು ಇವುಗಳಿಗೆ ಸೂಕ್ತ ದಾಖಲೆ ನಿರ್ವಹಿಸದೆ ಕರ್ತವ್ಯಲೋಪ ಎಸಗಿದ ಶಹಾಬಾದ್ ನಗರಸಭೆ ಪೌರಾಯುಕ್ತ ಫಕ್ರುದ್ದೀನ್ ಸಾಬ್ ಸೇರಿದಂತೆ ಮೂವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಆದೇಶ ಹೊರಡಿಸಿದ್ದಾರೆ. ಕಂದಾಯ ಅಧಿಕಾರಿ ಜಗದೇವಿ, ಕರ ವಸೂಲಿಗಾರ ಮಾಣಿಕಪ್ಪ ಮೌರ್ಯ ಅವರನ್ನು ಅಮಾನತುಗೊಳಿಸಲಾಗಿದೆ. ಆ.31 ಇತ್ತೀಚೆಗೆ ಶಾಸಕ ಬಸವರಾಜ ಮತ್ತಿಮಡು ಅವರು ನಗರಸಭೆಗೆ ದಿಢೀರ್ ಭೇಟಿ […]

Continue Reading

ಯಾರೊಂದಿಗೂ KPSC ಡೀಲ್ ಮಾಡಿಲ್ಲ: ಹಗರಣ ಒಪ್ಪಿಕೊಳ್ಳಲು ಶಿವಶಂಕರಪ್ಪ ನಕಾರ

ಸುದ್ದಿ ಸಂಗ್ರಹ ಬೆಂಗಳೂರುಕೆಪಿಎಸ್‌ಸಿ ನೇಮಕಾತಿ ಹಗರಣ ಕೇಸ್‌ನಲ್ಲಿ ಸಿಐಡಿ ವಿಚಾರಣೆ ಎದುರಿಸುತ್ತಿರುವ ಶಿವಶಂಕರಪ್ಪ ಸಾಹುಕಾರ್ ಹಗರಣ ಒಪ್ಪಿಕೊಳ್ಳಲು ನಕಾರ ವ್ಯಕ್ತಪಡಿಸಿದ್ದಾರೆ. ಸಿಐಡಿ ವಿಚಾರಣೆ ಸಂದರ್ಭದಲ್ಲಿ, ನಾನು ಮಗಳ ವಿಚಾರದಲ್ಲಿ ತಪ್ಪು ಮಾಡಿದ್ದೆನೆಯೇ ಹೊರತು ಪರೀಕ್ಷೆಯಲ್ಲಿ ಅಲ್ಲ. ಮಗಳ ವಿಚಾರದಲ್ಲಿ ತಾಂತ್ರಿಕ ತಪ್ಪುಗಳಾಗಿರಬಹುದು. ಅದನ್ನು ಹೊರತುಪಡಿಸಿ ಯಾರೊಂದಿಗೂ ನಾನು ವ್ಯವಹಾರ ಮಾಡಿಲ್ಲ ಎಂದು ಹೇಳಿದ್ದಾರೆನ್ನಲಾಗಿದೆ. ಗ್ಯಾನೇಂದ್ರ ಜೊತೆ ನನ್ನದು ಬರಿ ಆಡಳಿತ ವ್ಯವಹಾರ, ಅದನ್ನು ಬಿಟ್ಟು ಹಣಕಾಸಿನ ಮಾತುಕತೆಯಾಗಲಿ, ಪರೀಕ್ಷೆ ವಿಚಾರವಾಗಲಿ ಮಾತನಾಡಿಲ್ಲ. ಬಸವರಾಜ್ ಕನ್ನಾಳೆಯನ್ನು ನಾನು ಮುಖಾಮುಖಿ […]

Continue Reading

ನಂದಗೋಕುಲ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಸುದ್ದಿ ಸಂಗ್ರಹ ಶಹಾಬಾದ್ನಗರದ ಚವ್ಹಾಣ್ ಶಿಕ್ಷಣ ಕೇಂದ್ರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಂದಗೋಕುಲ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅತ್ಯಂತ ಸಂಭ್ರಮ- ಸಡಗರದಿಂದ ಆಚರಿಸಲಾಯಿತು. ಶಾಲೆಯ ಆವರಣವನ್ನು ವಿವಿಧ ಬಣ್ಣಗಳ ರಂಗೋಲಿ, ಹೂವುಗಳು ಮತ್ತು ಮಾವಿನ ಎಲೆಗಳಿಂದ ಸಿಂಗರಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಶಾಲೆಯ ಪುಟ್ಟ ಮಕ್ಕಳು ಶ್ರೀಕೃಷ್ಣ ಮತ್ತು ರಾಧೆಯರ ವೇಷಭೂಷಣ ಧರಿಸಿ ಎಲ್ಲರ ಗಮನ ಸೆಳೆದರು. ಕೈಯಲ್ಲಿ ಕೊಳಲು, ತಲೆಯಲ್ಲಿ ನವಿಲುಗರಿ ಧರಿಸಿದ ಬಾಲಕೃಷ್ಣರು, ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ ರಾಧೆಯರ ಸನ್ನಿವೇಷವು ಶಾಲೆಯಲ್ಲಿ ಗೋಕುಲದ ವಾತಾವರಣ ಸೃಷ್ಟಿಯಾಗಿತ್ತು. […]

Continue Reading

ರಾಜ್ಯದ ಜನತೆಗೆ ಮತ್ತೊಂದು ಶಾಕ್​: ಶೀಘ್ರವೇ ಬಸ್​​ ಟಿಕೆಟ್​​ ದರ ಹೆಚ್ಚಳ ?

ಸುದ್ದಿ ಸಂಗ್ರಹ ಬೆಂಗಳೂರುಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಶೀಘ್ರವೇ ಮತ್ತೊಂದು ಶಾಕ್​​ ಕಾದಿದ್ದು, ಶೀಘ್ರವೇ ಸರ್ಕಾರಿ ಬಸ್​​ಗಳ ಟಿಕೆಟ್​​ ದರದ ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ. ಈ ಬಗ್ಗೆ ಸ್ವತಃ ಮಾಹಿತಿ ನೀಡಿರುವ ಸಾರಿಗೆ ಸಚಿವ ಭೈರತಿ ಸುರೇಶ್, ಕಳೆದ ಎಂಟು ತಿಂಗಳಲ್ಲಿ ಕೇಂದ್ರ ಸರ್ಕಾರ ತೈಲೋತ್ಪನ್ನಗಳ ದರ ಹೆಚ್ಚಳ ಮಾಡಿದೆ. ಹೀಗಿದ್ದರೂ ನಾವು ಬಸ್ ಪ್ರಯಾಣ ದರ ಹೆಚ್ಚಳ ಮಾಡಿಲ್ಲ. ಇದರಿಂದ ನಾಲ್ಕೂ ಸಾರಿಗೆ ನಿಗಮಗಳಿಗೆ ಸಾವಿರಾರು ಕೋಟಿ ರೂ ನಷ್ಟವಾಗುತ್ತಿದೆ. […]

Continue Reading

ಕಳ್ಳನಿಂದ 20 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಾನ್‌ಸ್ಟೆಬಲ್‌ಗಳು

ಸುದ್ದಿ ಸಂಗ್ರಹ ಕಲಬುರಗಿಎಂಒಬಿ ಶೀಟ್‌ ಇರುವ ರೂಢಿಗತ ಕಳ್ಳನಿಂದ 20 ಸಾವಿರ ಲಂಚ ಪಡೆಯುವಾಗ ಇಬ್ಬರು ಪೊಲೀಸ್‌ ಕಾನ್‌ಸ್ಟೆಬಲ್‌ಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ನಗರದ ಬ್ರಹ್ಮಪುರ ಪೊಲೀಸ್‌ ಠಾಣೆಯ ಹಿಂಬದಿಯಲ್ಲೆ ಕಾನ್‌ಸ್ಟೆಬಲ್‌ಗಳು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಕಾನ್‌ಸ್ಟೆಬಲ್‌ ಪರಶುರಾಮ್‌ ಸಿಕ್ಕಿ ಬಿದ್ದಿದ್ದು, ಮತ್ತೊಬ್ಬ ಕಾನ್‌ಸ್ಟೆಬಲ್‌ ವೀರೇಶ ಪರಾರಿಯಾಗಿದ್ದಾರೆ. ಇಲ್ಲಿನ ಬಾಪುನಗರದ ಮಾಂಗರವಾಡಿ ಗಲ್ಲಿಯ ಕಾರ್ತಿಕ್‌ ಪಾಟೀಲ ರೂಢಿಗತ ಕಳ್ಳನಾಗಿದ್ದು, ಆತನ ವಿರುದ್ಧ ಎಂಒಬಿ ಶೀಟ್‌ ಚಾಲ್ತಿಯಲ್ಲಿದೆ. 1 ಲಕ್ಷ […]

Continue Reading

ಅನಿಲಕುಮಾರ್ ರಾಠೋಡಗೆ ಗೌರವ ಡಾಕ್ಟರೇಟ್‌ ಪ್ರದಾನ‌

ಸುದ್ದಿ ಸಂಗ್ರಹ ಶಹಾಬಾದ್ ನಗರದ ಡಾ.ಅನಿಲಕುಮಾರ್ ರಾಠೋಡ ಅವರಿಗೆ ಅಮೇರಿಕನ್ ವಿಸ್ಡಮ್ ಪೀಸ್ ಯುನಿವರ್ಸಿಟಿಯೂ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಎಷ್ಟಾಬ್ಲಿಶಿಂಗ್ ಅಮೇರಿಕನ್ ವಿಸ್ಡಮ್ ಪೀಸ್ ಎಜುಕೇಷನ್ ಎಂಬ ವಿಷಯದ ಬಗ್ಗೆ ಅಂತರರಾಷ್ಟ್ರೀಯ ಸೆಮಿನಾರ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಿ, ಅತ್ಯುತ್ತಮ ಕೊಡುಗೆ ನೀಡಿದ ಪ್ರಯುಕ್ತ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

Continue Reading

ಸಮುದಾಯ ಆರೋಗ್ಯ ಕೇಂದ್ರದ ಸಾಮಗ್ರಿ ಕಳವು: ಆರೋಗ್ಯ ನಿರೀಕ್ಷಣಾಧಿಕಾರಿ ಅಮಾನತು

ಸುದ್ದಿ ಸಂಗ್ರಹ ಶಹಾಬಾದ್ನಗರದ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಯೂಸುಫ್ ಸಾಬ್ ನಾಕೇದಾರ ಅವರನ್ನು ಅಮಾನತುಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕಿ ಡಾ.ರಜನಿ ಎಂ ಆದೇಶಿಸಿದ್ದಾರೆ. ಯೂಸುಫ್ ಸಾಬ್ ಆಗಸ್ಟ್ 25ರಂದು ಸಮುದಾಯ ಆರೋಗ್ಯ ಕೇಂದ್ರದ ಅಧೀನದಲ್ಲಿರುವ ಬಿಳಿ ಬಣ್ಣದ ಮೂರು ಕಬ್ಬಿಣದ ಕಾಟ್‌, ಒಂದು ಕಬ್ಬಿಣದ ಹಳೆಯ ಅಡ್ಜಸ್ಟೇಬಲ್ ಬೆಡ್ ಮತ್ತು ಮೂರು ಕಬ್ಬಿಣದ ಹಳೆಯ ರ್‍ಯಾಕ್‌ಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರದೆ ಹಾಗೂ ಯಾವುದೆ ಪೂರ್ವಾನುಮತಿ ಪಡೆಯದೆ ಖಾಸಗಿ ವಾಹನದಲ್ಲಿ ಸಾಗಿಸಿರುವ […]

Continue Reading

KPSC ಹಗರಣದಲ್ಲಿ ನನ್ನ ಪಾತ್ರವನ್ನು ಬಿಜೆಪಿ ಬಹಿರಂಗ ಮಾಡಲಿ: ಪ್ರಿಯಾಂಕ್‌ ಖರ್ಗೆ ಸವಾಲು

ಸುದ್ದಿ ಸಂಗ್ರಹ ಕಲಬುರಗಿಕೆಪಿಎಸ್‌ಸಿ ಹಗರಣದಲ್ಲಿ ನನ್ನ ಪಾತ್ರ ಏನಿದೆ ಎಂಬುದನ್ನು ಬಿಜೆಪಿ ಎಕ್ಸ್‌ಪೋಸ್‌ (ಬಹಿರಂಗ) ಮಾಡಲಿ. ಅದು ಜನರ ಮುಂದೆ ಬರಲೇಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು. ಕೆಪಿಎಸ್‌ಸಿ ಹಗರಣ ಪ್ರಿಯಾಂಕ್‌ ಖರ್ಗೆ ವಿಕೆಟ್‌ ಬೀಳುತ್ತೆ ಎಂಬ ಬಿಜೆಪಿ ಹೇಳಿಕೆ ಕುರಿತು ನಗರದಲ್ಲಿ ಮಂಗಳವಾರ ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್‌, ‘ಕೆಪಿಎಸ್‌ಸಿ ಹಗರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿಕೆಟ್ ಬೀಳುವಂತಿದ್ದರೆ ಈ ವಿಷಯವನ್ನು ಬಿಜೆಪಿಯ ಹೇಡಿಗಳು ಸದನದಲ್ಲಿ ಯಾಕೆ ಚರ್ಚಿಸಲಿಲ್ಲ ?’ […]

Continue Reading