ದಂಡೋತಿಯಲ್ಲಿ ಸಂಭ್ರಮದ ಎಳ್ಳು ಅಮಾವಾಸ್ಯೆ ಆಚರಣೆ

ಸುದ್ದಿ ಸಂಗ್ರಹ ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದ ಮಲ್ಲಪ್ಪ  ಜರ್ಕಿ ಅವರ ಹೊಲದಲ್ಲಿ ಸಂಭ್ರಮದಿಂದ ಎಳ್ಳು ಅಮಾವಾಸ್ಯೆ ಆಚರಿಸಲಾಯಿತು. ಎತ್ತುಗಳಿಗೆ ಸಿಂಗರಿಸಿ, ಹೊಲಕ್ಕೆ ಎತ್ತಿನ ಬಂಡಿಯೊಂದಿಗೆ ತೆರೆಯಲಾಯಿತು. ಉಪನ್ಯಾಸಕ ಎಚ್.ಬಿ ಪಾಟೀಲ್, ಕಸಾಪ ಕಾಳಗಿ ಅಧ್ಯಕ್ಷ ಸಂತೋಷ ಕುಡಳ್ಳಿ, ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್. ಬಿರಾದಾರ, ರೈತರಾದ ಮಲ್ಲಪ್ಪ ಗೋಣಿ, ಫಯಾಜ್ ಶಹಬಾದ್,  ಇಬ್ರಾಹಿಂ ಪಟೇಲ್, ತಯಾಬ್, ಶಿವುಕುಮಾರ್, ಮೈಲಾರಿ ಸೇರಿದಂತೆ ಅನೇಕರು ಇದ್ದರು.

Continue Reading

ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಧ್ವನಿಯಾದ ಮಕ್ಕಳ ಅಣಕು ವಿಧಾನಸಭಾ ಅಧಿವೇಶನ

ಸುದ್ದಿ ಸಂಗ್ರಹ ಚಿತ್ತಾಪುರಚಟುವಟಿಕೆ ಮೂಲಕ ಪಠ್ಯದ ಕಲಿಕಾoಶ ಮಾಡಿಸಿದಾಗ ಕಲಿಕೆಯು ಮಕ್ಕಳಲ್ಲಿ ಶಾಶ್ವತವಾಗಿ ಮನದಟ್ಟಾಗುತ್ತದೆ ಎಂದು ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೊಂಡಗಿ ಹೇಳಿದರು. ಸಮೀಪದ ರಾವೂರ ಗ್ರಾಮದ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಚುನಾವಣೆ ಸಾಕ್ಷರತಾ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಅಣಕು ವಿಧಾನಸಭಾ ಅಧಿವೇಶನವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಪ್ರತಿಭೆ ಇದೆ, ಕ್ರಿಯಾಶೀಲ ಶಿಕ್ಷಕರಿಂದ ಮಾತ್ರ ಮಕ್ಕಳ ಪ್ರತಿಭೆ ಅನಾವರಣವಾಗಲು ಸಾಧ್ಯ ಎಂದರು. ಕಾವ್ಯ (ಸಭಾಪತಿ): ಸಭಾಪತಿ ಪಾತ್ರ […]

Continue Reading

ಸೈಬರ್‌ ಅಪರಾಧದ ಬಗ್ಗೆ ಜಾಗೃತಿ ವಹಿಸಿ: ಡಿವೈಎಸ್‌ಪಿ ಶಂಕರಗೌಡ ಪಾಟೀಲ್

ಸುದ್ದಿ ಸಂಗ್ರಹ ಚಿತ್ತಾಪುರ ಸೈಬರ್ ಅಪರಾಧ ಮತ್ತು ವಂಚನೆಗಳ ಬಗ್ಗೆ ವಿದ್ಯಾರ್ಥಿಗಳು, ಯುವಕರು ಮತ್ತು ಸಾರ್ವಜನಿಕರು ಜಾಗೃತಿ ವಹಿಸಬೇಕು ಎಂದು ಡಿವೈಎಸ್‌ಪಿ ಶಂಕರಗೌಡ ಪಾಟೀಲ್‌ ಹೇಳಿದರು. ತಾಲೂಕಿನ ಮಾಡಬೂಳ ಕ್ರಾಸ್‌’ನಲ್ಲಿ ಮಾಡಬೂಳ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೈಬರ್ ವಂಚನೆ ತಡೆಗಟ್ಟಲು ಕ್ಲಿಷ್ಟಕರವಾದ ಪಾಸ್‌ವರ್ಡ್ ಬಳಸಬೇಕು. ಅಪರಿಚಿತ ಲಿಂಕ್’ಗಳನ್ನು ಕ್ಲಿಕ್ ಮಾಡಬಾರದು. ಆ್ಯಂಟಿ ವೈರಸ್ ಸಾಫ್ಟ್‌ವೇರ್ ಅಳವಡಿಸಬೇಕು. ಆನ್‌’ಲೈನ್‌ನಲ್ಲಿ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವಾಗ ಜಾಗರೂಕತೆ ವಹಿಸಬೇಕು ಎಂದರು. ವಾಹನಗಳ […]

Continue Reading

ಶಾಸಕ ಡಾ.ಶಾಮನೂರು ಶಿವಶಂಕರಪ್ಪ ನಿಧನಕ್ಕೆ ದಿಗ್ಗಾಂವ ಶ್ರೀಗಳು ಸಂತಾಪ‌‌

ಸುದ್ದಿ ಸಂಗ್ರಹ ಚಿತ್ತಾಪುರಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರು, ಮಾಜಿ ಸಚಿವರು, ಖ್ಯಾತ ಉದ್ಯಮಿದಾರರು, ಹಾಲಿ ಶಾಸಕರಾದ ಡಾ.ಶಿವಶಂಕರಪ್ಪ ಶಾಮನೂರು ಶಿವಾಧೀನರಾದದ್ದು ಕೇಳಿ ಅತೀವ ನೋವು ಎನಿಸಿತು, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಮತ್ತು ಅವರ ಕುಟುಂಬಕ್ಕೆ ಭಗವಂತನು ಧೈರ್ಯ ತುಂಬಲೆಂದು ಪ್ರಾರ್ಥಿಸುತ್ತೆವೆ ಎಂದು ದಿಗ್ಗಾಂವ ಪಂಚಗೃಹ ಹಿರೇಮಠದ ಶ್ರೀ ಸಿದ್ಧವೀರ ಶಿವಾಚಾರ್ಯ ಮಹಾಸ್ವಾಮಿಗಳು ಸಂತಾಪಸೂಚಿಸಿದ್ದಾರೆ.

Continue Reading

ಭ್ರಷ್ಟಾಚಾರ ನಿರ್ಮೂಲನೆಗೆ ಶ್ರಮಿಸೋಣ

ಸುದ್ದಿ ಸಂಗ್ರಹ ಕಲಬುರಗಿ ದೇಶದ ಎಲ್ಲಾ ಕ್ಷೇತ್ರಗಳಿಗೆ ವ್ಯಾಪಿಸಿದ ಬೃಹತ್ ಪಿಡುಗಾದ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಎಲ್ಲರು ಶ್ರಮಿಸಬೇಕು ಎಂದು ಉಪನ್ಯಾಸಕ ಮಲ್ಲಿಕಾರ್ಜುನ ದೊಡ್ಡಮನಿ ಹೇಳಿದರು. ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್‌’ಎಸ್’ಎಸ್  ಘಟಕದ ವತಿಯಿಂದ ಮಂಗಳವಾರ  ಏರ್ಪಡಿಸಿದ್ದ “ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನಾಚರಣೆ”ಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ ದಿನಾಚರಣೆ ಉದ್ಘಾಟಿಸಿ, ಮಾತನಾಡಿದರು. ಪ್ರತಿಜ್ಞೆ ವಿಧಿ ಬೋಧಿಸಿ ಮಾತನಾಡಿದ ಎನ್’ಎಸ್’ಎಸ್ ಅಧಿಕಾರಿ ಎಚ್.ವಿಪಾಟೀಲ್, ಭ್ರಷ್ಟಾಚಾರದ ಪರಿಣಾಮ ಭಾರತದ ನಿಜವಾದ ಆತ್ಮಕ್ಕೆ ಧಕ್ಕೆಯಾಗಿದೆ. ಜನರ […]

Continue Reading

ಮಣ್ಣಿನಿಂದಲೆ ಬದುಕು, ಸಕಲ ಜೀವಿಗಳಿಗೆ ಆಸರೆ: ಬಿರಾದಾರ

ಸುದ್ದಿ ಸಂಗ್ರಹ ಚಿತ್ತಾಪುರ ಹಸಿರು ಮತ್ತು ಉಸಿರನ್ನು ಪಡೆಯಬೇಕಾದರೆ ಮಣ್ಣು ಬೇಕು. ಮಣ್ಣಿನ ಸವಕಳಿ ತೆಡೆಗಟ್ಟಿ ಅದರ ಫಲವತ್ತತೆ ಕಾಪಾಡಬೇಕು. ಮಣ್ಣಿನಿಂದಲೆ ಬದುಕು, ಸಕಲ ಜೀವಿಗಳಿಗೆ ಆಸರೆಯಾಗಿದೆ ಎಂದು ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್ ಬಿರಾದಾರ ಹೇಳಿದರು. ಮಾಡಬೂಳ ತಾಂಡಾದ ಅಶೋಕ ರಾಠೋಡ್ ಹೊಲದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ಮಣ್ಣು ದಿನಾಚರಣೆ’ಯಲ್ಲಿ ಸಾಮೂಹಿಕವಾಗಿ ಮಣ್ಣಿಗೆ ಪುಷ್ಪಾರ್ಚನೆ ಮೂಲಕ ಗೌರವಿಸಿ ಮಾತನಾಡಿದ ಅವರು, ರೈತರು ರಾಸಾಯನಿಕ ಮುಕ್ತ […]

Continue Reading

ಕನ್ನಡ ಪ್ರತಿಯೊಬ್ಬರ ಉಸಿರಾಗಲಿ: ಸಂತೋಷ ಕುಡಳ್ಳಿ

ಸುದ್ದಿ ಸಂಗ್ರಹ ಕಾಳಗಿ ಕರ್ನಾಟಕದಲ್ಲಿರುವ ಎಲ್ಲರು ಮೊದಲು ಕನ್ನಡಿಗರು. ಕನ್ನಡವೇ ನಮ್ಮ ಧರ್ಮ, ಮತ, ಭಾಷೆ, ಪ್ರಾಂತ್ಯ. ಕನ್ನಡ ಕೇವಲ ಭಾಷೆಯಲ್ಲ. ಅದು ಪ್ರತಿಯೊಬ್ಬ ಕನ್ನಡಿಗನ ಹೃದಯ ಎಂದು ಕಸಾಪ ಕಾಳಗಿ ತಾಲೂಕಾಧ್ಯಕ್ಷ ಸಂತೋಷ ಕುಡಳ್ಳಿ ಹೇಳಿದರು. ತಾಲೂಕಿನ ಕೋರವಾರ ಗ್ರಾಮದ ಅಣವೀರಭದ್ರೇಶ್ವರ ಪ್ರೌಢ ಶಾಲೆಯಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಮಾಸಾಚರಣೆ ಸರಣಿ ಉಪನ್ಯಾಸ ಕಾರ್ಯಕ್ರಮ-30 ಮತ್ತು ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಾಡು-ನುಡಿಯ ಸಂರಕ್ಷಣೆ ಸರ್ವರ […]

Continue Reading

ಶಹಬಾದ್ ಮಾಜಿ ನಗರಸಭೆ ಅಧ್ಯಕ್ಷೆ ಮೇಲೆ ಹಲ್ಲೆ: ಚಿಕಿತ್ಸೆ ಫಲಿಸದೆ ಸಾವು

ಶಹಾಬಾದ್: ಯಾದಗಿರಿಯಲ್ಲಿ ನಡೆದ ಮಾರಕ ಹಲ್ಲೆ ಪ್ರಕರಣದಲ್ಲಿ ಶಹಬಾದ್‌ನ ಮಾಜಿ ನಗರಸಭೆ ಅಧ್ಯಕ್ಷೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಎಸ್‌’ಡಿಎ ಅಂಜಲಿ ಕಂಬಾನೂರ್ (38) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದ್ದಿದ್ದಾರೆ. ನವೆಂಬರ್ 12ರಂದು ಬೆಳಗ್ಗೆ ಕಚೇರಿಗೆ ತೆರಳುತ್ತಿದ್ದ ವೇಳೆ ಯಾದಗಿರಿ ನಗರದಲ್ಲಿ ದುಷ್ಕರ್ಮಿಗಳು ಅಂಜಲಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಅಂಜಲಿ ಕಲಬುರಗಿ ಜಿಲ್ಲೆಯ ಶಹಬಾದ್ ಪಟ್ಟಣದ ನಿವಾಸಿಯಾಗಿದ್ದು, ಎರಡು ವರ್ಷಗಳ ಹಿಂದೆ ಪತಿ ಗಿರೀಶ್ ಕಂಬಾನೂರ್ ಅವರನ್ನು […]

Continue Reading

ಅತಿವೃಷ್ಟಿಯಿಂದ ಬೆಳೆ ಹಾನಿಯಾದ ಚಿತ್ತಾಪುರ ತಾಲೂಕಿನ ರೈತರಿಗೆ ರಾಜ್ಯ ಸರ್ಕಾರದಿಂದ 20.58 ಕೋಟಿ ರೂ ಪರಿಹಾರ: ಶರಣು ಡೋಣಗಾಂವ

ಚಿತ್ತಾಪುರ: ತಾಲೂಕಿನಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಬೆಳೆ ಹಾನಿಗೊಳಗಾದ ರೈತರಿಗೆ ರಾಜ್ಯ ಸರ್ಕಾರದಿಂದ 20.58 ಕೋಟಿ ರೂ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಪಂಚ ಗ್ಯಾರಂಟಿ ಜಿಲ್ಲಾ ಸಮಿತಿ ಸದಸ್ಯ ಶರಣು ಡೋಣಗಾಂವ ಹೇಳಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಮುಂದಾಳತ್ವದಲ್ಲಿ ಪರಿಹಾರ ಬಿಡುಗಡೆ ಪ್ರಕ್ರಿಯೆ ನಡೆದಿದೆ. ಮಳೆ ಹಾನಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಸ್ತುವಾರಿ ಸಚಿವಪ್ರಿಯಾಂಕ್ ಖರ್ಗೆ ಅವರು ಹಾನಿಗೊಳಗಾದ ಪ್ರದೇಶಗಳ […]

Continue Reading

ಸದೃಢ ಮಾನವ ಸಂಪನ್ಮೂಲ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ ಅನನ್ಯ

ಕಲಬುರಗಿ: ವಿದ್ಯಾರ್ಥಿಗಳಿಗೆ ಜ್ಞಾನ, ಕೌಶಲ್ಯ, ಬುದ್ಧಿ, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ನೀಡಿ, ಅವರನ್ನು ದೇಶದ ಅಮೂಲ್ಯ ಮಾನವ ಸಂಪನ್ಮೂಲವನ್ನಾಗಿಸಲು ಶಿಕ್ಷಣ ಹಾಗೂ ಶಿಕ್ಷಣ ಸಂಸ್ಥೆಗಳು ಅನನ್ಯವಾದ ಪಾತ್ರ ನಿರ್ವಹಿಸುತ್ತವೆ ಎಂದು ಜೇವರ್ಗಿಯ ಬಸವೇಶ್ವರ ಬಿ.ಎಡ್ ಕಾಲೇಜಿನ ಪ್ರಾಧ್ಯಾಪಕ, ಚಿಂತಕ ಪ್ರೊ.ಎಸ್.ಬಿ ಮಮದಾಪುರ ಅಭಿಮತಪಟ್ಟರು. ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಲಾಗಿದ್ದ ‘ಕಾಲೇಜಿನ 67ನೇ ಸಂಸ್ಥಾಪನಾ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಎಲ್ಲಾ ಸಮಸ್ಯೆಗಳಿಗೆ ಶಿಕ್ಷಣ ಪರಿಹಾರವಾಗಬಲ್ಲದು ಎಂದರು. […]

Continue Reading