ಕಾಳಗಿ ಜನರ ಪ್ರಜಾಸೌಧದ ಕನಸು ನನಸು: ಸಚಿವ ಪ್ರಿಯಾಂಕ್ ಖರ್ಗೆ

ಸುದ್ದಿ ಸಂಗ್ರಹ ಕಾಳಗಿತಾಲೂಕಿನ ಜನರ ಬಹುಕಾಲದ ಕನಸಾಗಿದ್ದ ಪ್ರಜಾಸೌಧ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಹಾಕಲಾಯಿತು, ಮುಂದಿನ ದಿನಗಳಲ್ಲಿ ತಾಲೂಕಿಗೆ ಅಗತ್ಯವಿರುವ ಎಲ್ಲಾ ಸರ್ಕಾರಿ ಕಚೇರಿಗಳನ್ನು ಹಂತವಾಗಿ ಸ್ಥಾಪಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.‌ ಪಟ್ಟಣದ ನೀಲಕಂಠ ಕಾಳೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ, ಕಾಳಗಿ ಮತ್ತು ಚಿಂಚೋಳಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟಿಸಿ ಮಾತನಾಡಿದ ಅವರು, ಕಾಳಗಿ- ಚಿಂಚೋಳಿ ತಾಲೂಕಿನ ಅಭಿವೃದ್ಧಿಗೆ 60 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ […]

Continue Reading

ಭಾರತೀಯ-ಅಮೆರಿಕನ್ ಕುಟುಂಬದ ಜ್ಯುವೆಲರಿ ಶಾಪ್‌ಗೆ ನುಗ್ಗಿ 16 ಕೋಟಿಯ ಚಿನ್ನಾಭರಣ ದರೋಡೆ

ಸುದ್ದಿ ಸಂಗ್ರಹ ವಾಷಿಂಗ್ಟನ್ ಭಾರತೀಯ-ಅಮೆರಿಕನ್‌ ಕುಟುಂಬದ ಒಡೆತನದ ಜ್ಯುವೆಲರ್ಸ್‌ನಲ್ಲಿ ಮುಸುಕುಧಾರಿ ದರೋಡೆಕೋರರ ಗುಂಪೊಂದು 16 ಕೋಟಿ ರೂ. ಮೌಲ್ಯದ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ನಡೆದಿದೆ. ಯುಎಸ್ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ ಸಿಸಿಟಿವಿ ದೃಶ್ಯಾವಳಿಯಲ್ಲಿ, ದರೋಡೆಕೋರರು ಭಾರತೀಯ-ಅಮೆರಿಕನ್ ಕುಟುಂಬದ ಒಡೆತನದ ಅಂಗಡಿಗೆ ನುಗ್ಗಿ ಕೇವಲ ಒಂದು ನಿಮಿಷದಲ್ಲಿ 15.7 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಕಳೆದ ವರ್ಷ ಜೂನ್ 18 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದರೋಡೆಯ ಸಮಯದಲ್ಲಿ ಅಂಗಡಿಯು […]

Continue Reading

ದೇಶದಲ್ಲಿ ಸಿಲಿಂಡರ್ ಎಮರ್ಜೆನ್ಸಿಗೆ ಮೋದಿ ವಿದೇಶಾಂಗ ನೀತಿಯ ವೈಫಲ್ಯವೇ ಕಾರಣ: ಪ್ರಿಯಾಂಕ್ ಖರ್ಗೆ

ಸುದ್ದಿ ಸಂಗ್ರಹ ಬೀದರ್ ಇರಾನ್ ಮತ್ತು ಇಸ್ರೆಲ್ ವಾರ್‌ನಿಂದ ರಾಜ್ಯ ಸೇರಿದಂತೆ ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಎಮರ್ಜೆನ್ಸಿಗೆ ಪ್ರಧಾನಿ ಮೋದಿ ವಿದೇಶಾಂಗ ನೀತಿಯ ವೈಫಲ್ಯವೇ ಕಾರಣ ಎಂದು ಬೀದರ್‌ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಲಿಂಡರ್ ಎಮರ್ಜೆನ್ಸಿ ಕುರಿತು ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯುದ್ಧ ಪ್ರಾರಂಭವಾಗೋದಕ್ಕೂ ಮೊದಲು ಇಸ್ರೆಲ್‌ನಲ್ಲಿ ಏನು ಕೆಲಸ ಇತ್ತು, ಏಕಾಏಕಿ ಡೊಮೆಸ್ಟಿಕ್ ಮತ್ತು ಕಮರ್ಷಿಯಲ್ ಸಿಲಿಂಡರ್ ಬೆಲೆ ಹೆಚ್ಚಳ ಮಾಡಿದ್ರಿ. ಏನು ಸಮಸ್ಯೆ ಇಲ್ಲಾ ಅಂದರೆ […]

Continue Reading

ಪಡಿತರ ಅಂಗಡಿಗಳಲ್ಲಿ ಸಿಗಲಿದೆ ಸೀಮೆಎಣ್ಣೆ: ಗ್ರಾಮೀಣ ಭಾಗದಲ್ಲಿ 45 ದಿನಕ್ಕೆ ಒಂದು ಸಿಲಿಂಡರ್‌

ಸುದ್ದಿ ಸಂಗ್ರಹ ನವದೆಹಲಿ ಭಾರತದಲ್ಲಿ ಮತ್ತೆ ಮನೆಯ ಅಡುಗೆಗೆ ಸೀಮೆಎಣ್ಣೆ ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಗುರುವಾರ ರಾಜ್ಯಗಳಿಗೆ ಕೇಂದ್ರ 1 ಲಕ್ಷ ಕಿಲೋಲೀಟರ್‌ ನಿಯಮಿತ ಕೋಟಾದ ಜೊತೆಗೆ ಹೆಚ್ಚುವರಿಯಾಗಿ 48,000 ಕಿಲೋಲೀಟರ್ ಸೀಮೆಎಣ್ಣೆಯನ್ನು ಹಂಚಿಕೆ ಮಾಡಿದೆ. ಪ್ರಾಥಮಿಕವಾಗಿ ಪಡಿತರ ಅಂಗಡಿಗಳ ಮೂಲಕ ಸೀಮೆಎಣ್ಣೆ ವಿತರಿಸಲಾಗುತ್ತದೆ. ಹೋಟೆಲ್‌, ರೆಸ್ಟೋರೆಂಟ್‌ಗಳು ಪರ್ಯಾಯ ಇಂಧನವಾಗಿ ಬಯೋಮಾಸ್, ಆರ್‌ಡಿಎಫ್ ಪೆಲೆಟ್‌ಗಳು ಮತ್ತು ಕಲ್ಲಿದ್ದಲನ್ನು ಒಂದು ತಿಂಗಳ ಕಾಲ ಬಳಸಲು ಅನುಮತಿ ನೀಡುವಂತೆ ಪರಿಸರ ಸಂಸ್ಥೆಗಳನ್ನು ಕೇಳಿದೆ. ಸೀಮೆಎಣ್ಣೆಯ ಬದಲು ಅಡುಗೆಗೆ […]

Continue Reading

ಗ್ಯಾಸೇ ಇಲ್ಲದ ಅಡುಗೆ ಮನೆಗೆ ‘ಅದಮ್ಯ ಚೇತನ’ ಸ್ಫೂರ್ತಿ

ಸುದ್ದಿ ಸಂಗ್ರಹ ಬೆಂಗಳೂರುಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಅಡುಗೆ ಅನಿಲದ ಬೆಲೆ ಏರಿಕೆ ಮತ್ತು ಅಭಾವದ ಚರ್ಚೆ ಮನೆ-ಮನಗಳಲ್ಲಿ ಜೋರಾಗಿದೆ. ಇಂತಹ ಸಮಯದಲ್ಲಿ ‘ನಮ್ಮ ಅಡುಗೆಗೆ ಪರರಾಷ್ಟ್ರಗಳ ಇಂಧನವನ್ನೇಕೆ ಅವಲಂಬಿಸಬೇಕು ? ಎಂಬ ಪ್ರಶ್ನೆಗೆ ಬೆಂಗಳೂರಿನ ‘ಅದಮ್ಯ ಚೇತನ’ ಸಂಸ್ಥೆ ಕಳೆದ 15 ವರ್ಷಗಳಿಂದ ರಚನಾತ್ಮಕ ಉತ್ತರ ಹಾಗೂ ಪರಿಹಾರ- ಎರಡನ್ನೂ ಕಂಡುಕೊಂಡಿದೆ. ಕೇಂದ್ರದ ಮಾಜಿ ಸಚಿವ ಅನಂತಕುಮಾರ್‌ ಅವರು ಆರಂಭಿಸಿದ ಈ ಸಂಸ್ಥೆ, ಇಂದು ವಿಶ್ವದ ಗಮನ ಸೆಳೆಯುತ್ತಿದೆ. 2009ರಿಂದ ಸಂಸ್ಥೆ ಲಕ್ಷಾಂತರ ಮಂದಿಗೆ ಅಡುಗೆ ತಯಾರಿಸುತ್ತಿದ್ದು, […]

Continue Reading

ಶಹಾಬಾದ್‌: ಡಾ.ಫಾರೂಕ್ ಮಣ್ಣೂರರಿಂದ ಸೌಹಾರ್ದ ಇಫ್ತಾರ್ ಕೂಟ

ಸುದ್ದಿ ಸಂಗ್ರಹ ಶಹಾಬಾದಪ್ರೀತಿ, ಭಾಂದವ್ಯ, ಭ್ರಾತೃತ್ವ ಭಾವನೆ ಮೂಡಿಸಲು ಮತ್ತು ಸಾಮಾಜಿಕ ಜೀವನದಲ್ಲಿ ಸೌಹಾರ್ದಯುತ ಬದುಕು ಕಲಿತುಕೊಳ್ಳುವುದೆ ಇಫ್ತಾರ್ ಕೂಟದ ಉದ್ದೇಶವಾಗಿದೆ ಎಂದು ಕಲಬುರಗಿಯ ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಸಮಾಜ ಸೇವಕ ಡಾ.ಫಾರೂಕ್ ಮಣ್ಣೂರ ಹೇಳಿದರು. ನಗರದ ಜಾಮಿಯಾ ಮಸ್ಜೀದ್ ಫಂಗ್ಶನ್ ಹಾಲ್’ನಲ್ಲಿ ಡಾ.ಫಾರೂಕ್ ಮಣ್ಣೂರ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಇಫ್ತಾರ್ ಕೂಟದಲ್ಲಿ ಮಾತನಾಡಿದ ಅವರು, ಪವಿತ್ರ ರಂಜಾನ್ ಹಬ್ಬದ ನಿಮಿತ್ಯ ಒಂದು ತಿಂಗಳುಗಳ ಕಾಲ ನಡೆಯುವ ಉಪವಾಸ ವ್ರತದ ಇಫ್ತಿಯಾರ್ ಕೂಟದಲ್ಲಿ ಹಿಂದು-ಮುಸ್ಲಿಂ […]

Continue Reading

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಸುದ್ದಿ ಸಂಗ್ರಹ ಶಹಾಬಾದಮೂಲಭೂತ ಸೌಲಭ್ಯ ಮತ್ತು ಸಾರ್ವಜನಿಕರ ಕುಂದು ಕೊರತೆಗೆ ಪೌರಾಯುಕ್ತರು ಸ್ಪಂದನೆ ಮಾಡಬೇಕು ಎಂದು ದಸಂಸ(ಅಂಬೇಡ್ಕರವಾದ)ದ ತಾಲೂಕಿನ ಸಂಚಾಲಕ ಸುಭಾಷ ಸಾಕ್ರೆ ಒತ್ತಾಯಿಸಿದರು. ನಗರದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ ಪ್ರತಿಭಟನಾ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದ ಅವರು, ನಗರ ಸಭೆಯ ವಾರ್ಡ್ ನಂ.11,12,13 ಮತ್ತು 14ರ ಬಡಾವಣೆಯ ಕೊಳವೆ ಬಾವಿ ಕೆಟ್ಟು ಹೋಗಿವೆ, ಬೇಸಿಗೆ ಕಾಲವಾಗಿದರಿಂದ ಮೋಟರ್ ಮತ್ತು ಪೈಪ್ ಲೈನ್ ಅಳವಡಿಸಿ ತಕ್ಷಣವೆ ದುರಸ್ತಿ ಮಾಡಿಸಬೇಕು ಎಂದು ಒತ್ತಾಯಿಸಿದರು. […]

Continue Reading

ಎಲ್ಲ ಕ್ಷೇತ್ರದಲ್ಲೂ ಮಹಿಳೆಯರ ಸಾಧನೆ ಗಮನಾರ್ಹ

ಸುದ್ದಿ ಸಂಗ್ರಹ ಶಹಾಬಾದ್ಮಹಿಳೆಯರ ಬುದ್ಧಿಶಕ್ತಿ, ತಾಳ್ಮೆ ಮತ್ತು ವಿಶ್ಲೇಷಣಾ ಸಾಮರ್ಥ್ಯದಿಂದ ಕುಟುಂಬದಿಂದ ಬಾಹ್ಯಾಕಾಶದವರೆಗೂ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ ಎಂದು ಅರ್ಥಶಾಸ್ತ್ರ ಮುಖ್ಯಸ್ಥೆ ಡಾ.ಸುರೇಖಾ ನಾಟೆಕರ್ ಹೇಳಿದರು. ನಗರದ ಎಸ್’ಎಸ್ ಮರಗೋಳ ಪದವಿ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಯುಗದಲ್ಲಿ ಮಹಿಳೆಯರು ಸಂಪ್ರದಾಯಗಳ ಸಂಕೋಲೆಯಿಂದ ಮುಕ್ತಗೊಂಡು ಜಾಗತಿಕ ಮನ್ನಣೆ ಪಡೆಯುವಂತಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಬಸವರಾಜ್ ಹಿರೇಮಠ್ ಮಾತನಾಡಿ, […]

Continue Reading

ಒಳ ಮೀಸಲಾತಿಗೆ ಆಗ್ರಹಿಸಿ ಇಂದು ಬೃಹತ್ ಪ್ರತಿಭಟನೆ

ಸುದ್ದಿ ಸಂಗ್ರಹ ಚಿತ್ತಾಪುರಒಳ ಮೀಸಲಾತಿಯಿಲ್ಲದೆ ಉದ್ಯೋಗ ಭರ್ತಿ ಮಾಡುವ ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೀಪಕ್ ಹೊಸ್ಸೂರಕರ್ ಹೇಳಿದರು. ಚುನಾವಣಾ ಪೂರ್ವದಲ್ಲಿ ಸರ್ಕಾರ ಬಂದ ಮೊದಲ ಅಧಿವೇಶನದಲ್ಲಿ ಒಳ ಮೀಸಲಾತಿಯನ್ನು ನಮ್ಮ ಸರ್ಕಾರ ಜಾರಿಗೊಳಿಸುತ್ತದೆ ಎಂದು ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಘೋಷಿಸಿತ್ತು. ಚಿತ್ರದುರ್ಗ ಸಮಾವೇಶದಲ್ಲಿ ಅದೆ ಭರವಸೆ ನೀಡಲಾಗಿತ್ತು. ಸರ್ಕಾರ ಬಂದು ಎರಡು ವರ್ಷ ಮುಗಿಯುತ್ತಿದ್ದರೂ ಒಳಮೀಸಲಾತಿ ಜಾರಿಗೊಳಿಸಲು ಪ್ರಮಾಣಿಕ […]

Continue Reading

ಉಂಡ ಮನೆಗೆ ಕನ್ನ ಹಾಕಿದ ಕಾರು ಚಾಲಕ: ಮಾಲೀಕ ಗಿರವಿಟ್ಟಿದ್ದ 13 ಲಕ್ಷ ಚಿನ್ನವನ್ನು ಮಾರಿದ ಭೂಪ

ಸುದ್ದಿ ಸಂಗ್ರಹ ಬೆಂಗಳೂರು ಆತ ಚಾಲಕ ಕಳೆದ ಹತ್ತು ವರ್ಷದಿಂದ ಒಂದೆ ಕಡೆ ಕೆಲಸ ಮಾಡುತ್ತಿದ್ದ. ಆತ ಮನೆ ಮಾಲೀಕರ ನಂಬಿಕೆ ಗಳಿಸಿದ್ದ. ಅವರು ಕೂಡ ಈತನನ್ನು ಬಹಳ ಆತ್ಮೀಯತೆಯಿಂದ ನೋಡಿಕೊಳ್ಳುತ್ತಿದ್ದರು. ಆದರೆ ಇದನ್ನೆ ಬಂಡವಾಳ ಮಾಡಿಕೊಂಡ ಆಸಾಮಿ ಮನೆಯಲ್ಲಿದ್ದ ಚಿನ್ನದ ಮೇಲೆ ಕಣ್ಣು ಹಾಕಿದ್ದ. ಆ ಮೂಲಕ ಉಂಡ ಮನೆಗೆ ಕನ್ನ ಹಾಕಿದ್ದ. ಚಾಲಕನ ಕಳ್ಳಾಟ ಬಯಲಾಗಿದ್ದೆ ನಿಜಕ್ಕೂ ರೋಚಕ. ಉಂಡ ಮನೆಗೆ ದ್ರೋಹಉಂಡ ಮನೆಗೆ ಕನ್ನ ಹಾಕಿದ ಕಾರು ಚಾಲಕನ ಹೆಸರು ಅಭಿಲಾಷ್. ಪ್ರತೀಕ್​​ […]

Continue Reading