20 ರೂಪಾಯಿಗಾಗಿ ತಾಯಿಯನ್ನು ಕೊಂದ ಪಾಪಿ ಮಗ

ಚಂಡೀಘಡ: 20 ರೂ. ಕೊಡಲು ನಿರಾಕರಿಸಿದ ತಾಯಿಯನ್ನು ಪಾಪಿ ಮಗನೊಬ್ಬ ಕೊಡಲಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಹರಿಯಾಣದ ನೂಹ್ ಜಿಲ್ಲೆಯಲ್ಲಿ ನಡೆದಿದೆ. ಜೈಸಿಂಗ್‌ಪುರ ಗ್ರಾಮದ ನಿವಾಸಿ ರಜಿಯಾ (56) ಹತ್ಯೆಯಾದ ತಾಯಿ. ಮಗ ಜಮ್ಶದ್ ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿ ಜಮ್ಶದ್ ಗಾಂಜಾ ವ್ಯಸನಿಯಾಗಿದ್ದ. ಆರೋಪಿಯು ಶನಿವಾರ ರಾತ್ರಿ ತಾಯಿ ಬಳಿ 20 ರೂ. ಕೇಳಿದ್ದ. ರಜಿಯಾ ಹಣ ನೀಡಲು ನಿರಾಕರಿಸಿದ್ದಕ್ಕೆ ಕೊಡಲಿಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದ. ಬಳಿಕ ರಾತ್ರಿಯಿಡಿ ತಾಯಿಯ […]

Continue Reading

ಆ ಒಂದು ಮಾತು ಆಡಿದ್ದಕ್ಕೆ ASI ಕೊಂದು ಆಕೆ ಕೆಲಸ ಮಾಡುತ್ತಿದ್ದ ಠಾಣೆಗೆ ಶರಣಾದ ಯೋಧ

ಗುಜರಾತ್​: ಕಚ್​ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಆಕೆಯ ಲಿವ್​ ಇನ್​ ಸಂಗಾತಿ ಹಾಗೂ ಸಿಆರ್​ಪಿಎಫ್​ ಕಾನ್​​ಸ್ಟೆಬಲ್​ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಮೃತಳನ್ನು ಅರುಣಾಬೆನ್ ನಾಥುಭಾಯ್ ಜಾದವ್ (25) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ದಿಲೀಪ್ ಡಾಂಗ್ಚಿಯಾ, ಅರುಣಾಬೆನ್​ರನ್ನು ಕೊಂದು, ಆಕೆಯನ್ನು ನಿಯೋಜಿಸಲಾಗಿದ್ದ ಅಂಜರ್ ಪೊಲೀಸ್ ಠಾಣೆಗೆ ಶನಿವಾರ ಬೆಳಗ್ಗೆ ತೆರಳಿ ತನ್ನ ಅಪರಾಧವನ್ನು ದಿಲೀಪ್​ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಅರುಣಾಬೆನ್ ಅವರು ಕಚ್‌ನ ಅಂಜರ್ ಪೊಲೀಸ್ ಠಾಣೆಯಲ್ಲಿ […]

Continue Reading

ಕಾರಿನಲ್ಲಿ ಸಾಗಿಸುತ್ತಿದ್ದ 40 ಲಕ್ಷ ಮೌಲ್ಯದ ಗಾಂಜಾ ವಶ: ಇಬ್ಬರ ಬಂಧನ

ಕಲಬುರಗಿ: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅಂದಾಜು 40 ಲಕ್ಷ ರೂ ಮೊತ್ತದ ಗಾಂಜಾ ವಶಪಡಿಸಿಕೊಂಡು, ಸಾಗಾಟಕ್ಕೆ ಬಳಸಿದ 5 ಲಕ್ಷ ರೂ ಮೊತ್ತದ ಕಾರು ಹಾಗೂ 50 ಸಾವಿರ ಮೌಲ್ಯದ ಬೈಕ್ ವಶಪಡಿಸಿಕೊಳ್ಳಲಾಗಿದೆ ಮತ್ತು ಇಬ್ಬರನ್ನು ಬಂಧಿಸಲಾಗಿದೆ , ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕೂಡ್ಲಿ ಗ್ರಾಮದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಲಕ್ಷ್ಮಣ ನಾಯಕ ತಾಂಡಾದ ಹತ್ತಿರ ಕಾರಿನಲ್ಲಿ ಗಾಂಜಾ ಸಾಗಾಣಿಕೆ ಮಾಡುತ್ತಿರುವ […]

Continue Reading

ದೇವಸ್ಥಾನ ಕಳ್ಳತನ ಪ್ರಕರಣ: ಆರೋಪಿ ಬಂಧನ,1.80 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ

ಚಿತ್ತಾಪುರ: ಬಹಾರಪೇಠ ತಾಂಡಾ ಹಾಗೂ ಆಲೂರು ಗ್ರಾಮದ ದೇವಸ್ಥಾನ ಕಳ್ಳತನ ಮಾಡಿದ ಆರೋಪಿ ಬಂಧಿಸಿ, 1.80 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಹಾರಪೇಠ ತಾಂಡಾ ಹಾಗೂ ಆಲೂರು ಗ್ರಾಮದ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಕುರಿತು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿತ್ತು, ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಬೀರಪ್ಪ ಈರಪ್ಪ ಪೂಜಾರಿಯನ್ನು ಗುರುವಾರ ಬಂಧಿಸಿ ಆತನಿಂದ 1,80,500 ಮೌಲ್ಯದ ಬಂಗಾರ, ಬೆಳ್ಳಿ ಆಭರಣ, ನಗದು ಹಣ ಜಪ್ತಿ […]

Continue Reading