ಕಲಬುರಗಿ: ಕಾರ್ಯನಿರತ ಪತ್ರಕರ್ತರ ಸಂಘದ
ಚುನಾವಣೆಯಲ್ಲಿ ಬಾಬುರಾವ್ ಯಡ್ರಾಮಿ 4ನೇ
ಬಾರಿಗೆ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
170 ಮತಗಳನ್ನು ಪಡೆಯುವ ಮೂಲಕ ಬಾಬುರಾವ್ ಯಡ್ರಾಮಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯ ಕಾರ್ಯಕಾರಣಿ ಸದಸ್ಯರಾಗಿ ರಾಜು ಉದನೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಭೀಮಾಶಂಕರ್ ಫಿರೋಜಾಬಾದ, ಜಿಲ್ಲಾ ಉಪಾಧ್ಯಕ್ಷರಾಗಿ
ಅರುಣಕುಮಾರ್ ಕದಂ, ಶಿವರಂಜನ್ ಸತ್ಯಂಪೇಟೆ,
ಹನಮಂತರಾವ್ ಭೈರಮಡಗಿ, ಜಿಲ್ಲಾ ಕಾರ್ಯದರ್ಶಿಯಾಗಿ ವಾಸುದೇವ್ ಚವ್ಹಾಣ, ಅನೀಲ್ ಸ್ವಾಮಿ, ಬಾಬುರಾವ್ ಕೋಬಾಳ ಮತ್ತು ಜಿಲ್ಲಾ ಖಜಾಂಚಿಯಾಗಿ ಅಶೋಕ ಕಪನೂರ ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಾರ್ಯಕಾರಣಿ ಸದಸ್ಯರಾಗಿ ಅಕ್ರಂ ಪಾಷಾ ಮೊಮಿನ್, ಶರಣಬಸಪ್ಪ ಜಿಡಗಾ, ರಾಚಪ್ಪ ಜಂಬಗಿ ಸೇರಿದಂತೆ 15 ಜನ ಸದಸ್ಯರು ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ
