ಪುಟಿನ್‌ಗೆ ಮೋದಿಯಿಂದ ಚಹಾಪುಡಿ, ಬೆಳ್ಳಿ ಕುದುರೆ, ಭಗವದ್ಗೀತೆ ಉಡುಗೊರೆ

ನವದೆಹಲಿ: ಅಸ್ಸಾಂನ ಸುವಾಸನೆ ಭರಿತ ಚಹಾಪುಡಿ, ಕಾಶ್ಮೀರಿ ಕೇಸರಿ, ಕರಕುಶಲ ಬೆಳ್ಳಿಯ ಕುದುರೆ, ಬೆಳ್ಳಿಯ ಟೀ ಸೆಟ್, ಚೆಸ್‌ ಬೋರ್ಡ್‌ ಮತ್ತು ರಷ್ಯನ್ ಆವೃತ್ತಿಯ ಭಗವದ್ಗೀತೆಯ ಪ್ರತಿ ಇವೆಲ್ಲವೂ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದ ವಸ್ತುಗಳು. ಮುರ್ಷಿದಾಬಾದ್‌ನ ಕರಕುಶಲ ಕಲಾವಿದರು ಬೆಳ್ಳಿಯ ಟೀ ಸೆಟ್‌ ತಯಾರಿಸಿದ್ದರೆ, ಬೆಳ್ಳಿಯ ಕುದುರೆಯನ್ನು ಮಹಾರಾಷ್ಟ್ರದ ಕಲಾವಿದರು ತಯಾರಿಸಿದ್ದಾರೆ. ಅದೆ ರೀತಿ ಪುಟಿನ್ ಅವರಿಗೆ ನೀಡಲಾದ ಚೆಸ್‌ ಆಟದ ಬೋರ್ಡನ್ನು ವಿಶೇಷವಾಗಿ ಅಮೃತಶಿಲೆಯಿಂದ ತಯಾರಿಸಲಾಗಿದ್ದು, ಇದರ ಹಿಂದೆ […]

Continue Reading

ನಾವು ತಟಸ್ಥವಾಗಿಲ್ಲ, ಶಾಂತಿಯ ಪರವಾಗಿದ್ದೆವೆ: ಪುಟಿನ್‌ ಜೊತೆಗಿನ ಸಂವಾದದಲ್ಲಿ ಮೋದಿ ಮಾತು

ನವದೆಹಲಿ: ಭಾರತವು ತಟಸ್ಥವಾಗಿಲ್ಲ, ಶಾಂತಿಯ ಪರವಾಗಿದೆ. ಶಾಂತಿಯಲ್ಲಿ ಭಾರತ ನಂಬಿಕೆಯಿಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಹೈದರಾಬಾದ್‌ ಹೌಸ್‌ನಲ್ಲಿ ನಡೆದ ಭಾರತ-ರಷ್ಯಾ 23ನೇ ಶೃಂಗಸಭೆಯಲ್ಲಿ ಪುಟಿನ್‌ ಜೊತೆಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, ಮತ್ತೊಮ್ಮೆ ಉಕ್ರೇನ್‌ ವಿರುದ್ಧದ ಯುದ್ಧ ನಿಲ್ಲಿಸುವಂತೆ ಶಾಂತಿಪಾಠ ಹೇಳಿದರು. ಸಂವಾದದಲ್ಲಿ ಮಾತನಾಡಿದ ಮೋದಿ, ಪುಟಿನ್‌ ಅವರ ಈ ಭೇಟಿಯು ಐತಿಹಾಸಿಕವಾಗಿದೆ. ಉಕ್ರೇನ್‌ ಬಿಕ್ಕಟ್ಟಿನ ಬಗ್ಗೆ ನಾವು ನಿರಂತರವಾಗಿ ಚರ್ಚಿಸುತ್ತಿದ್ದೆವೆ. ರಷ್ಯಾ ಶಾಂತಿ ಮಾರ್ಗ ಕಂಡುಕೊಳ್ಳಬೇಕಿದೆ. ಏಕೆಂದ್ರೆ ಶಾಂತಿಯ ಮಾರ್ಗದಲ್ಲಿ ಪ್ರಯಾಣಿಸಿದರೆ ಮಾತ್ರ […]

Continue Reading

ನನ್ನ ಸ್ನೇಹಿತ ಪುಟಿನ್‌ರನ್ನು ಭಾರತಕ್ಕೆ ಸ್ವಾಗತಿಸಲು ಸಂತೋಷವಾಗುತ್ತಿದೆ: ಮೋದಿ

ನವದೆಹಲಿ: ನನ್ನ ಸ್ನೇಹಿತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಭಾರತಕ್ಕೆ ಸ್ವಾಗತಿಸಲು ಸಂತೋಷವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಖುಷಿ ವ್ಯಕ್ತಪಡಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಮೋದಿ, ನನ್ನ ಸ್ನೇಹಿತ ಅಧ್ಯಕ್ಷ ಪುಟಿನ್ ಅವರನ್ನು ಭಾರತಕ್ಕೆ ಸ್ವಾಗತಿಸಲು ಸಂತೋಷವಾಗುತ್ತಿದೆ. ಇಂದು ಸಂಜೆ ಮತ್ತು ನಾಳೆ ನಮ್ಮ ಸಂವಾದ ಎದುರು ನೋಡುತ್ತಿದ್ದೆನೆ. ಭಾರತ-ರಷ್ಯಾ ಸ್ನೇಹವು ಕಾಲಾತೀತವಾಗಿದ್ದು, ಇದು ನಮ್ಮ ಜನರಿಗೆ ಹೆಚ್ಚಿನ ಪ್ರಯೋಜನ ನೀಡಿದೆ ಎಂದು ತಿಳಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಗುರುವಾರ ಸಂಜೆ […]

Continue Reading

ಭಾರತದಲ್ಲಿ ಈ 3 ಬ್ಯಾಂಕ್’ಗಳು ಅತಿ ಸುರಕ್ಷಿತವೆಂದು ಆರ್​ಬಿಐ ಘೋಷಣೆ: ಇವುಗಳಿಗೆ ವಿಶೇಷ ಮಾರ್ಗಸೂಚಿ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಈ ದೇಶದ ಮೂರು ಬ್ಯಾಂಕುಗಳನ್ನು ಬಹಳ ಮುಖ್ಯವೆಂದು ವರ್ಗೀಕರಣ ಮಾಡಿದೆ. ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕುಗಳನ್ನು ವ್ಯವಸ್ಥಿತವಾಗಿ ಅತ್ಯಂತ ಮುಖ್ಯ ಹಣಕಾಸು ಸಂಸ್ಥೆಗಳೆಂದು ಆರ್​ಬಿಐ ಪರಿಗಣಿಸಿದೆ. ಇವುಗಳನ್ನು ಡಿ-ಎಸ್​ಐಬಿ ಅಥವಾ ದೇಶೀಯವಾಗಿ ವ್ಯವಸ್ಥಿತವಾಗಿ ಪ್ರಮುಖ ಬ್ಯಾಂಕ್’ಗಳು ಎಂದು ವರ್ಗೀಕರಿಸಿದೆ. ಆರ್​ಬಿಐ ಪ್ರಕಾರ ದೇಶದ ಬ್ಯಾಂಕಿಂಗ್ ವಲಯದಲ್ಲಿ ಈ ಮೂರು ಬ್ಯಾಂಕ್’ಗಳು ಬಹಳ ಮುಖ್ಯಸ್ಥಾನ ಹೊಂದಿರುತ್ತವೆ. ಈ ಮೂರು ಬ್ಯಾಂಕ್’ಗಳ ಪೈಕಿ ಎಸ್​ಬಿಐ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿದೆ, ಎಚ್​ಡಿಎಫ್​ಸಿ […]

Continue Reading

ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಬೇಡಿಕೆ ಬಹುತೇಕ ಈಡೇರಿಕೆಗೆ ಕೇಂದ್ರ ಸಮ್ಮತಿ

ನವದೆಹಲಿ: ಅಂಗನವಾಡಿ, ಅಕ್ಷರ ದಾಸೋಹ ಹಾಗೂ ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಬಗ್ಗೆ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಅನ್ನಪೂರ್ಣ ದೇವಿ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ ಕುಮಾರಸ್ವಾಮಿ ಮಹತ್ವದ ಮಾತುಕತೆ ನಡೆಸಿದರು. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನಾ ಚಳವಳಿ ನಡೆಸುತ್ತಿದ್ದ ಕರ್ನಾಟಕ ಅಂಗನವಾಡಿ, ಅಕ್ಷರ ದಾಸೋಹ ಮತ್ತು ಆಶಾ ನೌಕರರ ಪ್ರಮುಖರನ್ನು ಬುಧವಾರ ನವದೆಹಲಿಗೆ ಕರೆಸಿಕೊಂಡ ಸಚಿವ […]

Continue Reading

ಸಂಚಾರ್ ಸಾಥಿ ಆ್ಯಪ್ ಪ್ರಿ-ಇನ್ಸ್ಟಾಲ್ ಕಡ್ಡಾಯವಲ್ಲ: ಕೇಂದ್ರ ಸ್ಪಷ್ಟನೆ

ನವದೆಹಲಿ: ವಿರೋಧ ಪಕ್ಷಗಳಿಂದ ತೀವ್ರ ವಿರೋಧದ ಬಳಿಕ ಕೇಂದ್ರ ಸರ್ಕಾರದಿಂದ ‘ಸಂಚಾರ್ ಸಾಥಿ’ ಆ್ಯಪ್ ಪೂರ್ವ-ಸ್ಥಾಪನೆ ಕಡ್ಡಾಯವಲ್ಲ ಎಂದು ದೂರ ಸಂಪರ್ಕ ಇಲಾಖೆ ಹೇಳಿದೆ. ಈ ಹಿಂದೆ ಕೇಂದ್ರ ಸರ್ಕಾರ ಮೊಬೈಲ್‌ಗಳಲ್ಲಿ ಸಂಚಾರ್ ಸಾಥಿ ಆ್ಯಪ್ ಪ್ರಿ-ಇನ್ಸ್ಟಾಲ್ ಮಾಡಲು ಸ್ಮಾರ್ಟ್ಫೋನ್ ಕಂಪನಿಗಳಿಗೆ ಆದೇಶಿಸಿತ್ತು. ಇದು ಜನರ ಮೇಲೆ ನಿರಂತರ ನಿಗಾ ವಹಿಸಲಿದೆ, ಸರ್ಕಾರ ಜನರ ಮೇಲೆ ಗೂಢಚಾರಿಕೆ ಮಾಡುತ್ತಿದೆ ಎಂದು ವಿಪಕ್ಷಗಳಿಂದ ತೀವ್ರ ವಿರೋಧದ ಬಳಿಕ ಕಡ್ಡಾಯ ರದ್ದುಗೊಳಿಸಿ ಸರ್ಕಾರ ಸ್ಪಷ್ಟನೆ ನೀಡಿದೆ. ಎಲ್ಲಾ ನಾಗರಿಕರಿಗೆ ಸೈಬರ್ […]

Continue Reading

ಸಂಚಾರ್ ಸಾಥಿ ಆ್ಯಪ್ ವಿವಾದದ ನಡುವೆ ಹತ್ತುಪಟ್ಟು ಹೆಚ್ಚಾಯಿತು ಡೌನ್‌ಲೋಡ್

ನವದೆಹಲಿ: ಸೈಬರ್ ಸುರಕ್ಷತೆ ಮತ್ತು ಮೊಬೈಲ್ ಸುರಕ್ಷತೆಗಾಗಿ ವಿನ್ಯಾಸಗೊಳಿಸಲಾದ ಸರ್ಕಾರದ ಸಂಚಾರ್ ಸಾಥಿ ಅಪ್ಲಿಕೇಶನ್ ಬಳಕೆ ಕಡ್ಡಾಯಗೊಳಿಸಿದ ಸರ್ಕಾರದ ಆದೇಶದ ಬೆನ್ನಲ್ಲೆ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಈ ವಿವಾದದ ನಡುವೆಯೂ ಅಪ್ಲಿಕೇಷನ್ ಡೌನಲೋಡ್‌ಗಳು ಹೆಚ್ಚಾಗಿದೆ ಎಂದು ದೂರಸಂಪರ್ಕ ಇಲಾಖೆ ಹೇಳಿದೆ. ದೂರಸಂಪರ್ಕ ಇಲಾಖೆಯ ಮೂಲಗಳ ಪ್ರಕಾರ, ಮಂಗಳವಾರ ಸುಮಾರು 6 ಲಕ್ಷ ಜನರು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ್ದಾರೆ. ಇದು ಸಾಮಾನ್ಯ ದಿನದಲ್ಲಿ ಸುಮಾರು 60 ಸಾವಿರ ಆಗಿತ್ತು. ಅಂದರೆ ಒಂದೆ ದಿನದಲ್ಲಿ ಡೌನ್‌ಲೋಡ್‌ಗಳು ಹತ್ತು ಪಟ್ಟು ಹೆಚ್ಚಾಗಿದೆ. […]

Continue Reading

ಮದುವೆಯಾಗಿ ಗಂಡನ ಮನೆಗೆ ಹೋದ 20 ನಿಮಿಷಕ್ಕೆ ಪತಿಗೆ ವಿಚ್ಛೇದನ ನೀಡಿದ ನವ ವಧು

ನವದೆಹಲಿ: ವಿವಾಹವಾಗಿ ತನ್ನ ಪತಿಯ ಮನೆಗೆ ತಲುಪಿದ ಕೇವಲ 20 ನಿಮಿಷಗಳಲ್ಲೆ ವಧು ವಿಚ್ಛೇದನ ಕೇಳಿರುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ. ನವೆಂಬರ್ 25 ರಂದು ಭಾಲ್ವಾನಿಯ ವಿಶಾಲ್ ಮಧೇಶಿಯಾ ಮತ್ತು ಸಲೇಂಪುರದ ಪೂಜಾ ಅವರ ಮದುವೆ ನಡೆದಿತ್ತು. ಸಂಜೆ 7 ಗಂಟೆಗೆ ವರನ ಮೆರವಣಿಗೆ ವಧುವಿನ ಮನೆ ತಲುಪಿ, ರಾತ್ರಿಯಿಡಿ ವಿವಾಹದ ಎಲ್ಲಾ ಆಚರಣೆಗಳು ಮುಗಿದಿದ್ದವು. ನಂತರ ವಧು ಪೂಜಾ ಗಂಡನ ಮನೆ ಹೋಗಿದ್ದಾಳೆ. ಆದರೆ ಗಂಡನ ಮನೆಯೊಳಗೆ ಕಾಲಿಟ್ಟ 20 ನಿಮಿಷಗಳಲ್ಲೆ […]

Continue Reading

ಇನ್ನುಮುಂದೆ ಮೊಬೈಲ್’ನಲ್ಲಿ ಸಕ್ರಿಯ ಸಿಮ್‌ ಇದ್ದರೆ ಮಾತ್ರ ವಾಟ್ಸಪ್‌ ವರ್ಕ್‌ ಆಗುತ್ತೆ

ನವದೆಹಲಿ: ಇನ್ನುಮುಂದೆ ಮೊಬೈಲ್’ನಲ್ಲಿ ಸಕ್ರಿಯವಾಗಿರುವ ಸಿಮ್‌ ಇದ್ದರೆ ಮಾತ್ರ ಮೆಸೇಜಿಂಗ್‌ ಅಪ್ಲಿಕೇಶನ್‌ಗಳು ತೆರೆದುಕೊಳ್ಳಲಿದೆ. ಬಳಕೆದಾರರ ಮೊಬೈಲ್‌ನಲ್ಲಿ ಸಕ್ರಿಯವಾಗಿರುವ ಸಿಮ್‌ ಇದ್ದಾಗ ಮಾತ್ರ ವಾಟ್ಸಪ್‌ ಸೇರಿದಂತೆ ಆ್ಯಪ್‌ ಆಧಾರಿತ ಸಂವಹನ ಸೇವೆ ಕಾರ್ಯನಿರ್ವಹಿಸಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ. ಈ ಕುರಿತಂತೆ 120 ದಿನಗಳೊಳಗಾಗಿ ದೂರಸಂಪರ್ಕ ಇಲಾಖೆಗೆ (DoT) ಅನುಪಾಲನಾ ವರದಿಯನ್ನು ಸಲ್ಲಿಸಬೇಕು. ವರದಿ ಸಲ್ಲಿಸಲು ವಿಫಲವಾದಲ್ಲಿ ದೂರಸಂಪರ್ಕ ಕಾಯ್ದೆ 2023, ಟೆಲಿಕಾಂ ಸೈಬರ್ ಭದ್ರತಾ ನಿಯಮ ಮತ್ತು ಇತರ ಕಾಯ್ದೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಆ್ಯಪ್‌ ಆಧಾರಿತ […]

Continue Reading

ಇನ್ಮುಂದೆ ನಮೋ ಭಾರತ್ ರೈಲಲ್ಲಿ ಪಾರ್ಟಿ, ಮದುವೆ ಫೋಟೋಶೂಟ್ ಮಾಡಬಹುದು

ನವದೆಹಲಿ: ಇನ್ಮುಂದೆ ನಮೋ ಭಾರತ್ ರೈಲು ಹಾಗೂ ನಿಲ್ದಾಣದಲ್ಲಿ ಪಾರ್ಟಿ, ಪ್ರಿ-ವೆಡ್ಡಿಂಗ್ ಶೂಟ್ ಮಾಡಬಹುದು. ನಿಗದಿಪಡಿಸಿದ ಬಾಡಿಗೆ ಕೊಟ್ಟರೆ ಖಾಸಗಿ ಕಾರ್ಯಕ್ರಮ ಆಯೋಜಿಸಬಹುದು ಎಂದು ತಿಳಿಸಿದೆ. ಈ ಕುರಿತು NCRTC ಮಾಹಿತಿ ನೀಡಿದ್ದು, ನಮೋ ಭಾರತ್ ರೈಲು ಹಾಗೂ ನಿಲ್ದಾಣಗಳಲ್ಲಿ ಫೋಟೋಶೂಟ್ ಸೇರಿದಂತೆ ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶ ನೀಡಿದೆ. ಈ ಮೂಲಕ ಜನರು ತಮ್ಮ ವಿಶೇಷ ದಿನಗಳನ್ನು ರೈಲಿನಲ್ಲಿ ಆಚರಿಸಬಹುದಾಗಿದೆ. ಈ ನಿರ್ಧಾರದಿಂದ ಹೊಸ ಆದಾಯ ಸೃಷ್ಟಿಯಾಗಲಿದ್ದು, ಜನರಿಗೆ ವಿಭಿನ್ನ ಅನುಭವ ನೀಡಲಿದೆ. ಸದ್ಯ ಈ […]

Continue Reading