ತೀರ್ಥಹಳ್ಳಿ: ಚಿರತೆ ದಾಳಿಯಿಂದ ಪವಾಡ ಸದೃಶದಂತೆ ನಾಯಿಯೊಂದು ಬದುಕಿದ ಘಟನೆ ಹೊದಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಳಾಪುರ ಗ್ರಾಮದ ಮನೆಯ ಮುಂದೆ ನಡೆದಿದೆ.
ತಾಲೂಕಿನ ಹೊದಲ ಅರಳಾಪುರ ಗ್ರಾಮದ ಅಂತೋಣಿ ಎಂಬುವರ ಮನೆ ಮುಂದೆ ಕಟ್ಟಿ ಹಾಕಿದ್ದ ನಾಯಿಯನ್ನು ಚಿರತೆ ತಿನ್ನಲು ಬಂದಿತ್ತು.
ಮನೆ ಮುಂದೆ ಕಟ್ಟಿ ಹಾಕಿದ್ದ ನಾಯಿಯ ಕುತ್ತಿಗೆಗೆ ಚಿರತೆ ಬಾಯಿ ಹಾಕಿದೆ. ಆಗ ಜೀವ ಹೋಗುವ ಭಯವಾದರೂ ನಾಯಿ ಸತ್ತಂತೆ ಮಲಗಿದೆ, ಅದನ್ನು ನೋಡಿದ ಚಿರತೆ ನಾಯಿ ಸತ್ತು ಹೋಗಿದೆ ಎಂದು ಭಾವಿಸಿ ನಾಯಿಯ ಕುತ್ತಿಗೆಯಿಂದ ಚಿರತೆ ಬಾಯಿ ತೆಗೆದಿದೆ, ಚಿರತೆ ಬಾಯಿಂದ ಬಿಡುಗಡೆಯಾದ ತಕ್ಷಣ ನಾಯಿ ಕೂಗಲಾರಂಭಿಸಿದೆ.
ನಾಯಿ ಕೂಗಾಟ ಕೇಳಿ ಮನೆಯವರು ಎದ್ದು ಬಂದಿದ್ದಾರೆ, ತಕ್ಷಣ ನಾಯಿಯನ್ನು ಬಿಟ್ಟು ಚಿರತೆ ಓಡಿ ಹೋಗಿದೆ. ಈ ಎಲ್ಲಾ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.