ಮನಸ್ಸನ್ನು ಅರಳಿಸುವ ಶಕ್ತಿ ಸಂಗೀತಕ್ಕಿದೆ: ಡಾ.ಸಿದ್ಧತೋಟೇಂದ್ರ ಶ್ರೀ

ಚಿತ್ತಾಪುರ: ಸಂಗೀತಕ್ಕೆ ನೋವು, ದುಃಖ, ಆತಂಕ, ಖಿನ್ನತೆ ಮರೆಸುವ ಶಕ್ತಿಯಿದೆ, ಮಾನಸಿಕ ಆರೋಗ್ಯ ವೃದ್ಧಿಗೆ ಸಂಗೀತವು ಒಂದು ಸಾಧನವಾಗಿ ಕೆಲಸ ಮಾಡುತ್ತದೆ ಎಂದು ನಾಲವಾರದ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಹೇಳಿದರು. ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ಮಂಗಳವಾರ ರಾತ್ರಿ ಶ್ರೀಮಠದ ಸಿದ್ಧತೋಟೇಂದ್ರ ಸುವರ್ಣ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಸಿಕ ಶಿವಾನುಭವ ಚಿಂತನ ಹಾಗೂ ಸಂಗೀತೋತ್ಸವ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ವಚನ ಸಾಹಿತ್ಯ ದಾಸರ ಹಾಡುಗಳು, ಸರ್ವಜ್ಞರ ತ್ರಿಪದಿಗಳು, ಸ್ವರ ವಚನಗಳಿಗೆ ಭಾವಗೀತೆಗಳಿಗೆ ಸಂಗೀತ […]

Continue Reading

ವನ್ಯಜೀವಿಗಳಿಂದ ಮಾತ್ರ ಜಗದ ಉಳಿವು: ವಿಜಯಕುಮಾರ ಬಡಿಗೇರ್

ಚಿತ್ತಾಪುರ: ಜಗದ ಉಳಿವು ವನ್ಯಜೀವಿಗಳನ್ನು ಅವಲಂಬಿಸಿವೆ. ಅವುಗಳ ನಾಶವಾದರೆ ನಮಗೆ ಉಳಿಗಾಲವಿಲ್ಲ ಎಂದು ಅರಣ್ಯಾಧಿಕಾರಿ ವಿಜಯಕುಮಾರ್ ಬಡಿಗೇರ್ ಹೇಳಿದರು. ಸಮೀಪದ ರಾವೂರ ಗ್ರಾಮದ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಪ್ರಾದೇಶಿಕ ಅರಣ್ಯ ವಿಭಾಗ ಕಲಬುರಗಿ, ಚಿತ್ತಾಪುರ ವಲಯ ಅರಣ್ಯ ವಿಭಾಗ ಮತ್ತು ರಾವೂರ ಸಚ್ಚಿದಾನಂದ ಪ್ರೌಢ ಶಾಲೆಯ ವತಿಯಿಂದ ಲುoಬಿನಿ ಟ್ರಿ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ 71ನೇ ವನ್ಯಜೀವಿ ಸಪ್ತಾಹದ ಸಮಾರೋಪ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಪ್ರಕೃತಿ ಒಂದು ಅದ್ಭುತ ಸೃಷ್ಟಿ, ಅದರಲ್ಲಿ ಅರಣ್ಯಗಳು ಹಾಗೂ ವನ್ಯಜೀವಿಗಳ […]

Continue Reading

ರಾವೂರ: ಸೆ.21 ರಿಂದ ಸಿದ್ದಲಿಂಗ ಶ್ರೀಗಳ ಮೌನಾನುಷ್ಠಾನ

ರಾವೂರ: ನವರಾತ್ರಿ ಉತ್ಸವದ ಅಂಗವಾಗಿ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಸೆ.21 ರಿಂದ ಮೌನ ಅನುಷ್ಠಾನ ಕೈಗೊಳ್ಳಲಿದ್ದಾರೆ ಎಂದು ಶ್ರೀಮಠದ ಕಾರ್ಯದರ್ಶಿ ಡಾ.ಗುಂಡಣ್ಣ ಬಾಳಿ ತಿಳಿಸಿದ್ದಾರೆ. ಆಲೂರ ಗ್ರಾಮದ ಶಿಖರೇಶ್ವರ ದೇವಸ್ಥಾನದಲ್ಲಿ ಸೆಪ್ಟೆಂಬರ್ 21 ರಂದು ರವಿವಾರ ರಾತ್ರಿ ಮೌನ ಅನುಷ್ಠಾನ ಪ್ರಾರಂಭಿಸುವರು. ಅಕ್ಟೋಬರ್ 2 ರಂದು ದಸರಾ ಹಬ್ಬದ ದಿನ ಗುರುವಾರ ಮೌನ ಅನುಷ್ಠಾನ ಮಂಗಲವಾಗಿ ಅಂದು ಸಂಜೆ 5.30 ಕ್ಕೆ ಪೂಜ್ಯರು ರಾವೂರ ಸಿದ್ದಲಿಂಗೇಶ್ವರ ಸಂಸ್ಥಾನ ಮಠದಲ್ಲಿ […]

Continue Reading

ಸೋಲು ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ಶಿವಶರಣಪ್ಪ ಮಂಠಾಳೆ

ಚಿತ್ತಾಪುರ: ಸೋಲು ಗೆಲುವಿಗಿಂತ ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ ಎಂದು ತಾಲೂಕ ಧೈಹಿಕ ಶಿಕ್ಷಣಾಧಿಕಾರಿ ಶಿವಶರಣಪ್ಪ ಮಂಠಾಳೆ ಹೇಳಿದರು. ಸಮೀಪದ ರಾವೂರ ಗ್ರಾಮದ ಸಚ್ಚಿದಾನಂದ ಪದವಿಪೂರ್ವ ಕಾಲೇಜಿನಲ್ಲಿ ಶಾಲಾ ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕ ಮಟ್ಟದ ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿಗೆ ಮಕ್ಕಳಲ್ಲಿ ಕ್ರೀಡಾ ಮನೋಭಾವ ಕಡಿಮೆಯಾಗುತ್ತಿದೆ. ಮೊಬೈಲ್, ಸಾಮಾಜಿಕ ಜಾಲತಾಣಗಳಲ್ಲಿ ಕಳೆದು ಹೋಗುತ್ತಿದ್ದಾರೆ. ಪಾಠಗಳ ಜೊತೆಗೆ ಆಟಗಳು ಮಕ್ಕಳ ವ್ಯಕ್ತಿತ್ವ ವಿಕಾಸಗೊಳಿಸುತ್ತವೆ ಎಂದರು. ಪದವಿಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರ ಕೊರತೆಯಿಂದ ಹೆಚ್ಚಿನ […]

Continue Reading

ನಾಲವಾರ: ಆ.28 ರಂದು ಶ್ರಾವಣ ಮಾಸದ ಮುಕ್ತಾಯ ಸಮಾರಂಭ

ಚಿತ್ತಾಪುರ: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀಕ್ಷೇತ್ರ ನಾಲವಾರದ ಸದ್ಗುರು ಕೋರಿಸಿದ್ದೇಶ್ವರ ಮಹಾಸಂಸ್ಥಾನ ಮಠದಲ್ಲಿ ಆಗಸ್ಟ್ 28 ರಂದು ಗುರುವಾರ ಶ್ರಾವಣ ಮಾಸದ ಮುಕ್ತಾಯ ಸಮಾರಂಭ ಅತ್ಯಂತ ಅದ್ಧೂರಿಯಾಗಿ ನೆರವೇರಲಿದೆ ಎಂದು ಶ್ರೀಮಠದ ವಕ್ತಾರ ಮಹಾದೇವ ಕೆ ಗಂವ್ಹಾರ ತಿಳಿಸಿದ್ದಾರೆ. ಶ್ರಾವಣ ಮಾಸದ ಪರ್ಯಂತ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದ ನಿಮಿತ್ಯ ಗುರುವಾರ ಮಧ್ಯಾಹ್ನ ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಪುರಪ್ರವೇಶ, ಅದ್ಧೂರಿ ಶೋಭಾಯಾತ್ರೆ ಮತ್ತು ಸದ್ಗುರು ಕೋರಿಸಿದ್ಧೇಶ್ವರ ಮಹಾಶಿವಯೋಗಿಗಳ ಪಲ್ಲಕ್ಕಿ ಉತ್ಸವ ನಡೆಯಲಿದೆ. […]

Continue Reading

ಆರೋಗ್ಯ ಸಂಪತ್ತೆ ನಿಜವಾದ ಶ್ರೇಷ್ಠ ಸಂಪತ್ತು: ಸಿದ್ದಲಿಂಗ ಬಾಳಿ

ಸುದ್ದಿ ಸಂಗ್ರಹ ಚಿತ್ತಾಪುರ ಜಗತ್ತಿನಲ್ಲಿ ಎಲ್ಲಾ ಸಂಪತ್ತುಗಳಿಗಿಂತ ಆರೋಗ್ಯವೇ ನಿಜವಾದ ಶ್ರೇಷ್ಠ ಸಂಪತ್ತು ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸಂಪನ್ಮೂಲ ಶಿಕ್ಷಕ ಸಿದ್ದಲಿಂಗ ಬಾಳಿ ಹೇಳಿದರು. ಸಮೀಪದ ರಾವೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,‌ ನಾವು ಜೀವನದಲ್ಲಿ ಏನೆಲ್ಲಾ ಸಂಪಾದನೆ ಮಾಡಿದರೂ ಆರೋಗ್ಯ ಇಲ್ಲದಿದ್ದರೆ ಎಲ್ಲವೂ ವ್ಯರ್ಥ. ಇಂದು ವ್ಯಸನಗಳು ಹೆಚ್ಚಾಗಿ ಜನಸಾಮಾನ್ಯರ ಬದುಕನ್ನು ಸಾವಿಗೆ ದೂಡುತ್ತಿವೆ. ದೇಶದ ಪ್ರಗತಿಗೆ […]

Continue Reading

ದಂಡೋತಿ: ಮಂಗಗಳ ಹಾವಳಿ ತಡೆಯಲು ಗ್ರಾ.ಪಂ ಪಿಡಿಒಗೆ ಮನವಿ

ಚಿತ್ತಾಪುರ: ದಂಡೋತಿ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ, ಮಂಗಗಳನ್ನು ಸೆರೆ ಹಿಡುಯವಂತೆ ಒತ್ತಾಯಿಸಿ ಕರವೇ ಗ್ರಾಮ ಘಟಕದ ಅಧ್ಯಕ್ಷ ಮೈನೋದ್ದೀನ್ ತೊನಸನಳ್ಳಿ ಮತ್ತು ಪದಾಧಿಕಾರಿಗಳು ಗ್ರಾ.ಪಂ ಪಿಡಿಒ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕರವೇ ಗ್ರಾಮ ಘಟಕದ ಅಧ್ಯಕ್ಷ ಮೈನೊದ್ದಿನ್ ತೊನಸನಳ್ಳಿ ಮಾತನಾಡಿ, ದಂಡೋತಿ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ, ಇಲ್ಲಿಯವರೆಗೆ 4-5 ಜನರಿಗೆ ಕಚ್ಚಿ ಗಾಯಗೊಳಿಸಿವೆ. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಮನೆಯಿಂದ ಹೊರಗಡೆ ಬರಲು ಹೆದರುತ್ತಿದ್ದಾರೆ, ಗ್ರಾಮದ ಜನರು ಹೊಲಗಳಿಗೆ ತೆರಳಲು ಭಯಭೀತರಾಗಿದ್ದಾರೆ. ಹೀಗಾಗಿ […]

Continue Reading

ಧರ್ಮ ಆಧ್ಯಾತ್ಮದ ತವರೂರು, ಶಿಕ್ಷಣದ ಕಾಶಿ ಹರಸೂರು: ಮುಡುಬಿ

ಕಾಳಗಿ: ಕಲ್ಯಾಣ ಚಾಲುಕ್ಯರ ಮತ್ತು ರಾಷ್ಟ್ರಕೂಟರ ಕಾಲದಲ್ಲಿ ನಾಡಿಗೆ ವಿದ್ಯಾದಾನಗೈದ ಕೀರ್ತಿ ಹರಸೂರು ಗ್ರಾಮಕ್ಕೆ ಸಲ್ಲುತ್ತದೆ ಎಂದು ಸಂಶೋಧಕ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು. ತಾಲೂಕಿನ ಹರಸೂರ ಗ್ರಾಮದಲ್ಲಿ ಬಸವೇಶ್ವರ ಸೇವಾ ಬಳಗ ಹಮ್ಮಿಕೊಳ್ಳಲಾಗಿದ್ದ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ- 28ರಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಹರಸೂರ ಗ್ರಾಮವು ಪ್ರಾಚೀನ ಕಾಲದಲ್ಲಿ ಆಧ್ಯಾತ್ಮದ ತವರೂರಾಗಿತ್ತು. ಗ್ರಾಮದ ಹೆಸರೇ ಸೂಚಿಸುವಂತೆ ಸಾಕ್ಷಾತ ಹರ(ಶಿವ)ನೇ ನೆಲೆ ನಿಂತ ಗ್ರಾಮವು ಹರಸೂರಾಗಿದೆ. ಗ್ರಾಮದಲ್ಲಿ ಶಿವನಿಗೆ ಸೇರಿದಂತೆ ಅವತಾರಗಳು, […]

Continue Reading

ದೇಹದ ಆರೋಗ್ಯವೇ ದೇಶದ ನಿಜವಾದ ಸಂಪತ್ತು: ಸಿದ್ದಲಿಂಗ ಶ್ರೀ

ಚಿತ್ತಾಪುರ: ಭಗವಂತ ಸುಂದರವಾದ ದೇಹವನ್ನು ಕೊಟ್ಟಿದ್ದಾನೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಮೂಲಕ ದೇಹವನ್ನು ಸದೃಢ ಮಾಡಿಕೊಳ್ಳಬೇಕು. ದೇಹದ ಆರೋಗ್ಯವೇ ದೇಶದ ನಿಜವಾದ ಸಂಪತ್ತು ಎಂದು ರಾವೂರ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು. ಸಮೀಪದ ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ದಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವ್ಯಸನ ಮುಕ್ತ ದಿನಾಚರಣೆ’ ಉದ್ದೇಶಿಸಿ ಮಾತನಾಡಿದ ಅವರು, ಇಳಕಲ್ ಮಹಾoತ ಶಿವಯೋಗಿಗಳು ಮಹಾಂತ ಜೋಳಿಗೆ ಮೂಲಕ ಜನರನ್ನು ವ್ಯಸನದಿಂದ ದೂರವಿಡುವ ಪ್ರಯತ್ನ ಮಾಡಿದರು. ವಿವಿಧ ಚಟಗಳಿಂದ ನಿತ್ಯ […]

Continue Reading

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ ಜೀವ ವಿಮೆಯ 2 ಲಕ್ಷ ರೂ ಹಸ್ತಾಂತರ

ಕಾಳಗಿ: ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮೆಯ ನಾಮನಿರ್ದೇಶಿತ ಅರುಣಕುಮಾರ ಕಡ್ಲಿ ಅವರಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಪ್ರವೀಣಕುಮಾರ ಜೆ.ಎಚ್ 2 ಲಕ್ಷ ರೂ. ಚೆಕ್ ವಿತರಿಸಿದರು. ತಾಲೂಕಿನ ತೆಂಗಳಿ ಗ್ರಾಮದ ಅಣ್ಣೆಮ್ಮ ಅರುಣಕುಮಾರ್ ಕಡ್ಲಿ ಅಸುನಿಗಿದ ಕಾರಣ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ ನಾಮನಿರ್ದೇಶಿತ ಅರುಣಕುಮಾರ ಕಡ್ಲಿ ಅವರಿಗೆ 2 ಲಕ್ಷ ರೂ. ಚೆಕ್ ವಿತರಿಸಲಾಯಿತು. ಬ್ಯಾಂಕ ಖಾತೆ ಹೊಂದಿರುವ ಗ್ರಾಹಕರು ಕೇಂದ್ರ ಸರ್ಕಾರದ ಯೋಜನೆಗಳಾದ ಪಿಎಂಜೆಜೆಬಿವೈ 436 ರೂ. ಮತ್ತು […]

Continue Reading