ಕಲಬುರಗಿ: ವಿವಿಧ ಸಂಘಟಕರಿಗೆ ಗೌರವ ಸತ್ಕಾರ

ನಗರದ

ಕಲಬುರಗಿ: ನಗರದ ಎಸ್.ಎಂ ಪಂಡಿತ ರಂಗ ಮಂದಿರದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಕಲಿಕಾ ಸ್ನೇಹಿ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಿತು.

ನಗರದ ಎಸ್.ಎಂ ಪಂಡಿತ ರಂಗ ಮಂದಿರದಲ್ಲಿ ಸುಜಯ್ ಎಜುಕೇಶನಲ್ & ವೆಲ್ಪೇರ್ ಸೊಸೈಟಿ’ ವತಿಯಿಂದ ರವಿವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ‘ಕಲಿಕಾ ಸ್ನೇಹಿ ಶಿಕ್ಷಕ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಯವರಾದ ಎಚ್.ಬಿ ಪಾಟೀಲ್, ನರಸಪ್ಪ ಬಿರಾದಾರ ದೇಗಾಂವ, ನರಸಪ್ಪ ರಂಗೋಲಿ, ಎಂ.ಬಿ ನಿಂಗಪ್ಪ, ದೇವೇಂದ್ರಪ್ಪ ಗಣಮುಖಿ, ಅಪ್ಪಾಸಾಬ ತೀರ್ಥೆ, ಭಾನುಕುಮಾರ ಗಿರೇಗೋಳ್ ಸೇರಿದಂತೆ ಅನೇಕ ಸಂಘಟನೆಯವರಿಗೆ ಸತ್ಕರಿಸಿ, ಗೌರವಿಸಲಾಯಿತು.

ಸುಜಯ್ ಎಜುಕೇಶನಲ್ ಮತ್ತು ವೆಲ್ಪೇರ್ ಸೊಸೈಟಿ’ಯ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ, ಪ್ರಮುಖರಾದ ಜಯಶ್ರೀ ಎಸ್.ವಂಟಿ, ಸುಜಯ್ ಎಸ್.ವಂಟಿ, ಸಾಯಿಪ್ರಸಾದ ಎಸ್.ವಂಟಿ, ರವೀಂದ್ರರೆಡ್ಡಿ ಶಿಕಾರಿ, ರಾಜಕುಮಾರ ಕೋರಿ, ಲಕ್ಷ್ಮಿಕಾಂತ ಪಾಟೀಲ, ಸಂಗಮೇಶ ಇಮ್ಡಾಪುರ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *