ಹಾಸನ: ತಾಳಿ ಕಟ್ಟುವಾಗ ವಧು ನನಗೆ ಈ ಮದುವೆ ಬೇಡ ಎಂದ ಘಟನೆ ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.
ತಾಳಿ ಕಟ್ಟುವ ಮುಹೂರ್ತಕ್ಕೂ ಮುನ್ನ ಯುವತಿಗೆ ಒಂದು ಫೋನ್ ಕರೆ ಬಂದಿದೆ. ಆಗ ವಧು ತಕ್ಷಣವೆ ನನಗೆ ಈ ಮದುವೆ ಬೇಡ ಎಂದು ವಧು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಹೆತ್ತವರು, ಸಂಬಂಧಿಕರು ಯಾರು ಏನೇ ಹೇಳಿದರು ಕೇಳದ ವಧು ರೂಂಗೆ ಹೋಗಿ ಮದುವೆ ಬೇಡವೇ ಬೇಡ ಎಂದು ಹಠ ಹಿಡಿದಿದ್ದಾರೆ. ತಾಳಿ ಕೈಯಲ್ಲಿ ಹಿಡಿದು ಮಧುಮಗ ಮಾಡಿದ ಮನವೊಲಿಕೆಗೂ ಆಕೆ ಮನಸ್ಸು ಕರಗಲಿಲ್ಲ. ವಧು ಮದುವೆ ಬೇಡ ಎಂದಾಗ ಕೈಯಲ್ಲಿ ತಾಳಿ ಹಿಡಿದಿದ್ದ ವರ ಯಾಕೆ ಮದುವೆ ಬೇಡ ಎಂದು ಕೇಳಿದ್ದಾನೆ. ಕೊನೆಗೆ ಹಠ ಹಿಡಿದ ಬೆನ್ನಲ್ಲೇ ವರ ಕೂಡ ನನಗೂ ಮದುವೆ ಬೇಡ ಎನ್ನುತ್ತಾ ಕಣ್ಣೀರು ಹಾಕಿದ್ದಾನೆ. ಮಗಳು ಮದುವೆ ಬೇಡ ಎಂದಿದ್ದಕ್ಕೆ ಪೋಷಕರು ಸಹ ಕಣ್ಣೀರಿಟ್ಟಿದ್ದಾರೆ. ಇದರೊಂದಿಗೆ ಧಾರಾಮುಹೂರ್ತದ ಸಮಯದಲ್ಲಿ ಬಂದ ಅದೊಂದು ಫೋನ್ ಕರೆ ಮದುವೆಯನ್ನೇ ಮುರಿದು ಹಾಕಿದೆ.
ಮೂರು ತಿಂಗಳ ಹಿಂದೆ ನಿಶ್ಚಯವಾಗಿದ್ದು, ಇಂದು ಮುಹೂರ್ತ ನಡೆಸುವ ವೇಳೆಯಲ್ಲಿ ಮಧು ಮಗಳು ಮಾಡಿದ ಅವಾಂತರ ಪೋಷಕರಿಗೆ ಆಘಾತ ತಂದರೆ ಮದುವೆಗೆ ಬಂದವರು ಕಂಗೆಟ್ಟು ಹೋಗಿದ್ದಾರೆ. ಗದ್ದಲ ಗಲಾಟೆ ನಡುವೆ ಮದುವೆ ನಿಂತು ಹೋಗಿದೆ. ಇನ್ನು ಪೊಲೀಸರ ಮಧ್ಯಸ್ಥಿತಿಕೆಯಲ್ಲಿ ರಾಜಿ ಸಂಧಾನ ನಡೆಸಿದರು, ಪ್ರೀತಿಸಿದವನಿಗಾಗಿ ಕೊನೆಗಳಿಗೆಯಲ್ಲಿ ಮದುವೆ ಮುರಿದ ಯುವತಿ ವಿರುದ್ಧ ವರನ ಕಡೆಯವರು ಅಸಮಧಾನ ಹೊರ ಹಾಕಿದ್ದಾರೆ.
ಹಾಸನ ಹೊರವಲಯ ಬೂವನಹಳ್ಲಿಯ ಯುವತಿ ಆಲೂರು ತಾಲೂಕಿನ ಸರ್ಕಾರಿ ಶಾಲೆಯ ಶಿಕ್ಷಕನ ನಡುವೆ ಮೂರು ತಿಂಗಳ ಹಿಂದೆ ನಿಶ್ಚಯವಾಗಿದ್ದ ಮದುವೆ, ಇಂದು ಧಾರ ಮುಹೂರ್ತ ನಿಗದಿಯಾಗಿತ್ತು, ಬೆಳಿಗ್ಗೆ 9 ಗಂಟೆಗೆ ತಾಳಿಕಟ್ಟುವ ಸಲುವಾಗಿ ಎಲ್ಲಾ ಶಾಸ್ತ್ರಗಳು ನೆರವೇರಿಕೆಯಾಗಿತ್ತು, ಮುತ್ತೈದೆಯರು ಕೈನೀರು ಬಿಟ್ಟು ಹರಸಿ ಅರ್ಚಕರು ಮಂತ್ರ ಹೇಳಿ ಮಂಗಳವಾದ್ಯ ಮೊಳಗಿ ತಾಳಿಕಟ್ಟಲು ವರ ತಾಳಿ ಕೈಗೆತ್ತಿಕೊಳ್ಳುತ್ತಲೆ ವಧು ತಲೆ ಅಲ್ಲಾಡಿಸಿ ಕಣ್ಣೀರಿಡೊಕೆ ಶುರುಮಾಡಿದ್ದಾಳೆ. ಏನಾಯಿತು ಎಂದು ಕೇಳಿದರೂ ಹೇಳದ ಆಕೆ ಹಸೆಮಣೆಯಿಂದ ಎದ್ದು ರೂಮ್ಗೆ ಓಡಿಹೋಗಿದ್ದಾಳೆ.
ಪ್ರಿತಿಯ ರಹಸ್ಯ ಬಯಲಿಗೆ
ತಾಳಿ ಕೈಯಲ್ಲಿ ಹಿಡಿದು ಪರಿಪರಿಯಾಗಿ ಕೇಳಿದ ವರ ಏನಾಯಿತು ಎಂದು ಕೇಳಿದಾಗ ಬಯಲಾಗಿದ್ದು ಅದೊಂದು ಪ್ರಿತಿಯ ರಹಸ್ಯ, ಸ್ನಾತಕೋತ್ತರ ಪದವಿ ಮುಗಿಸಿರುವ ಯುವತಿಗೆ ಮತ್ಯಾರೋ ಯುವಕನ ಜೊತೆ ಲವ್ ಇತ್ತಂತೆ, ಇದನ್ನ ಮುಚ್ಚಿಟ್ಟಿದ್ದ ಆಕೆ ಮನೆಯವರ ಒತ್ತಾಯಕ್ಕೆ ಮಣಿದು ಶಿಕ್ಷಕನ ಜೊತೆಗೆ ಮದುವೆ ನಿಶ್ಚಯ ಮಾಡಿಕೊಂಡಿದ್ದಾಳೆ, ಆದರೆ ಮುಹೂರ್ತದ ಸಮಯದಲ್ಲಿ ಬಂದಿರುವ ಪೋನು ಕರೆಯಿಂದ ಮದುವೆವೆ ಮುರಿದುಬಿದ್ದಿದೆ.
ಆಲೂರು ತಾಲೂಕಿನ ಸರ್ಕಾರಿ ಶಾಲೆಯ ಶಿಕ್ಷಕನ ಜೊತೆಗೆ ಮದುವೆ ನಿಶ್ಚಯ ಮಾಡಿಕೊಂಡಿದ್ದಾರೆ. ತಿಂಗಳ ಹಿಂದೆ ಅದ್ದೂರಿಯಾಗಿ ಪ್ರಿವೆಡ್ಡಿಂಗ್ ಶೂಟ್ ಸಹ ಮಾಡಿಸಿಕೊಂಡು ಒಟ್ಟೊಟ್ಟಿಗೆ ಓಡಾಡಿದ ನವ ಜೋಡಿ ನಿನ್ನೆ ಸಂಜೆಯೇ ಕಲ್ಯಾಣ ಮಂಟಪಕ್ಕೆ ಬಂದಿದ್ದರು. ಎಲ್ಲವೂ ಚನ್ನಾಗಿಯೇ ನಡೆದಿತ್ತು. ಬೆಳಿಗ್ಗೆ ಎದ್ದು ಮದುವೆ ಉಡುಗೆ ತೊಟ್ಟು ಎಲ್ಲಾ ಶಾಸ್ತ್ರ ಪೂರೈಸಿಕೊಂಡಾಕೆ ಕೊನೆಗಳಿಗೆಯಲ್ಲಿ ಮದುವೆ ಮುರಿದು ಹಸೆಮಣೆಯಿಂದ ಎದ್ದು ಹೋಗಿದ್ದಾಳೆ.
ಪೊಲೀಸರಿಂದ ರಾಜಿ ಸಂಧಾನ
ಕೊನೆಗೆ ಈ ವಿಚಾರ ಹಾಸನ ಬಡಾವಣೆ ಠಾಣೆ ಪೊಲೀಸರಿಗೆ ಮುಟ್ಟಿಸಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಎರಡು ಕಡೆಯವರನ್ನು ಮಾತನಾಡಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಅತ್ತ ಹುಡುಗಿ ಮನೆಯವರು ಯುವಕನ ಮನೆಯವರ ವಾಗ್ವಾದ ನಡೆದಿದೆ. ಎಲ್ಲಾ ಶಾಸ್ತ್ರ ಸಂಪ್ರದಾಯವನ್ನು ಖುಷಿ ಖುಷಿಯಾಗಿ ಮಾಡಿಸಿಕೊಂಡ ಹುಡುಗಿಯನಡೆ ಅಲ್ಲಿದ್ದವರೆಲ್ಲರ ಅಚ್ಚರಿಗೆ ಕಾರಣವಾಗಿದೆ ಎರಡು ಕಡೆಯವರನ್ನ ಸಮಾಧಾನಪಡಿಸಲು ಪೊಲೀಸರು ಹೈರಾಣಾಗಿದ್ದಾರೆ. ಕೊನೆಗೆ ಮದುವೆ ಮುರಿದುಬಿದ್ದಿದ್ದು, ಮದುವೆ ಬಂದವರಿಗೆಲ್ಲ ಮಾಡಿಸಲಾಗಿದ್ದ ಬಗೆ ಬಗೆಯ ಊಟ ವೇಸ್ಟ್ ಆಗಿದೆ.
ಒಟ್ಟಿನಲ್ಲಿ ಹೆತ್ತವರು ಹೇಳಿದ ಹುಡುಗನನ್ನ ಇಷ್ಟಪಟ್ಟು ಮದುವೆಗೆ ಓಕೆ ಎಂದಿದ್ದ ಹುಡುಗಿ ದಿಢೀರ್ ಪ್ರೀತಿ ಪ್ರೇಮದ ನೆಪಹೇಳಿ ಮದುವೆಯನ್ನೇ ಮುರಿದಿದ್ದಾಳೆ, ಹೊಸ ಜೀವನದ ಕನಸು ಕಂಡು ಹಸೆಮಣೆ ಏರಿದ್ದ ಹುಡುಗ ಅತ್ತ ಮದುವೆಯೂ ಆಗದೆ ಇತ್ತ ಲಕ್ಷ ಲಕ್ಷ ಹಣವನ್ನು ಕಳೆದುಳ್ಳುವಂತಾಗಿದೆ.