ನೋಡ ಬನ್ನಿ ನಾಲವಾರದ ಕೋರಿಸಿದ್ದೇಶ್ವರ ಜಾತ್ರಾ ವೈಭವ

ಚಿತ್ತಾಪುರ: ಕಲ್ಯಾಣ ಕರ್ನಾಟಕದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ, ಪವಾಡ ಪುರುಷ, ಸಿದ್ಧಕುಲಚಕ್ರವರ್ತಿ, ಗುರುಕುಲಸಾರ್ವಭೌಮ ನಾಲವಾರದ ಮಹಾತ್ಮಾ ಸದ್ಗುರು ಶ್ರೀ ಕೋರಿಸಿದ್ದೇಶ್ವರ ಮಹಾ ಶಿವಯೋಗಿಗಳ ಜಾತ್ರಾಮಹೋತ್ಸವವು ಜ. 29 ಮತ್ತು 30 ರಂದು ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಪೀಠಾಧಿಪತಿ ಡಾ. ಸಿದ್ಧತೋಟೇಂದ್ರ ಮಹಾಸ್ವಾಮಿಗಳ ದಿಗ್ದರ್ಶನದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹತ್ತು ಹಲವು ವೈಶಿಷ್ಟ್ಯಪೂರ್ಣ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜ.29 ರಂದು ಬುಧವಾರ ಮಧ್ಯರಾತ್ರಿ ದಕ್ಷಿಣ ಭಾರತದ ಮಹಾದೀಪಮೇಳವೆಂದೇ ಪ್ರಖ್ಯಾತವಾದ ಭಕ್ತರ ಹರಕೆಯ “ತನಾರತಿ” ಮಹೋತ್ಸವ ಕಾರ್ಯಕ್ರಮ ನಡೆಯಲಿದೆ […]

Continue Reading

ಸಿದ್ಧಗಂಗಾ ಮಠದ ತ್ರಿವಿಧ ದಾಸೋಹದಂತೆ ನಾಲವಾರ ಮಠದ ಕಾರ್ಯ ಶ್ಲಾಘನೀಯ: ಗೃಹ ಸಚಿವ ಡಾ.ಜಿ.ಪರಮೇಶ್ವರ

ಚಿತ್ತಾಪುರ: ಕರುನಾಡಿನಲ್ಲಿ ತ್ರಿವಿಧ ದಾಸೋಹದ ಮೂಲಕ ಪ್ರಸಿದ್ಧಿಯಾದ ಸಿದ್ಧಗಂಗಾದಂತೆ ಕಲ್ಯಾಣ ಕರ್ನಾಟಕದ ನಾಲವಾರದ ಸದ್ಗುರು ಕೋರಿಸಿದ್ಧೇಶ್ವರ ಮಹಾಸಂಸ್ಥಾನವು ಅನ್ನ, ಅಕ್ಷರ, ಅರಿವು ನೀಡುವ ಕಾರ್ಯ ಮಾಡುತ್ತಿರುವದು ಶ್ಲಾಘನೀಯ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿದರು. ನಾಲವಾರ ಜಾತ್ರಾ ಮಹೋತ್ಸವದ ಅಂಗವಾಗಿ ಸದ್ಗುರು ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ದರ್ಶನಾಶೀರ್ವಾದ ಪಡೆಯಲು ಆಗಮಿಸಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಪೀಠಾಧಿಪತಿ ಡಾ. ಸಿದ್ಧತೋಟೇಂದ್ರ ಮಹಾಸ್ವಾಮಿಗಳಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಶ್ರೇಷ್ಠ ಗುರುಪರಂಪರೆ ಹೊಂದಿರುವ ಕಲ್ಯಾಣ ಕರ್ನಾಟಕ […]

Continue Reading

ಬಿಗ್‌ ಬಾಸ್‌ ಟ್ರೋಫಿ ಗೆದ್ದು ಸುದೀಪ್‌ ಕಾಲಿಗೆ ಬಿದ್ದ ಹನುಮಂತ

ಬಿಗ್‌ ಬಾಸ್‌ ಕನ್ನಡ 11ರ ವಿನ್ನರ್‌ ಆಗಿ ಹನುಮಂತ ಹೊರಹೊಮ್ಮಿದ್ದಾರೆ. ಟ್ರೋಫಿ ಗೆದ್ದ ಖುಷಿಯಲ್ಲಿ ಕಿಚ್ಚ ಸುದೀಪ್‌ ಅವರ ಕಾಲಿಗೆ ಬಿದ್ದು ಹಳ್ಳಿ ಹೈದ ಆಶೀರ್ವಾದ ಪಡೆದಿದ್ದಾರೆ. ಬಿಗ್‌ ಬಾಸ್‌ ಫಿನಾಲೆ ಕೊನೆ ಹಂತ ರೋಚಕತೆಯಿಂದ ಕೂಡಿತ್ತು. ಯಾರು ವಿನ್ನರ್‌ ಆಗ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಸುದೀಪ್‌ ಬಲಭಾಗದಲ್ಲಿ ಹನುಮಂತ ಹಾಗೂ ಎಡ ಭಾಗದಲ್ಲಿ ತ್ರಿವಿಕ್ರಮ್‌ ನಿಂತಿದ್ದರು. ಸುದೀಪ್‌ ಅವರು ಹನುಮಂತನ ಕೈ ಎತ್ತುವ ಮೂಲಕ ವಿನ್ನರ್‌ ಎಂದು ಘೋಷಿಸಿದರು. ಗೆದ್ದ ಖುಷಿಯಲ್ಲಿ ಹನುಮಂತ, ಸುದೀಪ್‌ […]

Continue Reading

ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿಜೇತ ‘ಹಳ್ಳಿ ಹೈದ’ ಹನುಮಂತ

‘ಬಿಗ್ ಬಾಸ್ ಕನ್ನಡ ಸೀಸನ್‌ 11’ ಗ್ರ್ಯಾಂಡ್ ಫಿನಾಲೆ ಮುಕ್ತಾಯವಾಗಿದೆ, ವಿಜೇತರಾಗಿ ಕುರಿಗಾಹಿ ಹನುಮಂತ ಲಮಾಣಿ ಹೊರಹೊಮ್ಮಿದ್ದಾರೆ, ಬಿಬಿಕೆ 11 ವಿನ್ನರ್‌ ಟ್ರೋಫಿ ಹಳ್ಳಿಹಕ್ಕಿ ಹನುಮಂತ ಲಮಾಣಿ ಪಾಲಾಗಿದೆ. ಹನುಮಂತ ಲಮಾಣಿಗೆ ಸಿಕ್ಕ ಮತಗಳು ಎಷ್ಟು ?‘ಬಿಗ್ ಬಾಸ್ ಕನ್ನಡ 11’ರ ವಿನ್ನರ್‌ ಆದ ಹನುಮಂತ ಲಮಾಣಿಗೆ ಒಟ್ಟು 5,23,89,318 ವೋಟ್ಸ್ ಬಿದ್ದಿವೆ. ‘ಬಿಗ್ ಬಾಸ್ ಕನ್ನಡ’ ಇತಿಹಾಸದ ಇಷ್ಟೂ ಸೀಸನ್‌ಗಳಲ್ಲಿ ವಿನ್ನರ್‌ಗೆ ಇಷ್ಟೊಂದು ವೋಟ್ಸ್ ಬಿದ್ದಿರೋದು ಇದೆ ಮೊದಲು‌. ಹೊಸ ಇತಿಹಾಸ ಸೃಷ್ಟಿಸಿದ ಹನುಮಂತ ಲಮಾಣಿ […]

Continue Reading

ಅಂಗನವಾಡಿಗಳಲ್ಲಿ‌ ಶುಚಿತ್ವ ಕಾಪಾಡಿ: ಸಚಿವ ಪ್ರಿಯಾಂಕ್ ಖರ್ಗೆ

ಚಿತ್ತಾಪುರ: ಅಂಗನವಾಡಿ ಕೇಂದ್ರಗಳಲ್ಲಿ ತಯಾರಿಸುವ ಅಡುಗೆಯಲ್ಲಿ ಶುಚಿತ್ವ ಹಾಗೂ ಸ್ವಚ್ಛತೆ ಕಾಪಾಡಿಕೊಂಡು ಮಕ್ಕಳಿಗೆ ವಿದ್ಯೆ ಕಲಿಸುವುದರ ಜೊತೆಗೆ ಆರೋಗ್ಯದ ಕಡೆಗೆ ವಿಶೇಷ ಗಮನಹರಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವಪ್ರಿಯಾಂಕ್ ಖರ್ಗೆ ಸೂಚಿಸಿದರು. 2022-23ನೇ ಸಾಲಿನ ಕೆಕೆಆರ್ ಡಿಬಿ ಮೆಗಾ ಮ್ಯಾಕ್ರೋ ಯೋಜನೆಯಡಿಯಲ್ಲಿ ತಲಾ 20 ಲಕ್ಷ ರೂ ವೆಚ್ಚದಲ್ಲಿ ದಂಡೋತಿ ಗ್ರಾಮದಲ್ಲಿ ಮೂರು ಹಾಗೂ ಚಿತ್ತಾಪುರ ಪಟ್ಟಣದಲ್ಲಿ ಎರಡು ಅಂಗನವಾಡಿ ಕೇಂದ್ರಗಳ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ […]

Continue Reading

ರಾಜ್ಯ ಚಲನಚಿತ್ರ ಪ್ರಶಸ್ತಿ ತಿರಸ್ಕರಿಸಿದ ಕಿಚ್ಚ ಸುದೀಪ

ಬೆಂಗಳೂರು: ರಾಜ್ಯ ಸರ್ಕಾರದಿಂದ ಕೊಡಲಾಗುವ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ಕಿಚ್ಚ ಸುದೀಪ ಅವರನ್ನು 2019ನೇ ಸಾಲಿನ ‘ಅತ್ಯುತ್ತಮ ನಟ ಪ್ರಶಸ್ತಿ’ಗೆ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ಆದರೆ ನಾನು ಈ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಎಂದು ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ ತಿಳಿಸಿದ್ದಾರೆ. ಈ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ಪಡೆದಿರುವುದು ನಿಜಕ್ಕೂ ಒಂದು ಗೌರವದ ವಿಷಯ. ಈ ಗೌರವಕ್ಕೆ ಆಯ್ಕೆಮಾಡಿದ ತೀರ್ಪುಗಾರರಿಗೆ ಹೃತ್ಪೂರ್ವಕ ಧನ್ಯವಾದಗಳು ಅರ್ಪಿಸುತ್ತೆನೆ. […]

Continue Reading

ಕೋಲಿ ಸಮಾಜ ಒಡೆಯುವುದೆ ಕಮಕನೂರು ಪ್ರವೃತ್ತಿ: ಮುನಿಯಪ್ಪ ಕೊಳ್ಳಿ

ಚಿತ್ತಾಪುರ: ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರು‌ ಅವರು ದಿ.ವಿಠಲ್ ಹೇರೂರ ಅವರ ಹೋರಾಟದ ಸಮಯದಿಂದ ಇಂದಿನವರೆಗೂ ಕೋಲಿ ಸಮಾಜದಲ್ಲಿ ಒಡಕುಂಟು ಮಾಡುವದು ಮುಂದುವರೆಸಿದ್ದಾರೆ‌. ಅದು ಅವರ ಪ್ರವೃತ್ತಿಯಾಗಿದೆ ಎಂದು ಕೋಲಿ ಸಮಾಜದ ಮುಖಂಡ ಮುನಿಯಪ್ಪ ಎಸ್ ಕೊಳ್ಳಿ ದಂಡೋತಿ ಹೇಳಿದ್ದಾರೆ. ಹೇರೂರ ಅವರು ಬದುಕಿರುವವರೆಗೂ ಅವರನ್ನು ವಿರೋಧ ಮಾಡುತ್ತಲೇ ಬಂದಿದ್ದಾರೆ. ಹೇರೂರ ಅವರು ಸಮಾಜದ ಒಳಿತಿಗಾಗಿ ಯಾವುದೆ ಸಭೆ, ಸಮಾರಂಭ, ಕಾರ್ಯಕ್ರಮ, ಪ್ರತಿಭಟನೆ, ಹೋರಾಟ ಹಮ್ಮಿಕೊಂಡರೆ ಆಗ ಕಮಕನೂರು ಅವರು ಪರ್ಯಾಯವಾಗಿ ಕಾರ್ಯಕ್ರಮ ಮಾಡುವ ಮೂಲಕ […]

Continue Reading

ಮೊಬೈಲ್​ನಲ್ಲಿ ಸಿಗ್ನಲ್ ಇಲ್ಲದಿದ್ದರೂ ಕರೆ ಮಾಡುವುದು ಹೇಗೆ ಗೊತ್ತೆ ?: ಕೇಂದ್ರ ಸರ್ಕಾರದಿಂದ ದೊಡ್ಡ ಹೆಜ್ಜೆ

ನಿಮ್ಮ ಮೊಬೈಲ್’ನಲ್ಲಿ ಸಿಗ್ನಲ್ ಇಲ್ಲದಿದ್ದರೂ ನೀವಿರುವ ಜಾಗದಲ್ಲಿ ಇತರೆ ಟೆಲಿಕಾಂ ಕಂಪನಿಯ ಸಿಗ್ನಲ್ ಇದ್ದರೆ ಕರೆ ಮಾಡಬಹುದು. ಯಾವುದೆ ಸಿಗ್ನಲ್ ಇಲ್ಲದಿದ್ದರು ಲಭ್ಯವಿರುವ ಇತರ ನೆಟ್‌ವರ್ಕ್‌ಗಳ ಸಹಾಯದಿಂದ ಕರೆ ಮಾಡುವ ಆಯ್ಕೆ ಇದಾಗಿದೆ. ಜಿಯೋ, ಬಿಎಸ್ಎನ್ಎಲ್ ಮತ್ತು ಏರ್ಟೆಲ್ ಬಳಕೆದಾರರು ತಮ್ಮ ಸ್ವಂತ ಸಿಮ್ ನೆಟ್‌ವರ್ಕ್ ಇಲ್ಲದಿದ್ದರೂ ಅಲ್ಲಿ ಲಭ್ಯವಿರುವ ಯಾವುದೆ ನೆಟ್‌ವರ್ಕ್‌ನಿಂದ ಕರೆ ಮಾಡಬಹುದು. ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆಯು ದೇಶದಲ್ಲಿ ಇಂಟ್ರಾ ಸರ್ಕಲ್ ರೋಮಿಂಗ್ (ICR) ಸೌಲಭ್ಯವನ್ನು ಪ್ರಾರಂಭಿಸಿದೆ. ಈ ನಿಬಂಧನೆಯ ಅಡಿಯಲ್ಲಿ ಎಲ್ಲಾ […]

Continue Reading

ಸೈಫ್‌ ಕುಟುಂಬಕ್ಕೆ ಸೇರಿದ 15 ಸಾವಿರ ಕೋಟಿ ಮೌಲ್ಯದ ಆಸ್ತಿ ಕೇಂದ್ರದ ವಶಕ್ಕೆ ?

ಭೋಪಾಲ್‌: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಪಟೌಡಿ ಕುಟುಂಬಕ್ಕೆ ಸೇರಿದ 15 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಗಳು ಶೀಘ್ರವೇ ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ. ಈ ಆಸ್ತಿಗಳ ಮೇಲೆ 2015ರಲ್ಲಿ ವಿಧಿಸಲಾಗಿದ್ದ ತಡೆಯಾಜ್ಞೆಯನ್ನು ಮಧ್ಯಪ್ರದೇಶ ಹೈಕೋರ್ಟ್‌ ತೆಗೆದುಹಾಕಿದೆ. ಇದರಿಂದಾಗಿ 1968ರ ಶತ್ರು ಆಸ್ತಿ ಕಾಯ್ದೆಯ ಅಡಿಯಲ್ಲಿ ಅವುಗಳನ್ನು ಸ್ವಾಧೀನಪಡಿಸಿಕೊಳ್ಳಲು ದಾರಿ ಮಾಡಿಕೊಟ್ಟಿದೆ. ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್‌ ಡಿ.13 ರಂದು, 2017 ತಿದ್ದುಪಡಿ ಮಾಡಿದ ಶತ್ರು ಆಸ್ತಿ ಕಾಯ್ದೆ […]

Continue Reading

ವಾಚ್​​ಮನ್​​ಗೆ ಜಾಕ್​ಪಾಟ್: ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ 60 ವರ್ಷದ ವೃದ್ಧ

ಕೆಲಸ ಮಾಡಿ ಗಳಿಸುತ್ತಿದ್ದ ಹಣದಲ್ಲಿ ಮನೆಗೆ ಕಳುಹಿಸಿ ಸ್ವಲ್ಪ ಹಣದಲ್ಲಿ ಲಾಟರಿ ಖರೀದಿ ಮಾಡುತ್ತಿದ್ದರಂತೆ. ಇತ್ತೀಚೆಗೆ ನಡೆದ ಹೊಸ ವರ್ಷದ ಬಿಗ್ ಟಿಕೆಟ್ ಗ್ರ್ಯಾಂಡ್ ಪ್ರೈಸ್ ಲಾಟರಿ ಟಿಕೆಟ್ ಖರೀದಿ ಮಾಡಿದ್ದರಂತೆ. ಸದ್ಯ ಈ ಲಾಟರಿಯ ಲಕ್ಕಿ ಟಿಕೆಟ್ ನಂಬರ್ ಘೋಷಣೆ ಮಾಡಿದ್ದು, ಡ್ರಾದಲ್ಲಿ ರಾಜಮಲಯ್ಯ ಅವರಿಗೆ ಮಿಲಿಯನ್ ದಿರ್ಹಮ್ (ಯುಎಇ ಹಣ) ಗೆದ್ದಿದ್ದಾರೆ. ಅದೃಷ್ಟ ಯಾವಾಗ ? ಹೇಗೆ ? ಎಲ್ಲಿಂದ ಬರುತ್ತದೆ ಎಂಬುದು ನಮಗೆ ತಿಳಿಯೊದಿಲ್ಲ. ಅದೃಷ್ಟ ಹಾಗೆ ಬಂದರೆ ರಾತ್ರೋರಾತ್ರಿ ಬದುಕು ಬದಲಾಯಿಸುತ್ತದೆ. […]

Continue Reading