ಬೆಂಗಳೂರು: ರಾಜ್ಯ ಸರ್ಕಾರದಿಂದ ಕೊಡಲಾಗುವ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ಕಿಚ್ಚ ಸುದೀಪ ಅವರನ್ನು 2019ನೇ ಸಾಲಿನ ‘ಅತ್ಯುತ್ತಮ ನಟ ಪ್ರಶಸ್ತಿ’ಗೆ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ಆದರೆ ನಾನು ಈ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಎಂದು ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ ತಿಳಿಸಿದ್ದಾರೆ.
ಈ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ಪಡೆದಿರುವುದು ನಿಜಕ್ಕೂ ಒಂದು ಗೌರವದ ವಿಷಯ. ಈ ಗೌರವಕ್ಕೆ ಆಯ್ಕೆಮಾಡಿದ ತೀರ್ಪುಗಾರರಿಗೆ ಹೃತ್ಪೂರ್ವಕ ಧನ್ಯವಾದಗಳು ಅರ್ಪಿಸುತ್ತೆನೆ. ಆದರೆ ನಾನು ಹಲವಾರು ವರ್ಷಗಳಿಂದ ಪ್ರಶಸ್ತಿ ಪಡೆಯುವುದನ್ನು ನಿಲ್ಲಿಸಲು ನಿರ್ಧಾರ ತೆಗೆದುಕೊಂಡಿದ್ದೆನೆ. ನಾನು ಹೃದಯಪೂರ್ವಕವಾಗಿ ಪಾಲಿಸಲು ಉದ್ದೇಶಿಸಿರುವ ವೈಯಕ್ತಿಕ ಕಾರಣಕ್ಕೆ ರಾಜ್ಯ ಸರ್ಕಾರ ನೀಡುವ ಪ್ರಶಸ್ತಿಯನ್ನು ಪಡೆಯದಿರಲು ನಿರ್ಧರಿಸಿದ್ದೆನೆ ಎಂದು ತಿಳಿಸಿದ್ದಾರೆ.
ಕಲೆಯಲ್ಲಿ ತೊಡಗಿರುವ ಅನೇಕ ಅರ್ಹ ನಟರಿದ್ದಾರೆ. ಈ ಪ್ರತಿಷ್ಠಿತ ಮನ್ನಣೆಯನ್ನು ನಾನು ಶ್ಲಾಘಿಸುತ್ತೆನೆ. ಆದರೆ ಈ ಪ್ರಶಸ್ತಿಯನ್ನು ನಾನು ಸ್ವೀಕರಿಸುವುದಕ್ಕಿಂತ, ಅರ್ಹ ಒಬ್ಬರು ಪ್ರಶಸ್ತಿ ಪಡೆಯುವುದನ್ನು ನೋಡುವುದು ನನಗೆ ಸಂತೋಷ ನೀಡುತ್ತದೆ. ಜನರನ್ನು ರಂಜಿಸುವ ನನ್ನ ಸಿನಿಮಾದ ಕೆಲಸ ಯಾವಾಗಲೂ ಪ್ರಶಸ್ತಿಗಳ ನಿರೀಕ್ಷೆಯಿಲ್ಲದೆ ಸಾಗುತ್ತಾ ಬಂದಿದೆ. ತೀರ್ಪುಗಾರರ ಈ ಪ್ರಶಂಸೆಯು ಸಿನಿಮಾದಲ್ಲಿ ಇನ್ನಷ್ಟು ಶ್ರೇಷ್ಠವಾಗಿ ಶ್ರಮಿಸುವುದನ್ನು ಮುಂದುವರೆಸಲು ಗಮನಾರ್ಹ ಉತ್ತೇಜನ ನೀಡುತ್ತದೆ ಎಂದರು.
2019ನೇ ಸಾಲಿನ ವಾರ್ಷಿಕ ಚಲಚಿತ್ರ ಪ್ರಶಸ್ತಿಯ ಅತ್ಯುತ್ತಮ ನಟ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಪ್ರತಿಯೊಬ್ಬ ತೀರ್ಪುಗಾರ ಸದಸ್ಯರಿಗೂ ನಾನು ಕೃತಜ್ಞನಾಗಿದ್ದೆನೆ. ಏಕೆಂದರೆ ಈ ಮನ್ನಣೆಯು ಸ್ವತಃ ನನ್ನ ಪ್ರತಿಫಲವಾಗಿದೆ. ನನ್ನ ನಿರ್ಧಾರದಿಂದ ತೀರ್ಪುಗಾರರು ಮತ್ತು ರಾಜ್ಯ ಸರ್ಕಾರಕ್ಕೆ ನೋವುಂಟಾಗುವುದಾದರೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೆನೆ. ನೀವು ನನ್ನ ತೀರ್ಮಾನವನ್ನು ಗೌರವಿಸುತ್ತಿರಿ, ಆಯ್ಕೆ ಮಾಡಿದ ಹಾದಿಯಲ್ಲಿ ನಾನು ಸಾಗಲು ಬೆಂಬಲಿಸುತ್ತಿರಿ ಎಂದು ನಂಬುತ್ತಿದ್ದೆನೆ.
ನನ್ನ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿಗೆ ಪರಿಗಣಿಸಿದ್ದಕ್ಕಾಗಿ ತೀರ್ಪುಗಾರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಧನ್ಯವಾದ ಹೇಳುತ್ತೆನೆ ಎಂದು ಕಿಚ್ಚ ಸುದೀಪ ಬರೆದುಕೊಂಡಿದ್ದಾರೆ.