ಬಿಗ್ ಬಾಸ್ ಕನ್ನಡ 11ರ ವಿನ್ನರ್ ಆಗಿ ಹನುಮಂತ ಹೊರಹೊಮ್ಮಿದ್ದಾರೆ. ಟ್ರೋಫಿ ಗೆದ್ದ ಖುಷಿಯಲ್ಲಿ ಕಿಚ್ಚ ಸುದೀಪ್ ಅವರ ಕಾಲಿಗೆ ಬಿದ್ದು ಹಳ್ಳಿ ಹೈದ ಆಶೀರ್ವಾದ ಪಡೆದಿದ್ದಾರೆ.
ಬಿಗ್ ಬಾಸ್ ಫಿನಾಲೆ ಕೊನೆ ಹಂತ ರೋಚಕತೆಯಿಂದ ಕೂಡಿತ್ತು. ಯಾರು ವಿನ್ನರ್ ಆಗ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಸುದೀಪ್ ಬಲಭಾಗದಲ್ಲಿ ಹನುಮಂತ ಹಾಗೂ ಎಡ ಭಾಗದಲ್ಲಿ ತ್ರಿವಿಕ್ರಮ್ ನಿಂತಿದ್ದರು.
ಸುದೀಪ್ ಅವರು ಹನುಮಂತನ ಕೈ ಎತ್ತುವ ಮೂಲಕ ವಿನ್ನರ್ ಎಂದು ಘೋಷಿಸಿದರು. ಗೆದ್ದ ಖುಷಿಯಲ್ಲಿ ಹನುಮಂತ, ಸುದೀಪ್ ಕಾಲಿಗೆ ಬಿದ್ದು ನಮಸ್ಕರಿಸಿದರು. ಇತ್ತ ಹನುಮಂತನ ಫ್ಯಾನ್ಸ್ ಸಂಭ್ರಮಾಚರಣೆ ಮಾಡಿದರು.
ಬಿಗ್ ಬಾಸ್ ಸೀಸನ್ 11ರ ಟ್ರೋಫಿ ಎತ್ತಿದ ಹನುಮಂತನಿಗೆ ಐದೂವರೆ ಕೋಟಿ ಕನ್ನಡಿಗರ ಆಶೀರ್ವಾದ ಸಿಕ್ಕಿದೆ. ಬಿಗ್ ಬಾಸ್ ಶುರುವಾದ ಹದಿನೈದು ದಿನಗಳ ನಂತರ ವೈಲ್ಡ್ ಕಾರ್ಡ್ ಮೂಲಕ ಹನುಮಂತ ಎಂಟ್ರಿ ಕೊಟ್ಟಿದ್ದರು.
ಕನ್ನಡದ ಬಿಗ್ ಬಾಸ್ ಇತಿಹಾಸದಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ವಿನ್ನರ್ ಆಗಿದ್ದು ಇದೆ ಮೊದಲು. ಈಗ ಹನುಮಂತ 50 ಲಕ್ಷದ ಒಡೆಯನಾಗಿದ್ದಾರೆ. ಜವಾರಿ ಹೈದ ಭಾರಿ ವೋಟ್ ಗಳಿಸಿ ದಾಖಲೆ ಸೃಷ್ಟಿಸಿದ್ದಾರೆ.