ವಾಚ್​​ಮನ್​​ಗೆ ಜಾಕ್​ಪಾಟ್: ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ 60 ವರ್ಷದ ವೃದ್ಧ

ಸುದ್ದಿ ಸಂಗ್ರಹ ವಿಶೇಷ

ಕೆಲಸ ಮಾಡಿ ಗಳಿಸುತ್ತಿದ್ದ ಹಣದಲ್ಲಿ ಮನೆಗೆ ಕಳುಹಿಸಿ ಸ್ವಲ್ಪ ಹಣದಲ್ಲಿ ಲಾಟರಿ ಖರೀದಿ ಮಾಡುತ್ತಿದ್ದರಂತೆ. ಇತ್ತೀಚೆಗೆ ನಡೆದ ಹೊಸ ವರ್ಷದ ಬಿಗ್ ಟಿಕೆಟ್ ಗ್ರ್ಯಾಂಡ್ ಪ್ರೈಸ್ ಲಾಟರಿ ಟಿಕೆಟ್ ಖರೀದಿ ಮಾಡಿದ್ದರಂತೆ. ಸದ್ಯ ಈ ಲಾಟರಿಯ ಲಕ್ಕಿ ಟಿಕೆಟ್ ನಂಬರ್ ಘೋಷಣೆ ಮಾಡಿದ್ದು, ಡ್ರಾದಲ್ಲಿ ರಾಜಮಲಯ್ಯ ಅವರಿಗೆ ಮಿಲಿಯನ್ ದಿರ್ಹಮ್ (ಯುಎಇ ಹಣ) ಗೆದ್ದಿದ್ದಾರೆ.

ಅದೃಷ್ಟ ಯಾವಾಗ ? ಹೇಗೆ ? ಎಲ್ಲಿಂದ ಬರುತ್ತದೆ ಎಂಬುದು ನಮಗೆ ತಿಳಿಯೊದಿಲ್ಲ. ಅದೃಷ್ಟ ಹಾಗೆ ಬಂದರೆ ರಾತ್ರೋರಾತ್ರಿ ಬದುಕು ಬದಲಾಯಿಸುತ್ತದೆ. ಹಾಗೆ ಬದುಕನ್ನು ಬದಲಾಯಿಸಿಕೊಂಡವರು ಅನೇಕರಿದ್ದಾರೆ. ಇತ್ತೀಚೆಗಷ್ಟೇ ಹೈದರಾಬಾದ್ ಮೂಲಕ ವಾಚ್ ಮನ್’ಗೆ ಅದೃಷ್ಟ ಒಲಿದು ಬಂದಿದೆ. ಇದರೊಂದಿಗೆ ಆತ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ. ಏನಪ್ಪಾ ವಿಚಾರ ಅಂತ ನೋಡುವವರಾದರೆ, ರಾಜಮಲಯ್ಯ ಹೈದರಾಬಾದ್ ನಗರದ ಬಡ ಕುಟುಂಬಕ್ಕೆ ಸೇರಿದವರು. ಬಾಲ್ಯದಿಂದಲೂ ಕಷ್ಟಗಳನ್ನು ನೋಡುತ್ತಾ ಬೆಳೆದವರು. ಮದುವೆಯ ನಂತರ ಅವರ ಕಷ್ಟಗಳು ದುಪ್ಪಟ್ಟಾಯಿತು. ಬಡತನ, ಮದುವೆ ಹಾಗೂ ಹೆಂಡತಿ ಮತ್ತು ಮಕ್ಕಳ ಜೊತೆಗೆ ಕುಟುಂಬದ ಪೋಷಣೆ ಅವರಿಗೆ ಭಾರೀ ಹೊರೆಯಾಗಿತ್ತು.

ಇದರೊಂದಿಗೆ ಹೈದರಾಬಾದ್’ನಲ್ಲಿ ಕೂಲಿ ಕಾರ್ಮಿಕನಾಗಿದ್ದ ರಾಜಮಲಯ್ಯ, ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಸಂಸಾರ ನಡೆಸುವುದು ಕಷ್ಟವಾಯಿತ್ತು. ತನ್ನ ಕುಟುಂಬಕ್ಕೆ ಉತ್ತಮ ಜೀವನ ನೀಡಲು ಅವರು ಹಣ ಗಳಿಸಲು ನಿರ್ಧರಿಸಿದ್ದರು. ಆ ವೇಳೆ ಸ್ನೇಹಿತನೊಬ್ಬ ನಿನಗೆ ಲಾಟರಿ ಹೊಡೆದರೆ ಜೀವನವೇ ಬದಲಾಗುತ್ತದೆ ಎಂದು ಹೇಳಿದ್ದನಂತೆ. ಒಮ್ಮೆ ಲಾಟರಿ ಗೆದ್ದರೆ ದೊಡ್ಡ ಪ್ರಮಾಣದಲ್ಲಿ ಹಣ ಸಿಗುತ್ತದೆ ಎಂದುಕೊಂಡಿದ್ದ ರಾಜಮಲಯ್ಯ, ಕಳೆದ 30 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಾ ಬಂದಿದ್ದರಂತೆ. ಮಕ್ಕಳು ದೊಡ್ಡವರಾಗುತ್ತಿದ್ದಂತೆ ಕುಟುಂಬ ನಿರ್ವಹಣೆಗೆ ದುಬೈ ಹೋಗಿ ಕೆಲಸ ಮಾಡಲು ಮುಂದಾಗಿದ್ದರಂತೆ.

ಅಂದುಕೊಂಡಂತೆ ಪಾಸ್ ಪೋರ್ಟ್ ಪಡೆದುಕೊಂಡು ರಾಜಮಲಯ್ಯ ದುಬೈ ತೆರಳಿ ಕೆಲಸ ಮಾಡಲು ಪ್ರಾರಂಭಿಸಿದ್ದನಂತೆ. ಅಲ್ಲಿ ಅವರು ದುಬೈ ಶೇಖ್‌ನ ಮನೆಯೊಂದರಲ್ಲಿ ವಾಚ್ ಮನ್ ಆಗಿ ಕೆಲಸಕ್ಕೆ ಸೇರಿದ್ದರಂತೆ. ಆದರೆ ದುಬೈ ತೆರಳಿದ ಬಳಿಕವೂ ರಾಜಮಲಯ್ಯ ಲಾಟ್ರಿ ಟಿಕೆಟ್ ಖರೀದಿ ಮಾಡುವದನ್ನು ಮಿಸ್ ಮಾಡಲಿಲ್ಲವಂತೆ.

ಕೆಲಸ ಮಾಡಿ ಗಳಿಸಿದ ಹಣದಲ್ಲಿ ಮನೆಗೆ ಕಳುಹಿಸಿ ಸ್ವಲ್ಪ ಹಣದಲ್ಲಿ ಲಾಟರಿ ಖರೀದಿ ಮಾಡುತ್ತಿದ್ದರಂತೆ. ಇತ್ತೀಚೆಗೆ ನಡೆದ ಹೊಸ ವರ್ಷದ ಬಿಗ್ ಟಿಕೆಟ್ ಗ್ರ್ಯಾಂಡ್ ಪ್ರೈಸ್ ಲಾಟರಿ ಟಿಕೆಟ್ ಖರೀದಿ ಮಾಡಿದ್ದರಂತೆ. ಸದ್ಯ ಈ ಲಾಟರಿಯ ಲಕ್ಕಿ ಟಿಕೆಟ್ ನಂಬರ್ ಘೋಷಣೆ ಮಾಡಿದ್ದು, ಡ್ರಾದಲ್ಲಿ ರಾಜಮಲಯ್ಯ ಅವರಿಗೆ ಮಿಲಿಯನ್ ದಿರ್ಹಮ್ (ಯುಎಇ ಹಣ) ಗೆದ್ದಿದ್ದಾರೆ. ಒಂದು ಮಿಲಿಯನ್ ದಿರ್ಹಮ್ ಎಂದರೆ ಭಾರತದ ಕರೆನ್ಸಿಯಲ್ಲಿ 2.32 ಕೋಟಿ ರೂಪಾಯಿ ಆಗಲಿದೆ. ಸದ್ಯ ರಾಜಮಲಯ್ಯ ಅವರಿಗೆ 60 ವರ್ಷ ವಯಸ್ಸಾಗಿದ್ದು, ತನಗೆ ಲಾಟರಿ ಟಿಕೆಟ್ ಖರೀದಿ ಮಾಡಲು ಸಮಯ ಮಾಡಿದವರಿಗೆ ಹಾಗೂ ತನ್ನ ಕುಟುಂಬದ ಭವಿಷ್ಯದ ಭದ್ರತೆಗೆ ಬಳಕೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *