‘ಬಿಗ್ ಬಾಸ್ ಕನ್ನಡ ಸೀಸನ್ 11’ ಗ್ರ್ಯಾಂಡ್ ಫಿನಾಲೆ ಮುಕ್ತಾಯವಾಗಿದೆ, ವಿಜೇತರಾಗಿ ಕುರಿಗಾಹಿ ಹನುಮಂತ ಲಮಾಣಿ ಹೊರಹೊಮ್ಮಿದ್ದಾರೆ, ಬಿಬಿಕೆ 11 ವಿನ್ನರ್ ಟ್ರೋಫಿ ಹಳ್ಳಿಹಕ್ಕಿ ಹನುಮಂತ ಲಮಾಣಿ ಪಾಲಾಗಿದೆ.
ಹನುಮಂತ ಲಮಾಣಿಗೆ ಸಿಕ್ಕ ಮತಗಳು ಎಷ್ಟು ?
‘ಬಿಗ್ ಬಾಸ್ ಕನ್ನಡ 11’ರ ವಿನ್ನರ್ ಆದ ಹನುಮಂತ ಲಮಾಣಿಗೆ ಒಟ್ಟು 5,23,89,318 ವೋಟ್ಸ್ ಬಿದ್ದಿವೆ. ‘ಬಿಗ್ ಬಾಸ್ ಕನ್ನಡ’ ಇತಿಹಾಸದ ಇಷ್ಟೂ ಸೀಸನ್ಗಳಲ್ಲಿ ವಿನ್ನರ್ಗೆ ಇಷ್ಟೊಂದು ವೋಟ್ಸ್ ಬಿದ್ದಿರೋದು ಇದೆ ಮೊದಲು.
ಹೊಸ ಇತಿಹಾಸ ಸೃಷ್ಟಿಸಿದ ಹನುಮಂತ ಲಮಾಣಿ ‘ಬಿಗ್ ಬಾಸ್’ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದವರು ಹನುಮಂತ ಲಮಾಣಿ. ‘ಬಿಗ್ ಬಾಸ್ ಕನ್ನಡ’ ಇತಿಹಾಸದಲ್ಲಿಯೇ ಓರ್ವ ವೈಲ್ಡ್ ಕಾರ್ಡ್ ಸ್ಪರ್ಧಿ ವಿನ್ನರ್ ಆಗಿರೋದು ಇದೇ ಮೊದಲು, ಆ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ ಹನುಮಂತ ಲಮಾಣಿ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದರೂ ವಿನ್ನರ್ ಆಗಬಹುದು ಎಂದು ಹನುಮಂತ ಲಮಾಣಿ ತೋರಿಸಿಕೊಟ್ಟಿದ್ದಾರೆ.
ರನ್ನರ್ ಅಪ್ ತ್ರಿವಿಕ್ರಮ್
‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಮೊದಲ ದಿನದಿಂದಲೂ ಇದ್ದು ಎಲ್ಲಾ ಪ್ರೆಶರ್ಗಳನ್ನ ಹ್ಯಾಂಡಲ್ ಮಾಡಿ, ಸವಾಲುಗಳನ್ನ ಎದುರಿಸಿದವರು ತ್ರಿವಿಕ್ರಮ್. ಟಾಸ್ಕ್ಗಳಲ್ಲಿ ಉತ್ತಮ ಪರ್ಫಾಮೆನ್ಸ್ ನೀಡುತ್ತಿದ್ದ ತ್ರಿವಿಕ್ರಮ್ ವಿನ್ನರ್ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ತ್ರಿವಿಕ್ರಮ್ಗೆ ಹೋಲಿಸಿದರೆ ಹನುಮಂತಗೆ ಹೆಚ್ಚು ವೋಟ್ಸ್ ಲಭಿಸಿವೆ. ಹೀಗಾಗಿ ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದಾರೆ. ಅಂದ್ಹಾಗೆ ರನ್ನರ್ ಅಪ್ ತ್ರಿವಿಕ್ರಮ್ಗೆ 2 ಕೋಟಿಗೂ ಅಧಿಕ ವೋಟ್ಸ್ ಬಿದ್ದಿವೆ
ತಾವು ವಿನ್ನರ್ ಆಗಬೇಕು, ವಿನ್ನರ್ ಪಟ್ಟದಿಂದ ತಮಗಿನ್ನೂ ಹೆಚ್ಚು ಅವಕಾಶಗಳು ಸಿಗಬೇಕು ಅನ್ನೋದು ತ್ರಿವಿಕ್ರಮ್ ಕನಸಾಗಿತ್ತು. ಆದರೆ ವಿನ್ನರ್ ಆಗುವ ತ್ರಿವಿಕ್ರಮ್ ಕನಸು ಕಮರಿದೆ. ರೆಕ್ಕೆಯ ಟ್ರೋಫಿ ಪಡೆದು ಹಾರಾಡಲು ಆಸೆ ಪಡುತ್ತಿದ್ದ ತ್ರಿವಿಕ್ರಮ್ ಕನಸು ನುಚ್ಚು ನೂರಾಗಿದೆ.
ಬಹುಮಾನ ಎಷ್ಟು ?
‘ಬಿಗ್ ಬಾಸ್ ಕನ್ನಡ 11’ರ ವಿನ್ನರ್ ಆದ ಹನುಮಂತ ಲಮಾಣಿಗೆ ವಿನ್ನರ್ ಟ್ರೋಫಿ ಜೊತೆಗೆ 50 ಲಕ್ಷ ರೂ ಬಹುಮಾನ ಹಣ ಲಭಿಸಿದೆ. ರನ್ನರ್ ಅಪ್ ಆದ ತ್ರಿವಿಕ್ರಮ್ಗೆ 15 ಲಕ್ಷ ರೂ ನಗದು ಬಹುಮಾನ ಲಭಿಸಿದೆ.
ಹಿರಿಯ ನಟ ಅನಂತನಾಗ್ ಬಗ್ಗೆ ಸುದೀಪ್ ಮಾತು
ಕನ್ನಡ ಚಿತ್ರರಂಗದ ಹಿರಿಯ ನಟ ಅನಂತನಾಗ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಘೋಷಣೆ ಆಗಿದ್ದು, ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ಅನಂತನಾಗ್ ಅವರಿಗೆ ಶುಭ ಹಾರೈಸಿದ್ದಾರೆ.
ಅಮ್ಮನ ನೆನೆದು ಕಿಚ್ಚ ಸುದೀಪ್ ಭಾವುಕ
ಕಟ್ಟ ಕಡೆಯ ಬಿಗ್ ಬಾಸ್ ಶೋ ನಡೆಸಿಕೊಡಲು ಕಿಚ್ಚ ಸುದೀಪ್ ಅವರು ಸ್ವಲ್ಪ ಎಮೋಷನಲ್ ಆಗಿದ್ದಾರೆ. ಅಮ್ಮನ ನೆನೆದು ಕಿಚ್ಚ ಸುದೀಪ್ ಕಣ್ಣಿರು ಹಾಕಿದ್ದಾರೆ.