ಸುದ್ದಿ ಸಂಗ್ರಹ

ಫೋಟೋಸ್: 01. ಎ.ಕೆ.ರಾಮೇಶ್ವರ (ಕವಿ)

ಗುರುಶಾಂತಯ್ಯ ಭಂಟನೂರು (ಪ್ರಶಸ್ತಿ)

ಹ.ಮ.ಪೂಜಾರ ಸಿಂದಗಿ (ಪುರಸ್ಕಾರ)


ಮಕ್ಕಳ ಸಾಹಿತ್ಯದ ಹಿರಿಯ ಕವಿಗೆ ಆತ್ಮೀಯ ಅಭಿನಂದನೆ


ಕಲಬುರಗಿ, ಸೆ.14 – ಕನ್ನಡ ಸಾಹಿತ್ಯಲೋಕದಲ್ಲಿ ಮಕ್ಕಳ ಕವಿಯೆಂದೇ ಪ್ರಖ್ಯಾತಿ ಪಡೆದ ಹಾಗೂ 93 ರ ಹಿರಿಯ ಚೇತನ ಶ್ರೀ ಎ.ಕೆ.ರಾಮೇಶ್ವರ ಅವರಿಗೆ ಆತ್ಮೀಯವಾದ ಹಾಗೂ ಬೃಹತ್ ಅಭಿನಂದನಾ ಸಮಾರಂಭ ಹಾಗೂ ಶ್ರೀ ಎ.ಕೆ.ರಾಮೇಶ್ವರ ಸಾಹಿತ್ಯ-ಸಾಂಸ್ಕೃತಿಕ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಇದೇ ಸೆ.27 ರಂದು ಬೆಳಿಗ್ಗೆ 10.15 ಕ್ಕೆ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ನಡೆಯಲಿರುವ ಈ ಸಮಾರಂಭದ ಸಾನಿಧ್ಯವನ್ನು ಸೇಡಂನ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯ ಶ್ರೀ ಸದಾಶಿವ ಮಹಾಸ್ವಾಮಿಗಳು ವಹಿಸುವರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಅವರು ಸಮಾರಂಭವನ್ನು ಉದ್ಘಾಟಿಸುವರು.

ಸಮಾರಂಭದ ಅಧ್ಯಕ್ಷತೆಯನ್ನು ವಿಕಾಸ ಅಕಾಡೆಮಿ ಕಲಬುರಗಿ ಸಂರಕ್ಷಕರು ಹಾಗೂ ರಾಜ್ಯಸಭೆಯ ಮಾಜಿ ಸದಸ್ಯರಾದ ಡಾ.ಬಸವರಾಜ ಪಾಟೀಲ ಸೇಡಂ ವಹಿಸಿ, `ಕನ್ನಡದಲ್ಲಿ ಮಕ್ಕಳ ಸಾಹಿತ್ಯ’ ಗ್ರಂಥವನ್ನು ಲೋಕಾರ್ಪಣೆ ಮಾಡುವರು.
ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮುಖ್ಯ ಅತಿಥಿಗಳಾಗಿರುವರು. ವಿಜಯಪುರದ ಮಕ್ಕಳ ಸಾಹಿತಿ ಫ.ಗು.ಸಿದ್ದಾಪುರ ಅವರು ಗ್ರಂಥ ಕುರಿತು ಮಾತನಾಡುವರು. ಎ.ಕೆ.ರಾಮೇಶ್ವರ ಅವರಿಗೆ ಅಭಿನಂದಿಸುವ ಹಿನ್ನೆಲೆಯಲ್ಲಿ ಅಭಿನಂದನಾ ನುಡಿಗಳನ್ನು ಸಾಹಿತಿ-ಪತ್ರಕರ್ತ ಮಹಿಪಾಲರೆಡ್ಡಿ ಸೇಡಂ ಮಾತನಾಡುವರು. ಪ್ರಕಾಶಕ ಸಿವಿಜಿ ಚಂದ್ರು ಬೆಂಗಳೂರು ಉಪಸ್ಥಿತರಿರುವರು. ಮಧ್ಯಾಹ್ನ 2-15 ರಿಂದ ಸುಮಾರು 25 ಶಾಲಾ ಮಕ್ಕಳೊಂದಿಗೆ ಮಕ್ಕಳ ಕವಿ ಎ.ಕೆ.ರಾಮೇಶ್ವರ ಅವರು ಸಂವಾದ ನಡೆಸುವರು.

    ಬಾಕ್ಸ್
    ಶ್ರೀ ಎ.ಕೆ.ರಾಮೇಶ್ವರ ಸಾಹಿತ್ಯ-ಸಾಂಸ್ಕೃತಿಕ ಪ್ರತಿಷ್ಠಾನ ಉದ್ಘಾಟನೆ
    ಮಕ್ಕಳ ಸಾಹಿತ್ಯಲೋಕದ ದಿಗ್ಗಜ, ಸುಮಾರು 50 ವರ್ಷಕ್ಕಿಂತ ಮೇಲ್ಪಟ್ಟು ಕಲಬುರಗಿ ನೆಲದಲ್ಲಿದ್ದುಕೊಂಡು, ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಕವಿಯೆಂದೇ ಪ್ರಖ್ಯಾತಿ ಪಡೆದ ಎ.ಕೆ.ರಾಮೇಶ್ವರ ಅವರ ಹೆಸರಿನಲ್ಲಿ ಸಾಹಿತ್ಯ-ಸಾಂಸ್ಕೃತಿಕ ಪ್ರತಿಷ್ಠಾನವೊಂದು ನೋಂದಣಿಯಾಗಿದ್ದು, ಅದರ ಉದ್ಘಾಟನಾ ಸಮಾರಂಭವು ಸೆ.27 ರಂದು ಮಧ್ಯಾಹ್ನ 3.15 ಕ್ಕೆ ವಿಶ್ವೇಶ್ವರಯ್ಯ ಭವನದಲ್ಲಿ ನಡೆಯಲಿದೆ.
    ಹೊನ್ನಕಿರಣಗಿಯ ಶ್ರೀ ಚಂದ್ರಗುAಡ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಬೆಳಗಾವಿಯ ಹಿರಿಯ ಲೇಖಕರಾದ ಡಾ.ರಾಮಕೃಷ್ಣ ಮರಾಠೆ ಅವರು ಸಮಾರಂಭವನ್ನು ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡುವರು. ಪ್ರತಿಷ್ಠಾನದ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಅಧ್ಯಕ್ಷತೆ ವಹಿಸುವರು. ಎ.ಕೆ.ರಾಮೇಶ್ವರ ಅವರು ಬರೆದ ಮಕ್ಕಳ ಪದ್ಯಗಳ `ಗೀತ ಗಾಯನ’ ನಡೆಯಲಿದೆ.

    ಬಾಕ್ಸ
    ಮಕ್ಕಳ ಸಾಹಿತ್ಯದ ಸಾಧಕರಿಗೆ ನಂದಿಕೋಲು’ ಪ್ರಶಸ್ತಿ ಇದೇ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯಲೋಕದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗುರುಶಾಂತಯ್ಯ ಭಂಟನೂರು ಅವರಿಗೆ ಶ್ರೀ ಎ.ಕೆ.ರಾಮೇಶ್ವರ ಮಕ್ಕಳ ಸಾಹಿತ್ಯ `ನಂದಿಕೋಲು’ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುವುದು. 5000 ರೂ.ಗಳ ನಗದು ಪುರಸ್ಕಾರ ಜತೆಗೆ ಸನ್ಮಾನ ಒಳಗೊಂಡಿರುತ್ತದೆ.
    ಇನ್ನೋರ್ವ ಹಿರಿಯ ಮಕ್ಕಳ ಕವಿ ಸಿಂದಗಿಯ ಹ.ಮ.ಪೂಜಾರ ಅವರಿಗೆ ಶ್ರೀ ಎ.ಕೆ.ರಾಮೇಶ್ವರ ಸಾಹಿತ್ಯ ಗೌರವ ಪುರಸ್ಕಾರ ನೀಡಿ ಗೌರವಿಸಲಾಗುವುದು. ಇತ್ತೀಚೆಗೆ ಪ್ರತಿಷ್ಠಾನದ ಪದಾಧಿಕಾರಿಗಳಾದ ಡಾ.ಶಿಲ್ಪಾ ಭಂಡಾರಿ, ಸಂಕೇತ್, ಬಿ.ಎಸ್.ದೇಸಾಯಿ, ಸಿದ್ದಪ್ಪ ತಳ್ಳಳ್ಳಿ, ಶಾಂತಾ ಪಸ್ತಾಪೂರ, ಡಾ.ಲಕ್ಷಿö್ಮÃ ಶಂಕರ ಜೋಶಿ, ಡಾ.ಶೈಲಜಾ ಬಾಗೇವಾಡಿ, ಪರವಿನ್ ಸುಲ್ತಾನ, ಅಪ್ಪಾಸಾಹೇಬ ತೀರ್ಥೆ, ಕಿರಣ್ ಪಾಟೀಲ, ವೀರೇಶ ಕಂದಗಲ್, ಬಸವರಾಜ ಐನೋಳಿ, ರೇಣುಕಾ ಡಾಂಗೆ, ಚೈತನ್ಯ ಅವರು ಭಾಗವಹಿಸಿ ಪ್ರಶಸ್ತಿಗೆ ಇಬ್ಬರು ಸಾಹಿತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

    Leave a Reply

    Your email address will not be published. Required fields are marked *