ಬಿಗ್‌ಬಾಸ್‌ ಸ್ಪರ್ಧಿ ಓಂ ಪ್ರಕಾಶ್ ರಾವ್ ಆಸ್ಪತ್ರೆಗೆ ದಾಖಲು

ಸುದ್ದಿ ಸಂಗ್ರಹ

ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರ ಕಂಟೆಸ್ಟಂಟ್‌ ಹಾಗೂ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ದಿಢೀರ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಗ್‌ಬಾಸ್‌ ಮನೆಯಿಂದಲೆ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆ ಓಂ ಪ್ರಕಾಶರಾವ್ ಅವರಿಗೆ ಅಪಘಾತವಾಗಿತ್ತು. ಈ ವೇಳೆ ಅವರ ಕಾಲಿಗೆ ಬಲವಾದ ಪೆಟ್ಟಾಗಿತ್ತು. ಇದೀಗ ಅದೆ ಕಾಲಿನಲ್ಲಿ ಮತ್ತೆ ಊತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಿಗ್ ಬಾಸ್‌ ಟೀಮ್ ಮೂಲಗಳು ತಿಳಿಸಿವೆ.

ಬಿಗ್‌ಬಾಸ್ ಮನೆಯಲ್ಲಿ ವಿಶ್ರಾಂತಿ ರಹಿತವಾಗಿ ಟಾಸ್ಕ್ ನಲ್ಲಿ ಭಾಗಿಯಾದ ಪರಿಣಾಮ ಕಾಲಿನ ನೋವು ಕಾಣಿಸಿಕೊಂಡಿದೆ. ಹೆಚ್ಚಿನ ಚಿಕಿತ್ಸೆ ಹಾಗೂ ವೈದ್ಯಕೀಯ ತಪಾಸಣೆಗಾಗಿ ಸಿಬ್ಬಂದಿ ಅವರನ್ನ ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿಕಿತ್ಸೆ ಪಡೆದು ಮತ್ತೆ ಬಿಗ್ ಮನೆಗೆ ತೆರಳಲು ಸಿದ್ಧವಿದ್ದಾರೆ ಎನ್ನುತ್ತಿವೆ ಬಿಗ್‌ಬಾಸ್‌ ಟೀಮ್‌ ಮೂಲಗಳು.

ಆದರೆ ಓಂ ಪ್ರಕಾಶರಾವ್ ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಅಧಿಕೃತವಾಗಿ ಲಭ್ಯವಾಗಬೇಕಿದೆ.

Leave a Reply

Your email address will not be published. Required fields are marked *