ಮರತೂರ: ಶ್ರೀಶೈಲ ಮಹಾಸ್ವಾಮಿಗಳ ಮೌನಾನುಷ್ಠಾನ

ಸುದ್ದಿ ಸಂಗ್ರಹ ಶಹಾಬಾದ್ ತಾಲೂಕಿನ ಮರತೂರ ಗ್ರಾಮದ ವಿರಕ್ತ ಮಠದ ಪೀಠಾಧ್ಯಕ್ಷ ಶ್ರೀಶೈಲ ಮಹಾಸ್ವಾಮಿಗಳು ಲೋಕಕಲ್ಯಾಣ ಮತ್ತು ಲಿಂಗೈಕ್ಯ ಗುರುಲಿಂಗ ಶಿವಾಚಾರ್ಯರ ಪುಣ್ಯಸ್ಮರಣೋತ್ಸವ ನಿಮಿತ್ಯ ಒಂದು ತಿಂಗಳ ಕಾಲ ಮೌನ ಅನುಷ್ಠಾನ ಕೈಗೊಂಡಿದ್ದಾರೆ, ಕಲಬುರಗಿಯ ಮುಕ್ತಂಪುರಿನ ಗುರುಬಸವೇಶ್ವರ ಬೃಹನ್ಮಠದ ಶಿವಾನಂದ ಮಹಾಸ್ವಾಮಿಗಳ ಪಾದಪೂಜೆ ಮಾಡುವ ಮೂಲಕ ಮೌನ ಅನುಷ್ಠಾನ ಪ್ರಾರಂಭಿಸಿದರು. ಇದೆ ಸಂದರ್ಭದಲ್ಲಿ ಶಿರೋಳಿಯ ಶಿವಬಸವ ಮಹಾಸ್ವಾಮಿಗಳು ಉಪಸ್ಥಿತರಿದ್ದರು. ಅ.7 ರಂದು ಮೌನ ಅನುಷ್ಠಾನ ಮಂಗಲ ಸಮಾರಂಭ ನಡೆಯಲಿದೆ, ನಾಡಿನ ಪೂಜ್ಯರು, ವಿವಿಧ ರಾಜಕೀಯ ಪಕ್ಷದ ಮುಖಂಡರು […]

Continue Reading

ಸಮೀಕ್ಷೆಯಲ್ಲಿ ಕಬ್ಬಲಿಗ, ಕೋಲಿ ಎಂದು ಬರೆಯಿಸಲು ಸಮಾಜದಿಂದ ಕರೆ

ಚಿತ್ತಾಪುರ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಕೋಲಿ, ಕಬ್ಬಲಿಗ ಜಾತಿಯವರು ಕಡ್ಡಾಯವಾಗಿ ಜಾತಿ ಕಬ್ಬಲಿಗ ಎಂದು, ಉಪ ಜಾತಿ ಕೋಲಿ ಎಂದು ಬರೆಯಿಸಬೇಕು ಎಂದು ತಾಲೂಕು ಕೋಲಿ ಸಮಾಜದ ಅಧ್ಯಕ್ಷ ನಿಂಗಣ್ಣಾ ಹೆಗಲೇರಿ ಮತ್ತು ಗೌರವಾಧ್ಯಕ್ಷ ರಾಮಲಿಂಗ ಬಾನರ ಸಮಾಜದ ಜನರಿಗೆ ಕರೆ ನೀಡಿದ್ದಾರೆ.‌ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಮೀಕ್ಷೆ ಮಾಡಲು ಮನೆ ಮನೆಗೆ ಸಮೀಕ್ಷೆದಾರರು ಬಂದಾಗ ಧರ್ಮ ಕೇಳಿದಾಗ ಹಿಂದೂ ಎಂದು, ಜಾತಿ ಕೇಳಿದಾಗ ಕಬ್ಬಲಿಗ […]

Continue Reading

ಧಾರಾಕಾರ ಮಳೆಗೆ ಮನೆ ನೆಲಸಮ: ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರು

ಚಿತ್ತಾಪುರ: ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದ ಮನೆಯೊಂದು ಸಂಪೂರ್ಣವಾಗಿ ನೆಲಕ್ಕುರುಳಿದ ಘಟನೆ ತಾಲೂಕಿನ ಸುಗೂರ (ಎನ್) ಗ್ರಾಮದಲ್ಲಿ ನಡೆದಿದೆ. ಕಳೆದೆರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಸೆ.22 ರಂದು ಸೋಮುವಾರ ತಡರಾತ್ರಿ ಸುರಿದ ಭಾರಿ ಮಳೆಯ ಪರಿಣಾಮ ಉಮಾದೇವಿ ಗುರಯ್ಯಾಸ್ವಾಮಿ ಮಠಪತಿ ಅವರ ಮನೆಯ ಒಂದು ಕೋಣೆ ಸಂಪೂರ್ಣವಾಗಿ ನೆಲಕ್ಕುರುಳಿದೆ. ತಾಯಿ ಮತ್ತು ಇಬ್ಬರು ಮಕ್ಕಳು ಮನೆಯ ಇನ್ನೊಂದು ಕೋಣೆಯಲ್ಲಿ ಮಲಗಿರುವುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ಸುದ್ದಿ ತಿಳಿಯುತ್ತಲೆ ಊರಿನ ಗ್ರಾಮಸ್ಥರು ಭೇಟಿ ನೀಡಿ ಧೈರ್ಯ ಹೇಳಿದರು. […]

Continue Reading

ಸರ್ಕಾರಿ ನೌಕರರು, ಕುಟುಂಬದ ಸದಸ್ಯರಿಗೆ ಆರೋಗ್ಯ ಸಂಜೀವಿನಿ ಯೋಜನೆ ಜಾರಿ

ಬೆಂಗಳೂರು: ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಸರ್ಕಾರಿ ನೌಕರರು ಮತ್ತು ಕುಟುಂಬದ ಸದಸ್ಯರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಲಾಗಿದೆ. ಅಕ್ಟೋಬರ್ 1 ರಿಂದ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಬರಲಿದೆ. ಬಹಳ ವರ್ಷಗಳಿಂದ ಈ ಯೋಜನೆ ಮರುಜಾರಿಗೆ ಒತ್ತಾಯ ಕೇಳಿಬಂದಿತ್ತು. ಈ ಯೋಜನೆಯಡಿ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಸಿಗಲಿದೆ. ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿಯೂ ನಗದು ರಹಿತ ಉಚಿತ ಚಿಕಿತ್ಸೆ ಸಿಗಲಿದೆ.

Continue Reading

ವಿಮಾನದ ಲ್ಯಾಂಡಿಂಗ್ ಗೇರ್ ಬಳಿ ಅಡಗಿ 2 ಗಂಟೆ ಪ್ರಯಾಣಿಸಿ ಭಾರತಕ್ಕೆ ಬಂದ ಅಫ್ಘಾನ್‌ ಬಾಲಕ

ನವದೆಹಲಿ: ವಿಮಾನದ ಚಕ್ರ ಇರುವ ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿ ಕುಳಿತು 13 ವರ್ಷದ ಬಾಲಕನೊಬ್ಬ ಅಫ್ಘಾನಿಸ್ತಾನದ ಕಾಬೂಲ್‌ನಿಂದ ದೆಹಲಿಗೆ ಆಗಮಿಸಿದ ಘಟನೆ ನಡೆದಿದೆ. ಭಾನುವಾರ ಬೆಳಿಗ್ಗೆ 11:10 ಕ್ಕೆ ಕಾಬೂಲಿನಿಂದ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲ್ಯಾಂಡಿಂಗ್‌ ಆದ ಕಾಮ್ ಏರ್‌ಲೈನ್ಸ್‌ನಲ್ಲಿ ಬಾಲಕ ಆಗಮಿಸಿದ್ದಾನೆ. ವಿಮಾನ ಲ್ಯಾಂಡ್‌ ಆದ ಬಳಿಕ ಟ್ಯಾಕ್ಸಿ ವೇ ಬಳಿ ಬಾಲಕ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಆತನನ್ನು ವಶಕ್ಕೆ ಪಡೆದು ಟರ್ಮಿನಲ್ -3 ರಲ್ಲಿ ವಿಚಾರಣೆ […]

Continue Reading

ಆಯುರ್ವೇದ ಸಮಗ್ರ ಆರೋಗ್ಯ ಪದ್ದತಿ: ಡಾ.ಸದಾನಂದ ಪಾಟೀಲ

ಕಲಬುರಗಿ: ಸರ್ವ ಕಾಯಿಲೆಗೆ ಮದ್ದನ್ನು ನೀಡುವ ಆಯುರ್ವೇದ ಪದ್ಧತಿ ಸಮಗ್ರ ಆರೋಗ್ಯ ವ್ಯವಸ್ಥೆಯಾಗಿದ್ದು, ಎಲ್ಲರು ಆಯುರ್ವೇದ ಪದ್ಧತಿಯತ್ತ ಮುಖ ಮಾಡಬೇಕಾದದ್ದು ಇಂದಿನ ಅಗತ್ಯವಾಗಿದೆ ಎಂದು ಖ್ಯಾತ ಆಯುರ್ವೇದ ತಜ್ಞ ವೈದ್ಯ ಡಾ.ಸದಾನಂದ ಪಾಟೀಲ ಅಭಿಮತ ವ್ಯಕ್ತಪಡಿಸಿದರು. ನಗರದ ಶಹಾಬಾದ್ ರಿಂಗ್ ರಸ್ತೆಯ ಸಮೀಪದ ಚರಕ ಆಯುರ್ವೇದ ಆಸ್ಪತ್ರೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಜರುಗಿದ ‘10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ’ ಮತ್ತು ‘ಧನ್ವಂತರಿ ಜಯಂತಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಆಧುನಿಕ ಒತ್ತಡ […]

Continue Reading

ಪೌರ ಕಾರ್ಮಿಕರಿಗೆ ಸೇವಾ ಭದ್ರತೆಯ ಸೌಲಭ್ಯಗಳು ದೊರೆಯಲಿ

ಕಲಬುರಗಿ: ಪೌರ ಕಾರ್ಮಿಕರ ಸೇವೆ ಖಾಯಂಗೊಳಿಸುವುದು, ಸೂಕ್ತ ವೇತನ, ಸರ್ಕಾರಿ ಸೌಲಭ್ಯಗಳು ದೊರೆಯಬೇಕು ಎಂದು ಹಿರಿಯ ಪೌರ ಕಾರ್ಮಿಕ ತಾರಾಚಂದ ರಾಠೋಡ ಹೇಳಿದರು. ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿನ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ‘ರಾಜ್ಯ ಪೌರ ಕಾರ್ಮಿಕರ ದಿನಾಚರಣೆ’ಯಲ್ಲಿ ಗೌರವ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಕಸ ವಿಲೇವಾರಿ, ಸ್ವಚ್ಚತೆ ಮಾಡುವ ಕಾರ್ಯ ನಿರ್ವಹಿಸುತ್ತಿರುವ ಕಾಯಕ ಜೀವಿಗಳಾದ ಪೌರ ಕಾರ್ಮಿಕರು ಸ್ವಚ್ಚತೆಯ ರಾಯಭಾರಿಗಳು. ಅವರ […]

Continue Reading

ಕಾಗಿಣಾದಲ್ಲಿ ತಗ್ಗಿದ ಪ್ರವಾಹ: ದಂಡೋತಿ ಸೇತುವೆ ಸಂಚಾರಕ್ಕೆ ಮುಕ್ತ

ಚಿತ್ತಾಪುರ: ತಾಲೂಕಿನ ದಂಡೋತಿ ಗ್ರಾಮದ ಹತ್ತಿರಹರಿಯುತ್ತಿರುವ ಕಾಗಿಣಾ ನದಿಯಲ್ಲಿ ಮಂಗಳವಾರ ಬೆಳಿಗ್ಗೆಪ್ರವಾಹ ಕಡಿಮೆಯಾಗಿ ಕಳೆದ 30 ಗಂಟೆಗಳ ಕಾಲಮುಳುಗಡೆಯಾಗಿದ್ದ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. ಸೇತುವೆ ಮೇಲೆ ದುರಸ್ತಿ ಮಾಡಿದ್ದ ರಸ್ತೆ ಅಲ್ಲಲ್ಲಿ ಪ್ರವಾಹದ ರಭಸಕ್ಕೆ ಕಿತ್ತು ಹೋಗಿದೆ. ವಾಹನಗಳ ಸಂಚಾರ ಇನ್ನೂ ಪ್ರಾರಂಭವಾಗಿಲ್ಲ. ಬೈಕ್, ಕಾರು, ಜೀಪು ಸಂಚಾರಕ್ಕೆ ಸಮಸ್ಯೆಯಿಲ್ಲ. ಸೇತುವೆ ಮೇಲೆಯೆ ಸಿಮೆಂಟ್ ಕಂಬಗಳ ಹತ್ತಿರ ಅಳವಡಿಸಿದ್ದ ಮೊಬೈಲ್ ನೆಟವರ್ಕ್ ಕೇಬಲ್ ವೈ‌ರ್ ಕಿತ್ತು ಹೋಗಿದೆ. ಬಸ್‌ ಸಂಚಾರ ಪ್ರಾರಂಭವಾಗದ ಕಾರಣ ನದಿಯ ಆಚೆಗಿರುವ ಗ್ರಾಮಗಳ […]

Continue Reading

ನವರಾತ್ರಿ ಉತ್ಸವ: ಜಗದಂಬಾ ದೇವಿಯ ಮೂರ್ತಿ ಮೆರವಣಿಗೆ

ಚಿತ್ತಾಪುರ: ಪಟ್ಟಣದ ಸ್ಟೇಷನ್ ತಾಂಡಾದ ಬಂಜಾರ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನವರಾತ್ರಿ ಉತ್ಸವದ ನಿಮಿತ್ಯ ಜಗದಂಬಾ ದೇವಿಯ ಮೂರ್ತಿ ಮೆರವಣಿಗೆ ಜನಸಾಗರದ ಮಧ್ಯೆ ಸೋಮವಾರ ಅದ್ದೂರಿಯಾಗಿ ನಡೆಯಿತು. ಪಟ್ಟಣದ ರೈಲ್ವೆ ಸ್ಟೇಷನ್’ಯಿಂದ ಪ್ರಾರಂಭವಾದ ಜಗದಂಬಾ ದೇವಿ ಮೂರ್ತಿಯ ಭವ್ಯ ಮೆರವಣಿಗೆ ಅಂಬಿಗರ ಚೌಡಯ್ಯ ಭವನ, ಬಸವೇಶ್ವರ ವೃತ್ತ, ಲಾಡ್ಡಿಂಗ್ ಕ್ರಾಸ್, ಅಂಬೇಡ್ಕರ್ ವೃತ್ತ, ಭುವನೇಶ್ವರಿ ವೃತ್ತ, ಜನತಾ ಚೌಕ್, ನಾಗಾವಿ ಚೌಕ್, ಒಂಟಿ ಕಮಾನ್ ಮುಖಾಂತರ ಸ್ಟೇಷನ್ ತಾಂಡಾದ ದೊಡ್ಡ ಸೇವಾಲಾಲ್ ಮಂದಿರದ ಆವರಣದಲ್ಲಿ ಮೂರ್ತಿ ಪ್ರತಿಷ್ಠಾಪನೆ […]

Continue Reading

ಆಲ್ಝೈಮರ್ಸ್ ಕಾಯಿಲೆ ಬಗ್ಗೆ ಜಾಗೃತಿ ಅಗತ್ಯ: ಡಾ.ಅನುಪಮಾ ಕೇಶ್ವಾರ

ಕಲಬುರಗಿ: ಆಲ್ಝೈಮರ್ಸ್ ಕಾಯಿಲೆ ಎಂದರೆ ಮೆದುಳಿನ ನರದ ವ್ಯವಸ್ಥೆಯಲ್ಲಿನ ಅಸ್ವಸ್ಥತೆಯಾಗಿದ್ದು, ಇದು ಕ್ರಮೇಣ ನೆನಪಿನ ಶಕ್ತಿ, ಆಲೋಚನೆ ಮತ್ತು ತಿಳುವಳಿಕೆಯ ಸಾಮರ್ಥ್ಯವನ್ನು ನಾಶಪಡಿಸುತ್ತದೆ. ಇದು ಅಂತಿಮವಾಗಿ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹದಗೆಡಿಸುತ್ತದೆ. ಈ ಕಾಯಿಲೆಗೆ ಪ್ರಸ್ತುತ ಯಾವುದೆ ಚಿಕಿತ್ಸೆ ಇಲ್ಲ. ಆದರೆ ರೋಗ ಲಕ್ಷಣಗಳನ್ನು ನಿರ್ವಹಿಸಲು ಔಷಧಿ ಮತ್ತು ಆರೈಕೆ ಲಭ್ಯವಿದೆ. ಇದರ ಬಗ್ಗೆ ಜಾಗೃತಿ ಅಗತ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು. ನಗರದ ಶೇಖರೋಜಾದಲ್ಲಿರುವ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ […]

Continue Reading