Uncategorized

AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ RSS ನಿಷೇಧಿಸುವ ಹೇಳಿಕೆಗೆ ಶರಣು ಡೋಣಗಾಂವ್ ಬೆಂಬಲ

ಚಿತ್ತಾಪುರ: ಸಮಾಜದಲ್ಲಿ ಧಾರ್ಮಿಕ ಮೂಲಭೂತವಾದ ಬೆಳೆಸುವ ಮೂಲಕ RSS ಈ ಸಮಾಜದಲ್ಲಿ ಭೀತಿಯ ವಾತಾವರಣ ಉಂಟು ಮಾಡಿದೆ. ನಮ್ಮ ಹಿಂದೂ ಸಮಾಜವನ್ನು ದಾರಿ ತಪ್ಪಿಸುತ್ತಿದೆ ಅಂತ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಶರಣು ಡೋಣಗಾಂವ್ ಹೇಳಿದ್ದಾರೆ.

ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರೇ, ಖರ್ಗೆ ಯವರ ಬಗ್ಗೆ ಟೀಕೆ ಮಾಡುವುದು ಬಿಡಿ. ನಮ್ಮ ಕೋಲಿ ಸಮಾಜಕ್ಕೆ ನಿಮ್ಮ ಕೊಡುಗೆ ಆದರೂ ಏನು ಹೇಳಿ. ಎನ್ ರವಿಕುಮಾರ್ ನೀವು ಕಲಬುರ್ಗಿಗೆ ಚುನಾವಣೆಗೆ ಬಂದಾಗ ಮಾತ್ರ ಸಮಾಜದ ಹೆಸರ ಮೇಲೆ ಬರ್ತೀರಾ ಚುನಾವಣೆ ಮುಗಿದ ಮೇಲೆ ಈ ಕಡೆ ತಲೆನೂ ಹಾಕಲ್ಲ.
ಪ್ರಧಾನ ಮಂತ್ರಿಗಳು ಕಲಬುರ್ಗಿಗೆ ಬಂದಾಗ ಕೋಲಿ ಕಬ್ಬಲಿಗ ಜನಾಂಗಕ್ಕೆ ಮೈ ಕೋಲಿ ಸಮಾಜ ಕೋ ಯಾದ್ ರಕುಂಗಾ ಅಂತ ಹೇಳಿ ಹೋದರು. ನೀವು ನಮ್ಮ ಸಮಾಜದ ಎಸ್ ಟಿ ಹೋರಾಟದ ಬಗ್ಗೆ ಸದನದ ಒಳಗೆ ಮತ್ತು ಹೊರಗೆ ಎಂದಾದ್ರೂಭ ಒಮ್ಮೆಯಾದರೂ ಮಾತನಾಡಿದ್ದೀರಾ?
ಎಸ್ ಟಿ ಬಗ್ಗೆ ಸಮಾಜದ ಹಿರಿಯರ ಜೊತೆ ಸಂಘ ಸಂಸ್ಥೆ ಮುಖಂಡರ ಜೊತೆಗೆ ಸಮಾಲೋಚನೆ ಮಾಡಿದ್ದೀರಾ?
ಸಮಾಜಕ್ಕೆ ಅನ್ಯಾಯವಾದಾಗ ಅಥವಾ ಸಮಾಜದ ಹೋರಾಟಗಳಲ್ಲಿ ಎಂದಾದರೂ ಪಾಲ್ಗೊಂಡಿದ್ದೀರಾ?
ಮಾಧ್ಯಮದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳ ಬಗ್ಗೆ ಮಾತಾಡಿದರೆ ನೀವು ದೊಡ್ಡವರು ಆಗಲ್ಲ. ಇಂಥ ಅನವಶ್ಯಕ ವೈಯಕ್ತಿಕ ಟೀಕೆ ಬಿಡಿ. ಅದರ ಬದಲು ನಿಮಗೆ ಅವಕಾಶ ಕೊಟ್ಟ, ಅಧಿಕಾರ ಕೊಟ್ಟ ಈ ಸಮಾಜಕ್ಕೆ ಏನಾದರೂ ಕೊಡುಗೆ ಕೊಟ್ಟರೆ ಜನಗಳು ಸದಾ ನೆನಪಿಡುತ್ತಾರೆ.
ಖರ್ಗೆಯವರ ಬಗ್ಗೆ ಮಾತಾಡುವ ನೀವು ಅವರಂತೆ ಚುನಾವಣೆಯಲ್ಲಿ ರಾಜ್ಯದ ಯಾವುದಾದರೂ ಕ್ಷೇತ್ರದಲ್ಲಿ ಒಂದು ಬಾರಿಯದ್ರೂ ಗೆದ್ದು ತೋರಿಸಿ. ಬಿಜೆಪಿ ನಾಯಕರ ವಿಶ್ವಾಸ ಗಳಿಸಲು ಖರ್ಗೆ ಕುಟುಂಬದ ಬಗ್ಗೆ ಮಾತಾಡೋದು ಬಿಡಿ.
ಖರ್ಗೆಯವರ ಬಗ್ಗೆ ಮಾತಾಡುವ ಮುನ್ನ ಅವರಂತೆ ಒಂದಾದ್ರೂ ಜನಪರ ಕಾರ್ಯ ಮಾಡಿ ಒಂದಾಗ ಮಾತ್ರ ಟಿಕೆ ಟಿಪ್ಪಣಿ ಮಾಡಲು ತಮಗೆ ಎಲ್ಲಿದೆ ನೈತಿಕ ಸ್ಥೈರ್ಯ ಎಂದು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಕಲಬುರ್ಗಿ ಜಿಲ್ಲಾ ಸದಸ್ಯ ಶರಣು ಡೋಣಗಾಂವ ಸವಾಲು ಹಾಕಿದರು.

Leave a Reply

Your email address will not be published. Required fields are marked *