ಮರತೂರ: ಶ್ರೀಶೈಲ ಮಹಾಸ್ವಾಮಿಗಳ ಮೌನಾನುಷ್ಠಾನ

ತಾಲೂಕು

ಸುದ್ದಿ ಸಂಗ್ರಹ ಶಹಾಬಾದ್
ತಾಲೂಕಿನ ಮರತೂರ ಗ್ರಾಮದ ವಿರಕ್ತ ಮಠದ ಪೀಠಾಧ್ಯಕ್ಷ ಶ್ರೀಶೈಲ ಮಹಾಸ್ವಾಮಿಗಳು ಲೋಕಕಲ್ಯಾಣ ಮತ್ತು ಲಿಂಗೈಕ್ಯ ಗುರುಲಿಂಗ ಶಿವಾಚಾರ್ಯರ ಪುಣ್ಯಸ್ಮರಣೋತ್ಸವ ನಿಮಿತ್ಯ ಒಂದು ತಿಂಗಳ ಕಾಲ ಮೌನ ಅನುಷ್ಠಾನ ಕೈಗೊಂಡಿದ್ದಾರೆ, ಕಲಬುರಗಿಯ ಮುಕ್ತಂಪುರಿನ ಗುರುಬಸವೇಶ್ವರ ಬೃಹನ್ಮಠದ ಶಿವಾನಂದ ಮಹಾಸ್ವಾಮಿಗಳ ಪಾದಪೂಜೆ ಮಾಡುವ ಮೂಲಕ ಮೌನ ಅನುಷ್ಠಾನ ಪ್ರಾರಂಭಿಸಿದರು. ಇದೆ ಸಂದರ್ಭದಲ್ಲಿ ಶಿರೋಳಿಯ ಶಿವಬಸವ ಮಹಾಸ್ವಾಮಿಗಳು ಉಪಸ್ಥಿತರಿದ್ದರು.

ಅ.7 ರಂದು ಮೌನ ಅನುಷ್ಠಾನ ಮಂಗಲ ಸಮಾರಂಭ ನಡೆಯಲಿದೆ, ನಾಡಿನ ಪೂಜ್ಯರು, ವಿವಿಧ ರಾಜಕೀಯ ಪಕ್ಷದ ಮುಖಂಡರು ಮತ್ತು ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀಮಠ ವತಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *