ಚಿತ್ತಾಪುರ: ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದ ಮನೆಯೊಂದು ಸಂಪೂರ್ಣವಾಗಿ ನೆಲಕ್ಕುರುಳಿದ ಘಟನೆ ತಾಲೂಕಿನ ಸುಗೂರ (ಎನ್) ಗ್ರಾಮದಲ್ಲಿ ನಡೆದಿದೆ.
ಕಳೆದೆರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಸೆ.22 ರಂದು ಸೋಮುವಾರ ತಡರಾತ್ರಿ ಸುರಿದ ಭಾರಿ ಮಳೆಯ ಪರಿಣಾಮ ಉಮಾದೇವಿ ಗುರಯ್ಯಾಸ್ವಾಮಿ ಮಠಪತಿ ಅವರ ಮನೆಯ ಒಂದು ಕೋಣೆ ಸಂಪೂರ್ಣವಾಗಿ ನೆಲಕ್ಕುರುಳಿದೆ.
ತಾಯಿ ಮತ್ತು ಇಬ್ಬರು ಮಕ್ಕಳು ಮನೆಯ ಇನ್ನೊಂದು ಕೋಣೆಯಲ್ಲಿ ಮಲಗಿರುವುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ಸುದ್ದಿ ತಿಳಿಯುತ್ತಲೆ ಊರಿನ ಗ್ರಾಮಸ್ಥರು ಭೇಟಿ ನೀಡಿ ಧೈರ್ಯ ಹೇಳಿದರು.
ಪರಿಹಾರಕ್ಕೆ ಒತ್ತಾಯ: ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಮಳೆ ಸುರಿಯುತ್ತಿದೆ. ಹೀಗಾಗಿ ಗೋಡೆಗಳು ಒಣಗುತ್ತಿಲ್ಲ. ಆದ್ದರಿಂದ ಮಣ್ಣಿನ ಗೋಡೆಯಿಂದ ಕಟ್ಟಿರುವ ಮನೆಗಳು ಅಪಾಯ ಎದುರಿಸುತ್ತಿವೆ. ಇದರ ಬಗ್ಗೆ ಕಂದಾಯ ಇಲಾಖೆ ಮನೆ ಕಳೆದುಕೊಂಡ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಗ್ರಾಮದ ಪ್ರಮುಖರಾದ ಭೀಮರೆಡ್ಡಿಗೌಡ ಕುರಾಳ ಸುಗೂರ (ಎನ್), ಮಹೇಶ ಪಾಟೀಲ ಸುಗೂರ, ಎನ್ ಶರಣಗೌಡ ಬೆನಕನಹಳ್ಳಿ, ಬಸ್ಸುಗೌಡ ಮಾಲಿಪಾಟೀಲ, ಕರಬಸಪ್ಪ ದಂಡಗಿ, ಬಸವರಾಜ ಹಡಪದ ಸುಗೂರ (ಎನ್), ಸಿದ್ದುಗೌಡ ಕುರಾಳ ಸುಗೂರ (ಎನ್), ರಾಜೇಂದ್ರ ನಾಯ್ಕೊಡಿ, ಸಂಗಣ್ಣ ಮಂಡ್ನಳ್ಳಿ. ಸಿದ್ದುಸಾಹು ಕುಂಬಾರ. ಮಲ್ಲಿಕಾರ್ಜುನ ಹಡಪದ ಸುಗೂರ (ಎನ್) ಒತ್ತಾಯಿಸಿದ್ದಾರೆ.