ಚಿತ್ತಾಪುರ: ಪಟ್ಟಣದ ಸ್ಟೇಷನ್ ತಾಂಡಾದ ಬಂಜಾರ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನವರಾತ್ರಿ ಉತ್ಸವದ ನಿಮಿತ್ಯ ಜಗದಂಬಾ ದೇವಿಯ ಮೂರ್ತಿ ಮೆರವಣಿಗೆ ಜನಸಾಗರದ ಮಧ್ಯೆ ಸೋಮವಾರ ಅದ್ದೂರಿಯಾಗಿ ನಡೆಯಿತು.
ಪಟ್ಟಣದ ರೈಲ್ವೆ ಸ್ಟೇಷನ್’ಯಿಂದ ಪ್ರಾರಂಭವಾದ ಜಗದಂಬಾ ದೇವಿ ಮೂರ್ತಿಯ ಭವ್ಯ ಮೆರವಣಿಗೆ ಅಂಬಿಗರ ಚೌಡಯ್ಯ ಭವನ, ಬಸವೇಶ್ವರ ವೃತ್ತ, ಲಾಡ್ಡಿಂಗ್ ಕ್ರಾಸ್, ಅಂಬೇಡ್ಕರ್ ವೃತ್ತ, ಭುವನೇಶ್ವರಿ ವೃತ್ತ, ಜನತಾ ಚೌಕ್, ನಾಗಾವಿ ಚೌಕ್, ಒಂಟಿ ಕಮಾನ್ ಮುಖಾಂತರ ಸ್ಟೇಷನ್ ತಾಂಡಾದ ದೊಡ್ಡ ಸೇವಾಲಾಲ್ ಮಂದಿರದ ಆವರಣದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು.
ಮೆರವಣಿಗೆಯುದ್ದಕ್ಕೂ ಈ ಬಾರಿ ವಿವಿಧ ಸಾಂಸ್ಕೃತಿಕ, ಜಾನಪದ ಕಲಾತಂಡಗಳ ಕಲೆ ನೋಡುಗರ ಕಣ್ಮನ ಸೆಳೆಯಿತು. ಚೆನ್ನೈ ಮೂಲದ ಕಾವಡಿ ಡ್ಯಾನ್ಸ್, ಪುಣೆ ಮೂಲದ ಡೊಳ್ಳು ತಾಷಾ, ಮಹಾರಾಷ್ಟ್ರ ಮೂಲದ ಸೈನಿಕರ ತಂಡ, ತುಳಜಾಪುರದಿಂದ ಗೊಂದಲ ಹಾಕುವವರು, ಬಂಜಾರ ಸಮಾಜದ ನೃತ್ಯ, ಭಜನೆ, ಡಿಜೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸರ್ವರನ್ನು ಆಕರ್ಷಿಸಿತು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಚವ್ಹಾಣ ಮಾತನಾಡಿ, ಪಟ್ಟಣದ ಸ್ಟೇಷನ್ ತಾಂಡಾದಲ್ಲಿ 2000 ರಲ್ಲಿ ಪ್ರಾರಂಭವಾದ ನವರಾತ್ರಿ ಉತ್ಸವ 25ನೇ ವರ್ಷಕ್ಕೆ ಕಾಲಿಟ್ಟಿದೆ. ಹೀಗಾಗಿ ಈ ಬಾರಿಯ ಬೆಳ್ಳಿ ಮಹೋತ್ಸವ ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದರು.
ಸ್ಟೇಷನ್ ತಾಂಡಾದ ದೊಡ್ಡ ಸೇವಾಲಾಲ್ ಜಗದಂಬಾ ದೇವಸ್ಥಾನದ ಹತ್ತಿರ 9 ದಿನಗಳವರೆಗೆ ನಿತ್ಯ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸ್ಟೇಷನ್ ತಾಂಡದ 8 ನಾಯಕರಾದ ರವಿ ಭೀಮಾ ನಾಯಕ, ಕಿಶನ್ ರೂಪಲಾ ನಾಯಕ, ಲಕ್ಷ್ಮಣ್ ವಿಠ್ಠಲ್ ನಾಯಕ್, ಮೋತಿಲಾಲ್ ಬಾಬು ನಾಯಕ, ಚಂದರ್ ಭೀಕು ನಾಯಕ, ಪೆಮ್ಯಾ ಸುಬ್ಬು ನಾಯಕ, ತಾರಾನಾಥ ನಾಯಕ, ಚಂದು ಲಚ್ಚು ನಾಯಕ, ಮುಖಂಡರಾದ ಪೋಮು ಚವ್ಹಾಣ ಪೂಜಾರಿ, ಗೋಪಾಲ ರಾಠೋಡ, ಭೀಮಸಿಂಗ್ ಚವ್ಹಾಣ, ವಿನೋದ್ ಪವಾರ, ಚಂದರ್ ಚವ್ಹಾಣ, ದೇವಿದಾಶ್ ಚವ್ಹಾಣ, ರವಿ ಜಾಧವ, ಪ್ರವಿನ ಪವಾರ, ಚಂದು ಜಾಧವ, ಕುಮಾರ್ ಚವ್ಹಾಣ, ಧರ್ಮಾ ಜಾಧವ, ತಿರುಪತಿ ಚವ್ಹಾಣ, ಶ್ರೀಕಾಂತ್ ರಾಠೋಡ, ಶಂಕರ್ ನಾಯಕ, ಚಂದು ಚವ್ಹಾಣ, ರಾಕೇಶ್ ಪವಾರ, ಭಮು ಪವಾರ, ಪಾಂಡು ರಾಠೋಡ, ಕಿರಣ್ ರಾಠೋಡ, ತಿರುಪತಿ ರಾಠೋಡ, ಗೋಪಿ ರಾಠೋಡ, ಆನಂದ್ ಜಾಧವ, ಸಂತೋಷ ಚವ್ಹಾಣ, ವಿಜಯ ಪವಾರ ಸೇರಿದಂತೆ ಬಂಜಾರ ಸಮಾಜದ ಮುಖಂಡರು, ಮಹಿಳೆಯರು, ಯುವಕರು ಪಾಲ್ಗೊಂಡಿದ್ದರು.
ಪಿಎಸ್‌ಐ ಶ್ರೀಶೈಲ್ ಅಂಬಾಟಿ ಮತ್ತು ಸಿಬ್ಬಂದಿ ಸೂಕ್ತ
ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.