ಆಲ್ಝೈಮರ್ಸ್ ಕಾಯಿಲೆ ಬಗ್ಗೆ ಜಾಗೃತಿ ಅಗತ್ಯ: ಡಾ.ಅನುಪಮಾ ಕೇಶ್ವಾರ

ನಗರದ

ಕಲಬುರಗಿ: ಆಲ್ಝೈಮರ್ಸ್ ಕಾಯಿಲೆ ಎಂದರೆ ಮೆದುಳಿನ ನರದ ವ್ಯವಸ್ಥೆಯಲ್ಲಿನ ಅಸ್ವಸ್ಥತೆಯಾಗಿದ್ದು, ಇದು ಕ್ರಮೇಣ ನೆನಪಿನ ಶಕ್ತಿ, ಆಲೋಚನೆ ಮತ್ತು ತಿಳುವಳಿಕೆಯ ಸಾಮರ್ಥ್ಯವನ್ನು ನಾಶಪಡಿಸುತ್ತದೆ. ಇದು ಅಂತಿಮವಾಗಿ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹದಗೆಡಿಸುತ್ತದೆ. ಈ ಕಾಯಿಲೆಗೆ ಪ್ರಸ್ತುತ ಯಾವುದೆ ಚಿಕಿತ್ಸೆ ಇಲ್ಲ. ಆದರೆ ರೋಗ ಲಕ್ಷಣಗಳನ್ನು ನಿರ್ವಹಿಸಲು ಔಷಧಿ ಮತ್ತು ಆರೈಕೆ ಲಭ್ಯವಿದೆ. ಇದರ ಬಗ್ಗೆ ಜಾಗೃತಿ ಅಗತ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು.

ನಗರದ ಶೇಖರೋಜಾದಲ್ಲಿರುವ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಸೋಮವಾರ ಜರುಗಿದ ‘ವಿಶ್ವ ಆಲ್ಝೈಮರ್ಸ್ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಹಿಂದಿನ ಘಟನೆಗಳು, ಸ್ಥಳಗಳು ಮತ್ತು ವಸ್ತುಗಳ ಹೆಸರು ಮರೆತುಬಿಡುವುದು, ಆಲೋಚನೆ ಮತ್ತು ತಾರ್ಕಿಕತೆ ಕೌಶಲ್ಯಗಳಲ್ಲಿ ನಷ್ಟ, ದೈನಂದಿನ ಜೀವನದಲ್ಲಿ ಹಸ್ತಕ್ಷೇಪ ಮಾಡುವ ನಡವಳಿಕೆಯ ಬದಲಾವಣೆಗಳು. ಅರಳು-ಮರಳಾಗಿ ವರ್ತಿಸುವುದು, ಜ್ಞಾಪಕ ಶಕ್ತಿ ಕುಂದುವುದು, ಮೆದುಳಿನ ಜೀವಕೋಶಗಳ ನಾಶ, ತಾರ್ಕಿಕ ಶಕ್ತಿ ನಾಶದಂತಹ ಲಕ್ಷಣಗಳು ಮರೆವು ರೋಗದ ಲಕ್ಷಣಗಳಾಗಿವೆ. ರೋಗಿಗಳನ್ನು ಕೀಳಾಗಿ ಕಾಣುವುದು ಬೇಡ. ಅವರಜೊತೆ ಆಪ್ತವಾಗಿ ವರ್ತಿಸಬೇಕು. ತಜ್ಞರ ಪ್ರಕಾರ ನೂರರಲ್ಲಿ ಇಬ್ಬರಿಗೆ ಕಾಡುವ ಕಾಯಿಲೆ ಇದಾಗಿದ್ದು, ಆರಂಭದಲ್ಲಿ ಇದರ ಲಕ್ಷಣಗಳನ್ನು ಗುರ್ತಿಸಿ, ಸೂಕ್ತ ಜೀವನಶೈಲಿಯ ಬದಲಾವಣೆಯ ಮೂಲಕ ಮರೆವು ಕಾಯಿಲೆ ಬರದಂತೆ ತಡೆಯಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಜಗನಾಥ ಗುತ್ತೇದಾರ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *