ಕಲಬುರಗಿ ಜಿಲ್ಲಾ ಕೋರ್ಟ್‌ನಲ್ಲಿ ನ್ಯಾಯಾಧೀಶರಿಗೆ ಹಾರ್ಟ್ ಅಟ್ಯಾಕ್: ಚೇಂಬರ್‌ನಲ್ಲಿದ್ದಾಗಲೆ ಸಾವು

ಕಲಬುರಗಿ: ಕಲಬುರಗಿ ಜಿಲ್ಲೆಯ ಕೋರ್ಟ್‌ನಲ್ಲಿ ಮೂರನೇ ಹಿರಿಯ ಶ್ರೇಣಿಯ ನ್ಯಾಯಾಧೀಶರಾದ ವಿಶ್ವನಾಥ ಮುಗುಟಿ (44) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೋರ್ಟ್ ಚೇಂಬರ್‌ ನಲ್ಲಿದ್ದಾಗಲೆ ಎದೆನೋವಿನ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತ್ವರಿತವಾಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅದಾಗಲೇ ಅವರು ಸಾವಿಗೀಡಾಗಿದ್ದರು ಎಂಬುದಾಗಿ ವೈದ್ಯರು ದೃಢಪಡಿಸಿದ್ದಾರೆ. ಚೇಂಬರ್‌ನಲ್ಲಿಯೇ ಅಸ್ವಸ್ಥತೆಇಂದು ಬೆಳಿಗ್ಗೆ ಸದಾ ನಗುತ್ತಾ ಕೋರ್ಟ್‌ಗೆ ಆಗಮಿಸಿದ ನ್ಯಾಯಾಧೀಶರು ತಮ್ಮ ಚೇಂಬರ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲೇ ಎದೆನೋವು ಕಾಣಿಸಿಕೊಂಡಿತು. ತಕ್ಷಣ ಅವರ ಚಾಲಕ ಮತ್ತು ಕಚೇರಿ ಸಿಬ್ಬಂದಿಯ ಸಹಾಯದಿಂದ ಕಲಬುರಗಿಯ ಜಯದೇವ […]

Continue Reading

ಪವನ ಶಕ್ತಿಯ ಸದುಪಯೋಗದಿಂದ ವಿದ್ಯುಚ್ಛಕ್ತಿ ಸಮಸ್ಯೆ ನಿವಾರಣೆಯಾಗಲು ಸಾಧ್ಯ

ಕಲಬುರಗಿ: ಯಾವ ಪ್ರದೇಶಗಳಲ್ಲಿ ಗಾಳಿಯಿಂದ ವಿದ್ಯುಚ್ಛಕ್ತಿ ಉತ್ಪಾದನೆ ಸಾಧ್ಯವೋ, ಅಲ್ಲಿ ಪವನ-ವಿದ್ಯುಚ್ಛಕ್ತಿ ಕೇಂದ್ರಗಳ ಸ್ಥಾಪನೆ ಮಾಡಿ, ವಿದ್ಯುಚ್ಛಕ್ತಿ ಉತ್ಪಾದಿಸುವುದರತ್ತ ಗಮನಹರಿಸಬೇಕಾಗಿರುವುದು ಪ್ರಸ್ತುತವಾಗಿ ಅಗತ್ಯವಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು. ನಗರದ ಆಳಂದ ರಸ್ತೆಯ ಶಿವ ನಗರದ ಜ್ಞಾನ ಚಿಗುರು ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಜಾಗತಿಕ ಪವನ ಶಕ್ತಿ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಪವನಶಕ್ತಿಯಿಂದ ವಿದ್ಯುಚ್ಛಕ್ತಿ ಉತ್ಪಾದನೆ ಸಾಧ್ಯವಾಗಿದೆ. ಪರಿಸರ ಮಾಲಿನ್ಯ ರಹಿತವಾಗಿದ್ದು, ಆರ್ಥಿಕ ಮಿತವ್ಯಯ ಸಾಧ್ಯವಿದೆ. ಪವನಶಕ್ತಿಯಿಂದ […]

Continue Reading

ಮಕ್ಕಳ ಭವಿಷ್ಯ ನಿರ್ಮಿಸುವ ಶಿಲ್ಪಿ ತಂದೆ: ಎಚ್.ಬಿ ಪಾಟೀಲ

ಕಲಬುರಗಿ: ತಂದೆಯ ತ್ಯಾಗ, ಪ್ರೀತಿ, ಪ್ರೇಮ ಮರೆಯಬಾರದು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ತನ್ನತನವನ್ನು ತೊರೆದು, ಎಲ್ಲವೂ ಮಕ್ಕಳಿಗಾಗಿ ದಾರೆಯೆರೆಯುವ ಮೂಲಕ ಮಕ್ಕಳ ಭವಿಷ್ಯವನ್ನು ನಿರ್ಮಿಸುವ ಶಿಲ್ಪಿ ತಂದೆಯಾಗಿದ್ದಾನೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು. ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ರವಿವಾರ ಆಯೋಜಿಸಲಾಗಿದ್ದ ‘ವಿಶ್ವ ಅಪ್ಪಂದಿರ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಇಡಿ ಜೀವನದುದ್ದಕ್ಕೂ ಕುಟುಂಬದ ಲೇಸನ್ನು ಬಯಸುವ ಕೌಟುಂಬಿಕ ವ್ಯವಸ್ಥೆಯ ಸಫಲತೆಯಲ್ಲಿ ತಂದೆಯ ಪಾತ್ರ ಅನನ್ಯವಾಗಿದೆ ಎಂದರು. […]

Continue Reading

ಒಬ್ಬರ ರಕ್ತದಾನದಿಂದ ಮೂವರ ಜೀವ ಉಳಿಸಲು ಸಾಧ್ಯ

ಕಲಬುರಗಿ: ರಕ್ತದಾನ ಜೀವದಾನಕ್ಕೆ ಸಮ, ಮತ್ತೊಬ್ಬರಿಗೆ ಮಾಡಿದ ರಕ್ತದಾನದಿಂದ ವ್ಯಕ್ತಿ ಸತ್ತ ನಂತರವು ತಾನು ಬದುಕಿನ ಸಾರ್ಥಕತೆ ಪಡೆಯಲು ಸಾಧ್ಯ ಎಂದು 18 ಬಾರಿ ರಕ್ತದಾನ ಮಾಡಿದ ಮಾಜಿ ಸೈನಿಕ ರೇಣುಕಾಚಾರ್ಯ ಸ್ಥಾವರಮಠ ಮಾರ್ಮಿಕವಾಗಿ ಹೇಳಿದರು. ನಗರದ ಗಾಂಧಿ ನಗರದ ಆಚಾರ್ಯ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ‘ವಿಶ್ವ ರಕ್ತದಾನ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ರಕ್ತದ ಬೇಡಿಕೆ ಮತ್ತು ರಕ್ತದಾನದ ಪ್ರಮಾಣದ ನಡುವೆ […]

Continue Reading

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ

ಚಿತ್ತಾಪುರ: ಬಾಲ ಕಾರ್ಮಿಕ ಪದ್ಧತಿಯು ಮಕ್ಕಳ ಬೆಳವಣಿಗೆಗೆ ಮಾರಕವಾಗಿದ್ದು, ಅದರ ನಿರ್ಮೂಲನೆಗೆ ಸರ್ಕಾರಗಳು ಅನೇಕ ಕಾಯ್ದೆ-ಕಾನೂನುಗಳನ್ನು ಜಾರಿಗೊಳಿಸಿದೆ. ಇವುಗಳನ್ನು ಅನುಷ್ಠಾನಗೊಳಿಸಿ ನಿರ್ಮೂಲನೆ ಮಾಡಲು ಸರ್ಕಾರ, ಕಾರ್ಮಿಕ ಇಲಾಖೆ ಶ್ರಮಿಸುತ್ತಿದೆ. ಇವರ ಜೊತೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ನಿವೃತ್ತ ಜಿಲ್ಲಾ ಕಾರ್ಮಿಕ ಅಧಿಕಾರಿ ಜಿ.ಸಿದ್ಧಲಿಂಗಪ್ಪ ಹೇಳಿದರು. ಮತಕ್ಷೇತ್ರದ ವ್ಯಾಪ್ತಿಯ ಮಾಡಬೂಳ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲೆಯಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ‘ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ’ […]

Continue Reading

ವಾಡಿ ಪುರಸಭೆ: 10 ವರ್ಷಕ್ಕಿಂತ ಹೆಚ್ಚು ಅವಧಿ ಕರ್ತವ್ಯದಲ್ಲಿರುವ ನೌಕರರ ವರ್ಗಾವಣೆಗೆ ಕರವೇ ಒತ್ತಾಯ

ಚಿತ್ತಾಪುರ: ವಾಡಿ ಪುರಸಭೆಯಲ್ಲಿ 3 ಜನ ನೌಕರರು 10 ರಿಂದ 15 ವರ್ಷಗಳಾದರೂ ಇನ್ನೂ ವಾಡಿಕೆಯಲ್ಲೆ ಕಾರ್ಯನಿರ್ವಹಿಸುತ್ತಿದ್ದಾರೆ, ಹೀಗಾಗಿ ಆದಷ್ಟು ಬೇಗ ಅವರನ್ನು ವರ್ಗಾವಣೆ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಚಂದರ ಚವ್ಹಾಣ ಮತ್ತು ಘಟಕದ ಅಧ್ಯಕ್ಷ ಶಿವಕುಮಾರ ಗುತ್ತೆದಾರ ಅವರು ಬೆಂಗಳೂರು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ. ತಾಲೂಕಿನ ವಾಡಿ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಅಧಿಕಾರಿ ಈಶ್ವರ ಅಂಬೆಕಾರ, ಪ್ರಥಮ ದರ್ಜೆ ಸಹಾಯಕ ವಿರುಪಾಕ್ಷ ಮತ್ತು ಆರೋಗ್ಯ ನಿರಿಕ್ಷಕಿ ಲತಾಮಣಿ […]

Continue Reading

ಪ್ರಗತಿಶೀಲ ಚಿಂತನೆಗೆ ಪ್ರೇರಣೆ ನೀಡುವ ದೇವನೂರು ಸಾಹಿತ್ಯ

ಕಲಬುರಗಿ: ದೇವನೂರು ಮಹಾದೇವ ಅವರು ಕೇವಲ ಸಾಹಿತಿ ಮಾತ್ರವಲ್ಲದೆ, ದಲಿತ ಹಕ್ಕುಗಳಿಗಾಗಿ ಹೋರಾಡಿದ ಸಾಮಾಜಿಕ ಹೋರಾಟಗಾರರು ಆಗಿದ್ದಾರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪ್ರಮುಖ ಸಂಘಟಕರು. ಅವರ ಬರವಣಿಗೆಯು ದಲಿತರ ಮೇಲಿನ ಶೋಷಣೆ, ಕ್ರೌರ್ಯ ಹಾಗೂ ಸಾಮಾಜಿಕ ಅಸಮಾನತೆಯನ್ನು ಪ್ರಶ್ನಿಸುವ ಮೂಲಕ ಪ್ರಗತಿಶೀಲ ಚಿಂತನೆಗೆ ಪ್ರೇರಣೆ ನೀಡುತ್ತವೆ ಎಂದು ಉಪನ್ಯಾಸಕ, ಪ್ರಗತಿಪರ ಚಿಂತಕ ಎಚ್.ಬಿ ಪಾಟೀಲ ಹೇಳಿದರು. ನಗರದ ಆಳಂದ ರಸ್ತೆಯ ಜೆ.ಆರ್ ನಗರದ ಸಕ್ಸಸ್ ಕಂಪ್ಯೂಟರ ತರಬೇತಿ ಸಂಸ್ಥೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ […]

Continue Reading

16 ಲಕ್ಷ ರೂ.ಗಳೊಂದಿಗೆ ನಾಪತ್ತೆಯಾದ ಪ್ರಾದೇಶಿಕ ಸಾರಿಗೆ ಕಚೇರಿ ಸಿಬ್ಬಂದಿ

ಬಳ್ಳಾರಿ: ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಜನರಿಂದ ಸಂಗ್ರಹವಾಗಿದ್ದ 16 ಲಕ್ಷ ರೂ. ಬ್ಯಾಂಕಿಗೆ ಜಮೆ ಮಾಡದೆ ಹಣದೊಂದಿಗೆ ಎಸ್’ಡಿಎ ಸಿಬ್ಬಂದಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಆರ್’ಟಿಒ ಕಚೇರಿಯ ಖಜಾನೆ (ಟ್ರೆಶರಿ) ವಿಭಾಗದ ಸಿಬ್ಬಂದಿ ರವಿ ತಾವರೆಕೆಡ 16.72 ಲಕ್ಷ ರೂ.ಗಳೊಂದಿಗೆ ನಾಪತ್ತೆಯಾಗಿದ್ದು, ಈ ಕುರಿತು ಆರ್’ಟಿಒ ಅಧಿಕಾರಿ ಶ್ರೀನಿವಾಸ್ ಗಿರಿ ನೀಡಿರುವ ದೂರಿನ ಮೇರೆಗೆ ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಖಜಾನೆ ವಿಭಾಗದ ಎಸ್’ಡಿಎ ರವಿ ತಾವರೆಕೆಡ ಕಚೇರಿಯಲ್ಲಿ ಸಾರಿಗೆ ಇಲಾಖೆ ಸಾರ್ವಜನಿಕರಿಗೆ […]

Continue Reading

ಮದುವೆ ಮಂಟಪದಲ್ಲೆ ಪತಿಗೆ ಚಪ್ಪಲಿಯಿಂದ ಥಳಿಸಿದ ಪತ್ನಿ

ಚಿತ್ರದುರ್ಗ: ವರದಕ್ಷಿಣೆ ದುರಾಸೆಗೆ 2ನೇ ಮದುವೆಯಾಗಲು ಮುಂದಾಗಿದ್ದ ಪತಿಗೆ ಕಲ್ಯಾಣ ಮಂಟಪದಲ್ಲೆ ಪತ್ನಿ ತನ್ನ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಶನಿವಾರ ತಡರಾತ್ರಿ ಜರುಗಿದೆ. ಪತ್ನಿ, ಆಕೆಯ ಕುಟುಂಬಸ್ಥರಿಂದ ಪತಿ ಮತ್ತು ಆತನ ಕಡೆಯವರಿಗೆ ಸಖತ್ತಾಗಿ ಧರ್ಮದೇಟು ಬಿದ್ದವು. ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ಈ ಘಟನೆಯಿಂದ ನವ ವಧು ಮತ್ತು ಕುಟುಂಬದವರು ಕಕ್ಕಾಬಿಕ್ಕಿಯಾದರು. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಮುಶೇನಾಳ ಗ್ರಾಮದ ತನುಜಾ 4 ವರ್ಷದ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಅರಸೀಕೆರೆಯ ತಿಪ್ಪಘಟ್ಟದ ಕಾರ್ತಿಕ್ […]

Continue Reading

ಸುರಕ್ಷಿತ ಆಹಾರ ಸೇವನೆಯಿಂದ ಸದೃಢ ಆರೋಗ್ಯ ಸಾಧ್ಯ

ಕಲಬುರಗಿ: ಮಾನವನು ಆರೋಗ್ಯಪೂರ್ಣವಾಗಿ ಜೀವಿಸಲು ಶುದ್ಧವಾದ ಆಕ್ಸಿಜನ್, ಕುಡಿಯುವ ನೀರು ಮತ್ತು ಆಹಾರ ಅವಶ್ಯಕ. ನಮ್ಮ ದೇಹಕ್ಕೆ ಬರುವ ಅನೇಕ ಕಾಯಿಲೆಗಳು ಇವುಗಳಿಗೆ ಸಂಬಂಧಿಸಿವೆ. ಶುಚಿಯಾದ, ಸತ್ವಯುತ ಮತ್ತು ಸಮತೋಲಿತವಾದ ಆಹಾರದ ಸೇವನೆಯಿಂದ ದೇಹವು ಆರೋಗ್ಯಪೂರ್ಣವಾಗಿರಲು ಸಾಧ್ಯವಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು. ನಗರದ ಆಳಂದ ರಸ್ತೆಯ ಜೆ.ಆರ್ ನಗರದ ಸನ್’ಲೈಟ್ ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ಆಹಾರ ಸುರಕ್ಷತಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವನ ದುರಾಸೆಯಿಂದ ನಾವು […]

Continue Reading