ಬಳ್ಳಾರಿ: ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಜನರಿಂದ ಸಂಗ್ರಹವಾಗಿದ್ದ 16 ಲಕ್ಷ ರೂ. ಬ್ಯಾಂಕಿಗೆ ಜಮೆ ಮಾಡದೆ ಹಣದೊಂದಿಗೆ ಎಸ್’ಡಿಎ ಸಿಬ್ಬಂದಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಆರ್’ಟಿಒ ಕಚೇರಿಯ ಖಜಾನೆ (ಟ್ರೆಶರಿ) ವಿಭಾಗದ ಸಿಬ್ಬಂದಿ ರವಿ ತಾವರೆಕೆಡ 16.72 ಲಕ್ಷ ರೂ.ಗಳೊಂದಿಗೆ ನಾಪತ್ತೆಯಾಗಿದ್ದು, ಈ ಕುರಿತು ಆರ್’ಟಿಒ ಅಧಿಕಾರಿ ಶ್ರೀನಿವಾಸ್ ಗಿರಿ ನೀಡಿರುವ ದೂರಿನ ಮೇರೆಗೆ ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಖಜಾನೆ ವಿಭಾಗದ ಎಸ್’ಡಿಎ ರವಿ ತಾವರೆಕೆಡ ಕಚೇರಿಯಲ್ಲಿ ಸಾರಿಗೆ ಇಲಾಖೆ ಸಾರ್ವಜನಿಕರಿಗೆ ನೀಡುವ ಸೇವೆಗಳಿಂದ ಸಂಗ್ರಹವಾಗುವ ಹಣವನ್ನು ಸಂಗ್ರಹವಾಗುವ ದಿನದಂದೆ ಬ್ಯಾಂಕಿಗೆ ಜಮಾ ಮಾಡಬೇಕು. ಆದರೆ ಕಳೆದ ಮೇ.21 ರಂದು 31 ರವೆಗೆ ಜಮಾ ಮಾಡಿಲ್ಲ. ನಂತರ ಜೂ.1 ರಿಂದ ಜಮಾ ಮಾಡಿದ್ದಾರೆ, ಆದರೆ ನಂತರದ ದಿನಗಳಲ್ಲಿ ಜಮಾ ಮಾಡಿಲ್ಲ. ಈ ಕುರಿತು ಇಲಾಖೆಯ ಖಾತೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಆರ್’ಟಿಒ ಅಧಿಕಾರಿಗಳು ರವಿ ಅವರ ಮನೆಗೆ ಹೋಗಿ ಪರಿಶೀಲನೆ ಮಡೆಸಿದ್ದಾರೆ. ಇದರಿಂದ ಮನೆಯಿಂದ ನಾಪತ್ತೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.