ಬೆದರಿಕೆ ಹಾಕಿದ್ದಕ್ಕೆ ಪತಿಯನ್ನು ಕೊಂದ ಪತ್ನಿ: ಕೊಲೆ ಸುಳಿವು ಕೊಟ್ಟ ಖಾರದಪುಡಿ

ತುಮಕೂರು: ಜಿಲ್ಲೆ ತಿಪಟೂರು ತಾಲೂಕಿನ ಶಂಕರ್ ಮೂರ್ತಿ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಾಪತ್ತೆಯಾಗಿದ್ದ ಶಂಕರ್ ಮೂರ್ತಿ ಮೃತ ದೇಹ ನೊಣವಿನಕೆರೆ ಬಳಿ ಪತ್ತೆಯಾಗಿದೆ, ಪತ್ನಿಯೇ ಕೊಲೆ ಮಾಡಿ ಗಂಡ ಕಾಣೆಯಾಗಿದ್ದಾನೆ ಎಂದು ದೂರು ನೀಡಿ ನಾಟಕವಾಡಿರುವುದು ಬಟಾಬಯಲಾಗಿದೆ. ನಾಪತ್ತೆಯಾದ ಐದು ದಿನಗಳ ನಂತರ ಶಂಕರ್ ಮೂರ್ತಿ (51) ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ, ಪತ್ನಿ ಸುಮಂಗಲಾ ತನ್ನ ಸಂಬಂಧಿ ನಾಗರಾಜನೊಂದಿಗೆ ಸೇರಿಕೊಂಡು ಶಂಕರ್ ಮೂರ್ತಿಯನ್ನು ಕೊಲೆ ಮಾಡಿದ್ದಾಳೆ. ಬಳಿಕ ಶವವನ್ನು ಗೋಣಿ ಚೀಲದಲ್ಲಿ ತುಂಬಿಕೊಂಡು […]

Continue Reading

ಸಂಗೀತಕ್ಕಿದೆ ರೋಗ ನಿವಾರಣಾ ಶಕ್ತಿ

ಕಲಬುರಗಿ: ಸುಮಧುರ ಸಂಗೀತ ಆಲಿಸುವದರಿಂದ ಮಾನಸಿಕ ಒತ್ತಡದಿಂದ ಮುಕ್ತಗೊಳಿಸಿ, ಮನಸಿಗೆ ನೆಮ್ಮದಿ ದೊರೆಯತ್ತದೆ. ರೋಗ ನಿವಾರಣೆ ಮಾಡುವ ಶಕ್ತಿ ಸಂಗೀತಕ್ಕಿದೆ, ಇದು ವೈಜ್ಞಾನಿಕ ನಿರೂಪಣೆಯಾಗಿದ್ದು ಸಂಗೀತದ ಮಹತ್ವ ತೋರಿಸುತ್ತದೆ ಎಂದು ಖ್ಯಾತ ಗಾಯಕ, ಕಲಾವಿದ ಶರಣು ಕಾಂಬಳೆ ಅಭಿಮತಪಟ್ಟರು. ನಗರದ ಆಳಂದ ಚೆಕ್ ಪೋಸ್ಟ್ ಸಮೀಪದ ಗಾನಗಂಧರ್ವ ಸಂಗೀತ ಪಾಠಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ರವಿವಾರ ಜರುಗಿದ ‘ವಿಶ್ವ ಸಂಗೀತ ದಿನಾಚರಣೆ’ಯನ್ನು ಹಾರ್ಮೋನಿಯಂ ನುಡಿಸಿ, ಗೀತೆಯನ್ನು ಹಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ […]

Continue Reading

ಯೋಗಯುಕ್ತ ಜೀವನದಿಂದ ರೋಗ ಮುಕ್ತ ರಾಷ್ಟ್ರ ನಿರ್ಮಾಣ

ಕಲಬುರಗಿ: ಪ್ರತಿಯೊಬ್ಬರು ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡರೆ ರೋಗ ಮುಕ್ತ ದೇಹ, ರಾಷ್ಟ್ರ‌ ನಿರ್ಮಾಣವಾಗುತ್ತದೆ ಎಂದು ಯೋಗ ತರಬೇತಿದಾರ ಚನ್ನಬಸಪ್ಪ ಗಾರಂಪಳ್ಳಿ ಅಭಿಮತಪಟ್ಟರು. ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢಶಾಲೆಯ ಆವರಣದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಅಂತರಾಷ್ಟ್ರೀಯ ಯೋಗ ದಿನಾಚರಣೆ’ ಉದ್ಘಾಟಿಸಿ, ಯೋಗಾಸನದ ವಿವಿಧ ಬಗೆಗಳನ್ನು ಪ್ರಾತ್ಯಕ್ಷಿಯ ಮೂಲಕ ತೋರಿಸಿ, ನಂತರ ಮಾತನಾಡಿದ ಅವರು, ಯೋಗವು ದೈಹಿಕ ಮತ್ತು ಮಾನಸಿಕವಾಗಿ ವ್ಯಕ್ತಿಯನ್ನು ಸದೃಢವಾಗಿರುವಂತೆ ಮಾಡುವ ವೈಜ್ಞಾನಿಕ ಪದ್ದತಿಯಾಗಿದೆ ಎಂದರು. ಉಪನ್ಯಾಸಕ, ಎನ್.ಎಸ್.ಎಸ್ ಅಧಿಕಾರಿ […]

Continue Reading

500 ರೂ. ಲಂಚ ಪಡೆದಿದ್ದ ಗ್ರಾಮ ಲೆಕ್ಕಾಧಿಕಾರಿಗೆ 30 ವರ್ಷಗಳ ಬಳಿಕ ಶಿಕ್ಷೆ

ಬೆಳಗಾವಿ: ಅಣ್ಣ-ತಮ್ಮಂದಿರರ ಜಾಗದ ವಿವಾದದಲ್ಲಿ ಪಹಣಿ ಪತ್ರ ನೀಡಲು 500 ರೂ. ಲಂಚ ಪಡೆದಿದ್ದ ಗ್ರಾಮ ಲೆಕ್ಕಾಧಿಕಾರಿಗೆ 30 ವರ್ಷಗಳ ಬಳಿಕ ಸುಪ್ರೀಂಕೋರ್ಟ್ ಬುಧವಾರ ಒಂದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸುವ ಮೂಲಕ ಕೆಲ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ. ತಾಲೂಕಿನ ಕಡೋಲಿ‌ ಗ್ರಾಮದ ಲೆಕ್ಕಾಧಿಕಾರಿ ನಾಗೇಶ ಧೋಂಡು ಶಿವಂಗೇಕರ ಎಂಬಾತನಿಗೆ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ್ದು, ಆಪಾದಿತರನ್ನು ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ. ಕಡೋಲಿಯ ಲಕ್ಷ್ಮಣ ರುಕ್ಕಣ್ಣ ಕಟಾಂಬಳೆ ಇವರ ಸಹೋದರರ ಜಮೀನನ್ನು […]

Continue Reading

ತರಕಾರಿ ಸೇವನೆಯಿಂದ ಸದೃಢ ಆರೋಗ್ಯ

ಕಲಬುರಗಿ: ದೈಹಿಕ, ಮಾನಸಿಕವಾಗಿ ಜೀವಿಸಿ, ಬೆಳವಣಿಗೆ ಹೊಂದಲು, ಆರೋಗ್ಯಕರವಾಗಿರಲು ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಶುದ್ಧ, ಸ್ವಚ್ಛವಾಗಿರುವ ಹಾಗೂ ಆದಷ್ಟು ಸಾವಯುವ ಪದ್ಧತಿಯ ಮೂಲಕ ಬೆಳೆದ ತರಕಾರಿಗಳ ಸೇವನೆ ಮಾಡುವುದುರಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ್ ಹೇಳಿದರು. ನಗರದ ಆಳಂದ ರಸ್ತೆಯ ಟೋಲ್‌ಗೇಟ್ ಸಮೀಪದ ರೈತ ಚಂದ್ರಶ್ಯಾ ಇಟಗಿ ಅವರ ತರಕಾರಿ ತೋಟದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಜರುಗಿದ ‘ವಿಶ್ವ ತರಕಾರಿ ದಿನಾಚರಣೆ’ಯಲ್ಲಿ ತರಕಾರಿ ಬೆಳೆಗಾರ ರೈತ […]

Continue Reading

ಜಾನ್ಸಿ ರಾಣಿ ಲಕ್ಷ್ಮಿಬಾಯಿ ಧೀರ ಸ್ವಾತಂತ್ರ್ಯ ಹೋರಾಟಗಾರ್ತಿ

ಕಲಬುರಗಿ: ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಅನೇಕ ಮಹನೀಯರು ಹೋರಾಡಿದ್ದಾರೆ. ಮಹಿಳೆಯಾಗಿ ಅತ್ಯಂತ ಧೀರ, ಶೂರತನದಿಂದ ಹೋರಾಟ ಮಾಡುವ ಮೂಲಕ ಜಾನ್ಸಿ ರಾಣಿ ಲಕ್ಷ್ಮಿಬಾಯಿಯವರು ಮಹಿಳಾ ಲೋಕಕ್ಕೆ ಮಾದರಿಯಾಗಿದ್ದಾರೆ ಎಂದು ಎಚ್.ಬಿ ಪಾಟೀಲ ಹೇಳಿದರು. ನಗರದ ಆಳಂದ ರಸ್ತೆಯ ಶಿವ ನಗರದ ಜ್ಞಾನ ಚಿಗುರು ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಜಾನ್ಸಿ ರಾಣಿ ಲಕ್ಷ್ಮಿಬಾಯಿಯವರ 167ನೇ ಸ್ಮರಣೆ’ಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ವಿದ್ಯಾರ್ಥಿ ದೆಸೆಯಿಂದಲೇ ಇಂತಹ ಮಹನೀಯರ ಬಗ್ಗೆ ತಿಳಿದುಕೊಳ್ಳುವುದು […]

Continue Reading

1 ಲಕ್ಷ ರೂ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಕಾಳಗಿ SDA ಶರಣಪ್ಪ

ಕಲಬುರಗಿ: ರಸ್ತೆ ಕಾಮಗಾರಿ ಪೂರ್ಣಗೊಳಿಸಿದ ಪ್ರಮಾಣ ಪತ್ರ ನೀಡಲು 1 ಲಕ್ಷ ರೂ ಲಂಚ ಪಡೆಯುತ್ತಿದ್ದ ಆರೋಪದಡಿ ಕಾಳಗಿ ತಹಸೀಲ್ದಾರ್ ಕಚೇರಿಯ ದ್ವಿತೀಯ ದರ್ಜೆಯ ಸಹಾಯಕ (ಎಸ್‌ಡಿಎ) ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಮಂಗಳವಾರ ನಡೆದಿದೆ. ಕಾಳಗಿ ತಹಸೀಲ್ದಾರ್ ಕಚೇರಿಯ ದೇವಸ್ಥಾನ ಶಾಖೆಯ ಎಸ್‌ಡಿಎ ಶರಣಪ್ಪ ಲಂಚ ಪಡೆದ ಆರೋಪಿಯಾಗಿದ್ದು. ಕಲಬುರಗಿಯ ಗುತ್ತಿಗೆದಾರ ಅಣಿವೀರಯ್ಯ ಹಿರೇಮಠ ನೀಡಿದ ದೂರಿನನ್ವಯ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕಾಳಗಿಯ ಅಣಿವೀರಭದ್ರೇಶ್ವರ ದೇವಸ್ಥಾನ ಸಮೀಪದ ಸಿ.ಸಿ ರಸ್ತೆಯ […]

Continue Reading

ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ: ಡಾ.ಅನುಪಮಾ ಕೇಶ್ವಾರ

ಕಲಬುರಗಿ: ಮಳೆಗಾಲದಲ್ಲಿ ಸರ್ವರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು. ನಗರದ ಶೇಖರೋಜಾದ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಜರುಗಿದ ‘ಮಳೆಗಾಲದಲ್ಲಿ ಆರೋಗ್ಯದ ಮುಂಜಾಗೃತಾ ಕ್ರಮಗಳು ವಿಶೇಷ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದ ಅವರು, ಮಳೆಗಾಲ ಪ್ರಾರಂಭವಾಗಿದೆ ವಾತಾವರಣದ ತಂಪಾಗಿದೆ. ಡೆಂಗ್ಯೂ, ಮಲೇರಿಯಾ, ಶೀತ, ನೆಗಡಿ, ಜ್ವರ, ಅಜೀರ್ಣ ಸಮಸ್ಯೆ, ಕಾಲರಾದಂತಹ ಮುಂತಾದ ಸಾಮಾನ್ಯ ಕಾಯಿಲೆಗಳು ಕಂಡುಬರುತ್ತವೆ. ಇಂತಹ ಸಮಯದಲ್ಲಿ ರೋಗನಿರೋಧಕ […]

Continue Reading

ವ್ಯಕ್ತಿಯ ಲೋಕೇಷನ್ ಮಾಹಿತಿ ಕೊಟ್ಟಿದ್ದಕ್ಕೆ ಹಾನಗಲ್ CPI ಆಂಜನೇಯ ಅಮಾನತು

ಹಾವೇರಿ: ಸಮುದಾಯವೊಂದರ ಪ್ರಭಾವಿ ತಂಗಿದ್ದ ಸ್ಥಳದ ಬಗ್ಗೆ ಲೋಕೇಷನ್ ಸಮೇತ ಅನ್ಯರಿಗೆ ಮಾಹಿತಿ ಕೊಟ್ಟ ಆರೋಪದಡಿ ಹಾನಗಲ್ ಸರ್ಕಲ್ ಇನ್‌ಸ್ಪೆಕ್ಟರ್ (ಸಿಪಿಐ) ಆಂಜನೇಯ ಎನ್‌.ಎಚ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಲೋಕೇಷನ್‌ನಿಂದ ಸಮಸ್ಯೆಗೆ ಸಿಲುಕಿದ್ದ ಹಾನಗಲ್ ಪಟ್ಟಣದ ಪ್ರಭಾವಿ ನೀಡಿದ್ದ ಮಾಹಿತಿ ಅನ್ವಯ ಪ್ರಾಥಮಿಕ ತನಿಖೆ ನಡೆಸಿ ವರದಿ ಪಡೆದಿದ್ದ ದಾವಣಗೆರೆ ವಲಯದ ಐಜಿಪಿ ರವಿಕಾಂತೇಗೌಡ ಅವರು ಸಿಪಿಐ ಆಂಜನೇಯ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಐಜಿಪಿ ಆದೇಶ ಉಲ್ಲೇಖಿಸಿ ಮತ್ತೊಂದು ಆದೇಶ ಹೊರಡಿಸಿರುವ ಜಿಲ್ಲಾ ಎಸ್ಪಿ […]

Continue Reading

ಭಕ್ತರ ದೇಣಿಗೆ ಹಣ ದೇವಸ್ಥಾನದ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಲು ಅಂಡಗಿ ಮನವಿ

ಕಲಬುರಗಿ: ಮುಜರಾಯಿ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ಸಂಗ್ರಹವಾಗುವ ಭಕ್ತರ ದೇಣಿಗೆ ಹಣ ದೇವಾಲಯದ ಅಭೀವೃದ್ಧಿಗೆ ಮಾತ್ರ ಬಳಸಿಕೊಳ್ಳಬೇಕು, ಬೇರೆ ಬೇರೆ ಯೋಜನೆಗಳಿಗೆ ಬಳಸಿಕೊಳ್ಳದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕಛೇರಿ ಮುಖಾಂತರ ಘನ ಸರ್ಕಾರದ ಮುಜರಾಯಿ ಸಚಿವರಿಗೆ ಟೆಂಗಳಿ ಅಂಡಗಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಅಂಡಗಿ ಮನವಿ ಮಾಡಿದ್ದಾರೆ. ಜಿಲ್ಲಾ ಧಾರ್ಮಿಕ ಪರಿಷತ್ತು ಹಾಗೂ ವಿವಿಧ ದೇವಸ್ಥಾನಗಳ ವ್ಯವಸ್ಥಾಪಕ ಮಂಡಳಿ ಇದುವರೆಗೆ ರಚನೆಯಾಗಿಲ್ಲ. ಕೂಡಲೇ ರಚನೆ ಮಾಡಿ ಭಕ್ತಿಯ ಸೇವೆ ಮಾಡುತ್ತಿರುವ ಭಕ್ತರಿಗೆ ಪರಿಷತ್ತು ಮತ್ತು ಮಂಡಳಿಯಲ್ಲಿ […]

Continue Reading