ವಾಡಿ ಪುರಸಭೆ: 10 ವರ್ಷಕ್ಕಿಂತ ಹೆಚ್ಚು ಅವಧಿ ಕರ್ತವ್ಯದಲ್ಲಿರುವ ನೌಕರರ ವರ್ಗಾವಣೆಗೆ ಕರವೇ ಒತ್ತಾಯ

ಜಿಲ್ಲೆ

ಚಿತ್ತಾಪುರ: ವಾಡಿ ಪುರಸಭೆಯಲ್ಲಿ 3 ಜನ ನೌಕರರು 10 ರಿಂದ 15 ವರ್ಷಗಳಾದರೂ ಇನ್ನೂ ವಾಡಿಕೆಯಲ್ಲೆ ಕಾರ್ಯನಿರ್ವಹಿಸುತ್ತಿದ್ದಾರೆ, ಹೀಗಾಗಿ ಆದಷ್ಟು ಬೇಗ ಅವರನ್ನು ವರ್ಗಾವಣೆ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಚಂದರ ಚವ್ಹಾಣ ಮತ್ತು ಘಟಕದ ಅಧ್ಯಕ್ಷ ಶಿವಕುಮಾರ ಗುತ್ತೆದಾರ ಅವರು ಬೆಂಗಳೂರು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

ತಾಲೂಕಿನ ವಾಡಿ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಅಧಿಕಾರಿ ಈಶ್ವರ ಅಂಬೆಕಾರ, ಪ್ರಥಮ ದರ್ಜೆ ಸಹಾಯಕ ವಿರುಪಾಕ್ಷ ಮತ್ತು ಆರೋಗ್ಯ ನಿರಿಕ್ಷಕಿ ಲತಾಮಣಿ ಇವರು ಸುಮಾರು 10- 15 ವರ್ಷಗಳಿಂದ ವಾಡಿ ಕಛೆರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಬೇಕು ಎಂದು ಕಳೆದ ವರ್ಷ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಿಗೆ ಮನವಿ ಮಾಡಿದಾಗ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರ ತಾತ್ಕಾಲಿಕ ವರ್ಗಾವಣೆ ಮಾಡಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಿಗೆ ನಕಲಿ ಪತ್ರ ಬರೆದು ಪೋಸ್ಟ್ ಮಾಡಿರುತಾರೆ,

ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಪತ್ರ ಬರೆದು ಒಂದು ವರ್ಷವಾದರು ಮರು ಉತ್ತರ ಬಾರದಿರುವದಕ್ಕೆ ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಕಚೇರಿಗೆ ಭೆಟಿಯಾಗಿ ವಿಚಾರಿಸಿದಾಗ ಇಲ್ಲಿಯ ಕಛೆರಿಯಲ್ಲಿ ಯಾವುದೆ ಪತ್ರ ಬಂದಿರುವುದಿಲ್ಲ ಎಂದು ತಿಳಿಸುತ್ತಾರೆ.

ಕಲಬುರಗಿ ಜಿಲ್ಲೆಯಲ್ಲಿ ಅಧಿಕಾರಿಗಳ ದರ್ಬಾರ್ ತುಂಬಾ ಜೋರಾಗಿ ನಡೆದಿದೆ, ಇಲ್ಲಿ ಕೇಳುವವರು, ಹೇಳುವವರು ಯಾರು ಇಲ್ಲ, ಇಲ್ಲಿ ಬ್ರಷ್ಟ ಅಧಿಕಾರಿಗಳಿಗೆ ತಲೆಮೆಲೆ ಕೂಡಿಸಿಕೊಂಡು ಜಾತ್ರೆ ಮಾಡುತ್ತಿದ್ದಾರೆ. ಯೋಜನಾ ನಿರ್ದೇಶಕರು ಕಲಬುರಗಿ ಇವರ ಮೇಲೆ ಕೂಡಲೆ ಕಾನೂನು ಕ್ರಮ ಜರಗಿಸಬೇಕು ಮತ್ತು ಈಶ್ವರ ಅಂಬೇಕಾರ ಮಾಡಿರುವ ಹಗರಣ ತನಿಖೆ ಮಾಡಿ ಇವರ ಮೇಲು ಕಾನೂನು ಕ್ರಮ ಕೈಗೊಳ್ಳಬೇಕು, ಇವರಗೆ ಕೂಡಲೆ ವರ್ಗಾವಣೆ ಮಾಡಬೇಕು ಎಂದು ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಇವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಚಿತ್ತಾಪೂರ ಘಟಕ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಿವುಮಾರ ಗುತ್ತೆದಾರ, ಭಾಸ್ಕರ ಕರಿಚಕ್ರ, ಮೋನಪ್ಪಾ ಹಾದಿಮನಿ, ದೇವಪ್ಪಾ ಯಾಗಾಪೂರ, ರಮೇಶ, ಪ್ರೇಮ ಜೋಶಿ, ರಫಿಕ ಇದ್ದರು.

Leave a Reply

Your email address will not be published. Required fields are marked *