ಹಠಾತ್‌ ಎದೆನೋವು: ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಆಸ್ಪತ್ರೆಗೆ ದಾಖಲು

ನವದೆಹಲಿ: ಎದೆಯಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರನ್ನು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ರವಿವಾರ ಮುಂಜಾನೆ ದಾಖಲಿಸಲಾಗಿದೆ. 73 ವರ್ಷ ವಯಸ್ಸಿನ ಅವರನ್ನು ತಡರಾತ್ರಿ 2 ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಎಐಐಎಂಎಸ್‌ನಲ್ಲಿ ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ.ರಾಜಿವ್ ನಾರಾಂಗ್ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಧನಕರ್‌ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ವೈದ್ಯರ ತಂಡವು ಅವರ ಆರೋಗ್ಯವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ.

Continue Reading

ವೃತ್ತಿ ಕುಂಬಾರರಿಗೆ ಆರ್ಥಿಕ ಭದ್ರತೆ ದೊರೆಯಲಿ

ಕಲಬುರಗಿ: ಕುಂಬಾರಿಕೆಗೆ ಆಧುನಿಕತೆಯಿಂದ ವೃತ್ತಿಗೆ ತೊಂದರೆಯಾಗುತ್ತಿದೆ. ಕಷ್ಟದ ಸ್ಥಿತಿಯಲ್ಲಿಯೂ ವೃತ್ತಿ ಕಾಪಾಡಿಕೊಂಡು ಬರುತ್ತಿರುವ ವೃತ್ತಿ ಕುಂಬಾರರಿಗೆ ಆರ್ಥಿಕ ಭದ್ರತೆಯ ಯೋಜನೆಗಳು ಸಮರ್ಪಕವಾಗಿ ದೊರೆಯಬೇಕಾಗಿದೆ ಎಂದು ಸಮಾಜ ಸೇವಕ ಎಚ್.ಬಿ ಪಾಟೀಲ ಹೇಳಿದರು. ನಗರದ ಆಳಂದ ರಸ್ತೆಯ ಶೆಟ್ಟಿ ಟಾಕೀಸ್ ಸಮೀಪದ ವೃತ್ತಿ ಕುಂಬಾರ ಶಿವಶರಣಪ್ಪ ಕುಂಬಾರ ಅವರಳ್ಳಿ ಅವರಿಗೆ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ಗೌರವ ಸತ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಗೃಹ ಕೈಗಾರಿಕೆಯಲ್ಲಿ ಕುಂಬಾರಿಕೆ ಒಂದು. ಈ ವೃತ್ತಿಗೆ ಮಣ್ಣೆ ಆಧಾರ. […]

Continue Reading

ಬಳ್ಳಾರಿಯಲ್ಲಿ ಚರ್ಚೆಗೆ ಗ್ರಾಸವಾದ ಅಮಿತ್ ಶಾ, ಜನಾರ್ದನ ರೆಡ್ಡಿ ಭೇಟಿ

ಬಳ್ಳಾರಿ: ಕೇಂದ್ರ ಗ್ರಹ ಸಚಿವ ಅಮಿತ್ ಶಾ ಶುಕ್ರವಾರ ಬೆಂಗಳೂರಿಗೆ ಬಂದಿದ್ದರು. ಆ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಬೇಕು ಎಂದು ಬಳ್ಳಾರಿಯ ಬಿಜೆಪಿ ನಾಯಕ ಶ್ರೀರಾಮುಲು ಬಯಸಿದ್ದರು. ಆದರೆ ಇತ್ತೀಚಿಗಷ್ಟೇ ಅವರ ವಿರುದ್ಧ ಮುನಿಸಿಕೊಂಡಿರುವ ಶಾಸಕ ಜನಾರ್ದನ ರೆಡ್ಡಿ, ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮತ್ತೊಂದೆಡೆ ರಾಮುಲುಗೆ ಅಮಿತ್ ಶಾ ಭೇಟಿಯಾಗುವ ಅವಕಾಶ ಸಿಗಲಿಲ್ಲ. ಇದು ಸದ್ಯ ಬಳ್ಳಾರಿ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಂಡ ಬಳಿಕ ದೆಹಲಿಗೆ […]

Continue Reading

ಮಾನವನಿಂದ ಮಾನವನ ಶೋಷಣೆ ತಪ್ಪಿಸಲು ಜೆ.ವಿ ಸ್ಟಾಲಿನ್ ವಿಚಾರಗಳು ಅಗತ್ಯ

ಸುದ್ದಿ ಸಂಗ್ರಹ ಶಹಾಬಾದ ವಿಶ್ವದಲ್ಲಿ ಬಂಡವಾಳಶಾಹಿಗಳ ಹಾಗೂ ಸಾಮ್ರಾಜ್ಯಶಾಹಿಗಳ ಮಾರುಕಟ್ಟೆಗಾಗಿ ಯುದ್ಧವನ್ನು ಪ್ರಚೋದಿಸುತ್ತಿದ್ದು ಮಾನವ ಕುಲವನ್ನು ವಿನಾಶದ ಅಂಚಿಗೆ ತಳ್ಳುತ್ತಿರುವದು ಒಂದು ಕಡೆಯಾದರೆ, ಮಾನವನ ಶ್ರಮ ನಿರಂತರವಾಗಿ ಶೋಷಣೆ ಮಾಡುತ್ತಿರುವದು ಮತ್ತೊಂದೆಡೆ ಕಾಣಬಹುದು ಎಂದು ಎಸ್’ಯುಸಿಐ (ಸಿ) ಶಹಾಬಾದ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಕಾಮ್ರೇಡ್ ಗಣಪತರಾವ ಕೆ ಮಾನೆ ಹೇಳಿದರು. ಹನುಮಾನ ನಗರದಲ್ಲಿ ಕಾರ್ಮಿಕ ವರ್ಗದ ಮಹಾನ್ ನಾಯಕ ಕಾಮ್ರೇಡ್ ಜೆ.ವಿ ಸ್ಟಾಲಿನ್ ಅವರ 72ನೇ ಸ್ಮರಣ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದುಡಿಯುವ […]

Continue Reading

ಸಮನ್ವಯತೆಯ ಸಾಕಾರ ಮೂರ್ತಿ ಸಂತ ಶಿಶುನಾಳ ಶರೀಫ್

ಕಲಬುರಗಿ: ಯಾವುದೆ ಜಾತಿ, ಧರ್ಮ, ಪ್ರದೇಶ ದೊಡ್ಡದಲ್ಲ. ಬದಲಿಗೆ ಮಾನವೀಯತೆಯಿಂದ ಬದುಕುವದೆ ಶ್ರೇಷ್ಠ ಜೀವನವಾಗುತ್ತದೆಯೆಂದು ಪ್ರತಿಯೊಬ್ಬರಲ್ಲಿ ಸೌಹಾರ್ಧತೆಯುತವಾದ ಬದುಕುವ ಕಲೆಯನ್ನು ಸಾರಿದ ಸಂತ ಶಿಶುನಾಳ ಶರೀಫರು ಸಮನ್ವಯತೆಯ ಸಾಕಾರ ಮೂರ್ತಿಯಾಗಿ ಕಂಡುಬರುತ್ತಾರೆ ಎಂದು ಉಪನ್ಯಾಸ, ಚಿಂತಕ ಎಚ್.ಬಿ ಪಾಟೀಲ ಹೇಳಿದರು. ನಗರದ ಆಳಂದ ರಸ್ತೆಯ ಜೆ.ಆರ್ ನಗರದ ಖಾದ್ರಿ ಚೌಕ್‌ನಲ್ಲಿರುವ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಸಂಜೆ ಏರ್ಪಡಿಸಿದ್ದ ‘ಶ್ರೇಷ್ಠ ಸಂತ ಶಿಶುನಾಳ ಶರೀಫ್‌ರ 206ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ […]

Continue Reading

ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರಕ್ಕೆ ಬಂಪರ್ ಫಲಿತಾಂಶ

ಕಲಬುರಗಿ: ಗುಣಮಟ್ಟದ ಕಂಪ್ಯೂಟರ ಶಿಕ್ಷಣ ನೀಡುವಲ್ಲಿ ತನ್ನದೆಯಾದ ಛಾಪು ಮೂಡಿಸಿರುವ ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನಲ್ಲಿರುವ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ ‘ಗಣಕಯಂತ್ರ ಶಿಕ್ಷಣ ಪರೀಕ್ಷೆ’ಯಲ್ಲಿ ಶೇ.97.23 ಉತ್ತಮ ಫಲಿತಾಂಶ ಪಡೆದಿದೆ ಎಂದು ತರಬೇತಿ ಕೇಂದ್ರದ ಅಧ್ಯಕ್ಷ ಅಸ್ಲಾಂ ಶೇಖ್ ಹೇಳಿದರು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಳೆದ ಅಗಷ್ಟನಲ್ಲಿ ಪರೀಕ್ಷೆ ನಡೆಸಲಾಗಿತ್ತು, ಪರೀಕ್ಷೆಗೆ ಹಾಜರಾದ 181 ವಿದ್ಯಾರ್ಥಿಗಳಲ್ಲಿ 176 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಾವೇರಿ ಬಿ. ಹೌದೆ (ಶೇ.91),ರಹಿಮಾ ಬೇಗಂ (ಶೇ.91), ಶಾಂತಲಾ […]

Continue Reading

ರಮ್ಯಾ ಕಮ್ ಬ್ಯಾಕ್: ರಮ್ಯಾಗೆ ಯೋಗರಾಜ್ ಭಟ್ ನಿರ್ದೆಶನ

ಸುದ್ದಿ ಸಂಗ್ರಹ ಬೆಂಗಳೂರು ಮೋಹಕ ತಾರೆ ರಮ್ಯಾ ಕೊನೆಗೂ ಸಿನಿಮಾಗೆ ಕಮ್ ಬ್ಯಾಕ್ ಆಗುವ ಕಾಲ ಬಂತು. ರಂಗ ಎಸ್‌ಎಸ್‌ಎಲ್‌ಸಿ ಆದ್ಮೇಲೆ 20 ವರ್ಷಗಳ ನಂತರ ಮತ್ತೆ ಯೋಗರಾಜ್ ಭಟ್ ಜೊತೆಗೆ ಸಿನಿಮಾ ಮಾಡಲು ರಮ್ಯಾ ಸಾಥ್ ನೀಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ರಮ್ಯಾ ಮತ್ತೆ ಬೆಳ್ಳಿಪರದೆಯಲ್ಲಿ ಮಿಂಚಲು ವೇದಿಕೆ ಸಜ್ಜಾಗಿದೆ. ವಿಕಟಕವಿ ನಿರ್ದೇಶಕ ಯೋಗರಾಜ್ ಭಟ್ ಬರೆದ ಸ್ಕ್ರಿಪ್ಟ್ ಇಷ್ಟವಾಗಿ ನಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮನದ ಕಡಲು ಸಿನಿಮಾಗೆ ಬಂಡವಾಳ […]

Continue Reading

ಬಜೆಟ್‌ನಲ್ಲಿ ಹೊಸ ಜಿಲ್ಲೆಗಳ ಘೋಷಣೆ ?

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾರ್ಚ್ 7 ರಂದು ತಮ್ಮ ರಾಜಕೀಯ ಜೀವನದಲ್ಲಿ 16ನೇ ಬಾರಿ ರಾಜ್ಯ ಬಜೆಟ್ ಮಂಡನೆ ಮಾಡಿ ಇತಿಹಾಸ ಸೃಷ್ಟಿ ಮಾಡಲಿದ್ದಾರೆ. ಈ ಬಾರಿಯ ಆಯವ್ಯಯದಲ್ಲಿ ಹಲವು ಯೋಜನೆಗಳು ಘೋಷಣೆಯಾಗುವ ನಿರೀಕ್ಷೆಯಲ್ಲಿ ರಾಜ್ಯದ ಜನತೆ ಇದ್ದಾರೆ. ಬಜೆಟ್‌ನಲ್ಲಿ ವಿಶೇಷ ಯೋಜನೆಗಳ ಜೊತೆಗೆ ಕೆಲವು ಜಿಲ್ಲೆಗಳ ರಚನೆ ಕುರಿತು ಶುಭಸುದ್ದಿ ಸಿಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ದಾಖಲೆಯ 16ನೇ ಬಜೆಟ್‌ನಲ್ಲಿ ಗ್ಯಾರಂಟಿಗಳ ಹೊರತಾಗಿ ಈ ಬಾರಿಯ ಬಜೆಟ್‌ನಲ್ಲಿ ಹೊಸದೆನು ಇರಲಿದೆ ಎಂಬುದು ಕೂಡ ಚರ್ಚೆಯಾಗುತ್ತಿದೆ. ರೈತರಿಗೆ, ಮಹಿಳೆಯರಿಗೆ […]

Continue Reading

ಸಂಗೀತ ಕ್ಷೇತ್ರಕ್ಕೆ ಗಂಗೂಬಾಯಿ ಹಾನಗಲ್ ಕೊಡುಗೆ ಅಪಾರ

ಕಲಬುರಗಿ: ಸಂಗೀತ ಕ್ಷೇತ್ರದ ಬೆಳವಣಿಗೆಗೆ ತಮ್ಮ ಜೀವನದುದ್ದಕ್ಕೂ ಸೇವೆ ಸಲ್ಲಿಸಿ ನಾಡಿನ ಕೀರ್ತಿ ದೇಶದಾದ್ಯಂತ ಪಸರಿಸುವಂತೆ ಮಾಡಿದ ಸಂಗೀತ ದಿಗ್ಗಜೆ ಗಂಗೂಬಾಯಿ ಹಾನಗಲ್ ಕೊಡುಗೆ ಅಪಾರವಾಗಿದೆ ಎಂದು ಹಿರಿಯ ಸಂಗೀತ ಕಲಾವಿದ ಹಣಮಂತರಾಯ ಮಂಗಾಣೆ ಹೇಳಿದರು. ನಗರದ ಆಳಂದ ಚೆಕ್‌ಪೋಸ್ಟ್ ಸಮೀಪದ ಗಾನ ಗಂಧರ್ವ ಸಂಗೀತ ಪಾಠಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಸಂಜೆ ಜರುಗಿದ ಐತಿಹಾಸಿಕ 4,900ನೇ ಕಾರ್ಯಕ್ರಮವಾದ ‘ಗಂಗೂಬಾಯಿ ಹಾನಗಲ್‌ರ 112ನೇ ಜನ್ಮದಿನಾಚರಣೆ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, […]

Continue Reading

ನಾಳೆಯಿಂದ ಸಿದ್ಧ ವೀರೇಶ್ವರ ಪೆದ್ದು ಮಠದಲ್ಲಿ ಪ್ರವಚನ

ಚಿತ್ತಾಪುರ: ಪಟ್ಟಣದ ಕಡಬೂರ್ ಬಡಾವಣೆಯ ಸಿದ್ಧ ವೀರೇಶ್ವರ ಪೆದ್ದು ಮಠದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ನಿಮಿತ್ಯ ಜ್ಞಾನಾಮೃತ ಪ್ರವಚನ ಕಾರ್ಯಕ್ರಮ ನಾಳೆ ಶುಕ್ರವಾರದಿಂದ ಆರಂಭಗೊಳ್ಳಲಿದೆ ಎಂದು ಸಿದ್ಧ ವೀರೇಶ್ವರ ಪೆದ್ದು ಮಠದ ಸೇವಕ ಶರಣು ಉಡಗಿ ತಿಳಿಸಿದ್ದಾರೆ. 15 ವರ್ಷಗಳಿಂದ ರೇಣುಕಾಚಾರ್ಯರ ಜಯಂತಿ ಅಂಗವಾಗಿ ದಿಗ್ಗಾಂವ ಪಂಚಗ್ರಹ ಹಿರೇಮಠದ ಸಿದ್ಧವೀರ ಶಿವಾಚಾರ್ಯರ ನೇತೃತ್ವದಲ್ಲಿ ಭಕ್ತರ ಇಚ್ಛೆಯಂತೆ ಪ್ರವಚನ ನಡೆಯುತ್ತದೆ. ಮಾ.7 ರಿಂದ 12ರವರೆಗೆ ಪ್ರತಿದಿನ ಪ್ರವಚನ ನಡೆಯಲಿದೆ. ಸನ್ನತಿಯ ಸಂಸ್ಥಾನ ಹಿರೇಮಠದ ಜಗದೀಶ ಶಾಸ್ತ್ರಿಗಳು ಪ್ರವಚನ ನೀಡುವರು. […]

Continue Reading