ಸಂಗೀತ ಕ್ಷೇತ್ರಕ್ಕೆ ಗಂಗೂಬಾಯಿ ಹಾನಗಲ್ ಕೊಡುಗೆ ಅಪಾರ

ಕಲಬುರಗಿ: ಸಂಗೀತ ಕ್ಷೇತ್ರದ ಬೆಳವಣಿಗೆಗೆ ತಮ್ಮ ಜೀವನದುದ್ದಕ್ಕೂ ಸೇವೆ ಸಲ್ಲಿಸಿ ನಾಡಿನ ಕೀರ್ತಿ ದೇಶದಾದ್ಯಂತ ಪಸರಿಸುವಂತೆ ಮಾಡಿದ ಸಂಗೀತ ದಿಗ್ಗಜೆ ಗಂಗೂಬಾಯಿ ಹಾನಗಲ್ ಕೊಡುಗೆ ಅಪಾರವಾಗಿದೆ ಎಂದು ಹಿರಿಯ ಸಂಗೀತ ಕಲಾವಿದ ಹಣಮಂತರಾಯ ಮಂಗಾಣೆ ಹೇಳಿದರು. ನಗರದ ಆಳಂದ ಚೆಕ್‌ಪೋಸ್ಟ್ ಸಮೀಪದ ಗಾನ ಗಂಧರ್ವ ಸಂಗೀತ ಪಾಠಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಸಂಜೆ ಜರುಗಿದ ಐತಿಹಾಸಿಕ 4,900ನೇ ಕಾರ್ಯಕ್ರಮವಾದ ‘ಗಂಗೂಬಾಯಿ ಹಾನಗಲ್‌ರ 112ನೇ ಜನ್ಮದಿನಾಚರಣೆ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, […]

Continue Reading

ನಾಳೆಯಿಂದ ಸಿದ್ಧ ವೀರೇಶ್ವರ ಪೆದ್ದು ಮಠದಲ್ಲಿ ಪ್ರವಚನ

ಚಿತ್ತಾಪುರ: ಪಟ್ಟಣದ ಕಡಬೂರ್ ಬಡಾವಣೆಯ ಸಿದ್ಧ ವೀರೇಶ್ವರ ಪೆದ್ದು ಮಠದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ನಿಮಿತ್ಯ ಜ್ಞಾನಾಮೃತ ಪ್ರವಚನ ಕಾರ್ಯಕ್ರಮ ನಾಳೆ ಶುಕ್ರವಾರದಿಂದ ಆರಂಭಗೊಳ್ಳಲಿದೆ ಎಂದು ಸಿದ್ಧ ವೀರೇಶ್ವರ ಪೆದ್ದು ಮಠದ ಸೇವಕ ಶರಣು ಉಡಗಿ ತಿಳಿಸಿದ್ದಾರೆ. 15 ವರ್ಷಗಳಿಂದ ರೇಣುಕಾಚಾರ್ಯರ ಜಯಂತಿ ಅಂಗವಾಗಿ ದಿಗ್ಗಾಂವ ಪಂಚಗ್ರಹ ಹಿರೇಮಠದ ಸಿದ್ಧವೀರ ಶಿವಾಚಾರ್ಯರ ನೇತೃತ್ವದಲ್ಲಿ ಭಕ್ತರ ಇಚ್ಛೆಯಂತೆ ಪ್ರವಚನ ನಡೆಯುತ್ತದೆ. ಮಾ.7 ರಿಂದ 12ರವರೆಗೆ ಪ್ರತಿದಿನ ಪ್ರವಚನ ನಡೆಯಲಿದೆ. ಸನ್ನತಿಯ ಸಂಸ್ಥಾನ ಹಿರೇಮಠದ ಜಗದೀಶ ಶಾಸ್ತ್ರಿಗಳು ಪ್ರವಚನ ನೀಡುವರು. […]

Continue Reading

ಡಿಕೆಶಿ ನಟ್ಟು ಬೋಲ್ಟು ವಿವಾದ: ಡಿಸಿಎಂ ಹೇಳಿಕೆ ಸರಿಯಲ್ಲ ಎಂದ ರಮ್ಯಾ

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ ಅವರು ಕಲಾವಿದರ ನಟ್ಟು ಬೋಲ್ಟು ಟೈಟ್ ಮಾಡ್ತಿನಿ ಎಂದ ಹೇಳಿಕೆಯ ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಡಿಸಿಎಂ ಡಿಕೆಶಿ ಅವರು ನೀಡಿರುವ ಹೇಳಿಕೆ ಸರಿಯಲ್ಲ. ಹಾಗೆ ಮಾತನಾಡಬಾರದಿತ್ತು ಎಂದು ರಮ್ಯಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ ನಟ್ಟು ಬೋಲ್ಟ್ ಹೇಳಿಕೆ ಸರಿಯಲ್ಲ. ಅವರು ಹಾಗೆ ಮಾತನಾಡಬಾರದಿತ್ತು. ಬೆದರಿಸುವ ಉದ್ದೇಶ ಇಲ್ಲ ಅಂತ ಅವರೇ ಸ್ಪಷ್ಟನೆ ನೀಡಿದ್ದಾರೆ. ಅವರು ಹೇಳಿದ ಹೇಳಿಕೆ ತಪ್ಪು. ಅವರು ಹೇಳಿದ ರೀತಿ ಕೆಲವರಿಗೆ ಇಷ್ಟ ಆಗಿಲ್ಲ. […]

Continue Reading

ಸಂಗೀತ ಕ್ಷೇತ್ರಕ್ಕೆ ಗಂಗೂಬಾಯಿ ಹಾನಗಲ್ ಕೊಡುಗೆ ಅಪಾರ

ಕಲಬುರಗಿ: ಸಂಗೀತ ಕ್ಷೇತ್ರದ ಬೆಳವಣಿಗೆಗೆ ಜೀವನದುದ್ದಕ್ಕೂ ಸೇವೆ ಸಲ್ಲಿಸಿ ನಮ್ಮ ನಾಡಿನ ಕೀರ್ತಿ ದೇಶದಾದ್ಯಂತ ಪಸರಿಸುವಂತೆ ಮಾಡಿದ ಸಂಗೀತ ದಿಗ್ಗಜೆ ಗಂಗೂಬಾಯಿ ಹಾನಗಲ್ ಕೊಡುಗೆ ಅಪಾರವಾಗಿದೆ ಎಂದು ಹಿರಿಯ ಸಂಗೀತ ಕಲಾವಿದ ಹಣಮಂತರಾಯ ಮಂಗಾಣೆ ಹೇಳಿದರು. ನಗರದ ಆಳಂದ ಚೆಕ್‌ಪೋಸ್ಟ್ ಸಮೀಪದ ಗಾನ ಗಂಧರ್ವ ಸಂಗೀತ ಪಾಠಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ಐತಿಹಾಸಿಕ 4,900ನೇ ಕಾರ್ಯಕ್ರಮವಾದ ‘ಗಂಗೂಬಾಯಿ ಹಾನಗಲ್‌ರ 112ನೇ ಜನ್ಮದಿನಾಚರಣೆ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ವ್ಯಕ್ತಿಯಲ್ಲಿ […]

Continue Reading

ಎಪಿಎಂಸಿ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ನಿಲ್ಲಿಸಲು ಕರವೇ ಒತ್ತಾಯ

ಚಿತ್ತಾಪುರ: ಎಪಿಎಂಸಿ ವಾಣಿಜ್ಯ ಮಳಿಗೆಗಳನ್ನು ಮೊದಲು ಖಾಲಿ ಮಾಡಿಸಿ ನಂತರ ಹರಾಜು ಪ್ರಕ್ರಿಯೆ ನಡೆಸಿ, ಅಲ್ಲಿವರೆಗೆ ಹರಾಜು ಪ್ರಕ್ರಿಯೆ ನಿಲ್ಲಿಸಬೇಕು ಎಂದು ಒತ್ತಾಯಿಸಿ ಕರವೇ ನಾರಾಯಣಗೌಡ ಬಣದ ತಾಲೂಕು ಅಧ್ಯಕ್ಷರು ಮತ್ತು ಸದಸ್ಯರು ಎಪಿಎಂಸಿ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿದರು. ಕರವೇ ತಾಲೂಕು ಅಧ್ಯಕ್ಷ ಚಂದರ್ ಚವ್ಹಾಣ ಮಾತನಾಡಿ, ಪಟ್ಟಣದ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವಾಣಿಜ್ಯ ಮಳಿಗೆಗಳ ಹಂಚಿಕೆ ಮತ್ತು ಹರಾಜು ಪ್ರಕ್ರಿಯೆ ನಡೆಯುತ್ತಿದೆ, ಅಂಗಡಿ ಸಂಖ್ಯೆ 3,7,8 ಖಾಲಿ ಮಾಡಲಾರದೆ ಹರಾಜು […]

Continue Reading

ನಟಿ ರನ್ಯಾರಾವ ಮನೆಯಲ್ಲಿ ಅತಿ ದೊಡ್ಡ ಕಾರ್ಯಾಚರಣೆ

ಬೆಂಗಳೂರು: ನಟಿ ರನ್ಯಾರಾವ ಮನೆ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯ(DRI) ದಾಳಿ ನಡೆಸಿ 17.29 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ. ದಾಳಿಯ ಸಂದರ್ಭದಲ್ಲಿ 2.67 ಕೋಟಿ ರೂ. ನಗದು ಮತ್ತು 2.06 ಕೋಟಿ ಮೌಲ್ಯದ ಚಿನ್ನಾಭರಣ ಸೇರಿದಂತೆ ಒಟ್ಟು 17.29 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ, ಇದೊಂದು ಅತಿ ದೊಡ್ಡ ಕಾರ್ಯಾಚರಣೆ ಎಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ಖೈದಿ ನಂ 2198 14.2 ಕೆಜಿ ಚಿನ್ನ ಕಳ್ಳಸಾಗಾಟದಲ್ಲಿ ಜೈಲು ಸೇರಿದ್ದ ನಟಿ ರನ್ಯಾರಾವಗೆ ಜೈಲಾಧಿಕಾರಿಗಳು […]

Continue Reading

ಆರೋಗ್ಯದ ಸುರಕ್ಷತೆ ಕಾಪಾಡಿಕೊಳ್ಳುವದು ಅಗತ್ಯ

ಕಲಬುರಗಿ: ಆಹಾರದಲ್ಲಿ ಯಾವುದೆ ರೀತಿಯ ಕಲಬೆರಕೆ ಇಲ್ಲದೆ ಸುರಕ್ಷತೆಯಿಂದ ಇರಬೇಕು. ವಾಹನ ಚಲಾವಣೆ ಮಾಡುವಾಗ ಸಾರಿಗೆ ನಿಯಮಗಳನ್ನು ಪಾಲಿಸಬೇಕು. ಆರೋಗ್ಯದ ಸುರಕ್ಷತೆ ಕಾಪಾಡಿಕೊಳ್ಳುವದು ಅಗತ್ಯವಾಗಿದೆ ಎಂದು ವೈದ್ಯ ಡಾ. ವಿ.ಬಿ ಮಠಪತಿ ಹೇಳಿದರು. ನಗರದ ಹುಮನಾಬಾದ ರಿಂಗ್ ರಸ್ತೆಯಲ್ಲಿನ ನಿಜಾಮಪುರನಲ್ಲಿರುವ ಮಠಪತಿ ಕ್ಲಿನಿಕ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ರಾಷ್ಟ್ರೀಯ ಸುರಕ್ಷತಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಕಿ ಅವಘಡಗಳು, ಪ್ರವಾಹ, ಸಾಂಕ್ರಾಮಿಕ ರೋಗಗಳಿಂದ ಸಂರಕ್ಷಿಸುವದು. ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕ ವರ್ಗಕ್ಕೆ ಸುರಕ್ಷತೆ […]

Continue Reading

ಮಕ್ಕಳು ವಿಜ್ಞಾನದ ಆಸಕ್ತಿ ಹೆಚ್ಚಾಗಿ ಬೆಳೆಸಿಕೊಳ್ಳಬೇಕು: ಸಿದ್ದಲಿಂಗ ಸ್ವಾಮಿಜಿ

ಚಿತ್ತಾಪುರ: 21ನೇ ಶತಮಾನದ ವಿಜ್ಞಾನ ತಂತ್ರಜ್ಞಾನದ ಕಾಲವು ಅನೇಕ ಆವಿಷ್ಕಾರ ನಡೆಯುತ್ತಿರುವ ಸಮಯದಲ್ಲಿ ಪ್ರತಿಯೊಬ್ಬರು ವಿಜ್ಞಾನದ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ರಾವೂರ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು. ಸಮೀಪದ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಇಕೋ ಕ್ಲಬ್ ವತಿಯಿಂದ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಕ್ರಿಯಾಶೀಲತೆ ಹಾಗೂ ಸೃಜನಶಿಲತೆ ಬೆಳೆಸಲು ವಿಜ್ಞಾನ ವಸ್ತು ಪ್ರದರ್ಶನ ಪೂರಕವಾಗಿ ಕೆಲಸಮಾಡುತ್ತದೆ. ಆಸಕ್ತಿ ಇದ್ದಾಗ ಮಾತ್ರ ಏನಾದರೊಂದು […]

Continue Reading

ಕಿವಿಗಳ ಆರೋಗ್ಯ ರಕ್ಷಣೆ ಅಗತ್ಯ: ಡಾ.ಅನುಪಮಾ ಕೇಶ್ವಾರ

ಕಲಬುರಗಿ: ವಿವಿಧ ಕಾರಣಗಳಿಂದ ಕಿವಿಗಳಿಗೆ ತೊಂದರೆಯಾಗಿ ಆಲಿಸುವಿಕೆಗೆ ತೊಂದರೆಯಾಗುತ್ತದೆ. ಅದನ್ನು ಆರಂಭಿಕ ಹಂತದಲ್ಲಿ ಗುರ್ತಿಸಿ ಸೂಕ್ತ ಚಿಕಿತ್ಸೆ ನೀಡಿದರೆ ಕಿವಿಗಳು ಆರೋಗ್ಯವಾಗುತ್ತವೆ. ಉತ್ತಮ ಶ್ರವಣದಿಂದ ಸಮುದಾಯದೊಂದಿಗೆ ಬೆಸುಗೆ ಸಾಧ್ಯವಾಗುತ್ತದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು. ನಗರದ ಶೇಖರೋಜಾದಲ್ಲಿರುವ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಮಂಗಳವಾರ ಜರುಗಿದ ‘ವಿಶ್ವ ಶ್ರವಣ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ರಕ್ತ ಸಂಬಂಧಿ ವಿವಾಹ ಹಾಗೂ ಅನುವಂಶಿಯತೆಯು ಪ್ರಮುಖವಾಗಿ ಕಿವುಡತನಕ್ಕೆ ಕಾರಣವಾಗಿದೆ. ಶ್ರವಣದೋಷವುಳ್ಳ […]

Continue Reading

ಶುದ್ಧವಾಗಿ ಮಾತನಾಡಲು, ಬರೆಯಲು, ಓದಲು ವ್ಯಾಕರಣ ಅಗತ್ಯ

ಕಲಬುರಗಿ: ಯಾವುದೆ ಒಂದು ಭಾಷೆಯ ಜೀವಂತಿಗೆಗೆ, ಬೆಳವಣಿಗೆಯಾಗಲು, ಶುದ್ಧವಾಗಿ ಮಾತನಾಡಲು, ಬರೆಯಲು, ಓದಲು ವ್ಯಾಕರಣ ಅಗತ್ಯ. ಇದು ಭಾಷೆಗೆ ಅಲಂಕಾರ, ಮೆರಗು ತರುತ್ತದೆ ಎಂದು ಇಂಗ್ಲೀಷ್ ಶಿಕ್ಷಕ ದತ್ತು ಹಡಪದ ಹೇಳಿದರು. ನಗರದ ಆಳಂದ ರಸ್ತೆಯ, ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದಿಂದ ಮಂಗಳವಾರ ಸಂಜೆ ಏರ್ಪಡಿಸಲಾಗಿದ್ದ ‘ರಾಷ್ಟ್ರೀಯ ವ್ಯಾಕರಣ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದರು. ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, ವ್ಯಾಕರಣವು ಭಾಷೆಯ ಬೆಳವಣಿಗೆಗೆ ಸಹಾಯಕವಾಗಿದೆ. ಉತ್ತಮ […]

Continue Reading