ದೇಶದ ಅಭಿವೃದ್ಧಿಯಲ್ಲಿ ಉದ್ಯಮಗಳ ಪಾತ್ರ ಅನನ್ಯ

ನಗರದ

ಕಲಬುರಗಿ: ಉದ್ಯಮಗಳು ಸರಕುಗಳನ್ನು ಉತ್ಪಾದಿಸಿ ಸೇವೆಗಳನ್ನು ನೀಡುತ್ತವೆ. ಸರ್ಕಾರಕ್ಕೆ ತೆರಿಗೆ ಪಾವತಿಸುತ್ತವೆ. ಗ್ರಾಹಕರಿಗೆ ಅಗತ್ಯ ಸರಕುಗಳು ಪೂರೈಸುತ್ತವೆ. ಉದ್ಯೋಗ ನೀಡುವುದು ಸೇರಿದಂತೆ ಮತ್ತಿತರ ಕೊಡುಗೆ ನೀಡುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಉದ್ಯಮಗಳು ಅನನ್ಯವಾದ ಪಾತ್ರ ವಹಿಸಿವೆ ಎಂದು ಉದ್ಯಮಿ ಹಾಗೂ ಸಮಾಜ ಸೇವಕ ಕೇದರನಾಥ ಕುಲಕರ್ಣಿ ಹೇಳಿದರು.

ನಗರದ ಸ್ವಾರಗೇಟ್’ನ ‘ರೇವಣಸಿದ್ದೇಶ್ವರ ಮಿನರಲ್ ವಾಟರ್ ಪ್ಲಾಂಟ್’ನ ಆವರಣದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಜರುಗಿದ ‘ವಿಶ್ವ ಉದ್ಯಮಿಗಳ ದಿನಾಚರಣೆ’ಯಲ್ಲಿ ಮಾತನಾಡಿದರು.

ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, ಉದ್ಯಮಗಳಿಂದ ತಲಾವಾರು ಆದಾಯದಲ್ಲಿ ಸುಧಾರಣೆ, ಜೀವನಮಟ್ಟದಲ್ಲಿ ಬೆಳವಣಿಗೆ, ಆರ್ಥಿಕ ಸ್ವಾತಂತ್ರ‍್ಯ, ಹಿಂದುಳಿದ ಪ್ರದೇಶಗಳ ಅಭಿವೃದ್ಧಿ, ಸಾಕಷ್ಟು ಉದ್ಯೋಗಾವಕಾಶಗಳ ಸೃಷ್ಟಿ, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳು ಮತ್ತು ಉದ್ಯಮಶೀಲತೆಯನ್ನು ಬಳಸಿಕೊಳ್ಳುವುದು, ಪ್ರಾದೇಶಿಕ ಅಸಮತೋಲನೆ ನಿವಾರಣೆ, ಯುವಜನರಲ್ಲಿ ಅಶಾಂತಿ ಮತ್ತು ಸಾಮಾಜಿಕ ಉದ್ವಿಗ್ನತೆ ಕಡಿಮೆ ಮಾಡುವುದು ಸೇರಿದಂತೆ ಸಾಕಷ್ಟು ಅನಕೂಲಗಳಿವೆ. ಆದ್ದರಿಂದ ನಿರುದ್ಯೋಗ ಪದವಿಧರರು ಸರ್ಕಾರಿ ನೌಕರಿ ಬಯಸದೆ, ಉದ್ಯಮಗಳನ್ನು ಪ್ರಾರಂಭಿಸಿ, ಉದ್ಯೋಗದಾತರಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಬಡಾವಣೆಯ ಅಭಿವೃದ್ಧಿ ಸಂಘದ ಅಧ್ಯಕ್ಷ ಅಣ್ಣಪ್ಪ ವಾಡಿ, ಪ್ರಮುಖರಾದ ಸಂಕೇತ ಎ.ಕುಂಬಾರ, ಶರಣಬಸಪ್ಪ ಮಡಿವಾಳ, ಸಂಗಣ್ಣ ಹುಲ್ಮನಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *