ಚಿತ್ತಾಪುರ: ದಂಡೋತಿ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ, ಮಂಗಗಳನ್ನು ಸೆರೆ ಹಿಡುಯವಂತೆ ಒತ್ತಾಯಿಸಿ ಕರವೇ ಗ್ರಾಮ ಘಟಕದ ಅಧ್ಯಕ್ಷ ಮೈನೋದ್ದೀನ್ ತೊನಸನಳ್ಳಿ ಮತ್ತು ಪದಾಧಿಕಾರಿಗಳು ಗ್ರಾ.ಪಂ ಪಿಡಿಒ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕರವೇ ಗ್ರಾಮ ಘಟಕದ ಅಧ್ಯಕ್ಷ ಮೈನೊದ್ದಿನ್ ತೊನಸನಳ್ಳಿ ಮಾತನಾಡಿ, ದಂಡೋತಿ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ, ಇಲ್ಲಿಯವರೆಗೆ 4-5 ಜನರಿಗೆ ಕಚ್ಚಿ ಗಾಯಗೊಳಿಸಿವೆ. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಮನೆಯಿಂದ ಹೊರಗಡೆ ಬರಲು ಹೆದರುತ್ತಿದ್ದಾರೆ, ಗ್ರಾಮದ ಜನರು ಹೊಲಗಳಿಗೆ ತೆರಳಲು ಭಯಭೀತರಾಗಿದ್ದಾರೆ. ಹೀಗಾಗಿ ಗ್ರಾಮ ಪಂಚಾಯಿತಿಯವರು, ಸಂಬಂಧಿಸಿದ ಅಧಿಕಾರಿಗಳು ಮಂಗಗಳ ಹಾವಳಿ ತಪ್ಪಿಸಲು ಅವುಗಳನ್ನು ಸ್ಥಳಾಂತರ ಮಾಡಬೇಕು. ಇಲ್ಲಿಯವರೆಗೆ ಮಂಗಗಳಿಂದ ಕಚ್ಚಿಕೊಂಡ ಸಾರ್ವಜನಿಕರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರವೇ ಗ್ರಾಮ ಘಟಕದ ಪ್ರಧಾನ
ಕಾರ್ಯದರ್ಶಿ ಶಾಂತಪ್ಪ ಜಗನ್ನಾಥ, ರೀಯಾಜ್, ಜೀವಣಪ್ಪ,
ಜಗನ್ನಾಥ ಸೇರಿದಂತೆ ಗ್ರಾಮದ ಮಹಿಳೆಯರು, ಮುಖಂಡರು ಇದ್ದರು.