ಸುದ್ದಿ ಸಂಗ್ರಹ ಚಿತ್ತಾಪುರ
ಸಮೀಪದ ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯ 2025-26ನೇ ಸಾಲಿನ ಹತ್ತನೇ ವಾರ್ಷಿಕ ಪರೀಕ್ಷೆ -1 ರಲ್ಲಿ 86 ಪ್ರತಿಶತ ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಕುಳಿತ 182 ವಿದ್ಯಾರ್ಥಿಗಳಲ್ಲಿ 156 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. ಅದರಲ್ಲಿ 3 ಡಿಸ್ಟಿಂಕ್ಷನ್, 56 ಪ್ರಥಮ ಸ್ಥಾನ, 50 ದ್ವಿತೀಯ ಸ್ಥಾನ, 47 ತೃತೀಯ ಸ್ಥಾನ ಪಡೆದಿದ್ದಾರೆ.
ಅಕ್ಷತಾ ತಂದೆ ಖಂಡೆಪ್ಪ- 553 (88.48), ಮೇಘನಾ ತಂದೆ ಶಿವಕುಮಾರ್ – 535 (85.60), ರಾಕೇಶ್ ತಂದೆ ಮಹಾದೇವಪ್ಪ – 532 (85.12) ಅತಿ ಹೆಚ್ಚು ಅಂಕ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ.
ಮಕ್ಕಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು, ಕಾರ್ಯದರ್ಶಿ ಈಶ್ವರ ಜಿ ಬಾಳಿ, ಮುಖ್ಯಗುರು ವಿದ್ಯಾಧರ ಖಂಡಳ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸಿಬ್ಬಂದಿ ಬಳಗ ಹರ್ಷ ವ್ಯಕ್ತಪಡಿಸಿದ್ದಾರೆ.