ವಿಶ್ವದ ಅಭಿವೃದ್ಧಿಗೆ ರೆಡ್‌ಕ್ರಾಸ್‌ ಕೊಡುಗೆ ಅಪಾರ: ಎಚ್.ಬಿ ಪಾಟೀಲ

ಕಲಬುರಗಿ: ಸಮಾಜಮುಖಿ ಕಾರ್ಯಗಳನ್ನು ಕಳೆದ ಅನೇಕ ವರ್ಷಗಳಿಂದ ಮಾಡುವ ಮೂಲಕ ರೆಡ್’ಕ್ರಾಸ್ ಸಂಸ್ಥೆಯು ವಿಶ್ವದ ಅಭಿವೃದ್ಧಿಗೆ ತನ್ನದೆಯಾದ ಅಪಾರ ಕೊಡುಗೆ ನೀಡುತ್ತಿದೆ ಎಂದು ಕಿರಿಯ ರೆಡ್’ಕ್ರಾಸ್ ಘಟಕದ ಕೌನ್ಸಲರ್ ಎಚ್.ಬಿ ಪಾಟೀಲ ಹೇಳಿದರು . ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ಸರ್ಕಾರಿ ಪಿಯು ಕಾಲೇಜಿನಲ್ಲಿ ಕಾಲೇಜಿನ ಕಿರಿಯ ರೆಡ್ ಕ್ರಾಸ್ ಘಟಕದ ವತಿಯಿಂದ ಗುರುವಾರ ಏರ್ಪಡಿಸಿದ್ದ ‘ವಿಶ್ವ ರೆಡ್‌ಕ್ರಾಸ್ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ನೈಸರ್ಗಿಕ ವಿಪತ್ತು ನಿರ್ವಹಣೆ, ಜನಜಾಗೃತಿ ಕಾರ್ಯಕ್ರಮ, ರಕ್ತದಾನ, ಪ್ರವಾಹ, ಸಂಕಷ್ಟದಲ್ಲಿರುವ ಜನರಿಗೆ […]

Continue Reading

ಆಪರೇಷನ್ ಸಿಂಧೂರವನ್ನು ಜಗತ್ತಿಗೆ ವಿವರಿಸಿದ್ದ ಕರ್ನಲ್ ಸೋಫಿಯಾ ಬೆಳಗಾವಿಯ ಸೊಸೆ

ಬೆಳಗಾವಿ: ಆಪರೇಷನ್ ಸಿಂಧೂರ ಕಾರ್ಯಚರಣೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಕರ್ನಲ್ ಸೋಫಿಯಾ ಖುರೇಶಿಯವರು ಬೇರೆ ಯಾರು ಅಲ್ಲ. ಅವರು ಕರ್ನಾಟಕದ ಬೆಳಗಾವಿಯ ಹೆಮ್ಮೆಯ ಸೊಸೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಾರತೀಯರ ಹತ್ಯಾಕಾಂಡದ ಪ್ರತೀಕಾರವಾಗಿ ಪಾಕ್ ಉಗ್ರರ ವಿರುದ್ಧ ಭಾರತೀಯ ಸೇನೆಯು ಆಪರೇಷನ್ ಸಿಂಧೂರ ಹೆಸರಿನ ಏರ್‌ಸ್ಟ್ರೈಕ್‌ ಮಾಡಿತ್ತು. ಈ ಕಾರ್ಯಚರಣೆಯ ಮಾಹಿತಿ ನೀಡಿದ ಕರ್ನಲ್ ಸೋಫಿಯಾ ಖುರೇಶಿ ಅವರ ಪತಿ ತಾಜುದ್ದೀನ್ ಬಾಗೇವಾಡಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದ ನಿವಾಸಿಯಾಗಿದ್ದಾರೆ. ಮೂಲತಃ ಗುಜರಾತ್ ರಾಜ್ಯದ […]

Continue Reading

ಮದುವೆ ಊಟ ಸೇವಿಸಿದ 100ಕ್ಕೂ ಹೆಚ್ಚು ಜನ ಅಸ್ವಸ್ಥ

ಚಿತ್ರದುರ್ಗ: ಮದುವೆ ಊಟ ಸೇವಿಸಿದ 100ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಮಲ್ಲಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಸೋಮವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಲ್ಲಿಹಳ್ಳಿ ಗ್ರಾಮದ ಪ್ರಭುಲಿಂಗಪ್ಪ ಪುತ್ರನ ವಿವಾಹ ಸಂಭ್ರಮದಲ್ಲಿ ಘಟನೆ ನಡೆದಿದೆ. ಗವಿರಂಗಾಪುರ ಬೆಟ್ಟದಲ್ಲಿ ರವಿವಾರ ಮದುವೆ ನಡೆದಿತ್ತು. ಮದುವೆಗೆ ಹಾಜರಾದವರಿಗೆ ರವಿವಾರ ರಾತ್ರಿಯಿಂದಲೇ ಹೊಟ್ಟೆನೋವು ಶುರುವಾಗಿದೆ. ಸೋಮವಾರ ಬೆಳಗ್ಗೆ ವಾಂತಿಬೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶ್ರೀರಾಂಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ರೋಗಿಗಳು ದಾಖಲಾಗಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ […]

Continue Reading

ಸಿಂಧೂರ ಅಳಿಸಿದವರಿಗೆ ನಾರಿ ಶಕ್ತಿಯಿಂದಲೇ ಭಾರತ ಉತ್ತರ: ಕರ್ನಲ್ ಸೋಫಿಯಾ, ವಿಂಗ್ ಕಮಾಂಡರ್ ವ್ಯೋಮಿಕಾ ಬಗ್ಗೆ ಗೊತ್ತಾ ?

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಹಿಂದೂಗಳ ನರಮೇಧಕ್ಕೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಇಂದು ಸೂರ್ಯೋದಯಕ್ಕೂ ಮುನ್ನವೇ ಪಾಕ್‌ನ ಉಗ್ರ ತಾಣಗಳನ್ನು ಭಾರತೀಯ ವಾಯುಪಡೆ ಧ್ವಂಸ ಮಾಡಿದೆ. ಘಟನೆ ಬಳಿಕ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಜೊತೆ ಸಶಸ್ತ್ರ ಪಡೆಗಳ ಇಬ್ಬರು ಹಿರಿಯ ಮಹಿಳಾ ಅಧಿಕಾರಿಗಳಾದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಅವರು ಆಪರೇಷನ್‌ ಸಿಂಧೂರದ ಬಗ್ಗೆ ಮಾಹಿತಿ ನೀಡಿದ್ದು, ಪಾಕಿಸ್ತಾನದ ಸುಳ್ಳಿನ ಮುಖವಾಡವನ್ನು ಕಳಚಿದ್ದಾರೆ. ಮಹಿಳಾ ಅಧಿಕಾರಿಗಳಿಂದಲೆ ಸುದ್ದಿಗೋಷ್ಠಿ ನಡೆಸಿದ್ದು […]

Continue Reading

ಕಲಬುರಗಿ: ಸಂಚಾರಿ ಪೊಲೀಸರಿಗೆ ಎ.ಸಿ ಹೆಲ್ಮೆಟ್

ಕಲಬುರಗಿ: ಸುಡುವ ಬಿಸಿಲಿನಲ್ಲಿ ಪ್ರಮುಖ ವೃತ್ತಗಳಲ್ಲಿ ವಾಹನಗಳ ಸಂಚಾರ ನಿಯಂತ್ರಿಸುವ ಸಂಚಾರಿ ಪೊಲೀಸ್ ಸಿಬ್ಬಂದಿಗೆ ಪ್ರಾಯೋಗಿಕವಾಗಿ ಹವಾನಿಯಂತ್ರಿತ (ಎ.ಸಿ) ಹೆಲ್ಮೆಟ್‌ಗಳನ್ನು ನೀಡಲಾಗಿದೆ. ಇದರ ಜೊತೆಗೆ ಅತ್ಯಾಧುನಿಕ ಸೌಕರ್ಯಗಳ ಉಪಕರಣಗಳನ್ನು ಕಲ್ಪಿಸಲಾಗಿದೆ. ಇಲ್ಲಿನ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ತಲಾ 10 ಎ.ಸಿ ಹೆಲ್ಮೆಟ್ ಹಾಗೂ ಮಾಲಿನ್ಯ ತಡೆಯುವ ಮಾಸ್ಕ್‌ಗಳು,140 ಮಿಂಚುವ ಜಾಕೆಟ್ ಮತ್ತು 150 ಲೈಟ್ ಬ್ಯಾಟೊನ್‌ಗಳನ್ನು ವಿತರಣೆ ಮಾಡಲಾಯಿತು. ನಂತರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ ಮಾತನಾಡಿ, ಹವಾನಿಯಂತ್ರಿತ ಹೆಲ್ಮೆಟ್‌ಗಳು ನಮ್ಮ ಸಂಚಾರಿ ಸಿಬ್ಬಂದಿಗೆ ಬೇಸಿಗೆಯ ಬಿಸಿಲಿನಿಂದ […]

Continue Reading

ಕ್ಷಯರೋಗದ ವಿರುದ್ಧ ಹೋರಾಡಲು ಬಿಸಿಜಿ ಲಸಿಕೆ ಪಡೆಯುವುದು ಅಗತ್ಯ: ಡಾ.ಅನುಪಮಾ ಕೇಶ್ವಾರ

ಕಲಬುರಗಿ: ಕ್ಷಯರೋಗದ ವಿರುದ್ಧ ಹೋರಾಡಲು ಬಿಸಿಜಿ ಲಸಿಕೆ ಪಡೆಯುವುದು ಅಗತ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು. ನಗರದ ಶೇಖರೋಜಾದ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಜರುಗಿದ ‘ಟಿಬಿ ಸೋಲಿಸಿ, ದೇಶ ಗೆಲ್ಲಿಸಿ’ ಬಿಸಿಜಿ ಲಸಿಕಾಕರಣ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಎರಡು ವಾರ ಅಥವಾ ಹೆಚ್ಚಿನ ಅವಧಿಯ ಕೆಮ್ಮು, ಕಫದ ಜೊತೆಗೆ ರಕ್ತ ಕಾಣಿಸುವುದು, ವಿಶೇಷವಾಗಿ ರಾತ್ರಿ ಸಮಯದಲ್ಲಿ ಜ್ವರ ಬರುವುದು, ತೂಕದ ಇಳಿಕೆ, ರಾತ್ರಿ […]

Continue Reading

ಅರ್ಥಪೂರ್ಣ ಜೀವನ ನಮ್ಮದಾಗಲಿ: ಶರಣಯ್ಯ ಸ್ವಾಮಿ

ಕಲಬುರಗಿ: ಪ್ರತಿಯೊಬ್ಬರು ತಮ್ಮಿಂದ ಸಾಧ್ಯವಾದಷ್ಟು ಸಮಾಜದ ಒಳಿತಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಬೇಕೆಂಬ ಮನೋಭಾವನೆ ಮೈಗೂಡಿಸಿಕೊಂಡರೆ ಸುಂದರ ಸಮಾಜ, ದೇಶ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಅಂತಹ ಅರ್ಥಪೂರ್ಣ ಜೀವನ ನಮ್ಮದಾಗಲಿ ಎಂದು ನೀಲೂರನ ಬಂಗಾರ ಜಡೆ ನೀಲಕಂಠೇಶ್ವರ ಹಿರೇಮಠದ ಪೂಜ್ಯ ಶರಣಯ್ಯ ಸ್ವಾಮಿ ಆಶಯ ವ್ಯಕ್ತಪಡಿಸಿದರು. ನಗರದ ಅಫಜಲಪುರ ತಾಲೂಕಿನ ನೀಲೂರ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ ಕಲಬುರಗಿಯ ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ‘ಶ್ರೀ ಸಾಯಿ ಪ್ರಸಾದ ಎಂಎಸ್’ಡಬ್ಲ್ಯೂ ಕಾಲೇಜ್’ನ ಸಮಾಜ ಕಾರ್ಯದ ಒಂದು ವಾರ ಶಿಬಿರದ […]

Continue Reading

ಲಾಟರಿಯಿಂದ ಖರೀದಿಸಿದ ಜಮೀನಲ್ಲಿ ನಿಧಿ ಪತ್ತೆ: 20kg ತೂಕದ ಮಡಿಕೆಯಲ್ಲಿ ಸಿಕ್ಕಿತು ನಿಧಿ

ಭಾರತದಲ್ಲಿ ಹಲವು ಜನರಿಗೆ ನಿಧಿ ಸಿಕ್ಕಿದ ಉದಾಹರಣೆ ಇವೆ. ಎಷ್ಟೋ ಜನರು ನಿಧಿಗೋಸ್ಕರ ಅಪರಾಧ ಮಾಡಿ ಸಿಕ್ಕಿಬಿದ್ದಿದ್ದಾರೆ. ಆದರೆ ಇಲ್ಲೊರ್ವ ರೈತನಿಗೆ ಆತ ಇದ್ದಲ್ಲಿ ಅದೃಷ್ಟ ಎನ್ನುವದು ಒಂದಲ್ಲ, ಎರಡು ಬಾರಿ ಹುಡುಕಿಕೊಂಡು ಬಂದಿದೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಆದರಿದು ಡಿಸೆಂಬರ್ 2019ರ ಸುದ್ದಿಯಾಗಿದ್ದು, ಇದೀಗ ಪ್ರೆಶ್ ಸುದ್ದಿ ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಲಾಟರಿಯಲ್ಲಿ ಬಂದ ಹಣದಿಂದ ಜಮೀನು ಖರೀದಿಕೇರಳದ ಕಿಲಿಮನೂರಿನ 66 ವರ್ಷದ ರೈತ ಬಿ ರತ್ನಾಕರನ್ ಪಿಳ್ಳೈ […]

Continue Reading

ವಾಡಿ: ಬಿಜೆಪಿ ಕಛೇರಿಯಲ್ಲಿ ಭಗೀರಥ ಮಹರ್ಷಿ ಜಯಂತಿ ಆಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಮುಖಂಡರು ಪುಷ್ಪ ನಮನ ಸಲ್ಲಿಸುವ ಮೂಲಕ ಭಗೀರಥ ಮಹರ್ಷಿ ಜಯಂತಿ ಆಚರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಸೋಲಿನಿಂದ ಧೃತಿಗೆಡದೆ, ಸತತ ಪ್ರಯತ್ನ ಪಡಬೇಕು. ಪ್ರಯತ್ನಕ್ಕೆ ಇನ್ನೊಂದು ಹೆಸರೆ ಭಗೀರಥರು ಎಂದರು. ಅವರ ಸತತ ಯತ್ನದಿಂದ, ತಪಸ್ಸಿನಿಂದ, ಭೂಲೋಕದ ಜೀವರಾಶಿಗೆ ನೀರು ದೊರೆಯುವಂತಾಯಿತು. ಭಗೀರಥರ ಬಹುದೊಡ್ಡ ಮಹಾರಾಜ ಅವರಿಗೆ ಸಕಲ ವೈಭವಗಳಿದ್ದರೂ ಒಂದು ಕೊರಗಿತ್ತು. ಅವನ ತಂದೆ ಮತ್ತು ತಾಯಂದರಿಗೆ ದೇವಗಂಗೆ ಪಡೆಯಬೇಕು […]

Continue Reading

ಮನೆ ಆವರಣದಲ್ಲಿ ಗಾಂಜಾ ಗಿಡ: ಬೆಂಗಳೂರಿನ ಹಿರಿಯ ನಾಗರಿಕನಿಗೆ ಹೈಕೋರ್ಟ್ ರಿಲೀಫ್

ಬೆಂಗಳೂರು: ಮನೆ ಆವರಣದಲ್ಲಿ ಬೆಳೆದಿದ್ದ ಗಾಂಜಾ ಗಿಡದಿಂದಾಗಿ ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದ 67 ವರ್ಷದ ವ್ಯಕ್ತಿಗೆ ಹೈಕೋರ್ಟ್ ರಿಲೀಫ್ ನೀಡಿದೆ. 2023ರಲ್ಲಿ ಬೆಂಗಳೂರಿನ ಜಯನಗರದ ಚಂದ್ರಶೇಖರ ಎಂಬುವರ ಮನೆ ಆವರಣದಲ್ಲಿ ಐದು ಗಾಂಜಾ ಗಿಡಗಳು ಬೆಳೆದಿದ್ದವು. ಈ ಪ್ರಕರಣ ಸಂಬಂಧ ಪೊಲೀಸರು ಚಂದ್ರಶೇಖರ​ ವಿರುದ್ಧ ಕೇಸ್ ದಾಖಲಿಸಿದ್ದರು. ಆದರೆ ಇದೀಗ ಆ ಪ್ರಕರಣವನ್ನು ಹೈಕೋರ್ಟ್ ಇಂದು (ಮೇ 05) ರದ್ದುಗೊಳಸಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಹಿರಿಯ ನಾಗರಿಕ ಚಂದ್ರಶೇಖರ […]

Continue Reading