ಆಪರೇಷನ್ ಸಿಂಧೂರವನ್ನು ಜಗತ್ತಿಗೆ ವಿವರಿಸಿದ್ದ ಕರ್ನಲ್ ಸೋಫಿಯಾ ಬೆಳಗಾವಿಯ ಸೊಸೆ

ರಾಜ್ಯ

ಬೆಳಗಾವಿ: ಆಪರೇಷನ್ ಸಿಂಧೂರ ಕಾರ್ಯಚರಣೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಕರ್ನಲ್ ಸೋಫಿಯಾ ಖುರೇಶಿಯವರು ಬೇರೆ ಯಾರು ಅಲ್ಲ. ಅವರು ಕರ್ನಾಟಕದ ಬೆಳಗಾವಿಯ ಹೆಮ್ಮೆಯ ಸೊಸೆ.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಾರತೀಯರ ಹತ್ಯಾಕಾಂಡದ ಪ್ರತೀಕಾರವಾಗಿ ಪಾಕ್ ಉಗ್ರರ ವಿರುದ್ಧ ಭಾರತೀಯ ಸೇನೆಯು ಆಪರೇಷನ್ ಸಿಂಧೂರ ಹೆಸರಿನ ಏರ್‌ಸ್ಟ್ರೈಕ್‌ ಮಾಡಿತ್ತು. ಈ ಕಾರ್ಯಚರಣೆಯ ಮಾಹಿತಿ ನೀಡಿದ ಕರ್ನಲ್ ಸೋಫಿಯಾ ಖುರೇಶಿ ಅವರ ಪತಿ ತಾಜುದ್ದೀನ್ ಬಾಗೇವಾಡಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದ ನಿವಾಸಿಯಾಗಿದ್ದಾರೆ.

ಮೂಲತಃ ಗುಜರಾತ್ ರಾಜ್ಯದ ವಡೋದರದವರಾದ ಖುರೇಶಿ, 2015ರಲ್ಲಿ ತಾಜುದ್ದೀನ್ ಅವನ್ನು ಪ್ರೇಮ ವಿವಾಹವಾಗಿದ್ದರು. ಪತಿ ತಾಜುದ್ದಿನ್ ಬಾಗೇವಾಡಿ ಹಾಗೂ ಪತ್ನಿ ಸೋಫಿಯಾ ಖುರೇಶಿ ಇಬ್ಬರೂ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿ ದೇಶ ಸೇವೆ ಮಾಡುತ್ತಿದ್ದಾರೆ. ಬೆಳಗಾವಿಯ ಸೊಸೆಯಾಗಿರುವ ಖುರೇಶಿ ಈಗ ಭಾರತದ ಹೆಮ್ಮೆಯ ಪುತ್ರಿ. ಸದ್ಯ ಖುರೇಶಿ ಪತಿ ತಾಜುದ್ದಿನ್ ಜಾನ್ಸಿಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನ ಜಗತ್ತಿಗೆ ಬಿಚ್ಚಿಟ್ಟಿದ್ದ ಕರ್ನಲ್ ಸುಫೀಯಾ ಖುರೇಶಿ, ಬಹುರಾಷ್ಟ್ರೀಯ ಸೇನಾ ತುಕಡಿ ಮುನ್ನಡೆಸಿದ ಮೊದಲ ಭಾರತೀಯ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಖುರೇಶಿ ಅವರು ಆಪರೇಷನ್ ಸಿಂಧೂರದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆಪರೇಷನ್ ಬಳಿಕ ಸೋಫಿಯಾ ಖುರೇಶಿ ಮಾಧ್ಯಮಗಳಿಗೆ ಇಂಚಿಂಚು ಮಾಹಿತಿ ನೀಡಿದ್ದರು.

Leave a Reply

Your email address will not be published. Required fields are marked *