ಮಾ.6ರಂದು ಚಿತ್ತಾಪುರದಲ್ಲಿ ಸರಕಾರಿ ನೌಕರರ ಸಂಘದ ಮಹಾಸಭೆ: ಬಸವರಾಜ ಬಳೊಂಡಗಿ

ಸುದ್ದಿ ಸಂಗ್ರಹ ಚಿತ್ತಾಪುರಪಟ್ಟಣದ ರೈಲ್ವೆ ಸ್ಟೇಷನ್ ಹತ್ತಿರದ ಪಶುಪಾಲನೆ ಇಲಾಖೆಯ ಸಭಾಂಗಣದಲ್ಲಿ ಮಾ.6 ರಂದು ಶುಕ್ರವಾರ ಮಧ್ಯಾಹ್ನ 1.30ಕ್ಕೆ 2024-25ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಆಯೋಜಿಸಲಾಗಿದೆ ಎಂದು ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೊಂಡಗಿ ತಿಳಿಸಿದ್ದಾರೆ. ಸಭೆಯಲ್ಲಿ ಸಂಘದ ಕಾರ್ಯಕಲಾಪಗಳ ವರದಿ ಮಂಡನೆ, ಸಂಘದ ಲೆಕ್ಕಪತ್ರಗಳ ಅಡಿಟ್ ವರದಿ ಮಂಡನೆ, ವಿವಿಧ ಇಲಾಖೆ ಪ್ರತಿನಿಧಿಗಳ, ಪದಾಧಿಕಾರಿಗಳ ನೇಮಕ, ಪ್ರಮಾಣ ಪತ್ರ ವಿತರಣೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಅದಕ್ಕಾಗಿ ತಾಲೂಕಿನ […]

Continue Reading

ಶಾಸಕ ಮತ್ತಿಮೂಡ್ ಜನ್ಮದಿನ: ಬೈಕ್ ಸವಾರರಿಗೆ ಹೆಲ್ಮೆಟ್, ಆಟೋ ಚಾಲಕರಿಗೆ ಏಫ್ರಾನ್ ವಿತರಣೆ

ಸುದ್ದಿ ಸಂಗ್ರಹ ಶಹಾಬಾದ್ಪಕ್ಷಬೇಧ ಮಾಡದೆ ಸರ್ವರಿಗೂ ಗೌರವ ಕೊಡುತ್ತಾ ಸದಾ ಹಸನ್ಮುಖಿಯಾಗಿರುವ ಶಾಸಕ ಬಸವರಾಜ ಮತ್ತಿಮೂಡ್ ಅವರ ಜನ್ಮ ದಿನದ ಪ್ರಯುಕ್ತ ಆಟೋ ಚಾಲಕರಿಗೆ ಏಫ್ರಾನ್ ಮತ್ತು ಬೈಕ್ ಸವಾರರಿಗೆ ಹೆಲ್ಮೆಟ್ ವಿತರಣೆ ಮಾಡಲಾಯಿತು ಎಂದು ಬಿಜೆಪಿ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಹೇಳಿದರು. ನಗರದ ಶ್ರೀರಾಮ ಚೌಕಿನಲ್ಲಿ ಶಾಸಕ ಬಸವರಾಜ ಮತ್ತಿಮೂಡ್ ಅವರ 46ನೇ ಜನ್ಮದಿನದಂದು ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ, ನಂತರ ಬೈಕ್ ಸವಾರರಿಗೆ ಹೆಲ್ಮೆಟ್ ಹಾಗೂ ಆಟೋ ಚಾಲಕರಿಗೆ ಏಫ್ರಾನ್ ವಿತರಣಾ ಕಾರ್ಯಕ್ರಮ […]

Continue Reading

ಪೆದ್ದು ಮಠದಲ್ಲಿ ರೇಣುಕಾಚಾರ್ಯ ಜಯಂತಿ

ಸುದ್ದಿ ಸಂಗ್ರಹ ಚಿತ್ತಾಪುರಪಟ್ಟಣದಲ್ಲಿರುವ ಕಡಬೂರ ಗಲ್ಲಿಯಲ್ಲಿನ ಪೆದ್ದು ಮಠದಲ್ಲಿರೇಣುಕಾಚಾರ್ಯರ ಜಯಂತಿಯನ್ನು ಮಠದ ಪೀಠಾಧ್ಯಕ್ಷ ದಿಗ್ಗಾಂವದ ಪಂಚಗೃಹ ಹಿರೇಮಠದ ಸಿದ್ಧವೀರ ಶಿವಾಚಾರ್ಯರ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಜ್ಞಾನಜ್ಯೋತಿ ಪ್ರವಚನ ಕಾರ್ಯಕ್ರಮದ ಸಮಾರೋಪನಡೆಯಿತು. ಶ್ರೀಗಳು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬೆಳಗ್ಗೆ ಮಠದಲ್ಲಿ ಸಿದ್ಧವೀರೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ತೊಟ್ಟಿಲು ಉತ್ಸವ,ಮಹಾಂಗಲ ನಂತರ ಪ್ರಸಾದ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಚಂದ್ರಶೇಖರ ಅವಂಟಿ, ಗಂಗಾಧರಯ್ಯ ಸ್ವಾಮಿ ಹಿರೇಮಠ, ಬಸಯ್ಯ ಸ್ವಾಮಿ ಸಾತನೂರು, ಚಂದ್ರಪ್ರಕಾಶ ತಿರ್ಮಲ್, ಶರಣಗೌಡ ಪಾಟೀಲ್ ಮರಗೋಳ, ಬನ್ನಯ್ಯ […]

Continue Reading

ಶಾಂತಿ-ಸೌಹಾರ್ದತೆಯಿಂದ ಹಬ್ಬ ಆಚರಿಸಿ: ಡಿವೈಎಸ್ಪಿ ಶಂಕರಗೌಡ ಪಾಟೀಲ

ಸುದ್ದಿ ಸಂಗ್ರಹ ಶಹಾಬಾದರಂಜಾನ್‌ ಮತ್ತು ಹೋಳಿ ಹಬ್ಬ ಶಾಂತಿ- ಸೌಹಾರ್ದತೆಯ ಸಂಕೇತವಾಗಿದ್ದು, ಹಬ್ಬಗಳು ಸಂತೋಷದಿಂದ ಆಚರಿಸಿ, ಯುವಕರು, ಮಕ್ಕಳು ಮಾಡುವ ಸಣ್ಣಪುಟ್ಟ ಸಮಸ್ಯೆಗಳನ್ನು ಅಲ್ಲಿಯೆ ಪರಿಹರಿಸುವ ಮೂಲಕ ಹಬ್ಬಗಳಲ್ಲಿ ಶಾಂತಿ- ಸೌಹಾರ್ದತೆ ಕಾಪಾಡಬೇಕು ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು. ನಗರ ಪೊಲೀಸ್ ಠಾಣೆಯಲ್ಲಿ ಸೋಮವಾರ ರಂಜಾನ್‌ ಮತ್ತು ಹೋಳಿ ಹಬ್ಬದ ಪ್ರಯುಕ್ತ ಕರೆಯಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ 3-4 ದಿನದಲ್ಲಿ ಬಿಸಿಲಿನ ಝಳ ಹೆಚ್ಚಲಿದ್ದು, ಜನರು ಈ ವಾತಾವರಣಕ್ಕೆ ಹೊಂದಿಕೊಳ್ಳುವದು ಅಗತ್ಯವಾಗಿದೆ, ಆರೋಗ್ಯದ […]

Continue Reading

ಸತ್ಯದ ಮಾರ್ಗದಲ್ಲಿ ನಡೆಯುವುದೆ ಮಾನವ ಧರ್ಮ: ವೀರಣ್ಣ ಯಾರಿ

ಸುದ್ದಿ ಸಂಗ್ರಹ ವಾಡಿಸತ್ಯದ ಮಾರ್ಗದಲ್ಲಿ ನಡೆಯುವುದೆ ಮಾನವ ಧರ್ಮ ಎಂದು ರೇಣುಕಾಚಾರ್ಯರು ತಿಳಿಸಿಕೊಟ್ಟಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು. ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತೋತ್ಸವ ಆಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಪಂಚಾಚಾರ್ಯರಲ್ಲಿ ಬಹಳ ಪ್ರಮುಖವಾದ ಆಚಾರ್ಯರಾಗಿದ್ದ ಇವರು ಪ್ರಭಾವಶಾಲಿಯಾದ ರಂಭಾಪುರಿ ಪೀಠದ ಸಂಸ್ಥಾಪಕರಾಗಿದ್ದರು. ಸತ್ಯದ ಮಾರ್ಗದೊಂದಿಗೆ ಸಾಮರಸ್ಯದಿಂದ ಸಮಾಜ ನಡೆಯುವುದಕ್ಕೆ ಅನುಸರಿಸಬೇಕಾದ ಅಂಶಗಳು ಧಾರೆಯೆರಿದಿದ್ದಾರೆ ಎಂದರು. ರೇಣುಕಾಚಾರ್ಯರರ ಸರ್ವಶ್ರೇಷ್ಠ ಮೌಲಿಕ ಗ್ರಂಥವಾದ ಸಿದ್ಧಾಂತ ಶಿಖಾಮಣಿಯ ತತ್ವ ಸಿದ್ದಾಂತದ ಬೋಧನೆ, ಮಾನವಕುಲ ದೈವತ್ವದೆಡೆಗೆ […]

Continue Reading

ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು: ಡಾ.ಬಸವರಾಜ ಹಿರೇಮಠ

ಸುದ್ದಿ ಸಂಗ್ರಹ ಶಹಾಬಾದ್ಮೂಡನಂಬಿಕೆ ತೊಲಗಿಸಬೇಕಾದರೆ ವೈಜ್ಞಾನಿಕ ಮನೋಭಾವನೆ ಅಗತ್ಯ, ವಿದ್ಯಾರ್ಥಿಗಳು ಜೀವನದಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಎಸ್’ಎಸ್ ಮರಗೋಳ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಬಸವರಾಜ ಹಿರೇಮಠ ಹೇಳಿದರು. ನಗರದ ಎಸ್’ಎಸ್ ಮರಗೋಳ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮವನ್ನು ಡಾ ಸಿ.ವಿ ರಾಮನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ವೈಜ್ಞಾನಿಕವಾಗಿ ಭಾರತ ದೇಶ ಬೆಳೆದು ನಿಂತಿರುವುದು ತುಂಬಾ ಹೆಮ್ಮೆಪಡುವ ವಿಷಯ ಯುದ್ಧಕ್ಕೆ ಸಜ್ಜಾಗುವ ಪ್ರಕ್ರಿಯೆ, ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಭಾರತ ದೇಶ […]

Continue Reading

ಮಾ.3ರಂದು ಮಲ್ಲಿಕಾರ್ಜುನ ತರುಣ ಸಂಘದ 29ನೇ ವಾರ್ಷಿಕೋತ್ಸವ: ಶಿವರಾಜ ಅಂಡಗಿ

ಸುದ್ದಿ ಸಂಗ್ರಹ ಕಲಬುರಗಿ ನಗರದ ಸೇಡಂ ರಸ್ತೆಯ ಬಸವೇಶ್ವರ ಆಸ್ಪತ್ರೆ ಎದುರುಗಡೆಯ ವಿದ್ಯಾನಗರದಲ್ಲಿ ವೆಲ್‌ಫೆರ್ ಸೊಸೈಟಿ ವತಿಯಿಂದ ಮಾರ್ಚ್ 3 ರಂದು ಸಂಜೆ 7.30ಕ್ಕೆ ಮಲ್ಲಿಕಾರ್ಜುನ ಸಮುದಾಯ ಭವನದ ಆವರಣದಲ್ಲಿ ಮಲ್ಲಿಕಾರ್ಜುನ ತರುಣ ಸಂಘದ 29ನೇ ವಾರ್ಷಿಕೋತ್ಸವ ಮತ್ತು ಕಾಮದಹನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತರುಣ ಸಂಘದ ಅಧ್ಯಕ್ಷ ಶಿವರಾಜ ಅಂಡಗಿ ತಿಳಿಸಿದ್ದಾರೆ. ಇಂದಿನ ಯುವ ಪೀಳಿಗೆಗೆ ಹೋಳಿ ಹಬ್ಬ ಎಂದರೆ ಮೈಮೇಲಿನ ಬಟ್ಟೆ ಹರಿದುಕೊಳ್ಳುವುದು, ಘಟಾರ ನೀರು ಎರಚುವುದು, ವಾಹನಗಳ ಸೈಲೆನ್ಸರ್ ತೆಗೆದು ಜೋರಾದ ಶಬ್ದದೊಂದಿಗೆ […]

Continue Reading

ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಚುನಾವಣೆ: ಬಿಜೆಪಿ ಅಭ್ಯರ್ಥಿ ಅಶೋಕ ಹರನಾಳ ನಾಮಪತ್ರ ಸಲ್ಲಿಕೆ

ಸುದ್ದಿ ಸಂಗ್ರಹ ವಾಡಿಮಾರ್ಚ್ 08 ರಂದು ನಡೆಯುವ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಚುನಾವಣೆಯ ಪರಿಶಿಷ್ಟ ಜಾತಿ ವರ್ಗದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಅಶೋಕ ಹರನಾಳ ಮುಖ್ಯ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದತಾಲೂಕು ಮಂಡಲ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ವಾಡಿ ಅಧ್ಯಕ್ಷ ವೀರಣ್ಣ ಯಾರಿ, ಜಿಲ್ಲಾ ರೈತ ಮೂರ್ಚಾದ ಪ್ರಧಾನ ಕಾರ್ಯದರ್ಶಿ ಸುರೇಶ ರಾಠೋಡ, ಸೂಚಕ ರಾಜಶೇಖರ ಮುಡಬೂಳ ಇದ್ದರು.

Continue Reading

ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪ್ರಕರಣ ಹಿಂಪಡೆಯಲು ಆಗ್ರಹ‌‌

ಸುದ್ದಿ ಸಂಗ್ರಹ ಚಿತ್ತಾಪುರಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಮಹಲರೋಜಾದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಸುಳ್ಳು ಪೋಕ್ಸೊ ಪ್ರಕರಣ ದಾಖಲಿಸಿದ್ದು, ಸರ್ಕಾರ ಅದನ್ನು ಹಿಂಪಡೆದು ರದ್ದುಪಡಿಸಬೇಕು ಎಂದು ತಾಲೂಕು ಕೋಲಿ ಸಮಾಜದ ಪದಾಧಿಕಾರಿಗಳು ಮತ್ತು ಮುಖಂಡರು ಆಗ್ರಹಿಸಿದ್ದಾರೆ. ಸಮಾಜದ ಅಧ್ಯಕ್ಷ ನಿಂಗಣ್ಣಾ ಹೆಗಲೇರಿ ನೇತೃತ್ವದಲ್ಲಿ ಶುಕ್ರವಾರ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ್‌ಗೆ ಸಲ್ಲಿಸಿ, ನಂತರ ಮಾತನಾಡಿದ ಅವರು, ಬಾಲಕಿಯ ಹೇಳಿಕೆ, ಪಾಲಕರ ದೂರು ಇಲ್ಲದೆ ಸ್ಥಳೀಯ ನ್ಯಾಯಾಧೀಶರ ಮುಂದೆ ಬಾಲಕಿಯ ಹೇಳಿಕೆ ದಾಖಲಿಸಿಕೊಳ್ಳದೆ ಪ್ರಕರಣ […]

Continue Reading

ಇಂದಿರಾ ಕ್ಯಾಂಟಿನ್‌ ಸ್ಥಳ ಅತಿಕ್ರಮಣ: ಡಬ್ಬಿ ತೆರವಿಗೆ ಬಿಜೆಪಿ ಆಗ್ರಹ‌

ಸುದ್ದಿ ಸಂಗ್ರಹ ಶಹಾಬಾದಇಂದಿರಾ ಕ್ಯಾಂಟಿನ್‌ ಕಾಂಪೌಂಡ್ ಆವರಣದಲ್ಲಿ ಅಕ್ರಮವಾಗಿ ಇರಿಸಲಾಗಿದ್ದ ಡಬ್ಬಿ ತಕ್ಷಣ ತೆರೆವು ಗೊಳಿಸಬೇಕು ಎಂದು ಬಿಜೆಪಿ ಮಂಡಲದ ಅಧ್ಯಕ್ಷ ನಿಂಗಪ್ಪ ಹುಳಗೋಳಕರ್ ಆಗ್ರಹಿಸಿದ್ದಾರೆ.‌ ನಗರದ ಇಂದಿರಾ ಕ್ಯಾಂಟಿನಗಾಗಿ ಸರಕಾರಿ ಆಸ್ಪತ್ರೆಯ ಆವರಣದ ಗೋಡೆ ತೆರೆವುಗೊಳಿಸುವಾಗ ಒಳಗಡೆ ಯಾವುದೆ ತರಹದ ಡಬ್ಬದ ಅಂಗಡಿ ಇರಲಿಲ್ಲ, ಕಾಮಗಾರಿ ಪ್ರಾರಂಭಿಸಿದ ತಕ್ಷಣ ನಗರದ ಪ್ರಭಾವಿ ನಾಯಕರು ಮತ್ತು ನಗರ ಸಭೆ ಅಧಿಕಾರಿಗಳ ಬೆಂಬಲದಿಂದ ಪ್ರಭಾವಿ ವ್ಯಕ್ತಿಯೊಬ್ಬ ಕ್ಯಾಂಟಿನ್‌ ಉಧ್ಘಾಟನೆ ಮುಂಚೆ ಅಕ್ರಮವಾಗಿ ಡಬ್ಬಿ ತಂದು ಇರಿಸಿದ್ದು ಕಂಡುಬಂದಿದೆ ಎಂದರು. […]

Continue Reading