ವಿಶ್ವದ ಅಭಿವೃದ್ಧಿಗೆ ರೆಡ್‌ಕ್ರಾಸ್‌ ಕೊಡುಗೆ ಅಪಾರ: ಎಚ್.ಬಿ ಪಾಟೀಲ

ತಾಲೂಕು

ಕಲಬುರಗಿ: ಸಮಾಜಮುಖಿ ಕಾರ್ಯಗಳನ್ನು ಕಳೆದ ಅನೇಕ ವರ್ಷಗಳಿಂದ ಮಾಡುವ ಮೂಲಕ ರೆಡ್’ಕ್ರಾಸ್ ಸಂಸ್ಥೆಯು ವಿಶ್ವದ ಅಭಿವೃದ್ಧಿಗೆ ತನ್ನದೆಯಾದ ಅಪಾರ ಕೊಡುಗೆ ನೀಡುತ್ತಿದೆ ಎಂದು ಕಿರಿಯ ರೆಡ್’ಕ್ರಾಸ್ ಘಟಕದ ಕೌನ್ಸಲರ್ ಎಚ್.ಬಿ ಪಾಟೀಲ ಹೇಳಿದರು .

ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ಸರ್ಕಾರಿ ಪಿಯು ಕಾಲೇಜಿನಲ್ಲಿ ಕಾಲೇಜಿನ ಕಿರಿಯ ರೆಡ್ ಕ್ರಾಸ್ ಘಟಕದ ವತಿಯಿಂದ ಗುರುವಾರ ಏರ್ಪಡಿಸಿದ್ದ ‘ವಿಶ್ವ ರೆಡ್‌ಕ್ರಾಸ್ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ನೈಸರ್ಗಿಕ ವಿಪತ್ತು ನಿರ್ವಹಣೆ, ಜನಜಾಗೃತಿ ಕಾರ್ಯಕ್ರಮ, ರಕ್ತದಾನ, ಪ್ರವಾಹ, ಸಂಕಷ್ಟದಲ್ಲಿರುವ ಜನರಿಗೆ ಸಹಾಯ, ಶಾಂತಿ ಕಾಪಾಡುವದು, ಗಾಯಗೊಂಡ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವುದು, ಆಕಸ್ಮಿಕ ಮರಣದ ಪ್ರಮಾಣ ತಗ್ಗಿಸುವುದು, ಸಮುದಾಯದ ಅಭಿವೃದ್ಧಿ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳು ಮಾಡಲಾಗಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ರವೀಂದ್ರಕುಮಾರ ಸಿ ಬಟಗೇರಿ ಮಾತನಾಡಿ, ಹೆನ್ರಿ ಡ್ಯೂನಾಂಟ್ ಅವರ ದೂರದೃಷ್ಠಿಯ ಫಲವೆ ಈ ಸಂಸ್ಥೆಯ ಉಗಮಕ್ಕೆ ಕಾರಣವಾಗಿದೆ. ಈ ಸಂಸ್ಥೆಯು ಯುದ್ಧಪೀಡಿತ ಸಂದರ್ಭದಲ್ಲಿ ಕಂಡುಬರುವ ಜೀವಹಾನಿ ತಪ್ಪಿಸಲು ಪ್ರಯತ್ನಿಸುತ್ತದೆ. ಇದರ ಕೊಡುಗೆ ಮರೆಯುವಂತಿಲ್ಲ. ಎಲ್ಲಾ ವಿದ್ಯಾರ್ಥಿಗಳು ರೆಡ್ ಕ್ರಾಸ್ ಸದಸ್ಯರಾಗಿ ಸೇವೆ ಸಲ್ಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶಂಕ್ರೆಪ್ಪ ಹೊಸದೊಡ್ಡಿ, ಶ್ರೀಶೈಲ್ ಕುರ್ದ್, ಸಿದ್ರಾಮ ಎಂ.ಕನ್ನೂರ್, ಶಿಕ್ಷಕರಾದ ಬಸವರಾಜ ಪತ್ತಾರ, ರಾಜಶೇಖರ, ಪ್ರ.ದ.ಸ ಪ್ರೇಮಾ ಸುರಪುರ, ದ್ವಿ.ದ.ಸ ರಾಮಚಂದ್ರ ಚವ್ಹಾಣ, ಯಮನಪ್ಪ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *