ಭಾಗೋಡಿ ಪಿಕೆಪಿಎಸ್‌ ಸಂಘಕ್ಕೆ 12 ನಿರ್ದೇಶಕರ ಅವಿರೋಧ ಆಯ್ಕೆ

ಚಿತ್ತಾಪುರ: ತಾಲೂಕಿನ ಭಾಗೋಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ 12 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. ಸುಭಾಶಚಂದ್ರ ಮುತ್ತಣ್ಣ ಭಾಗೋಡಿ (ಸಾಮಾನ್ಯ), ಶರ್ಮೋದ್ದೀನ್ ಅಬ್ದುಲ್ ಹಮೀದ್ ಭಾಗೋಡಿ (ಸಾಮಾನ್ಯ), ಅಂಬರಾಯ ಹನುಮಂತಪ್ಪ ಕದ್ದರಗಿ (ಸಾಮಾನ್ಯ), ಸಾಬಣ್ಣ ನರಸಪ್ಪ ಭಾಗೋಡಿ (ಸಾಮಾನ್ಯ), ಇಂದುಶೇಖರ ನಾಗಣ್ಣ ಭಾಗೋಡಿ (ಸಾಮಾನ್ಯ), ಶರಣಬಸಪ್ಪ ಪಾಟೀಲ ಶಿವಲಿಂಗಪ್ಪ ಪಾಟೀಲ ಭಾಗೋಡಿ (ಸಾಲಗಾರರಲ್ಲದ ಸಾಮಾನ್ಯ), ಮಲ್ಲಿಕಾರ್ಜುನ ಬಸವರಾಜ ಭಾಗೋಡಿ (ಪರಿಶಿಷ್ಟ ಜಾತಿ), ಸಿದ್ರಾಮಪ್ಪ ಕಾಮಣ್ಣ ಕಾಟಮ್ಮದೇವರಹಳ್ಳಿ (ಪರಿಶಿಷ್ಟ ಪಂಗಡ), […]

Continue Reading

ತಾಯಿ ದೇವರಾಗಬಹುದು, ದೇವರು ತಾಯಿಯಾಗಲ್ಲ: ಶಿವರಾಜ ಅಂಡಗಿ

ಬೆಂಗಳೂರು: ತನಗಾಗಿ ಏನನ್ನು ಬಯಸದವರು, ಏನನ್ನು ಕೂಡಿಡದವರು, ತನಗಿಲ್ಲವೆಂದು ಕೊರಗದವರು ಯಾರಾದರು ಇದ್ದರೆ ಅವರೆ ಕಣ್ಣಿಗೆ ಕಾಣುವ ದೇವರು ತಾಯಿ. ತಾಯಿ ದೇವರಾಗಬಹುದು ಆದರೆ ದೇವರು ತಾಯಿಯಾಗುವದಿಲ್ಲ ಎಂದು ಕಲಬುರಗಿ ಅಂಡಗಿ ಪ್ರತಿಷ್ಠಾನ ಅಧ್ಯಕ್ಷ ಶಿವರಾಜ ಅಂಡಗಿ ಹೇಳಿದರು. ನಗರದ ಕೆಂಗೇರಿ ಕೂಡಿಪಾಳ್ಯದಲ್ಲಿ “ವಿಶ್ವ ತಾಯಿಂದಿರ ದಿನಾಚರಣೆ” ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಸೋತಾಗ ಸದಾ ನಮ್ಮ ಜೊತೆಗೆ ಇದ್ದು ನಮಗೆ ಆತ್ಮಸ್ಥೈರ್ಯ ತುಂಬುವರು, ನಮ್ಮ ನಗುವಿನಲ್ಲಿಯೇ ತನ್ನ ಕುಷಿ ಕಾಣುವರು, ನಮಗಾಗಿಯೇ ಇಡಿ […]

Continue Reading

ಜಾಗತಿಕ ತಲ್ಲಣಗಳಿಗೆ ಬುದ್ಧನ ಶಾಂತಿ ಸಂದೇಶ ಅಗತ್ಯ: ಎಚ್.ಬಿ ಪಾಟೀಲ

ಕಲಬುರಗಿ: ಹಿಂಸೆ, ಅನ್ಯಾಯ, ಅಶಾಂತಿ, ಶೋಷಣೆ, ಭಯೋತ್ಪಾದನೆಯಂತಹ ಜಾಗತಿಕ ತಲ್ಲಣಗಳಿಂದ ಬಳಲುತ್ತಿರುವ ಪ್ರಸ್ತುತ ಸಮಾಜಕ್ಕೆ ಮಹಾತ್ಮ ಗೌತಮ ಬುದ್ಧ ಅವರು ಸಾವಿರಾರು ವರ್ಷಗಳ ಹಿಂದೆಯೇ ನೀಡಿರುವ ಹಾಗೂ ಅವುಗಳನ್ನು ಆಚರಿಸಿ ತೋರಿಸಿರುವ ತತ್ವಗಳು ಔಷಧಿಯಂತೆ ಕಾರ್ಯ ಮಾಡುತ್ತವೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಹೇಳಿದರು. ನಗರದ ನ್ಯೂ ರಾಘವೇಂದ್ರ ಕಾಲೋನಿಯ ವಿವೇಕಾನಂದ ಕೋಚಿಂಗ್ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಜರುಗಿದ ‘ಮಹಾತ್ಮ ಗೌತಮ ಬುದ್ಧರ 2569ನೇ ಪೂರ್ಣಿಮೆ’ಯಲ್ಲಿ ಬುದ್ಧವಂದನೆ ಸಲ್ಲಿಸಿ ಮಾತನಾಡಿದ […]

Continue Reading

ಶುಶ್ರೂಷಕರು ಆರೋಗ್ಯ ಕ್ಷೇತ್ರದ ಸೇನಾನಿಗಳು

ಕಲಬುರಗಿ: ರೋಗಿಯ ಜೊತೆಗೆ ನಿರಂತರವಾಗಿದ್ದು, ಉಪಚಾರ, ಆರೈಕೆ, ಸೇವೆ ಮಾಡುವ ಮೂಲಕ ಶುಸ್ರೂಷಕರ ಆರೋಗ್ಯ ಕ್ಷೇತ್ರದ ಸೇನಾನಿಗಳಾಗಿದ್ದಾರೆ ಎಂದು ಹಿರಿಯ ಶುಶ್ರೂಷಕಿ ಗಂಗಾಜ್ಯೋಜಿ ಗಂಜಿ ಹೇಳಿದರು ನಗರದ ಶೇಖ್‌ರೋಜಾದ ಶಹಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ‘ಅಂತರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಿ, ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಶುಸ್ರೂಷಕರ ಕೊಡುಗೆ ಅನನ್ಯ. ಸಮಾಜ-ಆರೋಗ್ಯ ಕ್ಷೇತ್ರದ ನಡುವಿನ ಸೇತುವೆಯಾಗಿ […]

Continue Reading

ಇನ್ನುಮುಂದೆ ಚಿಕ್ಕ ಮಕ್ಕಳಿಗೂ PAN Card ಮಾಡಿಸಿ: ಅರ್ಜಿ ಸಲ್ಲಿಸಲು ಈ ಹಂತಗಳನ್ನು ಅನುಸರಿಸಿ

ಸಾಮಾನ್ಯವಾಗಿ ಭಾರತದಲ್ಲಿ ಮಗು ಹುಟ್ಟಿದ ಕೂಡಲೆ ಮಗುವಿನ ಭವಿಷ್ಯದ ವಿಚಾರವಾಗಿ ಅದರ ದಾಖಲೆಗಳನ್ನು ಸಂಗ್ರಹಿಸಲು ಪಾಲಕರು ಮುಂದಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಆಧಾರ್​ ಸೇರಿದಂತೆ ಅದರಲ್ಲೂ ಪ್ಯಾನ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಬ್ಯಾಂಕ್ ಖಾತೆ ತೆರೆಯುವಾಗ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ. ಅನೇಕ ಜನರು ಪ್ಯಾನ್ ಕಾರ್ಡ್ ವಯಸ್ಕರಿಗೆ ಮಾತ್ರ ಬೇಕಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ಅದು ಅಲ್ಲ. ನಿಮ್ಮ ಮಗುವಿಗೆ ನೀವು ಪ್ಯಾನ್ ಕಾರ್ಡ್ ಮಾಡಬಹುದು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿಗೆ ಪ್ಯಾನ್ ಕಾರ್ಡ್ […]

Continue Reading

KK ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಾಂಬ್ ಬೆದರಿಕೆ ಕರೆ: ವ್ಯಕ್ತಿ ಬಂಧನ

ಕಲಬುರಗಿ: ದೆಹಲಿಯಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ (ಕೆಕೆ) ರೈಲಿನಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಮಾಡಿದ ವ್ಯಕ್ತಿಯನ್ನು ಚಿತ್ತಾಪುರ ತಾಲೂಕಿನ ವಾಡಿ ರೈಲ್ವೆ ಠಾಣೆಯ ಪೊಲೀಸರು ರವಿವಾರ ಬಂಧಿಸಿದ್ದಾರೆ. ಉತ್ತರ ಪ್ರದೇಶ ಮೂಲದ ದೀಪ್‌ಸಿಂಗ್ (33) ಬಂಧಿತ ಆರೋಪಿ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ, ಚಿತ್ತಾಪುರ ಜೈಲಿನಲ್ಲಿ ಇದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಕೆ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಇಟ್ಟಿರುವ ಶಂಕೆ ಇದೆ ಎಂದು ರಾತ್ರಿ 1 ಗಂಟೆ ಸುಮಾರಿಗೆ ರೈಲ್ವೆ ಕಂಟ್ರೋಲ್ ರೂಂ’ಗೆ […]

Continue Reading

ರಾಷ್ಟ್ರದ ಅಭಿವೃದ್ಧಿಗೆ ತಂತ್ರಜ್ಞಾನವೆ ಚಾಲನಾ ಶಕ್ತಿ: ಎಚ್.ಬಿ ಪಾಟೀಲ

ಕಲಬುರಗಿ: ಯಾವದೆ ಒಂದು ರಾಷ್ಟ್ರದ ಅಭಿವೃದ್ಧಿಯು, ಆ ರಾಷ್ಟ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಯನ್ನು ಅವಲಂಬಿಸಿದೆ. ಅಮೇರಿಕಾ, ರಷ್ಯಾ, ಜಪಾನದಂತಹ ಮುಂದುವರೆದ ಮುಂತಾದ ರಾಷ್ಟ್ರಗಳು ಅಭಿವೃದ್ಧಿಯಾಗಿವೆಯೆಂದರೆ, ಅದು ಅಲ್ಲಿನ ತಂತ್ರಜ್ಞಾನದ ಬೆಳವಣಿಗೆ ಮತ್ತು ಅದರ ಅಳವಡಿಕೆಯಿಂದಾಗಿದೆ. ಹೀಗಾಗಿ ಯಾವುದೆ ಒಂದು ರಾಷ್ಟ್ರವು ವೇಗವಾಗಿ ಅಭಿವೃದ್ಧಿ ಹೊಂದಬೇಕಾದರೆ ಅದಕ್ಕೆ ತಂತ್ರಜ್ಞಾನವೇ ಚಾಲನಾ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಅಭಿಮತ ವ್ಯಕ್ತಪಡಿಸಿದರು. ನಗರದ ಆಳಂದ ರಸ್ತೆಯ, ಖಾದ್ರಿ ಚೌಕ್‌ನಲ್ಲಿರುವ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ […]

Continue Reading

ತಾಯಿಗೆ ಸಮನಾದ ವ್ಯಕ್ತಿ ಬೇರೊಬ್ಬರಿಲ್ಲ: ಎಚ್.ಬಿ ಪಾಟೀಲ

ಕಲಬುರಗಿ: ಒಂಬತ್ತು ತಿಂಗಳು ಹೊತ್ತು, ಹೆತ್ತ, ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಹಾಗೂ ಪೋಷಿಸುವ ತಾಯಿಗೆ ಸಮಾನವಾದ ಮತ್ತೊಬ್ಬ ವ್ಯಕ್ತಿ ಜಗತ್ತಿನಲ್ಲಿ ಯಾರು ಇಲ್ಲ. ವರ್ಣಿಸಲು ಅಸಾಧ್ಯವಾದ, ಅನುಪಮ ವ್ಯಕ್ತಿ ತಾಯಿಯಾಗಿದ್ದಾಳೆ. ಇಡೀ ತನ್ನ ಜೀವನ ಸವೆಸಿ, ಮಕ್ಕಳನ್ನು ದೊಡ್ಡವರನ್ನಾಗಿ ಮಾಡಿದ ತಾಯಿಯನ್ನು ಪೂಜ್ಯನೀಯ ಸ್ಥಾನವನ್ನು ನೀಡಿ, ಆರೈಕೆ ಮಾಡಿ, ಗೌರವಿಸಬೇಕಾದದ್ದು ಪ್ರಸ್ತುತ ದಿನಗಳಲ್ಲಿ ಅತಿ ಅವಶ್ಯಕವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಹೇಳಿದರು. ನಗರದ ಹೊರ ವಲಯದ ರಾಣೆಸ್ಪಿರ್ ದರ್ಗಾ ರಸ್ತೆಯಲ್ಲಿನ ನೆಮ್ಮದಿ ವೃದ್ಧಾಶ್ರಮದಲ್ಲಿ […]

Continue Reading

ಪಾಕಿಸ್ತಾನದ ದಾಳಿಯಲ್ಲಿ ಹುತಾತ್ಮರಾದ ಯೋಧ ಮುರಳಿ ನಾಯಕಗೆ ಭಾವಪೂರ್ಣ ಶ್ರದ್ಧಾಂಜಲಿ

ಚಿತ್ತಾಪುರ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆ ನಡೆಸಿದ ಭಾರಿ ಶೆಲ್ ದಾಳಿಯಲ್ಲಿ ಆಂಧ್ರ ಪ್ರದೇಶದ ಸೈನಿಕ ಮುರಳಿ ನಾಯಕ್ ಹುತಾತ್ಮರಾಗಿದ್ದಾರೆ, ಈ ಹಿನ್ನೆಲೆಯಲ್ಲಿ ಪಟ್ಟಣದ ಚಿತಾವಲಿ ವೃತ್ತದಿಂದ ಸಂಜೆ ಕ್ಯಾಂಡಲ್ ಮಾರ್ಚ್ ಮೆರವಣಿಗೆ ಕಪಡಾ ಬಜಾರ್, ಜನತಾ ವೃತ್ತ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣದ ರಸ್ತೆ, ಬಸವೇಶ್ವರ ವೃತ್ತದ ಮೂಲಕ ಲಾಡ್ಜಿಂಗ್ ಕ್ರಾಸ್ ಸಮೀಪ ಸಮಾವೇಶಗೊಂಡು ಒಂದು ನಿಮಿಷ ಮೌನಾಚರಣೆ ಮಾಡಿ ಮೃತಯೋಧರ ಆತ್ಮಕ್ಕೆ ಶಾಂತಿ ಕೋರಲಾಯಿತು. ಪುರಸಭೆ […]

Continue Reading

ವಾಡಿ: ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಪ್ರಯುಕ್ತ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಬಿಜೆಪಿ ಮುಖಂಡರು ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮ ಅವರು ಸೂರ್ಯ-ಚಂದ್ರ ಇರುವವರೆಗೂ ಸಮಾಜಕ್ಕೆ ಅನ್ನದ ಕೊರತೆ ಬರಬಾರದು ಎಂದು ಶಿವನಿಂದ ವರ ಪಡೆದ ಮಹಾತಾಯಿ ಎಂದರು. ಅವರ ತತ್ವಾದರ್ಶಗಳೊಂದಿಗೆ ಬದುಕು ಸಾಗಿಸಿದರೆ ಆತ್ಮದ ಉನ್ನತಿ ಸಾಧ್ಯ. ಶ್ರೀಮಂತಿಕೆ ಅಂದರೆ ಹಣ, ಚಿನ್ನವಲ್ಲ ಪರಸ್ಪರ ಪ್ರೀತಿ, ಗೌರವದಿಂದ ಕಾಣುವುದು. ಮಾನವೀಯ […]

Continue Reading