ಸರಣಿ ಕಳ್ಳತನ ಪ್ರಕರಣದ ಆರೋಪಿಯ ಬಂಧನ: 4.40 ಲಕ್ಷ ರೂ. ಮೌಲ್ಯದ ನಗ-ನಗದು ವಶ

ಕಲಬುರಗಿ: ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 11 ತಿಂಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ. ಗುರುವಾರ ಜಿಲ್ಲಾ ಪೊಲೀಸ್ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಝಾಮ ಗೇಟ್ ವಾಡಿ ನಿವಾಸಿ ಶೇಖ್ ಪಾಶ ಬಂಧಿತ ಆರೋಪಿ. ಈತನಿಂದ 4,40,400 ರೂ. ಮೌಲ್ಯದ ಬೆಳ್ಳಿ-ಚಿನ್ನದ ಆಭರಣಗಳು ಹಾಗೂ ನಗದು ಹಣ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಈ ಹಿಂದೆ […]

Continue Reading

ಭಾರತ-ಪಾಕ್ ಉದ್ವಿಗ್ನ: ಹಂಪಿ ಮೇಲೆ ವಿಶೇಷ ನಿಗಾವಹಿಸಿದ ಕೇಂದ್ರ, ರಾಜ್ಯ ಸರ್ಕಾರ

ಬಳ್ಳಾರಿ: ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ವಾತಾವರಣ ಹಿನ್ನೆಲೆ ದಕ್ಷಿಣ ಕಾಶಿ, ಯುನೆಸ್ಕೋ ವಿಶ್ವಪಾರಂಪರಿಕ ತಾಣ ಹಂಪಿಯ ಮೇಲೆ ಕೇಂದ್ರ, ರಾಜ್ಯ ಸರ್ಕಾರ ವಿಶೇಷ ನಿಗಾವಹಿಸಿದ್ದು, ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಹಂಪಿಗೆ ಬರುವ ಎಲ್ಲಾ ವಾಹನಗಳ ತಪಾಸಣೆ ಮಾಡಲಾಗುತ್ತಿದ್ದು, ಪ್ರತಿಯೊಬ್ಬ ಪ್ರವಾಸಿಗನ ಪರಿಶೀಲನೆ ನಡೆಸಲಾಗುತ್ತಿದೆ. ಜೊತೆಗೆ ಹಂಪಿಗೆ ಬರುವ ಮಾರ್ಗಗಳಲ್ಲಿ 4 ಚೆಕ್’ಪೊಸ್ಟಳನ್ನು ನಿರ್ಮಾಣ ಮಾಡಲಾಗಿದೆ. 24 ಗಂಟೆಗಳ ಕಾಲ ಎರಡು ಚೆಕ್‌ಪೊಸ್ಟ್‌ ಕಾರ್ಯ ನಿರ್ವಹಿಸುತ್ತಿದ್ದು, ಕಲ್ಲಿನ ತೇರಿನ ಬಳಿ ಹಗಲು ಹೊತ್ತಿನಲ್ಲಿ ಚೆಕ್‌ಪೊಸ್ಟ್ ಕಾರ್ಯನಿರ್ವಹಿಸುತ್ತಿದೆ. ಪೊಲೀಸರು ಗಸ್ತು […]

Continue Reading

ಜಾಗತಿಕ ಕುಟುಂಬ ವ್ಯವಸ್ಥೆಯ ಪರಿಕಲ್ಪನೆ ಬೆಳೆಯಲಿ: ಎಚ್.ಬಿ ಪಾಟೀಲ

ಕಲಬುರಗಿ: ವಿಶ್ವದಲ್ಲಿರುವ ಎಲ್ಲರು ಒಂದೆ ಕುಟುಂಬದ ಸದಸ್ಯರು, ನಾವೆಲ್ಲರು ಒಂದೆ ಎಂಬ ಜಾಗತಿಕ ಕುಟುಂಬ ವ್ಯವಸ್ಥೆಯ ಪರಿಕಲ್ಪನೆ ಬೆಳೆದರೆ ವಿಶ್ವದೆಲ್ಲೆಡೆ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ ಎಂದು ಚಿಂತಕ ಎಚ್.ಬಿ ಪಾಟೀಲ ಆಶಯ ವ್ಯಕ್ತಪಡಿಸಿದರು. ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ‘ವಿಶ್ವ ಕುಟುಂಬ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಕುಟುಂಬವು ಸಮಾಜದ ಪ್ರಮುಖ ಘಟಕವಾಗಿದ್ದು, ಪ್ರೀತಿ, ಪ್ರೇಮ, ಬಾಂಧವ್ಯ, ಸಂಬಂಧದ ಬೆಸುಗೆಯಾಗಿದೆ. ಇಂದು ಕಾರಣಾಂತರಗಳಿಂದ ವಿಭಜನೆಯಾಗಿ, […]

Continue Reading

ಸರಕಾರಿ ಆಸ್ಪತ್ರೆ NHM ವೈದ್ಯಕೀಯ ಸಿಬ್ಬಂದಿ ವೇತನ ಹೆಚ್ಚಳ: ಹಳೆ ವೈದ್ಯರ ಕಿವಿಗೆ ಹೂವು ಇಟ್ಟ ಸರ್ಕಾರ

ಬೆಂಗಳೂರು: ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಮತ್ತು ನರ್ಸ್‌ಗಳ ವೇತನ ಪರಿಷ್ಕರಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿ ಮೂಲಕ ಮಹತ್ವದ ಘೋಷಣೆ ಮಾಡಿದ ಅವರು, ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ವೇತನ ಪರಿಷ್ಕರಿಸಲಾಗಿದೆ. ಈ ವೇತನ ಹೆಚ್ಚಳ ಹೊಸದಾಗಿ ನೇಮಕವಾಗುವ ಸಿಬ್ಬಂದಿಗೆ ಮಾತ್ರ ಅನ್ವಯವಾಗಲಿದೆ. ಈಗಿರುವ ಸಿಬ್ಬಂದಿಗೆ ಇದೆ ವೇತನ ಮುಂದುವರೆಯಲಿದೆ. ಅವರು ಕೂಡ […]

Continue Reading

ಕಂಪ್ಯೂಟರ್ ಜ್ಞಾನದಿಂದ ಉದ್ಯೋಗಾವಕಾಶಗಳು ಹೆಚ್ಚಳ

ಕಲಬುರಗಿ: ವಿದ್ಯಾರ್ಥಿಗಳು ಯಾವುದೆ ಪದವಿ, ಕೋರ್ಸ್ ಮಾಡುವುದರ ಜೊತೆಗೆ ಕಂಪ್ಯೂಟರ ಶಿಕ್ಷಣ ಪಡೆಯಬೇಕು. ಇದರಿಂದ ಸಾಕಷ್ಟು ಉದ್ಯೋಗಾವಕಾಶ ಲಭ್ಯವಾಗುತ್ತವೆ. ಕಂಪ್ಯೂಟರಯಿಲ್ಲದ ಕ್ಷೇತ್ರ ನಾವಿಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಶಿಕ್ಷಣ ತಜ್ಞ ಡಾ.ಸುನೀಲಕುಮಾರ ಎಚ್.ವಂಟಿ ಹೇಳಿದರು. ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನ ಸಕ್ಸಸ್ ಕಂಪೂಟರ ತರಬೇತಿ ಸಂಸ್ಥೆಯಲ್ಲಿ ಜರುಗಿದ ಸಂಸ್ಥೆಯಲ್ಲಿ ತರಬೇತಿ ಪಡೆದು ಕಂಪ್ಯೂಟರ್ ಕೋರ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಅವರು, ಪ್ರಸ್ತುತ ಕಂಪ್ಯೂಟರ ಜ್ಞಾನವಿಲ್ಲದಿದ್ದರೆ ಅನಕ್ಷರಸ್ಥ ಎಂಬ ಸ್ಥಿತಿಗೆ ಬಂದಿರುವುದು ಕಂಪ್ಯೂಟರ್‌ನ ಮಹತ್ವ […]

Continue Reading

ಈರುಳ್ಳಿ ಬೀಜ ಮಾರಾಟ ಮಾಡಿ ಕೋಟ್ಯಂತರ ರೂ ಆದಾಯ ಗಳಿಸಿದ ಬೀದರ್​ ರೈತ

ಬೀದರ್​: ಕೃಷಿಯಲ್ಲಿ ದುಡಿಮೆ ಹೆಚ್ಚು, ಕೆಲವು ಸಂದರ್ಭಗಳಲ್ಲಿ ಲಾಭಕ್ಕಿಂತ ಖರ್ಚು ಹೆಚ್ಚು ಎಂಬುದು ಕೆಳಿದ್ದೆವೆ. ಆದರೆ ಬೀದರ್​ ರೈತ ಕೃಷಿಯಿಂದಲೆ ಐದು ತಿಂಗಳಲ್ಲಿ ಈರುಳ್ಳಿ ಬೀಜ ಮಾರಾಟ ಮಾಡಿ ಭರ್ಜರಿ ಲಾಭ ಗಳಿಸುತ್ತಿದ್ದಾರೆ. ಈ ಪ್ರಗತಿಪರ ರೈತನ ಕೃಷಿಯ ಚಾಣಾಕ್ಷತನಕ್ಕೆ ಅಧಿಕಾರಿಗಳು ಮತ್ತು ರೈತರು ಫಿದಾ ಆಗಿದ್ದಾರೆ. ಜಿಲ್ಲೆಯ ಹುಮನಾಬಾದ ತಾಲೂಕಿನ ಹಳ್ಳಿಖೇಡ್ ಗ್ರಾಮದ ರೈತ ದೀಲಿಪಕುಮಾರ ನೇಮಿನಾಥ ಅವರು ತಮ್ಮ 40 ಎಕರೆ ಜಮೀನಿನಲ್ಲಿ ಈರುಳ್ಳಿ ಬೀಜೋತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದು, 5 ತಿಂಗಳಿಗೆ ಒಂದು ಕೋಟಿಗೂ ಅಧಿಕ […]

Continue Reading

ಈ ಕುಟುಂಬದ 50 ಕ್ಕೂ ಹೆಚ್ಚು ಜನರಿಗೆ 24 ಬೆರಳುಗಳಿವೆ, ಮದುವೆಯಾಗುತ್ತಿಲ್ಲ… ಕೆಲಸ ಸಿಗುತ್ತಿಲ್ಲ…

ಬಿಹಾರ: ಗಯಾ ಜಿಲ್ಲೆಯ ತೀಯುಸಾ ಗ್ರಾಮದ ಚೌಧರಿ ಟೋಲಾ ಪ್ರದೇಶದಲ್ಲಿ ವಾಸಿಸುವ ಸುಖರಿ ಚೌಧರಿ ಅವರ ಕುಟುಂಬ ಈ ದುಸ್ಥಿತಿ ಎದುರಿಸುತ್ತಿದೆ. 24 ಬೆರಳುಗಳ ಸಮಸ್ಯೆ ಮೊದಲು ಸುಖರಿ ಚೌಧರಿಯಿಂದ ಪ್ರಾರಂಭವಾಯಿತು. ಅವರು 24 ಬೆರಳುಗಳೊಂದಿಗೆ ಜನಿಸಿದರು. ಅವರು ಕೆಲವು ವರ್ಷಗಳ ಹಿಂದೆ ನಿಧನರಾದರು. ಸುಖರಿ ಚೌಧರಿ ಅವರ ಕುಟುಂಬವು 24 ಬೆರಳುಗಳು ಹೊಂದಿದ್ದು, 7 ತಿಂಗಳ ಶಿಶುಗಳಿಂದ 60 ವರ್ಷದ ವಯಸ್ಕರವರೆಗೆ ಇದೆ. ಕಳೆದ ನಾಲ್ಕು ತಲೆಮಾರುಗಳಿಂದ ಈ ಕುಟುಂಬದ ಅನೇಕ ಜನರು 24 ಬೆರಳುಗಳೊಂದಿಗೆ […]

Continue Reading

ಕ್ಷೇತ್ರದ ಗ್ರಾಮೀಣ ಅಭಿವೃದ್ದಿಗೆ 150 ಕೋಟಿ ರೂ ವೆಚ್ಚದ ಕ್ರಿಯಾಯೋಜನೆ ಸಿದ್ದ: ಸಚಿವ ಪ್ರಿಯಾಂಕ್ ಖರ್ಗೆ

ಚಿತ್ತಾಪುರ: ಕ್ಷೇತ್ರದ ಗ್ರಾಮೀಣ ಭಾಗದ ಹಳ್ಳಿಗಳ ಅಭಿವೃದ್ಧಿಗೆ 150 ಕೋಟಿ ರೂ ವೆಚ್ಚದ ಕ್ರಿಯಾಯೋಜನೆ ಈಗಾಗಲೆ ಸಿದ್ದವಾಗಿದೆ. ಇದರ ಅಡಿಯಲ್ಲಿ 87 ಹಳ್ಳಿಗಳಿಗೆ ಅಗತ್ಯ ಅನುದಾನ ಲಭ್ಯವಾಗಲಿದೆ, ಮುಂದಿನ 15 ದಿನಗಳಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ‌ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಅಮೃತ್ ಯೋಜನೆಯಡಿಯಲ್ಲಿ ಚಿತ್ತಾಪುರ ಹಾಗೂ ವಾಡಿ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆಗೆ ಅಡಿಗಲ್ಲು, ಚಿತ್ತಾಪುರ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಕ್ರೀಡಾಂಗಣ […]

Continue Reading

ಭಾಗೋಡಿ ಪಿಕೆಪಿಎಸ್‌ ಸಂಘಕ್ಕೆ 12 ನಿರ್ದೇಶಕರ ಅವಿರೋಧ ಆಯ್ಕೆ

ಚಿತ್ತಾಪುರ: ತಾಲೂಕಿನ ಭಾಗೋಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ 12 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. ಸುಭಾಶಚಂದ್ರ ಮುತ್ತಣ್ಣ ಭಾಗೋಡಿ (ಸಾಮಾನ್ಯ), ಶರ್ಮೋದ್ದೀನ್ ಅಬ್ದುಲ್ ಹಮೀದ್ ಭಾಗೋಡಿ (ಸಾಮಾನ್ಯ), ಅಂಬರಾಯ ಹನುಮಂತಪ್ಪ ಕದ್ದರಗಿ (ಸಾಮಾನ್ಯ), ಸಾಬಣ್ಣ ನರಸಪ್ಪ ಭಾಗೋಡಿ (ಸಾಮಾನ್ಯ), ಇಂದುಶೇಖರ ನಾಗಣ್ಣ ಭಾಗೋಡಿ (ಸಾಮಾನ್ಯ), ಶರಣಬಸಪ್ಪ ಪಾಟೀಲ ಶಿವಲಿಂಗಪ್ಪ ಪಾಟೀಲ ಭಾಗೋಡಿ (ಸಾಲಗಾರರಲ್ಲದ ಸಾಮಾನ್ಯ), ಮಲ್ಲಿಕಾರ್ಜುನ ಬಸವರಾಜ ಭಾಗೋಡಿ (ಪರಿಶಿಷ್ಟ ಜಾತಿ), ಸಿದ್ರಾಮಪ್ಪ ಕಾಮಣ್ಣ ಕಾಟಮ್ಮದೇವರಹಳ್ಳಿ (ಪರಿಶಿಷ್ಟ ಪಂಗಡ), […]

Continue Reading

ತಾಯಿ ದೇವರಾಗಬಹುದು, ದೇವರು ತಾಯಿಯಾಗಲ್ಲ: ಶಿವರಾಜ ಅಂಡಗಿ

ಬೆಂಗಳೂರು: ತನಗಾಗಿ ಏನನ್ನು ಬಯಸದವರು, ಏನನ್ನು ಕೂಡಿಡದವರು, ತನಗಿಲ್ಲವೆಂದು ಕೊರಗದವರು ಯಾರಾದರು ಇದ್ದರೆ ಅವರೆ ಕಣ್ಣಿಗೆ ಕಾಣುವ ದೇವರು ತಾಯಿ. ತಾಯಿ ದೇವರಾಗಬಹುದು ಆದರೆ ದೇವರು ತಾಯಿಯಾಗುವದಿಲ್ಲ ಎಂದು ಕಲಬುರಗಿ ಅಂಡಗಿ ಪ್ರತಿಷ್ಠಾನ ಅಧ್ಯಕ್ಷ ಶಿವರಾಜ ಅಂಡಗಿ ಹೇಳಿದರು. ನಗರದ ಕೆಂಗೇರಿ ಕೂಡಿಪಾಳ್ಯದಲ್ಲಿ “ವಿಶ್ವ ತಾಯಿಂದಿರ ದಿನಾಚರಣೆ” ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಸೋತಾಗ ಸದಾ ನಮ್ಮ ಜೊತೆಗೆ ಇದ್ದು ನಮಗೆ ಆತ್ಮಸ್ಥೈರ್ಯ ತುಂಬುವರು, ನಮ್ಮ ನಗುವಿನಲ್ಲಿಯೇ ತನ್ನ ಕುಷಿ ಕಾಣುವರು, ನಮಗಾಗಿಯೇ ಇಡಿ […]

Continue Reading