ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಪ್ರಯುಕ್ತ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಬಿಜೆಪಿ ಮುಖಂಡರು ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮ ಅವರು ಸೂರ್ಯ-ಚಂದ್ರ ಇರುವವರೆಗೂ ಸಮಾಜಕ್ಕೆ ಅನ್ನದ ಕೊರತೆ ಬರಬಾರದು ಎಂದು ಶಿವನಿಂದ ವರ ಪಡೆದ ಮಹಾತಾಯಿ ಎಂದರು.
ಅವರ ತತ್ವಾದರ್ಶಗಳೊಂದಿಗೆ ಬದುಕು ಸಾಗಿಸಿದರೆ ಆತ್ಮದ ಉನ್ನತಿ ಸಾಧ್ಯ. ಶ್ರೀಮಂತಿಕೆ ಅಂದರೆ ಹಣ, ಚಿನ್ನವಲ್ಲ ಪರಸ್ಪರ ಪ್ರೀತಿ, ಗೌರವದಿಂದ ಕಾಣುವುದು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ಎಲ್ಲರೊಂದಿಗೆ ಸಹಬಾಳ್ವೆಯಿಂದ ಬದುಕುವಂತೆ ಮಲ್ಲಮ್ಮ ತಾಯಿ ಬೋಧಿಸಿದ್ದಾರೆ. ಹೇಮರೆಡ್ಡಿ ಮಲ್ಲಮ್ಮನವರು ಸಮಾಜದ ಸರ್ವ ಮಹಿಳೆಯರಿಗೆ ಇಂದಿಗೂ ಆದರ್ಶಪ್ರಾಯರಾಗಿದ್ದಾರೆ. ಸಂಸಾರದ ಎಲ್ಲ ನೋವು ನಲಿವುಗಳನ್ನು ಅನುಭವಿಸಿದ ಮಲ್ಲಮ್ಮ ತಾಯಿ ಇತರರಿಗಿಂತ ಭಿನ್ನವಾಗಿ ನಿಲ್ಲಲು ಅವರೊಳಗಿನ ಆಧ್ಯಾತ್ಮಿಕ ಶಕ್ತಿ ಮೂಲ ಕಾರಣ, ಆ ಒಂದು ಭಕ್ತಿಯ ಶಕ್ತಿ ಯಿಂದ ತಾಯಿಗೆ ಶಿವನ ಸಾಕ್ಷಾತ್ಕಾರ ವಾಯಿತು ಎಂದರು.
ಈ ಸಂದರ್ಭದಲ್ಲಿ ಯುವ ಮೋರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ಮುಖಂಡರಾದ ವೀರಣ್ಣಗೌಡ ಮೇಲಸಿಮಿ, ಶಿವಶಂಕರ ಕಾಶೆಟ್ಟಿ, ನಾಗರಾಜ ಗೌಡ ಗೌಡಪ್ಪನೂರ, ಮಲ್ಲಿಕಾರ್ಜುನ ಸಾತಖೇಡ, ವಿಶ್ವನಾಥರೆಡ್ಡಿ, ನಾಗಣ್ಣ ಗೌಡ ಕಡಬೂರ, ನಿರ್ಮಲ ಇಂಡಿ, ಯಂಕಮ್ಮ ಗೌಡಗಾಂವ, ಉಮಾಭಾಯಿ ಗೌಳಿ, ಬಾಲರಾಜ ಪಗಡಿಕರ, ಮೋದಿನ್ ಕಮರವಾಡಿ ಸೇರಿದಂತೆ ಅನೇಕರು ಇದ್ದರು.