ಜಾಗತಿಕ ತಲ್ಲಣಗಳಿಗೆ ಬುದ್ಧನ ಶಾಂತಿ ಸಂದೇಶ ಅಗತ್ಯ: ಎಚ್.ಬಿ ಪಾಟೀಲ

ಜಿಲ್ಲೆ

ಕಲಬುರಗಿ: ಹಿಂಸೆ, ಅನ್ಯಾಯ, ಅಶಾಂತಿ, ಶೋಷಣೆ, ಭಯೋತ್ಪಾದನೆಯಂತಹ ಜಾಗತಿಕ ತಲ್ಲಣಗಳಿಂದ ಬಳಲುತ್ತಿರುವ ಪ್ರಸ್ತುತ ಸಮಾಜಕ್ಕೆ ಮಹಾತ್ಮ ಗೌತಮ ಬುದ್ಧ ಅವರು ಸಾವಿರಾರು ವರ್ಷಗಳ ಹಿಂದೆಯೇ ನೀಡಿರುವ ಹಾಗೂ ಅವುಗಳನ್ನು ಆಚರಿಸಿ ತೋರಿಸಿರುವ ತತ್ವಗಳು ಔಷಧಿಯಂತೆ ಕಾರ್ಯ ಮಾಡುತ್ತವೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಹೇಳಿದರು.

ನಗರದ ನ್ಯೂ ರಾಘವೇಂದ್ರ ಕಾಲೋನಿಯ ವಿವೇಕಾನಂದ ಕೋಚಿಂಗ್ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಜರುಗಿದ ‘ಮಹಾತ್ಮ ಗೌತಮ ಬುದ್ಧರ 2569ನೇ ಪೂರ್ಣಿಮೆ’ಯಲ್ಲಿ ಬುದ್ಧವಂದನೆ ಸಲ್ಲಿಸಿ ಮಾತನಾಡಿದ ಅವರು, ಪ್ರಸ್ತುತ ಸಮಾಜದಲ್ಲಿಯೂ ಜನರು ಮೌಢ್ಯತೆ, ಕಂದಾಚಾರ, ಅಂಧಶೃದ್ಧೆಯಂತಹ ಆಚರಣೆಯಲ್ಲಿರುವುದು ಬೇಸರದ ಸಂಗತಿಯಾಗಿದ್ದು, ಇಂತಹ ಅನಿಷ್ಠತೆಗಳಿಂದ ಹೊರಬರಬೇಕು. ವೈಚಾರಿಕತೆ ಮೈಗೂಡಿಸಿಕೊಳ್ಳಬೇಕು. ಬುದ್ಧ-ಬಸವ-ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವಗಳು ಅಳವಡಿಸಿಕೊಳ್ಳಬೇಕು. ‘ಬುದ್ಧ’ ಎಂದರೆ ‘ಶಾಂತಿ’, ‘ಜ್ಞಾನ’ದ ಸಂಕೇತವಾಗಿದ್ದಾರೆ. ಅವರ ತತ್ವದ ಮಹಾ ಬೆಳಕಿನಲ್ಲಿ ಸಾಗಿದರೆ ಬದುಕು ಸುಂದರವಾಗುತ್ತದೆ. ಬುದ್ಧನ ಸಂದೇಶ ಪಾಲಿಸುವುದು ತುಂಬಾ ಅಗತ್ಯವಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಬಸವರಾಜ ಮಳ್ಳಿ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿ ಸೋನಿಯಾ ಸರಡಗಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *