ಶುಶ್ರೂಷಕರು ಆರೋಗ್ಯ ಕ್ಷೇತ್ರದ ಸೇನಾನಿಗಳು

ಜಿಲ್ಲೆ

ಕಲಬುರಗಿ: ರೋಗಿಯ ಜೊತೆಗೆ ನಿರಂತರವಾಗಿದ್ದು, ಉಪಚಾರ, ಆರೈಕೆ, ಸೇವೆ ಮಾಡುವ ಮೂಲಕ ಶುಸ್ರೂಷಕರ ಆರೋಗ್ಯ ಕ್ಷೇತ್ರದ ಸೇನಾನಿಗಳಾಗಿದ್ದಾರೆ ಎಂದು ಹಿರಿಯ ಶುಶ್ರೂಷಕಿ ಗಂಗಾಜ್ಯೋಜಿ ಗಂಜಿ ಹೇಳಿದರು

ನಗರದ ಶೇಖ್‌ರೋಜಾದ ಶಹಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ‘ಅಂತರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಿ, ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಶುಸ್ರೂಷಕರ ಕೊಡುಗೆ ಅನನ್ಯ. ಸಮಾಜ-ಆರೋಗ್ಯ ಕ್ಷೇತ್ರದ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ ಎಂದರು.

ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಶುಶ್ರೂಷಕರ ಸೇವೆ ನಿರಂತರ ಮತ್ತು ಜವಬ್ದಾರಿಯುತವಾಗಿದೆ. ಪ್ರತಿ ವರ್ಷ ‘ಮೇ-12’ ರಂದು ‘ವಿಶ್ವ ಶುಶ್ರೂಷಕರ ದಿನಾಚರಣೆ’ ಆಚರಿಸಲಾಗುತ್ತದೆ. ಈ ದಿನ ಇಡಿ ವಿಶ್ವದ್ಯಾದಂತ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕರನ್ನು ಸ್ಮರಿಸುವ ಉದ್ದೇಶವಾಗಿದೆ. ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನ ಇದಾಗಿದ್ದು, ಅವರು ಆಧುನಿಕ ನರ್ಸಿಂಗ್ ಶಿಕ್ಷಣಕ್ಕೆ ಬುನಾದಿ ಹಾಕಿ ಸಂಘಟನೆ ಮಾಡಿದ್ದಾರೆ. ನೈಟಿಂಗೇಲ್ ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದರು.

ಆರೋಗ್ಯ ಕೇಂದ್ರದ ಶುಶ್ರೂಷಕರಾದ ಗಂಗಾಜ್ಯೋತಿ ಗಂಜಿ, ಶ್ರಿದೇವಿ ಸಾಗರ, ಅರ್ಚನಾ ಸಿಂಗೆ ಮತ್ತು ಫಾರ್ಮಶಿಷ್ಟ್ ನಾಗೇಶ್ವರಿ ಮುಗಳಿವಾಡಿ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಜಗನಾಥ ಗುತ್ತೇದಾರ, ಗುರುರಾಜ ಕೈನೂರ್, ಸಿದ್ರಾಮ, ರಾಹುಲ್ ಗೌಳಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *