ನನ್ನ ವೃತ್ತಿ ನನ್ನ ಭವಿಷ್ಯ ಪುಸ್ತಕವನ್ನು ಸಚಿವ ಡಾ.ಎಚ್.ಸಿ ಮಹದೇವಪ್ಪ ಬಿಡುಗಡೆ

ರಾಜ್ಯ

ಬೆಂಗಳೂರು: ನನ್ನ ವೃತ್ತಿ ನನ್ನ ಭವಿಷ್ಯ ಕಾರ್ಯಕ್ರಮದ ಪುಸ್ತಕವನ್ನು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ ಮಹದೇವಪ್ಪ ಬಿಡುಗಡೆಗೊಳಿಸಿದರು.

ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಅನಾಹತ ಯುನೈಟೆಡ್ ಎಫರ್ಟ್ಸ್ ಫೌಂಡೇಶನ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ಇವರ ಸಹಭಾಗಿತ್ವದಲ್ಲಿ   ರಾಜ್ಯದ ಎಲ್ಲಾ ವಸತಿ ಶಾಲೆಗೆ ಅನುಷ್ಠಾನಗೊಂಡಿರುವ ನನ್ನ ವೃತ್ತಿ ನನ್ನ ಭವಿಷ್ಯ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮಕ್ಕಳಿಗೆ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಶಾಲಾ ಹಂತದಲ್ಲೇ ತಿಳಿಸಿದರೆ ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ. ನಾವು ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ಇಂತಹ ಕಾರ್ಯಕ್ರಮ ಇರಲಿಲ್ಲ, ಪ್ರಸ್ತುತ ವಸತಿ ಶಾಲೆಯ ಮಕ್ಕಳಿಗಿರುವ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು, ಮಕ್ಕಳ ಭವಿಷ್ಯ ಉಜ್ವಲವಾಗಬೇಕು. ಇಂತಹ ಉತ್ತಮ ಕಾರ್ಯಕ್ರಮ ವಸತಿ ಶಾಲೆಯ ಮಕ್ಕಳಿಗೆ ತಲುಪುತ್ತಿರುವುದು ಸಂತಸದ ವಿಷಯ, ವೃತ್ತಿ ಯೋಜನಾ ಕಾರ್ಯಕ್ರಮ ರಾಜ್ಯದ ಎಲ್ಲಾ ವಸತಿ ಶಾಲೆಗಳಲ್ಲಿ ಯಶಸ್ವಿಯಾಗಿ ಅನುಷ್ಠಾನವಾಗಲಿ, ಇಂತಹ ಉತ್ತಮ ಕಾರ್ಯಕ್ರಮಗಳಿಗೆ ಇಲಾಖೆಯು ಅಗತ್ಯ ಸಹಕಾರ ನೀಡುತ್ತದೆ ಎಂದರು.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜ್ ಪಿ.ಎಸ್, ಜಂಟಿ ನಿರ್ದೇಶಕ ನಾಗೇಶ, ಶಿಕ್ಷಣ ವಿಭಾಗ ಹಿರಿಯ ಸಹಾಯಕ ಅಭಿಯಂತರರು ಮಹದೇವ, ಸಿಎಸ್ಆರ್ ಸಂಯೋಜಕಿ ಹರ್ಷಿತಾ, ಅನಾಹತ ಯುನೈಟೆಡ್ ಎಫರ್ಟ್ಸ್ ಫೌಂಡೇಶನ್ ಸಿಇಓ ಮೀನಾಕ್ಷಿ ಗೈರೋಲಾ, ಕಿಶೋರ್, ಮೈಕ್ರೋಸಾಫ್ಟ್ ಸಿಎಸ್’ಆರ್ ಮುಖ್ಯಸ್ಥೆ ದೀಪ್ತಿ, ನನ್ನ ಭವಿಷ್ಯ ನನ್ನ ಆಯ್ಕೆ ಕಾರ್ಯಕ್ರಮದ ರಾಜ್ಯ ಮುಖ್ಯಸ್ಥ ಡಾ. ಸರವಣ ಕೆ ಸೇರಿದಂತೆ ಸಮಸ್ತ ಸಿಬ್ಬಂದಿ ವರ್ಗ, ಕರ್ನಾಟಕ ವಸತಿ ಶಾಲೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *