ಅನಾಥವಾಗಿ ಬಿದ್ದಿದ್ದ ಮಗುವನ್ನು ಸಾಕಿದ ಮಹಿಳೆ, ಆ ಮಗಳಿಂದಲೆ ಕೊಲೆಯಾದ ತಾಯಿ

ಭುವನೇಶ್ವರ: ಅಪ್ಪ-ಅಮ್ಮನಿಗೆ ಬೇಡವಾದ ಮಗು ಕಸದಬುಟ್ಟಿಯಲ್ಲಿ, ರಸ್ತೆಯ ಬದಿಯಲ್ಲಿ ಸೇರುತ್ತದೆ. ಇನ್ನು ಕೆಲವರು ಹೆಣ್ಣುಮಗು ಹುಟ್ಟಿತೆಂಬ ಕಾರಣಕ್ಕೆ ಅದನ್ನು ಕೊಲ್ಲುವವರೂ ಇದ್ದಾರೆ. ಆದರೆ ಒಡಿಶಾದ ಮಹಿಳೆ ರಾಜಲಕ್ಷ್ಮಿಕರ್ ಎಂಬುವವರಿಗೆ ಮಕ್ಕಳೆಂದರೆ ಜೀವ. ತಮಗೆ ಮಕ್ಕಳಾಗಲಿಲ್ಲವೆಂದು ಕೊರಗುತ್ತಿದ್ದ ಅವರಿಗೆ 13 ವರ್ಷದ ಹಿಂದೆ ರಸ್ತೆ ಬದಿಯಲ್ಲಿ 3 ದಿನದ ಹೆಣ್ಣುಮಗುವೊಂದು ಸಿಕ್ಕಿತ್ತು. ಕಾನೂನುಪ್ರಕಾರ ಆ ಮಗುವನ್ನು ದತ್ತು ಪಡೆದು ಆ ಅನಾಥ ಮಗುವಿಗೆ ತಾಯಿಯಾದರು. ಅಮ್ಮನಿಗೆ ಬೇಡವಾಗಿ ಬಿದ್ದಿದ್ದ ಆ ಹೆಣ್ಣು ಶಿಶುವಿನ ಜೀವನಕ್ಕೆ ಆಧಾರವಾದರು. ಒಳ್ಳೆಯ ಶಾಲೆಗೆ […]

Continue Reading

ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರ ಮುಚ್ಚಲು ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚಲು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧ ವಿತರಣೆ ಮಾಡುತ್ತಿರುವುದರಿಂದ ಆಸ್ಪತ್ರೆಗಳ ಆವರಣದಲ್ಲಿ ಜನೌಷಧಿ ಕೇಂದ್ರಗಳ ಅಗತ್ಯವಿಲ್ಲ ಎಂದು ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶ್ರೀಪತಿ ಪಿ.ಕೆ ಅವರು ಆದೇಶ ಹೊರಡಿಸಿದ್ದಾರೆ. ಪ್ರಸ್ತುತ ಸರ್ಕಾರಿ ಆಸ್ಪತ್ರೆಗಳ ವೈದ್ಯರು ರೋಗಿಗಳಿಗೆ ಯಾವುದೆ ಔಷಧಿ ಹೊರಗಿನಿಂದ ಖರೀದಿಸಲು ಶಿಫಾರಸ್ಸು ಮಾಡದಂತೆ ನೋಡಿಕೊಳ್ಳುವುದು […]

Continue Reading

ಶಿಕ್ಷಕರಿಗೆ ಕಿರುಕುಳ: ಬಿಇಒ ಅಮಾನತು

ಬೀದರ್‌: ಶಿಕ್ಷಕರಿಗೆ ಕಿರುಕುಳ ಕೊಟ್ಟು ಕರ್ತವ್ಯಲೋಪ ಎಸಗಿದ ಕಾರಣಕ್ಕೆ ಬೀದರ್ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್‌ ದೊಡ್ಡೆ ಅವರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಅಮಾನತುಗೊಳಿಸಿದ್ದಾರೆ. ಟಿ.ಆರ್‌ ದೊಡ್ಡೆ ಅವರ ಸ್ಥಾನಕ್ಕೆ ಕಲಬುರಗಿ ಜಿಲ್ಲೆಯ ಕಮಲಾಪುರದ ಡಯಟ್‌ ಹಿರಿಯ ಉಪನ್ಯಾಸಕರನ್ನು ವರ್ಗಾಯಿಸಿ, ನೇಮಕ ಮಾಡಲಾಗಿದೆ. ಏಳನೇ ಪರಿಷ್ಕೃತ ವೇತನ ಬಟವಾಡೆಗೆ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರಿಂದ ಹಣ ತೆಗೆದುಕೊಂಡು ಪರಿಷ್ಕೃತ ವೇತನ ಬಿಡುಗಡೆಗೊಳಿಸಿದ್ದಾರೆ. ಕಾಲಮಿತಿ ವೇತನ ಬಡ್ತಿ ಹಾಗೂ […]

Continue Reading

ಆರೋಗ್ಯಯುತ ಜೀವನಶೈಲಿಯಿಂದ ಅಧಿಕ ರಕ್ತದೊತ್ತಡ ದೂರ: ಡಾ.ರಾಜಶೇಖರ ಪಾಟೀಲ

ಕಲಬುರಗಿ: ಅನಾರೋಗ್ಯಕರ ಜೀವನಶೈಲಿಯಿಂದ ಬೊಜ್ಜು, ಸ್ಥೂಲಕಾಯದ ಪ್ರಮಾಣ ಹೆಚ್ಚಾಗಿದೆ. ಒತ್ತಡ ಜೀವನ ಸೇರಿದಂತೆ ಮುಂತಾದ ಕಾರಣದಿಂದ ಅಧಿಕ ರಕ್ತದೊತ್ತಡವಿರುವವರ ಸಂಖ್ಯೆ ಹೆಚ್ಚಾಗುತ್ತಾದೆ. ಇದು ಉಸಿರಾಟ ಸಂಬಂಧಿತ ಸಮಸ್ಯೆಗಳೊಂದಿಗೆ ಹೃದಯಘಾತಕ್ಕೆ ಕಾರಣವಾಗುವ ಮೂಲಕ ಜೀವಕ್ಕೆ ಅಪಾಯಕಾರಿಯಾಗಿದೆ. ಆರೋಗ್ಯಯುತ ಜೀವನಶೈಲಿಯಿಂದ ಅಧಿಕ ರಕ್ತದೊತ್ತಡದಿಂದ ದೂರವಿರಲು ಸಾಧ್ಯ ಎಂದು ಹಿರಿಯ ಕುಟುಂಬ ವೈದ್ಯ ಡಾ.ರಾಜಶೇಖರ ಪಾಟೀಲ ಹೇಳಿದರು. ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ಬಸವ ಗಂಗಾ ಕ್ಲಿನಿಕ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಜರುಗಿದ […]

Continue Reading

ರಾಷ್ಟ್ರದ ಅಭಿವೃದ್ಧಿಗೆ ದೂರಸಂಪರ್ಕ ಕ್ಷೇತ್ರದ ಕೊಡುಗೆ ಅಪಾರ

ಕಲಬುರಗಿ: ನಮ್ಮ ದೇಶ ಸೇರಿದಂತೆ ಇಡಿ ವಿಶ್ವದಲ್ಲಿ ಉಂಟಾದ ದೂರ ಸಂಪರ್ಕ ಕ್ಷೇತ್ರದಲ್ಲಿನ ಕ್ರಾಂತಿಯಿಂದಾಗಿ, ಪ್ರಸ್ತುತವಾಗಿ ಜಗತ್ತೆ ಒಂದು ಚಿಕ್ಕ ಗ್ರಾಮವೆಂಬ ಪರಿಕಲ್ಪನೆ ಮೂಡಲು ಸಾಧ್ಯವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ತೀವ್ರ ಬೆಳವಣಿಗೆಯಿಂದಾಗಿ ಸಾಧ್ಯವಾಗಿದ್ದು, ದೂರಸಂಪರ್ಕ ಕ್ಷೇತ್ರದ ಕ್ರಾಂತಿಯಿಂದಾಗಿ ರಾಷ್ಟ್ರ ತೀವ್ರಗತಿಯಲ್ಲಿ ಅಭಿವೃದ್ಧಿಯಾಗಲು ಸಾಧ್ಯವಾಗಿದ್ದು, ಅಪಾರವಾದ ಕೊಡುಗೆ ನೀಡಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ ಅಭಿಮತಪಟ್ಟರು. ನಗರದ ಜೆ.ಆರ್ ನಗರದಲ್ಲಿನ ‘ಶ್ರೇಯಸ್ ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಏರ್ಪಡಿಲಾಗಿದ್ದ ‘ಅಂತಾರಾಷ್ಟ್ರೀಯ ದೂರಸಂಪರ್ಕ ದಿನಾಚರಣೆ’ […]

Continue Reading

ವೈದ್ಯಾಧಿಕಾರಿಗಳಿಗೆ ಗ್ರಾಮೀಣ ಸೇವೆ ಕಡ್ಡಾಯ, ಕೆಲವರಿಗಷ್ಟೇ ವಿನಾಯಿತಿ

ಬೆಂಗಳೂರು: ಕಡ್ಡಾಯವಾಗಿ ಗ್ರಾಮೀಣ ಸೇವೆ ಸಲ್ಲಿಸದ, 50 ವರ್ಷ ಮೀರದ ವೈದ್ಯಾಧಿಕಾರಿಗಳ ಮತ್ತು ಇತರ ಸಿಬ್ಬಂದಿಯನ್ನು ಗುರುತಿಸಿ ತಕ್ಷಣವೆ ಗ್ರಾಮೀಣ ಪ್ರದೇಶದ ಸೇವೆಗೆ ವರ್ಗಾವಣೆ ಮಾಡಬೇಕೆಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಅಲ್ಲದೆ ವಿಶೇಷ ತಜ್ಞರು ಮತ್ತು ಹಿರಿಯ ವಿಶೇಷ ತಜ್ಞರು ಅವರ ವಿಶೇಷ ವಿದ್ಯಾರ್ಹತೆಗೆ ಗೊತ್ತುಪಡಿಸದ ಹುದ್ದೆಗಳಲ್ಲಿ ಕಾರ್ಯನಿರ್ವಸುತ್ತಿದ್ದಲ್ಲಿ ಅವರ ಸೇವೆಯನ್ನು ಕೂಡಲೇ ಹಿಂಪಡೆದು ವಿಶೇಷ ವಿದ್ಯಾರ್ಹತೆಗೆ ಗೊತ್ತುಪಡಿಸಿದ ಹುದ್ದೆಗಳಿಗೆ ವರ್ಗಾವಣೆ ಮಾಡಬೇಕು ಎಂದು ಸೂಚಿಸಲಾಗಿದೆ. ಕನಿಷ್ಠ ಮೂರು ವರ್ಷ ಗ್ರೂಪ್‌ ‘ಎ’ ಹುದ್ದೆಯಲ್ಲಿ, ಕನಿಷ್ಠ […]

Continue Reading

13 ವರ್ಷದ ವಿದ್ಯಾರ್ಥಿಯಿಂದ ಗರ್ಭಿಣಿಯಾದ 23 ವರ್ಷದ ಶಿಕ್ಷಕಿಯ ಗರ್ಭಪಾತಕ್ಕೆ ಕೋರ್ಟ್‌ ಅನುಮತಿ

ಗಾಂಧಿನಗರ: 13 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿ ಹೋಗಿ, ಆತನಿಂದಲೇ ಗರ್ಭಿಣಿಯಾಗಿ ಸದ್ಯ ಪೋಕ್ಸೊ ಕಾಯ್ದೆಯಡಿ ಬಂಧನದಲ್ಲಿರುವ 23 ವರ್ಷದ ಶಿಕ್ಷಕಿಯ ಗರ್ಭಪಾತಕ್ಕೆ ಗುಜರಾತ್‌ನ ಸೂರತ್‌ನ ವಿಶೇಷ ಪೋಕ್ಸೋ ನ್ಯಾಯಾಲಯ ಅನುಮತಿ ನೀಡಿದೆ. ಅಪ್ರಾಪ್ತ ವಯಸ್ಕನನ್ನು ಅಪಹರಿಸಿದ ಪ್ರಕರಣದಲ್ಲಿ ಶಿಕ್ಷಕಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿದೆ, ಸದ್ಯ ಸೂರತ್‌ನ ಜೈಲಿನಲ್ಲಿದ್ದಾಳೆ. ಕೆಲವು ದಿನಗಳ ಹಿಂದೆ ಬೆಳಕಿಗೆ ಬಂದಿರುವ ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿತು. ಆಕೆಯ ಮಾನಸಿಕ ತೊಂದರೆಗಳನ್ನು ಗಣನೆಗೆ ತೆಗೆದುಕೊಂಡು ಈ ತೀರ್ಪು ನೀಡಲಾಗಿದೆ ಎಂದು […]

Continue Reading

ಐಸ್‌ಕ್ರೀಂನಲ್ಲಿ ಮಹಿಳೆಗೆ ಸಿಕ್ಕಿದ್ದೆನು ? ತೀವ್ರ ವಾಂತಿಯಿಂದ ಆಸ್ಪತ್ರೆಗೆ ದಾಖಲಾದ ಮಹಿಳೆ

ಅಹ್ಮದಾಬಾದ್‌: ಕಳೆದ ವರ್ಷ ಮಹಾರಾಷ್ಟ್ರದ ಮುಂಬೈನಲ್ಲಿ ವ್ಯಕ್ತಿಯೊಬ್ಬರಿಗೆ ಐಸ್‌ಕ್ರೀಂನಲ್ಲಿ ಮನುಷ್ಯನ ಬೆರಳೊಂದು ಸಿಕ್ಕಿ ಬೆಚ್ಚಿ ಬೀಳುವಂತೆ ಮಾಡಿತ್ತು. ತನಿಖೆಯ ಬಳಿಕ ಇದು ಐಸ್‌ಕ್ರೀಂ ಕಾರ್ಖಾನೆಯ ಕಾರ್ಮಿಕನ ಬೆರಳು ಎಂಬುದು ತಿಳಿದು ಬಂದಿತ್ತು. ಈ ಘಟನೆ ಜನಮಾನಸದಿಂದ ಮಾಸುವ ಮೊದಲೆ ಈಗ ಗುಜರಾತ್‌ನ ಅಹ್ಮದಾಬಾದ್‌ನ ಮಹಿಳೆಯೊಬ್ಬರು ಐಸ್‌ಕ್ರೀಂನಲ್ಲಿ ಸಿಕ್ಕ ವಸ್ತುವನ್ನು ನೋಡಿ ಅಸ್ವಸ್ಥಗೊಂಡಿದ್ದಾರೆ. ನಿರಂತರವಾಗಿ ವಾಂತಿ ಮಾಡಲು ಶುರು ಮಾಡಿದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಮಾನ್ಯವಾಗಿ ಖುಷಿ ಕ್ಷಣಗಳನ್ನು ಹಂಚಿಕೊಳ್ಳಲು ಅನೇಕರು ಐಸ್‌ಕ್ರೀಂ ಸೇವಿಸುತ್ತಾರೆ. ಆದರೆ ಗುಜರಾತ್‌ನ ಮಹಿಳೆಯೊಬ್ಬರಿಗೆ […]

Continue Reading

ಜಮೀನಿನಲ್ಲಿ ರೈತನಿಗೆ ಸಿಕ್ಕಿತು 36 ಸಾವಿರ ಕೋಟಿ ಮೌಲ್ಯದ ಚಿನ್ನ: ಕ್ಷಣಾರ್ಧದಲ್ಲಿ ಬದಲಾಯಿತು ಅನ್ನದಾತನ ಬದುಕು

ಅದೃಷ್ಟ ಹೇಗೆ ಒಲಿದು ಬರುತ್ತದೆ ಎಂಬುದು ಯಾರಿಂದಲೂ ಹೇಳಲು ಅಸಾಧ್ಯ. ಇತ್ತೀಚೆಗೆ ರೈತನೋರ್ವ ಜಮೀನಿನಲ್ಲಿ ಕೃಷಿ ಕೆಲಸ ಮಾಡುವಾಗ 36 ಸಾವಿರ ಕೋಟಿ ಮೌಲ್ಯದ ಚಿನ್ನದ ನಿಧಿ ಸಿಕ್ಕಿದೆ. ಕ್ಷಣಾರ್ಧದಲ್ಲಿ ರೈತನ ಜೀವನವೆ ಬದಲಾಗಿದೆ. ಇಂತಹ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚಿನ್ನದ ನಿಧಿ ಸಿಕ್ಕಿರುವದು ಫ್ರಾನ್ಸ್‌ನಲ್ಲಿ, ಈ ಸುದ್ದಿಯಿಂದ ಕೋಲಾಹಲ ಸೃಷ್ಟಿಯಾಗಿದೆ. ಫ್ರಾನ್ಸ್ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಯುನಿಯನ್ ರಿಯೋ ವರದಿ ಪ್ರಕಾರ, ಫ್ರಾನ್ಸ್‌ನ ಪುಟ್ಟ ಗ್ರಾಮವಾದ ಆವೆರ್ಗ್ನೆಯಲ್ಲಿ 36 ಸಾವಿರ […]

Continue Reading

ಡೆಂಗ್ಯೂ ಜ್ವರದ ಬಗ್ಗೆ ಮುನ್ನೆಚ್ಚರಿಕೆ ವಹಿಸಿ: ಡಾ.ಅನುಪಮಾ ಕೇಶ್ವಾರ

ಕಲಬುರಗಿ: ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣು, ಬಾಯಿ, ವಸಡು, ಕೀಲು ನೋವು, ಮೂಗಿನಿಂದ ರಕ್ತಸ್ರಾವ, ಚರ್ಮದ ಮೇಲೆ ಅಲ್ಲಲ್ಲಿ ರಕ್ತದ ಗುರುತು ಕಂಡುಬಂದರೆ ಇವು ಡೆಂಗ್ಯೂ ಜ್ವರದ ಲಕ್ಷಣಗಳಾಗಿವೆ. ಹೀಗಾಗಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ರಕ್ತ ಪರೀಕ್ಷೆ ಮಾಡಿಸಿ ಡೆಂಗ್ಯೂ ದೃಢಪಟ್ಟರೆ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಆರೋಗ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಸಲಹೆ ನೀಡಿದ್ದಾರೆ. ನಗರದ ಶೇಖರೋಜಾದ ಶಹಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಶುಕ್ರವಾರ […]

Continue Reading