ಮಾನವ ಸಂಪನ್ಮೂಲ ಸಂಸ್ಥೆಯ ಬೆನ್ನೆಲುಬು

ಜಿಲ್ಲೆ

ಕಲಬುರಗಿ: ಯಾವುದೆ ಒಂದು ಕಂಪನಿ ಅಥವಾ ಸಂಸ್ಥೆಗೆ ಸರಿಯಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದರಿಂದ, ವೇತನ, ಸಂಘರ್ಷ ಪರಿಹಾರ, ಉದ್ಯೋಗಿಗಳಿಗೆ ತರಬೇತಿ, ಕಾನೂನು ಸಮಸ್ಯೆಗಳನ್ನು ನಿರ್ವಹಿಸುವುದು, ಉದ್ಯೋಗಿಗಳನ್ನು ಒಗ್ಗೂಡಿಸುವುದು ಸೇರಿದಂತೆ ಮುಂತಾದ ಪ್ರಮುಖ ಕಾರ್ಯಗಳು ಮಾಡುವ ಮಾನವ ಸಂಪನ್ಮೂಲ ವಿಭಾಗವು ಸಂಸ್ಥೆಯ ಬೆನ್ನೆಲುಬಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.

ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿನ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಜರುಗಿದ ‘ಅಂತಾರಾಷ್ಟ್ರೀಯ ಮಾನವ ಸಂಪನ್ಮೂಲ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಮಾನವ ಸಂಪನ್ಮೂಲದ ಮಹತ್ವವನ್ನು ಸಾರಲು ಪ್ರತಿ ವರ್ಷ ‘ಮೇ-20’ರಂದು ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮಾನವ ಸಂಪನ್ಮೂಲಗಳ ನಿರ್ವಹಣೆಯ ಕಾರ್ಯಾಚರಣೆಯು ಅನೇಕ ಕಾರ್ಯ ಚಟುವಟಿಕೆಗಳನ್ನು ಒಳಗೊಂಡಿದೆ. ಯಾವ ರೀತಿಯ ಸಿಬ್ಬಂದಿ ವರ್ಗವನ್ನು ಹೊಂದಬೇಕು, ಈ ಅಗತ್ಯಗಳನ್ನು ಪೂರೈಸಲು ಸ್ವತಂತ್ರ ಗುತ್ತಿಗೆದಾರರನ್ನು ಬಳಸಬೇಕೆ ಅಥವಾ ನೌಕರರನ್ನು ನೇಮಕಮಾಡಿಕೊಳ್ಳಬೇಕೆ ಎಂಬುದನ್ನು ನಿರ್ಧರಿಸುತ್ತವೆ. ಉತ್ತಮ ನೌಕರರನ್ನು ನಿಯೋಜಿಸಿ, ಅವರಿಗೆ ತರಬೇತಿ ನೀಡಲಾಗುತ್ತದೆ. ಉದ್ಯೋಗಕ್ಕೆ ಸಂಬAಧಿಸಿದ ವಿವಾದಗಳನ್ನು ಬಗೆಹರಿಸುವ ಮೂಲಕ ಎಚ್.ಆರ್ ವಿಭಾಗವು ಸಂಸ್ಥೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಮಾಜ ಸೇವಕರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಓಂಕಾರ ವಠಾರ, ಸಂಸ್ಥೆಯ ಸಿಬ್ಬಂದಿಗಳಾದ ಪೂಜಾ ಹೂಗಾರ, ಪ್ರತ್ವಿ ಕೋರವಾರ, ಮುಸ್ಕಾನ್ ಶೇಖ್, ಕಾವೇರಿ ಹೌದೆ, ಪ್ರಮುಖರಾದ ಪ್ರವೀಣ, ಹರೀಶ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು

Leave a Reply

Your email address will not be published. Required fields are marked *