ಮಳಖೇಡದಲ್ಲಿ ಮಾ.26ರಿಂದ 28 ರವರೆಗೆ ಉರೂಸ್ ಸಂಭ್ರಮ

ಸುದ್ದಿ ಸಂಗ್ರಹ ಸೇಡಂತಾಲೂಕಿನ ಮಳಖೇಡದಲ್ಲಿರುವ ಹಝರತ್ ಸೈಯದ್ ಶಾಹ್ ಖಲಿಫತ್ ಊರ್ ರಹಮಾನ್ ಖಾದ್ರಿ ದುರ್ಗಾ ಶರೀಫ್’ನಲ್ಲಿ ಮಾ.26ರಿಂದ 28ರವರೆಗೆ ವಾರ್ಷಿಕ ಉರೂಸ್ ಶರೀಫ್ (ಜಾತ್ರೆ) ಜರುಗಲಿದೆ ಎಂದು ಹಝರತ್ ಅಲ್ ಹಜ್ ಸೈಯದ್ ಶಾಹ ಮುಸ್ತಫಾ ಖಾದ್ರಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.26ರಂದು ರಾತ್ರಿ 8.30ಕ್ಕೆ ಗುರುವಾರ ಹಲಖಾ (ಪ್ರಾರ್ಥನೆ) ಮತ್ತು ಗುಸುಲ್ ಶರೀಫ್ (ಗದ್ದುಗೆಗೆ ಅಭಿಷೇಕ), 27ರಂದು ಸಂದಲ್ ನಡೆಯುವುದು, ಮಳಖೇಡ, ಹೂಡಾ(ಬಿ), ಸಂಗಾವಿ, ಮಳಖೇಡ ಸ್ಟೇಷನ್ ಕೂನ್ನೂರ ಮತ್ತು ದಿಗ್ಗಾಂವ್ ಗ್ರಾಮಗಳಿಂದ […]

Continue Reading

ಮುಂದಿನ 3 ಗಂಟೆಯಲ್ಲಿ ರಾಜ್ಯದ ಹಲವೆಡೆ ಭಾರಿ ಮಳೆ ಎಚ್ಚರಿಕೆ

ಸುದ್ದಿ ಸಂಗ್ರಹ ಬೆಂಗಳೂರು ಮುಂದಿನ ಮೂರು ಗಂಟೆಯಲ್ಲಿ ರಾಜ್ಯದ ಹಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ. ಕಲಬುರಗಿ, ಯಾದಗಿರಿ, ರಾಯಚೂರು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಭಾಗದಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯಿದೆ. ಭಾರಿ ಮಳೆ ಹಿನ್ನೆಲೆ ಕಲಬುರಗಿ, ಯಾದಗಿರಿ, ರಾಯಚೂರು, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Continue Reading

ಲಿಂ.ಗೌರಮ್ಮ ತಾಯಿಯವರ ಪುಣ್ಯಸ್ಮರಣೋತ್ಸವ: ಉಚಿತ ನೇತ್ರ ತಪಾಸಣೆ, ಮಾತೋಶ್ರೀ ಪ್ರಶಸ್ತಿ ಪ್ರದಾನ

ಸುದ್ದಿ ಸಂಗ್ರಹ ಚಿತ್ತಾಪುರನಾಲವಾರದ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಅನ್ನಪೂರ್ಣೇಶ್ವರಿಯಂದೆ ಗೌರವಿಸಲ್ಪಡುತ್ತಿದ್ದ, ಪ್ರಸ್ತುತ ಪೀಠಾಧಿಪತಿ ಪರಮಪೂಜ್ಯ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮದಾತೆ ಲಿಂ.ಗೌರಮ್ಮ ತಾಯಿಯವರ ಪುಣ್ಯಸ್ಮರಣೋತ್ಸವ ಹಾಗೂ ಮಾತೋಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಮಾ.26ರಂದು ಗುರುವಾರ ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ತಿಳಿಸಿದ್ದಾರೆ. ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಪಾವನ ಸಾನಿಧ್ಯದಲ್ಲಿ ನಡೆಯುವ ಈ ಸಮಾರಂಭದಲ್ಲಿ ಮಾಜಿ ಮಂತ್ರಿಗಳು, ಶರಣತತ್ವ ಪ್ರಸಾರಕ್ಕಾಗಿ ಶ್ರಮಿಸುತ್ತಿರುವ ಹಿರಿಯ ಮುತ್ಸದ್ಧಿ ಲೀಲಾದೇವಿ ಆರ್ ಪ್ರಸಾದ್ ಅವರಿಗೆ ಪ್ರಸಕ್ತ […]

Continue Reading

ಹಾವೇರಿಯಲ್ಲಿ ಬಿರುಗಾಳಿ ಸಹಿತ ಮಳೆ: ಧರೆಗೆ ಉರುಳಿದ ವಿದ್ಯುತ್ ಕಂಬಗಳು, ಮರ ಬಿದ್ದು ಆಟೋ ಜಖಂ

ಸುದ್ದಿ ಸಂಗ್ರಹ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಹಲವೆಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಣೆಬೆನ್ನೂರಿನ ಗೌರಿಶಂಕರ ನಗರದಲ್ಲಿ ಮಳೆ ಸುರಿದ ಪರಿಣಾಮ ರಸ್ತೆಯ ಮೇಲೆ ಹಾಗೂ ಮನೆಯ ಮುಂಭಾಗ ಮರಗಳು ಹಾಗೂ ವಿದ್ಯುತ್ ಕಂಬಗಳು ಬಿದ್ದಿವೆ. ಮಳೆ ಬೀಳುವ ಸಮಯದಲ್ಲಿ ಜನರು ಇಲ್ಲದಿದ್ದರಿಂದ ಭಾರಿ ಅನಾಹುತಗಳು ತಪ್ಪಿವೆ. ವಿದ್ಯುತ್ ಕಂಬಗಳು ಬಿದ್ದ ಹಿನ್ನೆಲೆ ವಿದ್ಯುತ್ ವ್ಯತ್ಯಯ ಉಂಟಾಗಿ ಜನರಿಗೆ ಸಮಸ್ಯೆ ಉಂಟಾಯಿತು. ಅಲ್ಲದೆ ರಸ್ತೆಗಳ ಮೇಲೆ ಕಂಬಗಳು […]

Continue Reading

8,931 ದಿನಗಳ ಆಡಳಿತ: ಸಿಎಂ, ಪಿಎಂ ಆಗಿ ಮೋದಿ ಐತಿಹಾಸಿಕ ದಾಖಲೆ

ಸುದ್ದಿ ಸಂಗ್ರಹ ನವದೆಹಲಿ ದೇಶದಲ್ಲಿ ಚುನಾಯಿತ ಸರ್ಕಾರದ ಅತ್ಯಂತ ದೀರ್ಘಾವಧಿಯ ಮುಖ್ಯಸ್ಥರಾಗುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ರಾಜಕೀಯದಲ್ಲಿ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ್ದಾರೆ. ದಾಖಲೆಯೊಂದಿಗೆ ಪ್ರಧಾನಿ ಮೋದಿ, ಸಿಕ್ಕಿಂನ ಮುಖ್ಯಮಂತ್ರಿಯಾಗಿ 8,930 ದಿನಗಳ ಕಾಲ ಅಧಿಕಾರ ವಹಿಸಿಕೊಂಡಿದ್ದ ಪವನ್ ಕುಮಾರ್ ಚಾಮ್ಲಿಂಗ್ ಅವರನ್ನು ಹಿಂದಿಕ್ಕಿದ್ದಾರೆ. ಗುಜರಾತ್ ಸಿಎಂ ಆಗಿ ಮತ್ತು ಪ್ರಧಾನಿಯಾಗಿ ತಮ್ಮ ಒಟ್ಟು ಅಧಿಕಾರವಧಿಯಲ್ಲಿ 8,931 ದಿನ ಪೂರ್ಣಗೊಳಿಸಿದ್ದಾರೆ. ಈ ಮೈಲಿಗಲ್ಲನ್ನು ಅಪರೂಪದ ಮತ್ತು ಮಹತ್ವದ ಸಾಧನೆಯೆಂದು ಪರಿಗಣಿಸಲಾಗಿದೆ. ಅಲ್ಲದೆ ದಶಕಗಳ ನಿರಂತರ […]

Continue Reading

ಚಿನ್ನದ ದರ ದಾಖಲೆಯ ಕುಸಿತ: ಏರಿದ್ದ ಚಿನ್ನದ ಬೆಲೆ ದಿಢೀರ್‌ ಇಳಿಕೆಗೆ ಕಾರಣ ಏನು ?

ಸುದ್ದಿ ಸಂಗ್ರಹ ನವದೆಹಲಿ ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಂಡ ಬೆನ್ನಲ್ಲೆ ಚಿನ್ನ ಬೆಳ್ಳಿಯ ಮಾರುಕಟ್ಟೆ ಭಾರಿ ಪತನಗೊಂಡಿದೆ. ಇಂದು ಕೇವಲ 3 ಗಂಟೆಯಲ್ಲೊ ಲೋಹ ಮಾರಕಟ್ಟೆಯಲ್ಲಿ ಒಟ್ಟಾರೆಯಾಗಿ 2 ಟ್ರಿಲಿಯನ್ ಡಾಲರ್‌(ಅಂದಾಜು 167.6 ಲಕ್ಷ ಕೋಟಿ ರೂ.) ಹೂಡಿಕೆ ಕರಗಿದೆ ಎಂದು ದಿ ಕೊಬೈಸ್ಸಿ ಲೆಟರ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ. ಅಮೂಲ್ಯ ಲೋಹಗಳಲ್ಲಿ ಇದೀಗ ವಿಚಿತ್ರವಾದ ಸಂಗತಿಯೊಂದು ನಡೆಯುತ್ತಿದೆ. ಯಾರೋ ದೊಡ್ಡ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಹೂಡಿಕೆ ಹಿಂದಕ್ಕೆ ಪಡೆಯುತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದೆ. ದಾಖಲೆ ಕುಸಿತವಾಗಿದ್ದು ಯಾಕೆ […]

Continue Reading

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ: ಸಹಾಯಕ ಆಯುಕ್ತ ಪ್ರಭುರೆಡ್ಡಿ‌

ಸುದ್ದಿ ಸಂಗ್ರಹ ಚಿತ್ತಾಪುರಬೇಸಿಗೆ ಶುರುವಾಗುತ್ತಿದ್ದಂತೆ ನೀರಿನ ಸಮಸ್ಯೆ ಹೆಚ್ಚುತ್ತದೆ. ಹೀಗಾಗಿ ತಾಲೂಕಿನ ಯಾವ ಯಾವ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎನ್ನುವ ಕುರಿತು ಮುನ್ನೆಚ್ಚರಿಕೆ ವಹಿಸಿ ಎಂದು ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ಪ್ರಜಾಸೌಧದ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಹಮ್ಮಿಕೊಳ್ಳಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇರುತ್ತವೆ, ಅಧಿಕಾರಿಗಳು ಕೂಡಲೆ ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿವೆ ಎನ್ನುವ ಬಗ್ಗೆ ಪಟ್ಟಿಮಾಡಿಕೊಂಡು […]

Continue Reading

ವಾಡಿ: ಬಿಜೆಪಿ ಕಚೇರಿಯಲ್ಲಿ ಬಲಿದಾನ ದಿನಾಚರಣೆ

ಸುದ್ದಿ ಸಂಗ್ರಹ ಚಿತ್ತಾಪುರಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಸುಖದೇವ್‌ ಥಾಪರ್, ಭಗತ್‌ ಸಿಂಗ್‌, ಶಿವರಾಮ್ ರಾಜಗುರು ಅವರ ಪುಣ್ಯತಿಥಿ ಪ್ರಯುಕ್ತ ಬಲಿದಾನ ದಿನಾ ಆಚರಿಸಲಾಯಿತು. ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಸ್ವಾಭಿಮಾನದಿಂದ ಸಾವಿನ ಕುಣಿಕೆ ಏರಿದಕೆಚ್ಚೆದೆಯ ವೀರರಾದ ಭಗತ್‌‌ ಸಿಂಗ್‌‌, ರಾಜಗುರು ಮತ್ತು ಸುಖದೇವ ಅವರು ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು ಎಂದರು. ಇವರು ಹೇಗಾದರೂ ಸರಿ ಬ್ರಿಟಿಷರನ್ನು ದೇಶದಿಂದ ಓಡಿಸಬೇಕೆಂದು ಕ್ರಾಂತಿಕಾರಿ ಹೋರಾಟ ಮಾಡುತ್ತಿದ್ದರು. 1929ರಲ್ಲಿ ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿಯ […]

Continue Reading

ರಾಜ್ಯದಲ್ಲಿ ಮಾ.29ರವರೆಗೆ ಮಳೆ

ಸುದ್ದಿ ಸಂಗ್ರಹ ಬೆಂಗಳೂರುಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ, ತೇವಾಂಶ ಭರಿತ ಮೋಡದ ಪರಿಣಾಮ ರಾಜ್ಯದ ಹಲವೆಡೆ ಮಾ.29ರವರೆಗೆ ಗುಡುಗು, ಮಿಂಚು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಬೆಳಗಾವಿ, ಧಾರವಾಡ, ಹಾವೇರಿಯಲ್ಲಿ ಮಾ.25 ರಿಂದ ಮುಂದಿನ 2 ದಿನ ಹಾಗೂ ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಾ.27ರಿಂದ ಮಾ.29ರವರೆಗೆ ವರ್ಷಧಾರೆಯಾಗಲಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಮೈಸೂರು, ಚಾಮರಾಜನಗರ, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಯಚೂರು, ವಿಜಯಪುರ, […]

Continue Reading

ಜಲ ಸಂರಕ್ಷಣೆ ರಾಷ್ಟ್ರೀಯ ಆಂದೋಲನ, ಪ್ರತ್ಯೇಕ ಪಠ್ಯವಾಗಲಿ: ಎಚ್.ಬಿ ಪಾಟೀಲ

ಸುದ್ದಿ ಸಂಗ್ರಹ ಕಲಬುರಗಿ ಜಲ ಸಂರಕ್ಷಣೆಯ ಕಾರ್ಯ ರಾಷ್ಟ್ರೀಯ ಆಂದೋಲನದ ರೂಪದಲ್ಲಿ ಜರುಗುವುದರ ಜೊತೆಗೆ ಪ್ರತ್ಯೇಕ ಪಠ್ಯವಾಗಬೇಕಾಗಿದೆ ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ ಪಾಟೀಲ ಮಾರ್ಮಿಕವಾಗಿ ಹೇಳಿದರು. ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್‌ನ ರಿಪಬ್ಲಿಕ್ ಇಂಗ್ಲೀಷ್ ಸಂವಹನ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ವಿಶ್ವ ಜಲ ದಿನಾಚರಣೆ’ಯಲ್ಲಿ ಜಲ ಸಂರಕ್ಷಣೆ ಜಾಗೃತಿಯ ಕರಪತ್ರ ವಿತರಿಸಿ, ಮಾತನಾಡಿದ ಅವರು, ಜಲ ಎಂಬುದು ಕೇವಲ ಎರಡು ಅಕ್ಷರದ ಶಬ್ದವಲ್ಲ, ಅದು […]

Continue Reading